For Quick Alerts
ALLOW NOTIFICATIONS  
For Daily Alerts

ತ್ವಚೆ ಹೊಳೆಯುವಂತಿರಲು ಈ ಆಹಾರ ತಿನ್ನಿ

|
Cure Scars Naturally
ಕಲೆಗಳು ಕೆಲವೊಮ್ಮೆ ಮುಖ ಮತ್ತು ದೇಹದ ಮೇಲೆ ಹಾಗೆಯೇ ಉಳಿದುಕೊಳ್ಳುತ್ತವೆ. ಸರ್ಜರಿ, ಗುಳ್ಳೆ, ಮೊಡವೆ, ಗಾಯ ಅಥವಾ ವ್ಯಾಕ್ಸ್ ಮಾಡುವಾಗ ಆಗುವ ಗಾಯ ಕಲೆ ರೂಪದಲ್ಲಿ ಸಮಸ್ಯೆಯಾಗುತ್ತದೆ. ಆದರೆ ಕೆಲವು ಆಹಾರ ಸೇವಿಸುವುದರಿಂದ ಕಲೆಗಳನ್ನು ಕ್ರಮೇಣ ಹೋಗಿಸಲು ಸಾಧ್ಯವಿದೆ.

ಕಲೆ ನಿವಾರಿಸಿ ತ್ವಚೆಗೆ ಹೊಳಪು ನೀಡುವ ಕೆಲವು ಆಹಾರ:

1. ದೇಹ ಮತ್ತು ಚರ್ಮಕ್ಕೆ ಹಸಿರು ತರಕಾರಿ ತುಂಬಾ ಅವಶ್ಯ. ಇದು ವಿಷಕಾರಿ ಅಂಶಗಳನ್ನು ಹೊರಗೆಡವಿ ರಕ್ತ ಸಂಚಲನ ಹೆಚ್ಚಿಸುತ್ತದೆ. ಆದ್ದರಿಂದ ಹೂಕೋಸು, ಪಾಲಾಕ್, ಹಾಗಲಕಾಯಿ, ಬೀನ್ಸ್ ಇವುಗಳ ಸೇವನೆ ನಿಮ್ಮದಿರಲಿ.

2. ವಿಟಮಿನ್ ಇ ಹೆಚ್ಚಿರುವ ಆಹಾರಗಳು ತ್ವಚೆ ಕಲೆ ನಿವಾರಣೆ ಮಾಡುತ್ತದೆ. ಹಸಿರು ಆಲಿವ್, ಪಾಲಾಕ್, ಸಕ್ಕರೆ ಬಾದಾಮಿ (ಆಪ್ರಿಕಾಟ್), ಪೈನ್ ನಟ್, ಬಾದಾಮಿ, ಸೂರ್ಯ ಕಾಂತಿ ಬೀಜ ಮತ್ತು ವಿಟಮಿನ್ ಇ ಹೆಚ್ಚಿರುವ ಇನ್ನಿತರ ಆಹಾರಗಳನ್ನು ಸೇವಿಸಬಹುದು.

3. ಓಟ್ಸ್, ಬಾರ್ಲೆ, ಗೋಧಿ, ಕೆಂಪಕ್ಕಿಯಲ್ಲಿಯೂ ಕೂಡ ಚರ್ಮಕ್ಕೆ ಒಳಿತಾಗುವ ಲಕ್ಷಣಗಳಿವೆ. ಸೂರ್ಯಕಾಂತಿ ಬೀಜ, ಅಕ್ರೋಟ, ಬಾದಾಮಿ, ಪಿಸ್ತ ಮತ್ತು ಹುಚ್ಚೆಳ್ಳು ಇಂತಹ ಪದಾರ್ಥಗಳಲ್ಲಿಯೂ ವಿಟಮಿನ್ ಇ ಹೆಚ್ಚಿರುತ್ತದೆ.

4. ಕ್ಯಾರೆಟ್, ಸಿಹಿ ಗೆಣಸು, ಟರ್ನಿಪ್, ಪಾಲಾಕ್, ಕರಬೂರ್ಜದ ಹಣ್ಣು, ಸಾಸಿವೆ ಎಲೆ ಇವುಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಎ ಹೇರಳವಾಗಿರುವುದರಿಂದ ತ್ವಚೆ ಮತ್ತು ದೇಹವನ್ನು ಕಲೆಮುಕ್ತ ಮಾಡುತ್ತದೆ.

5. ತ್ವಚೆಗೆ ಜೀವ ತುಂಬಲು ವಿಟಮಿನ್ ಸಿ ಬೇಕು. ಆಲೂಗಡ್ಡೆ, ಹೂಕೋಸು, ಮೂಲಂಗಿ, ಮೆಣಸಿನ ಕಾಯಿ, ಎಲೆ ಕೋಸು, ಮೊಳಕೆ ಒಡೆದ ಕಾಳು ನಿಮ್ಮ ಆಹಾರದಲ್ಲಿರಲಿ.

6. ಸೀಬೆಕಾಯಿ, ಕಪ್ಪು ದ್ರಾಕ್ಷಿ, ಕಿತ್ತಳೆ, ಪಪ್ಪಾಯ, ಸ್ಟ್ರಾಬೆರಿ, ನಿಂಬೆಹಣ್ಣು ಮುಂತಾದ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ, ಕೆಲವೊಮ್ಮೆ ಫೇಶಿಯಲ್ ಮಾಡಿಕೊಳ್ಳುವುದರಿಂದಲೂ ಇದರ ಉಪಯೋಗ ಹೊಂದಬಹುದು.

7. ಎಣ್ಣೆ ಪದಾರ್ಥಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆಗೊಳಿಸಿದರೆ ತ್ವಚೆ ಮತ್ತು ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದನ್ನು ತಡೆಯಬಹುದು.

English summary

Cure Scars Naturally | Scars and Skin Problems | ನೈಸರ್ಗಿಕವಾಗಿ ಕಲೆ ನಿವಾರಣೆ | ಕಲೆ ಮತ್ತು ತ್ವಚೆ ಸಮಸ್ಯೆ

Scars can occur due to acne, pimple, surgeries or even waxing. Food also affects the skin. By having the right food, you can get rid of scars naturally. Lets check out the healthy and nutritious food to cure scars on the skin.
Story first published: Friday, October 7, 2011, 12:41 [IST]
X
Desktop Bottom Promotion