For Quick Alerts
ALLOW NOTIFICATIONS  
For Daily Alerts

ಚಳಿಗಾಲ ಕಾಲಿಟ್ಟಾಯ್ತು, ನಿಮ್ಮ ತ್ವಚೆಯತ್ತ ಗಮನಹರಿಸಿ

|
Winter Skin Care Tips
ಚಳಿಗಾಲ ಕಾಲಿಟ್ಟಾಯ್ತು. ಚಳಿಗಾಲದಲ್ಲಿ ದೇಹವನ್ನು ಮಾತ್ರ ಬೆಚ್ಚಗಿಟ್ಟರೆ ಸಾಲದು, ತ್ವಚೆಗೂ ಪೋಷಣೆ ಬೇಕು. ಈ ಕಾಲದಲ್ಲಿ ತ್ವಚೆ ಒಣಗುವುದು, ಶುಷ್ಕತನ, ಮುಖದ ಮೇಲೆ ಗೆರೆ, ನೆರಿಗೆ ಕಾಣಿಸಿಕೊಳ್ಳುವುದು ಹೆಚ್ಚು.

ಆದ್ದರಿಂದ ಮನೆಯಲ್ಲೇ ಸ್ವಲ್ಪ ಸಮಯ ಮೀಸಲಿಟ್ಟರೆ ಈ ಸಮಸ್ಯೆ ಸೌಂದರ್ಯವನ್ನು ಕುಗ್ಗಿಸದಂತೆ ನೋಡಿಕೊಳ್ಳಬಹುದು.

ಚಳಿಗಾಲದಲ್ಲಿ ತ್ವಚೆ ಪೋಷಿಸುವ 5 ನೈಸರ್ಗಿಕ ಸಲಹೆ:

1. ಮನೆಯಲ್ಲೇ ಕ್ಲೆನ್ಸರ್: 1 ಚಮಚ ನಿಂಬೆರಸ ಮತ್ತು 2 ಚಮಚ ಮೊಸರು ಸೇರಿಸಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಈ ಮಿಶ್ರಣವನ್ನು ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಬೇಕು. ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಂಡರೆ ಚಳಿಗಾಲದ ತ್ವಚೆ ಸಮಸ್ಯೆಯನ್ನು ನೀಗಿಸಬಹುದು.

2. ಚಳಿಗಾಲದ ಟೋನರ್: ನೀರು ಅಥವಾ ಆಪಲ್ ಸೈಡರ್ ವಿನೆಗರ್ ನೊಂದಿಗೆ ನಿಂಬೆ ರಸ ಸೇರಿಸಿ ಹತ್ತಿಯಿಂದ ಮುಖಕ್ಕೆ ಹಚ್ಚಿಕೊಂಡು ತಣ್ಣಗಿನ ನೀರಿನಿಂದ ತೊಳೆದುಕೊಂಡರೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೌತೆಕಾಯಿ ರಸವೂ ಕೂಡ ಈ ಕಾಲಕ್ಕೆ ಹೆಚ್ಚು ಸೂಕ್ತ.

3. ನೈಸರ್ಗಿಕ ಮಾಯಿಶ್ಚರೈಸರ್: ಶಿಯಾ ಬಟರ್ ಅಥವಾ ಕೊಕೊ ಬಟರ್ ನೊಂದಿಗೆ ಆಲಿವ್ ಎಣ್ಣೆ, ಅಲೊವೆರಾ ಬೆರೆಸಿ ಹಚ್ಚಿಕೊಂಡರೆ ಚಳಿಗಾಲಕ್ಕೆ ಬೆಸ್ಟ್ ನೈಸರ್ಗಿಕ ಮಾಯಿಶ್ಚರೈಸರ್ ಆಗುತ್ತದೆ.

4. ನಿರ್ಜೀವ ತ್ವಚೆಗೆ: ತ್ವಚೆಯಿಂದ ನಿರ್ಜೀವ ಕಣಗಳನ್ನು ಹೋಗಲಾಡಿಸುವುದಕ್ಕೆ ಜೋಳದ ಹಿಟ್ಟಿನೊಂದಿಗೆ ಜೇನು ಮತ್ತು ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.

5. ಚಳಿಗಾಲಕ್ಕೆ ಬೆಸ್ಟ್ ಲೋಶನ್: ಈ ಕಾಲದಲ್ಲಿ ಮುಖದ ಮೇಲೆ ಗೆರೆ ನೆರಿಗೆಗಳು ಕಾಣಿಸಿಕೊಳ್ಳದಂತೆ ತಡೆಯಲು ಸೌತೆಕಾಯಿ, ಅವಕೋಡ, ಪುದೀನಾ, ಜೋಜೋಬ ಎಣ್ಣೆ ಬೆರೆಸಿ ಪೇಸ್ಟ್ ನಂತೆ ಮಾಡಿಕೊಂಡು ಒಂದು ಬಾಟಲ್ ನಲ್ಲಿ ಶೇಖರಿಸಿಟ್ಟಿಕೊಂಡು ಪ್ರತಿನಿತ್ಯ ಬಳಸಬಹುದು ಅಥವಾ ಸೌತೆಕಾಯಿ ರಸವನ್ನು ದಿನವೂ ಲೇಪಿಸಿಕೊಂಡರೂ ನಡೆಯುತ್ತದೆ.

English summary

Winter Skin Care Tips | Homemade Tips for Skin Care in Winter | ಚಳಿಗಾಲದಲ್ಲಿ ತ್ವಚೆ ಪೋಷಣೆ | ಚಳಿಗಾಲದಲ್ಲಿ ತ್ವಚೆ ಪೋಷಣೆಗೆ ಮನೆಮದ್ದು

Winter is here and it is time to change your skin care methods and follow according to the season. The skin tends to get more dry, dull, wrinkled and flaky. So today, we will unreveal a few beauty secrets to achieve a baby soft skin. Take a look.
Story first published: Wednesday, November 9, 2011, 17:02 [IST]
X
Desktop Bottom Promotion