For Quick Alerts
ALLOW NOTIFICATIONS  
For Daily Alerts

35ರ ನಂತರವೂ ತಾರುಣ್ಯದ ಕಳೆಯಿಂದ ಮಿಂಚಬೇಕೆ?

|
Tightening Oil For Firm Bod
ವಯಸ್ಸು 35 ದಾಟುತ್ತಿದ್ದಂತೆ ಮುಖದಲ್ಲಿ ತಾರುಣ್ಯ ಕಡಿಮೆಯಾಗುತ್ತದೆ. ಮುಖದ ತ್ವಚೆ ಸಡಿಲವಾಗುತ್ತದೆ ಮೊದಲು ಕಣ್ಣಿನ ಸಮೀಪ ನಂತರ ಮುಖದಲ್ಲಿ ನೆರಿಗೆಗಳು ಬೀಳುತ್ತವೆ. ನೆರಿಗೆ ಮತ್ತು ವಯಸ್ಸು ಮರೆ ಮಾಚಲು ಮೇಕಪ್ ಮಾಡಿದರೂ ನೈಸರ್ಗಿಕ ಚೆಲುವಿನಿಂದ ಕಾಣಲು ಸಾಧ್ಯವಾಗುವುದಿಲ್ಲ.

ಆದರೆ ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಬಳಸಿ ಮುಖದ ತ್ವಚೆ ಸಡಿಲವಾಗದಂತೆ ನೋಡಿಕೊಂಡರೆ ಯೌವನ ಬೇಗನೆ ಮಾಸದಂತೆ ತಡೆಯಬಹುದು, ತಾರುಣ್ಯದ ಚೆಲುವು ಬಯಸುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

ದ್ರಾಕ್ಷಿ ಬೀಜದ ಎಣ್ಣೆ: ಇದರಲ್ಲಿ ವಿಟಮಿನ್ ಇ ಇರುವುದರಿಂದ ತ್ವಚೆಯನ್ನು ಒಣಗಲು ಬಿಡುವುದಿಲ್ಲ. ಈ ಎಣ್ಣೆಯನ್ನು ಹಚ್ಚಿ ಸ್ಟ್ರೆಚ್ ಮಾರ್ಕ್ಸ್ ಕೂಡ ಹೋಗಲಾಡಿಸಬಹುದು. ಕಣ್ಣಿನ ಸುತ್ತ ನೆರಿಗೆ ಬೀಳುವುದನ್ನು ತಡೆಯುತ್ತದೆ. ಈ ಎಣ್ಣೆಯನ್ನು ಕೈಯಲ್ಲಿ ಹಾಕಿ ವೃತ್ತಾಕಾರವಾಗಿ ಮುಖಕ್ಕೆ ಹಚ್ಚಬೇಕು. ಅಡ್ಡಾದಿಡ್ಡಿ ಹಚ್ಚಬಾರದು.

ಅವೊಕಾಡೊ ಎಣ್ಣೆ: ಅವಕಾಡೊ ಎಣ್ಣೆ ಅಥವಾ ಬೆಣ್ಣೆ ಹಣ್ಣಿನ ಎಣ್ಣೆ ಹಚ್ಚಿದರೆ ತ್ವಚೆಯಲ್ಲಿ ಕೊಲೆಜಿನ್ ಅಂಶವನ್ನು ಹೆಚ್ಚು ಉತ್ಪತ್ತಿ ಮಾಡುವಂತೆ ಮಾಡುತ್ತದೆ. ತ್ವಚೆಯಲ್ಲಿ ಕೊಲೆಜಿನ್ ಕಡಿಮೆಯಾದಂತೆ ನೆರಿಗೆಗಳು ಬೀಳುತ್ತದೆ. ಆದ್ದರಿಂದ ನೆರಿಗೆ ಬೀಳದಂತೆ ತಡೆಯಲು ಮತ್ತು ತ್ವಚೆ ಕಾಂತಿಯುತವಾಗಿ ಕಾಣಲು ಈ ಎಣ್ಣೆ ಸಹಾಯ ಮಾಡುತ್ತದೆ.

ಸಾಸಿವೆ ಎಣ್ಣೆ: ವಯಸ್ಸಾದಂತೆ ಸ್ತನ ಮತ್ತು ಸೊಂಟದ ಸುತ್ತ ತ್ವಚೆ ಸಡಿಲವಾಗುತ್ತದೆ. ಆದ್ದರಿಂದ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಆದ್ದರಿಂದ ಎದೆ ಮತ್ತು ಸೊಂಟಕ್ಕೆ ಮಸಾಜ್ ಮಾಡಿದರೆ ಎದೆ ಜೋತು ಬೀಳುವುದಿಲ್ಲ. ಹೆರಿಗೆಯ ನಂತರ ಈ ಎಣ್ಣೆಯಿಂದ ಮಸಾಜ್ ಮಾಡಿದರೆ ಎದೆ ಜೋತು ಬೀಳದಂತೆ ತಡೆಯಬಹುದು.

ಜೊಜೊಬಾ ಎಣ್ಣೆ: ಜೊಜೊಬಾ ಎಣ್ಣೆ ತ್ವಚೆಯನ್ನು ಬಿಗಿಗೊಳಿಸುತ್ತದೆ ಮತ್ತು ಮುಖದಲ್ಲಿ ಮೊಡವೆ ಮತ್ತು ಕಲೆ ಸಮಸ್ಯೆ ಇದ್ದರೆ ಹೋಗಲಾಡಿಸುತ್ತದೆ.

ಆಲೀವ್ ಎಣ್ಣೆ: ಇದರಲ್ಲಿ anti oxidants ಮತ್ತು ಒಮೆಗಾ 3 ಅಂಶವಿರುವುದರಿಂದ ಇದರಿಂದ ಮಸಾಜ್ ಮಾಡಿದರೆ ತ್ವಚೆ ಬಿಗಿಯಾಗುತ್ತದೆ ಮತ್ತು ಮುಖದ ಕಾಂತಿ ಹೆಚ್ಚಿಸುತ್ತದೆ.

ಈ ಮೇಲಿನ ಎಣ್ಣೆಗಳನ್ನು ತ್ವಚೆ ಆರೈಕೆ ಮಾಡಲು ಬಳಸಿದರೆ ಯವುದೇ ಕೃತಕ ಮೇಕಪ್ ನ ಅಗತ್ಯ ಕಂಡುಬರುವುದಿಲ್ಲ.

English summary

Tightening Oil For Firm Body | Tips For Skin Care | ತ್ವಚೆ ಸಡಿಲವಾಗದಂತೆ ಕಾಪಾಡುವ ಎಣ್ಣೆಗಳು | ತ್ವಚೆ ಆರೈಕೆಗೆ ಕೆಲ ಸಲಹೆಗಳು

At 35, your body is not as firm as it used to be at 20.Your skin starts loosening up and you can see pouches of skin dropping from your body. To look like a girl again and try these skin tightening oils.
X
Desktop Bottom Promotion