For Quick Alerts
ALLOW NOTIFICATIONS  
For Daily Alerts

ತ್ವಚೆ ಕಂಗೊಳಿಸುತ್ತೆ ದ್ರಾಕ್ಷಿ ಎಣ್ಣೆ ಮಸಾಜ್ ನಿಂದ

By Super
|
Grape Seed Oil for Skin
ಅನೇಕ ಕಾಸ್ಮೆಟಿಕ್ ಗಳಲ್ಲಿ ಬಳಸಲಾಗುವ ದ್ರಾಕ್ಷಿ ಬೀಜದ ಎಣ್ಣೆ ತ್ವಚೆಯ ಪೋಷಣೆಗೆ ತುಂಬಾ ಸಹಕಾರಿ. ವೈನ್ ತಯಾರಿಸಿ ಉಳಿದ ಹಣ್ಣಿನಿಂದ ಉತ್ಪಾದಿಸುವ ಈ ಎಣ್ಣೆಯಿಂದ ಚರ್ಮಕ್ಕೆ ತುಂಬಾ ಉಪಯೋಗವಿದೆ. ಅದೇನೆಂದು ಮುಂದೆ ತಿಳಿಯಿರಿ.

ದ್ರಾಕ್ಷಿ ಎಣ್ಣೆಯಲ್ಲಿರುವ ಉಪಯೋಗ:

* ದ್ರಾಕ್ಷಿ ಎಣ್ಣೆ ಸೌಂದರ್ಯ ವರ್ಧಕದಂತೆ ಕೆಲಸ ನಿರ್ವಹಿಸುತ್ತದೆ. ಇದರ ನಿರಂತರ ಬಳಕೆಯಿಂದ ನಿಮ್ಮ ಮುಖಕ್ಕೆ ಕಾಂತಿಯುತವಾಗಿ ಕಂಗೊಳಿಸುವಂತೆ ಮಾಡುತ್ತೆ.

* ದ್ರಾಕ್ಷಿಯಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಹಲವು ವರ್ಷದ ಹಿಂದೆ ಚರ್ಮ ಸಂಬಂಧಿ ಸಮಸ್ಯೆ ನಿವಾರಣೆಗೆ ಉಪಯೋಗಿಸುತ್ತಿದ್ದರು.

* ದ್ರಾಕ್ಷಿ ಎಣ್ಣೆ ಚರ್ಮವನ್ನು ಬಿಗಿ ಗೊಳಿಸಿ ಕಲೆಮುಕ್ತವಾಗುವಂತೆ ಮಾಡುತ್ತದೆ. ಇದು ಮೊಡವೆಯನ್ನು ಹೋಗಲಾಡಿಸಿ ತ್ವಚೆ ಮೃದುಗೊಳ್ಳವಂತೆ ಮಾಡುತ್ತದೆ.

* ಸ್ಟ್ರೆಚ್ ಮಾರ್ಕ್ ನಿವಾರಣೆಯಲ್ಲಿ ಈ ಎಣ್ಣೆಯ ಪಾತ್ರ ಪರಿಣಾಮಕಾರಿ. ಇದನ್ನು ಮಾರ್ಕ್ ಗಳ ಮೇಲೆ ನಿತ್ಯವೂ ಹಚ್ಚುತ್ತಾ ಬಂದರೆ ಫಲಿತಾಂಶ ನಿಮಗೇ ಗೋಚರವಾಗುತ್ತದೆ.

* ಅಂಟಿಲ್ಲದ ಈ ಎಣ್ಣೆ ಕಣ್ಣಿನ ಕೆಳಗೆ ಉಂಟಾಗುವ ಚರ್ಮದ ಸಮಸ್ಯೆಗೆ ಪರಿಣಾಮಕಾರಿ.

* ತುಂಬಾ ಬಿಸಿಲಿನಿಂದ ನಿಮ್ಮ ತ್ವಚೆ ಕಂಗಾಲಾಗಿದ್ದ ಪಕ್ಷದಲ್ಲಿ ದ್ರಾಕ್ಷಿ ಎಣ್ಣೆ ಲೇಪಿಸಿಕೊಂಡರೆ ಸನ್ ಸ್ಕ್ರೀನ್ ಲೋಶನ್ ನಂತೆ ಕೆಲಸ ಮಾಡುತ್ತದೆ.

ತ್ವಚೆಯನ್ನು ನೈಸರ್ಗಿಕವಾಗಿ ಸುಂದರಗೊಳಿಸಬೇಕೆಂಬ ಬಯಕೆ ನಿಮ್ಮದಾಗಿದ್ದರೆ ದ್ರಾಕ್ಷಿ ಎಣ್ಣೆಗಿಂತ ಉತ್ತಮ ಮಾರ್ಗ ಬೇರಿಲ್ಲ.

English summary

Grape Seed Oil for Skin | Grape Oil for Skin Care | ತ್ವಚೆ ಪೋಷಣೆಗೆ ದ್ರಾಕ್ಷಿ ಎಣ್ಣೆ | ದ್ರಾಕ್ಷಿ ಎಣ್ಣೆಯಿಂದ ತ್ವಚೆ ಆರೈಕೆ

Grape seed oil is used in many cosmetic products. It is a best beauty oil for the skin care, if used regularly will add glow to your face and improve your skin tone. Have a look to know which all the other benefits you can get from grape seed oil.
Story first published: Friday, March 30, 2012, 16:32 [IST]
X
Desktop Bottom Promotion