For Quick Alerts
ALLOW NOTIFICATIONS  
For Daily Alerts

ಶೇವಿಂಗ್ ಉರಿ ಶಮನಕ್ಕೆ ಇಲ್ಲಿದೆ ಸೂತ್ರ

|
Natural Remedies To Cure Razor Burns
ಪುರುಷರು ಆಕರ್ಷಕವಾಗಿ ಕಾಣಬೇಕೆಂದರೆ ನೀಟಾಗಿ ಗಡ್ಡವನ್ನು ಬೋಳಿಸಬೇಕು. ಗಡ್ಡದಲ್ಲಿ ಟ್ರಿಮ್, ಫ್ರೆಂಚ್ ಅದು ಇದು ಅಂತ ಅನೇಕ ಫ್ಯಾಷನ್ ಗಳಿದ್ದರೂ ಆ ಗಡ್ಡಗಳಿಗೆ ಕೂಡ ಒಂದು ಅಂದದ ಶೇಪ್ ಕೊಡಬೇಕೆಂದರೆ ಶೇವಿಂಗ್ ಮಾಡಬೇಕು.

ಶೇವಿಂಗ್ ಮಾಡಿದರೆ ಕೆಲವರಿಗೆ ಮುಖದಲ್ಲಿ ಉರಿ, ತುರಿಕೆ, ಗುಳ್ಳೆ ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಶೇವಿಂಗ್ ಉಂಟಾಗುವ ಸಮಸ್ಯೆಗಳನ್ನು ಈ ಕೆಳಗಿನ ವಿಧಾನಗಳಿಂದ ನಿವಾರಿಸಬಹುದು.

1. ಶೇವಿಂಗ್ ಮಾಡುವ ಮೊದಲು ಮುಖವನ್ನು ತೊಳೆದು ನಂತರ ಶೇವಿಂಗ್ ಕ್ರೀಮ್ ಹಚ್ಚಬೇಕು. ಅಲ್ಲದೆ ಶೇವಿಂಗ್ ಮಾಡುವಾಗ ಚಿಕ್ಕಪುಟ್ಟ ಗಾಯಗಳಾಗದ ಹಾಗೆ ಎಚ್ಚರದಿಂದ ಮಾಡಬೇಕು.

2. ಒಂದು ವೇಳೆ ಸಣ್ಣ -ಪುಟ್ಟ ಗಾಯಗಳಾದರೆ ತಕ್ಷಣವೆ ಐಸ್ ಕ್ಯೂಬ್ ನಿಂದ ಮುಖವನ್ನು ಉಜ್ಜ ಬೇಕು.

3. ಶೇವಿಂಗ್ ಮಾಡಿದಾಗ ಮುಖ ಉರಿಯುತ್ತಿದ್ದರೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿಕೊಳ್ಳಬೇಕು. ಶೇವ್ ಮಾಡಿದ ತಕ್ಷಣ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು.

4. ಮುಖದ ಉರಿ ಕಡಿಮೆಯಾಗಲು ಲೋಳೆಸರ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಬೇಕು. ಮುಖದಲ್ಲಿ ಉರಿ ಕಡಿಮೆಯಾಗುವವರೆಗೂ ಬಿಸಿ ನೀರಿನಲ್ಲಿ ಮುಖ ತೊಳೆಯಬಾರದು.

5. ಅಪಲ್ ಸೈಡರ್ ವಾಟರ್ ನೀರಿನೊಂದಿಗೆ ಬೆರೆಸಿ ಮುಖಕ್ಕೆ ಉಜ್ಜಿ ಹಾಕಬೇಕು.

6. ಗಾಯಗಳಾದರೆ ಮುಖವನ್ನು ಗಾಯವನ್ನು ಕೀಳಬಾರದು. ಗಾಯವನ್ನು ಚಿವುಟುತ್ತಿದ್ದರೆ ಕಲೆ ಉಂಟಾಗುತ್ತದೆ.

7. ಶೇವಿಂಗ್ ಮಾಡುವಾಗ ಕೆಳಮ್ಮುಖವಾಗಿ ಮಾಡಿ. ಮೇಲ್ಮುಖವಾಗಿ ಮಾಡಿದರೆ ಗಾಯ ಉಂಟಾಗುತ್ತದೆ.

ಈ ಮೇಲಿನ ಸಲಹೆಗಳನ್ನು ಪಾಲಿಸಿದರೆ ಶೇವಿಂಗ್ ಮಾಡಿದರೆ ತ್ವಚೆ ಕಾಂತಿಯನ್ನು ಕೂಡ ಕಾಪಾಡಬಹುದು.

English summary

Natural Remedies To Cure Razor Burns | Beauty Tips For Men | ರೇಝರ್ ಉರಿ ತಡೆಯಲು ನೈಸರ್ಗಿಕ ಉಪಾಯ | ಪುರುಷರಿಗೆ ಸೌಂದರ್ಯ ಸಲಹೆ

After shaving, most of the men get razor burns, itches and even bumps on their face. Here are few natural remedies to cure razor burns after shaving.
Story first published: Friday, January 27, 2012, 16:50 [IST]
X
Desktop Bottom Promotion