For Quick Alerts
ALLOW NOTIFICATIONS  
For Daily Alerts

ಅಡುಗೆ ಸೋಡಾದಲ್ಲಿದೆ ಮೊಡವೆ ಸಮಸ್ಯೆಗೆ ಪರಿಹಾರ

|
Baking Soda For Acne Control
ಮೊಡವೆ ಅಂದರೆ ಜನ ಎದುರುವುದು, ಅದರಿಂದ ಉಂಟಾಗುವ ಕಲೆಗಳಿಗೆ. ಮೊಡವೆ ಬಂದರೆ 2-3 ದಿನಗಳಲ್ಲಿ ಹೋಗಿಬಿಡುತ್ತದೆ. ಆದರೆ ಕಲೆಗಳು ತುಂಬಾ ಸಮಯವಿದ್ದು ಮುಖದ ಅಂದ ಕೆಡಿಸಿಬಿಡುತ್ತದೆ. ಕೆಲವರಿಗೆ ಮೊಡವೆಯಿಂದ ರಂಧ್ರಗಳು ಉಂಟಾಗಿ ತ್ವಚೆ ಸೌಂದರ್ಯ ಹಾಳಾಗುವುದು. ಇವತ್ತು ನಾವು ಮೊಡವೆ ಮತ್ತು ಅದರ ಕಲೆಯನ್ನು ಅಡುಗೆ ಸೋಡಾ ಬಳಿಸಿ ಹೇಗೆ ಹೋಗಲಾಡಿಸಬಹುದು ಎಂದು ತಿಳಿಯೋಣ.

ಮೊಡವೆ ಉಂಟಾಗಲು ಕಾರಣಗಳು:

ಮುಖದಲ್ಲಿ ಎಣ್ಣೆಂಶವಿದ್ದರೆ ಮೊಡವೆಗಳು ಹೆಚ್ಚಾಗಿ ಉಂಟಾಗುವುದು. ಹದಿಹರೆಯದವರಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಮತ್ತು ದೂಳು, ಕೆಮಿಕಲ್ ಅಲರ್ಜಿ ಮುಂತಾದ ಕಾರಣಗಳಿಂದ ಮೊಡವೆಗಳು ಉಂಟಾಗುತ್ತವೆ.

ಅಡುಗೆ ಸೋಡಾ: ಅಡುಗೆ ಸೋಡಾದಲ್ಲಿ ಸೋಡಿಯಂ ಬೈ ಕಾರ್ಬೋನೇಟ್ ಇರುತ್ತದೆ. ಸೋಡಿಯಂ ಬೈ ಕಾರ್ಬೋನೇಟ್ ನಲ್ಲಿ pH ತಟಸ್ಥ(neutral)ವಾಗಿರುತ್ತದೆ. ಇದನ್ನು ಟೂತ್ ಪೇಸ್ಟ್, ಶ್ಯಾಂಪೂ, ಸುಗಂಧ ದ್ರವ್ಯಗಳಲ್ಲಿ ಬಳಸಲಾಗುವುದು. ಇದನ್ನು ಮೊಡವೆ ನಿವಾರಣೆಗೆ ಈ ಕೆಳಗಿನಂತೆ ಬಳಸಬಹುದು.

1. ಮುಖವನ್ನು ಸಾಮಾನ್ಯವಾಗಿ ಬಳಸುವ ಸೋಪ್ ಹಾಕಿ ತೊಳೆಯಬೇಕು. ಆ ಸೋಪು ಹೆಚ್ಚು ಸುವಾಸನೆಯನ್ನು ಹೊಂದಿರಬಾರದು. ಮುಖವನ್ನು ತುಂಬಾ ಉಜ್ಜದೆ ಮೆದುವಾಗಿ ಮತ್ತು ಶುದ್ಧವಾಗಿ ತೊಳೆದುಕೊಳ್ಳಬೇಕು.

2. ಒಂದು ಚಮಚ ಅಡುಗೆ ಸೋಡಾಕ್ಕೆ 2 ಚಮಚ ನೀರು ಹಾಕಿ ಪೇಸ್ಟ್ ರೀತಿ ಮಾಡಬೇಕು.

3. ನಂತರ ಪೇಸ್ಟ್ ಅನ್ನು ಮೊಡವೆ ಇರುವ ಭಾಗಕ್ಕೆ ಹಚ್ಚಬೇಕು. ನಂತರ ವೃತ್ತಾಕಾರವಾಗಿ ಮಸಾಜ್ ಮಾಡಬೇಕು. ಈ ರೀತಿ ಅರ್ಧ ನಿಮಿಷ ಮಾಡಿ ನಂತರ ಅರ್ಧ ನಿಮಿಷ ಹಾಗೇ ಒಣಗಲು ಬಿಡಬೇಕು.

4. ಈ ರೀತಿ ಹಚ್ಚುವಾಗ ಅಡುಗೆ ಸೋಡಾ ಕಣ್ಣಿಗೆ ತಾಗದಂತೆ ಎಚ್ಚರವಹಿಸಬೇಕು.

5. ನಂತರ ಮುಖವನ್ನು ಶುದ್ಧವಾಗಿ ತೊಳೆದು ಮೃದುವಾದ ಟವಲ್ ನಿಂದ ಒರೆಸಬೇಕು. ಟವಲ್ ಅನ್ನು ಮುಖಕ್ಕೆ ಉಜ್ಜಬಾರದು.

6. ನಂತರ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಕಲಾಮೈನ್ ಲೋಷನ್‌ನಲ್ಲಿ ಅದ್ದಿ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಬೇಕು. ನಂತರ ಇದನ್ನು ಮರುದಿನ ಬೆಳಗ್ಗೆ ತೊಳೆಯಬೇಕು. ಈ ರೀತಿ ಮಾಡಿದರೆ ಮೊಡವೆ ನಿವಾರಣೆಯಾಗುವುದು.

ಎಚ್ಚರಿಕೆ:
ಇದರಲ್ಲಿ pH ಪ್ರಮಾಣ ಸರಿಯಾದ ರೀತಿಯಲ್ಲಿ ಇಲ್ಲದಿರುವುದರಿಂದ ಹೆಚ್ಚಿನವರು ಬಳಸಲು ಇಷ್ಟಪಡುವುದಿಲ್ಲ. ಏಕೆಂದರೆ pH ಪ್ರಮಾಣ ಸಮತೋಲನದಲ್ಲಿ ಇಲ್ಲದ ವಸ್ತುಗಳನ್ನು ಬಳಸಿದರೆ ತ್ವಚೆ ಒಣಗಿ, ತನ್ನ ಹೊಳಪನ್ನು ಕಳೆದುಕೊಳ್ಳುವುದು.

English summary

Baking Soda For Acne Control | Tips For Beauty | ಮೊಡವೆ ನಿಯಂತ್ರಣಕ್ಕೆ ಅಡುಗೆ ಸೋಡಾ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Baking soda has been using as a self cure’ acne remedy for many years. Baking soda helps to removes acne. Any acne treatment with baking soda should be done externally.
X
Desktop Bottom Promotion