For Quick Alerts
ALLOW NOTIFICATIONS  
For Daily Alerts

ಮೃದುವಾದ ತ್ವಚೆಗಾಗಿ ಸ್ಟ್ರಾಬರಿ ಫೇಸ್ ಮಾಸ್ಕ್

|
4 Strawberry Face Mask
ಸ್ಟ್ರಾಬರಿ ಹಣ್ಣನ್ನು ಬಳಸಿ ಸೌಂದರ್ಯವರ್ಧನೆಯನ್ನು ನಾನಾ ರೀತಿಯಲ್ಲಿ ಮಾಡಬಹುದು. ಇದರಿಂದ ನೈಸರ್ಗಿಕವಾದ ಮಾಯಿಶ್ಚರೈಸರ್ ತಯಾರಿಸಬಹುದು. ಇದನ್ನು ಫೇಶಿಯಲ್ ಆಗಿ ಬಳಸಬಹುದು, ಸ್ಟ್ರಾಬರಿ ಫೇಸ್ ಮಾಸ್ಕ್ ತಯಾರಿಸಬಹುದು. ಇವತ್ತು ನಾವು ಇದನ್ನು ಫೇಸ್ ಮಾಸ್ಕ್ ಆಗಿ ಬಳಸುವುದು ಹೇಗೆ ಎಂದು ತಿಳಿಯೋಣ:

1. ಸ್ಟ್ರಾಬರಿ ಮತ್ತು ಜೇನು: 2-3 ಚಮಚ ಸ್ಟ್ರಾಬರಿ ಪೇಸ್ಟ್ ಗೆ ಒಂದು ಚಮಚ ಜೇನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು.

2. ಸ್ಟ್ರಾಬರಿ ಮತ್ತು ನಿಂಬೆರಸ:ಸ್ಟ್ರಾಬರಿಪೇಸ್ಟ್ ಗೆ ನಿಂಬೆ ರಸ ಹಾಕಿ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಮೊಡವೆ ಕಡಿಮೆಯಾಗಿ ಮುಖ ಹೊಳಪನ್ನು ಪಡೆಯುತ್ತದೆ.

3. ಸ್ಟ್ರಾಬರಿ ಮತ್ತು ಮೊಸರು: 2 ಚಮಚ ಸ್ಟ್ರಾಬರಿ ಪೇಸ್ಟ್ ಗೆ 1 ಚಮ ಮೊಸರು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ಮುಖದ ತ್ವಚೆ ಮೃದುವಾಗುವುದು.

4. ಸ್ಟ್ರಾಬರಿ ಮತ್ತು ಆಲೀವ್ ಎಣ್ಣೆ: ಸ್ಟ್ರಾಬರಿಯನ್ನು ಪೇಸ್ಟ್ ಮಾಡಿ ಅದಕ್ಕೆ ಆಲೀವ್ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು.

ಕಣ್ಣಿನ ಪ್ಯಾಕ್: ಕಣ್ಣಿನ ಮೇಲೆ ಸ್ಟ್ರಾಬರಿ ಇಟ್ಟು 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದರೆ ಕಣ್ಣನಲ್ಲಿ ತುರಿಕೆಯ ಸಮಸ್ಯೆ ಇದ್ದರೆ ಹೋಗಲಾಡಿಸಬಹುದು ಮತ್ತು ಕಣ್ಣು ಹೊಳಪಿನಿಂದ ಕಾಣುತ್ತದೆ.

English summary

4 Strawberry Face Mask | Tips For Skin Care | 4 ಬಗೆಯ ಸ್ಟ್ರಾಬರಿ ಫೇಸ್ ಮಾಸ್ಕ್ ರೆಸಿಪಿ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Strawberry is used for many skin treatments due to its great qualities.Here are some face masks using strawberries that you can use to have a smooth, radiant and flawless skin.
X
Desktop Bottom Promotion