For Quick Alerts
ALLOW NOTIFICATIONS  
For Daily Alerts

30 ಹರೆಯದಲ್ಲೂ ಯೌವನದ ಕಳೆ ಇರಲಿ

|
In 30's Be careful About Your Skin
ಹದಿಹರೆಯದಲ್ಲಿರುವಂತೆ ತ್ವಚೆಯ ಕಾಂತಿ ಮೂವತ್ತರ ಹರೆಯದಲ್ಲಿ ಕಂಡು ಬರುವುದಿಲ್ಲ. ಆದ್ದರಿಂದ ಸ್ತ್ರೀಯರು ಮಾತ್ರವಲ್ಲ ಪುರುಷರೂ ಕೂಡ ವಯಸ್ಸು 30 ಸಮೀಪಿಸುತ್ತಿದ್ದಂತೆ ತ್ವಚೆ ಬಗ್ಗೆ ಸ್ವಲ್ಪ ಹೆಚ್ಚಿನ ಆರೈಕೆ ಮಾಡಿದರೆ ಮಾತ್ರ ಯೌವನದ ಕಳೆಯನ್ನು ಉಳಿಸಿಕೊಳ್ಳಲು ಸಾಧ್ಯ.

ವಯಸ್ಸು 30 ಕಳೆದಂತೆ ಮುಖದ ಕಾಂತಿ ಕಡಿಮೆಯಾಗುವುದು, ಆ ಸಂದರ್ಭದಲ್ಲಿ ಗಮನಿಸದೆ ಹೋದರೆ ಮುಖದಲ್ಲಿ ಅಕಾಲಿಕ ನೆರಿಗೆ ಕಂಡು ಬರಬಹುದು. ಆದ್ದರಿಂದ 30 ದಾಟಿದವರು ತ್ವಚೆ ಆರೈಕೆಗೆ ಈ ಕೆಳಗಿನ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

1.ಮಾಯಿಶ್ಚರೈಸರ್: ಪ್ರತಿದಿನ ಮುಖ ತೊಳೆದು ಮಾಯಿಶ್ಚರೈಸರ್ ಮಾಡಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದಿನಕ್ಕೆ 8 ಗ್ಲಾಸ್ ನೀರು ಹಾಗೂ ಹಣ್ಣಿನ ಜ್ಯೂಸ್ ಕುಡಿಯುವುದು ಒಳ್ಳೆಯದು. ಈ ವಿಧಾನವನ್ನು ಎಲ್ಲಾ ವಯಸ್ಸಿನವರು ಪಾಲಿಸುವುದು ಒಳ್ಳೆಯದು.

2. ಆಹಾರ: ಫ್ರೂಟ್ ಸಲಾಡ್ ಹೆಚ್ಚಾಗಿ ತಿನ್ನಬೇಕು. ತುಂಬಾ ಖಾರದ ಪದಾರ್ಥಗಳನ್ನು, ಎಣ್ಣೆ ಪದಾರ್ಥಗಳನ್ನುಹಾಗೂ ಫಾಸ್ಟ್ ಫುಡ್ ಗಳನ್ನು ಹೆಚ್ಚಾಗಿ ತಿನ್ನಬಾರದು. ಈ ರೀತಿಯ ಆಹಾರಕ್ರಮವನ್ನು ಪಾಲಿಸಿದರೆ ದೇಹವು ಸಮತೂಕದಲ್ಲಿರುವಂತೆ ನೋಡಿಕೊಳ್ಳಬಹುದು.

3. ಕ್ಲೆನ್ಸಿಂಗ್: ಕ್ಲೆನ್ಸಿಂಗ್ ಅದರೆ ಒಂದು ಚಮಚ ಆಲೀವ್ ಎಣ್ಣೆಗೆ ಒಂದು ಸ್ವಲ್ಪ ಉಪ್ಪು, ಸಕ್ಕರೆ ಹಾಕಿ ಮಿಶ್ರಣ ಮಾಡಿ ಅದರಿಂದ ಮುಖವನ್ನು ಉಜ್ಜಿದರೆ ಸಾಕು.

4. ನೈಟ್ ಕ್ರೀಮ್: 30 ದಾಟುತ್ತಿದ್ದಂತೆ ಕಪ್ಪು ಕಲೆಗಳು ಹಾಗೂ ಕಣ್ಣಿನ ಸುತ್ತ ಕಪ್ಪ ವರ್ತುಲ ಬೀಳಲಾರಂಭಿಸುತ್ತದೆ. ಆದ್ದರಿಂದ ರಾತ್ರಿ ಬಳಸುವ ಕ್ರೀಮ್ ನಲ್ಲಿ ಬದಲಾವಣೆ ತರಬೇಕು. ಮೆಡಿಕಲ್ ನಲ್ಲಿ 30 ವರ್ಷದ ಬಳಿಕ ಹಚ್ಚಲು ಕ್ರೀಮ್ ಗಳು ದೊರೆಯುತ್ತವೆ. ಅದನ್ನು ಬಳಸುತ್ತಿದ್ದರೆ ಮುಖದಲ್ಲಿ ಯೌವನದ ಕಳೆಯನ್ನು ಕಾಪಾಡಬಹುದು.

5. ಫ್ರೂಟ್ ಫೇಶಿಯಲ್: ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಫ್ರೂಟ್ ಫೇಶಿಯಲ್ ಮಾಡುವುದು ಒಳ್ಳೆಯದು.

English summary

Are You In 30's ? Be careful About Your Skin | Tips for Skin Care | ವಯಸ್ಸು ಮೂವತ್ತಾಯಿತೇ? ತ್ವಚೆಯ ಬಗ್ಗೆ ಜಾಗ್ರತೆ | ತ್ವಚೆ ಆರೈಕೆಗೆ ಕೆಲ ಸಲಹೆಗಳು

If you near to 30's or crossed 30 in this time you should be more careful about your beauty, or else your skin will loose it's charms. Here are tips to prevent your skin.
X
Desktop Bottom Promotion