For Quick Alerts
ALLOW NOTIFICATIONS  
For Daily Alerts

ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ

|

ನುಣಪಾದ, ಕಲೆರಹಿತವಾದ ತ್ವಚೆ ಮುಖದ ಸೌಂದರ್ಯ ಹೆಚ್ಚಿಸುವುದು. ಆದರೆ ಈ ರೀತಿ ತ್ವಚೆ ರಕ್ಷಣೆಗೆ ನಾವು ಹೆಚ್ಚಾಗಿ ಕೆಮಿಕಲ್ ಹಾಕಿರುವ ಕ್ರೀಮ್ ಗಳನ್ನು ಬಳಸುತ್ತೇವೆ. ಬ್ಲೀಚ್ ,ಮಾಡಿಸುತ್ತೆವೆ. ಅವೆಲ್ಲಾ ಆ ಕ್ಷಣಕ್ಕೆ ಮುಖವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದರೂ ಮುಂದಕ್ಕೆ ಅಕಾಲಿಕ ಮುಪ್ಪು ತರುವುದು ಗ್ಯಾರಂಟಿ ಮೇಕಪ್ ತೆಗೆದರೆ ಮುಖ ನಿರ್ಜೀವಾಗಿ ಕಾಣಿಸುವಂತೆ ಮಾಡುತ್ತದೆ. ಅದರ ಬದಲು ಆದಷ್ಟು ನೈಸರ್ಗಿಕವಾದ ವಸ್ತುಗಳನ್ನು ಏಕೆ ಬಳಸಬಾರದು. ಅದರಲ್ಲೂ ಟೊಮೆಟೊದಲ್ಲಿ ಬ್ಲೀಚಿಂಗ್ ಅಂಶವಿರುವಾಗ ಕೆಮಿಕಲ್ ಬ್ಲೀಚಿಂಗ್ ಏಕೆ? ಬನ್ನಿ, ಟೊಮೆಟೊದಿಂದ ತ್ವಚೆ ರಕ್ಷಣೆ ಹೇಗೆ ಮಾಡಬಹುದೆಂದು ತಿಳಿಯೋಣ:

ತ್ವಚೆಗೆ ಟೊಮೆಟೊದ ರಕ್ಷಣೆ:

Tomato For Facial Glow

1. ಟೊಮೆಟೊವನ್ನು ಚೆನ್ನಾಗಿ ಹಿಸುಕಿ ಪೇಸ್ಟ್ ರೀತಿ ಮಾಡಬೇಕು. ಅದಕ್ಕೆ ಸ್ವಲ್ಪ ಓಟ್ ಮೀಲ್ಸ್ ಮತ್ತು ಒಂದು ಚಮಚ ಮೊಸರು ಸೇರಿಸಬೇಕು. ನಂತರ ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 2-3 ನಿಮಿಷ ಉಜ್ಜಿ ಹಾಗೇ ಬಿಡಬೇಕು. ನಂತರ ತಣ್ಣಿರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿ ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ ಹೋಗಲಾಡಿಸಿ ಹೊಳೆಯುವ ಮುಖವನ್ನು ಪಡೆಯಬಹುದು.

2. ಟೊಮಟೊವನ್ನು ಪೇಸ್ಟ್ ರೀತಿ ಮಾಡಿ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚ 10 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಅಥವಾ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.ಈ ರೀತಿ ದಿನಾ ಮಾಡಿದರೆ ಮುಖ ನುಣಪನ್ನು ಪಡೆಯುತ್ತದೆ ಮತ್ತು ಮೊಡವೆ ಕಡಿಮೆಯಾಗುತ್ತದೆ.

3. ಟೊಮೆಟೊ ಮತ್ತು ಮುಲ್ತಾನಿ ಮಿಟಿ ಮಿಶ್ರ ಮಾಡಿ ಹಚ್ಚಿದರೆ ತುಂಬಾ ಪ್ರಯೋಜನ ಪಡೆಯಬಹುದು. ಹೀಗೆ ಹಚ್ಚಿದಾಗ ಮುಖವನ್ನು ಅಥವಾ ಬಾಯಿಯನ್ನು ಅಲುಗಾಡಿಸಲು ಹೋಗಬಾರದು. ಹಚ್ಚಿಕೊಂಡು ನಗುವುದು ಅಥವಾ ಮಾತನಾಡುವುದು ಮಾಡಿದರೆ ಮುಖದಲ್ಲಿ ನೆರಿಗೆ ಬೀಳುತ್ತದೆ. ಹಿಗೆ ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳಿಗಿಂತ ಅಧಿಕ ಕಾಲ ಬಿಡಬೇಡಿ. ನಂತರ ಹದ ಬಿಸಿ ನೀರಿನಿಂದ ಮುಖವನ್ನು ಶುಚಿಗೊಳಿಸಿ.

4. ಮೂಗಿನ ಹತ್ತಿರ ಬ್ಲ್ಯಾಕ್ ಹೆಡ್ಸ್ ಇದ್ದರೆ ಆ ಭಾಗಕ್ಕೆ ಟೊಮೆಟೊದಿಂದ ಉಜ್ಜಿದರೆ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಬಹುದು.

5. ಗಂಧದ ಪುಡಿಯನ್ನು ಬಳಸಿದರೆ ತ್ವಚೆಗೆ ಒಳ್ಳೆಯದು ಎಂದು ಗೊತ್ತು. ಈ ಗಂಧದ ಪುಡಿಯನ್ನು ಟೊಮೆಟೊ ರಸದ ಜೊತೆ ಮಿಶ್ರ ಮಾಡಿ ಹಚ್ಚಿದರೆ ಅಧಿಕ ಪ್ರಯೋಜನವನ್ನು ಪಡೆಯಬಹುದು. ಈ ರೀತಿ ಹಚ್ಚುವಾಗ ಕುತ್ತಿಗೆ ಭಾಗಕ್ಕೂ ಸೇರಿಸಿ ಹಚ್ಚಿ, 10 ನಿಮಿಷದ ಬಳಕ ಬಳಸಿ.

6. ಪ್ರತಿದಿನ ಹಚ್ಚುವುದಾದರೆ ಟೊಮೆಟೊವನ್ನು ಹಿಸುಕಿ ಅದರ ರಸವನ್ನು ಹಾಲಿನ ಜೊತೆ ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಸಾಕು ತ್ವಚೆ ತನ್ನ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದು.

English summary

Tomato For Facial Glow | Tips For Skin Care | ಮುಖದ ಕಾಂತಿ ಹೆಚ್ಚಿಸುವ ಟೊಮೆಟೊ | ತ್ವಚೆ ಆರೈಕೆಗೆ ಕೆ ಸಲಹೆಗಳು

Tomato is a natural astringent that helps to clean your skin pores. Tomatoes are also very rich in antioxidants that help your skin look young and fresh for long.
Story first published: Wednesday, June 6, 2012, 12:51 [IST]
X
Desktop Bottom Promotion