For Quick Alerts
ALLOW NOTIFICATIONS  
For Daily Alerts

ತುಟಿ ಒಣಗಿದರೆ ತಡಮಾಡದೆ ಹೀಗೆ ಮಾಡಿ

|
Natural Tips to Cure Chapped Lips
ತುಟಿ ಒಣಗುವುದು ಎಲ್ಲಾ ಕಾಲದಲ್ಲೂ ಸಾಮಾನ್ಯ. ತುಟಿ ಒಣಗುವುದು, ಒಡೆಯುವುದು, ತುಂಬಾ ಗಡುಸಾಗುವುದು ಇದರ ಲಕ್ಷಣ. ಆದ್ದರಿಂದ ಈ ಸಮಸ್ಯೆಗಳಿಂದ ಹೊರಬಂದು ತುಟಿಯ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ.

ತುಟಿಯನ್ನು ಮೃದುವಾಗಿಟ್ಟುಕೊಳ್ಳುವ ಕೆಲವು ಟಿಪ್ಸ್ ಗಳು:
1. ಸೌತೆಕಾಯಿಯನ್ನು ತುಟಿಯ ಮೇಲೆ ಉಜ್ಜಿದರೆ ತುಟಿ ಒಡೆದಿರುವುದು ಹೋಗಿ ಮೃದುವಾಗಿಸುತ್ತದೆ.

2. ಲೋಳೆಸರವನ್ನು ತುಟಿಗಳ ಮೇಲೆ ಸ್ವಲ್ಪವೇ ಸ್ವಲ್ಪ ಲೇಪಿಸಿದರೂ ತುಟಿ ಒಡೆದು ಚರ್ಮ ಉದುರುವುದನ್ನು ಸರಿಪಡಿಸುತ್ತದೆ.

3. ಮೃದುವಾದ ಟೂಥ್ ಬ್ರಶ್ ನಿಂದ ನಯವಾಗಿ ಆಗಾಗ್ಗೆ ತುಟಿಯನ್ನು ಉಜ್ಜುತ್ತಿದ್ದರೆ ಬೇಡದ ಚರ್ಮ ಬೇಗನೆ ಹೊರಬರುತ್ತದೆ ಅಥವಾ ಹತ್ತಿಯಿಂದಲೂ ಈ ರೀತಿ ಮಾಡಬಹುದು. ತುಂಬಾ ಗಡುಸಾಗಿ ಉಜ್ಜಬಾರದು.

4. ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಮಾಯಿಶ್ಚರೈಸರ್ ಹಚ್ಚಿದರೂ ತುಟಿಗಳು ಸುರಕ್ಷಿತವಾಗಿರುತ್ತದೆ.

5. ಒಣಗಿದ ಲಿಪ್ಸ್ ಟಿಕ್ ಹಚ್ಚಿಕೊಳ್ಳುವುದಕ್ಕಿಂತ ಗ್ಲಾಸಿ ಲಿಪ್ಸ್ ಟಿಕ್ ಹಚ್ಚಿಕೊಂಡರೆ ಉತ್ತಮ.

6. ತುಟಿಗಳನ್ನು ನೈಸರ್ಗಿಕವಾಗಿ ಸುಂದರವಾಗಿಡಲು ಬಿಡಬೇಕು. ಯಾವಾಗಲೂ ಕಾಸ್ಮೆಟಿಕ್ ಬಳಕೆ ಒಳ್ಳೆಯದಲ್ಲ.

7. ಹಾಲಿನ ಕೆನೆ, ನಿಂಬೆರಸದಿಂದ ತುಟಿಗಳಿಗೆ ಮಸಾಜ್ ಮಾಡಿ.

8. ಜೇನು, ಕೋಕೋ ಬಟರ್, ಗ್ಲಿಸರಿನ್ ಕೂಡ ತುಟಿಗಳಿಗೆ ನೈಸರ್ಗಿಕ ಮೇಕಪ್ ನಂತೆ ಕೆಲಸ ಮಾಡುತ್ತದೆ.

9. ಪಪ್ಪಾಯವನ್ನು ತುಟಿ ಮೇಲೆ ನಯವಾಗಿ ಉಜ್ಜುವುದು ತುಂಬಾ ಬೇಗನೆ ಫಲಿತಾಂಶವನ್ನು ನೀಡುತ್ತದೆ.

10. ಹೆಚ್ಚು ನೀರು ಕುಡಿಯುತ್ತಿದ್ದರೆ ದೇಹಕ್ಕೆ ಸಾಕಷ್ಟು ತೇವಾಂಶ ಒದಗಿ ತುಟಿಗಳೂ ಆರೋಗ್ಯಕರವಾಗಿರುತ್ತದೆ.

11. ವಿಟಮಿನ್ ಕೊರತೆಯಿದ್ದರೂ ತುಟಿಗಳು ಒಣಗುತ್ತವೆ. ಟೊಮೆಟೊ, ಕ್ಯಾರೆಟ್, ಬೀಟ್ ರೂಟ್ ಮತ್ತು ಇನ್ನಿತರ ಹಸಿರು ತರಕಾರಿಗಳೊಂದಿಗೆ ವಿಟಮಿನ್ ಎ ಹೆಚ್ಚಿರುವ ಆಹಾರವನ್ನು ಸೇವಿಸುತ್ತಿದ್ದರೆ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

English summary

Dry and Chapped Lips Remedy | Natural Tips to Cure Chapped Lips | ಒಡೆದ ಮತ್ತು ಒಣಗಿದ ತುಟಿಗೆ ಪರಿಹಾರ | ತುಟಿ ಒಡೆಯುವುದನ್ನು ತಡೆಯಲು ನೈಸರ್ಗಿಕ ವಿಧಾನ

Dry lips is a common problem. Lipstick appliance, constant wetting of lips with saliva leads to more chapped lips. Even low moisture, exposure to sun, dehydration and lip infection can also lead to chapped lips. As the season demands lip care, here are natural remedies to cure chapped lips.
Story first published: Tuesday, October 4, 2011, 11:45 [IST]
X
Desktop Bottom Promotion