For Quick Alerts
ALLOW NOTIFICATIONS  
For Daily Alerts

ಮುದ್ದು ಮುಖ ಕೆಡಿಸುವ ಮೊಡವೆಗೆ ಮನೆಮದ್ದು

By Prasad
|
Pimple scars home remedies
ಮುದ್ದು ಮುಖದ ಅಂದ ಕೆಡಿಸುವ ಮೊಡವೆ ಮೇಲೆ ಎಲ್ಲರಿಗೂ ಇನ್ನಿಲ್ಲದ ಕೋಪ. ಹರೆಯದ ಯುವಕ ಯುವತಿಯರಂತೂ ಮುಂಜಾನೆ ಕನ್ನಡಿ ನೋಡಿದಾಗಲೇ ಮೂಡ್ ಆಫ್ ಮಾಡಿಕೊಳ್ಳುತ್ತಾರೆ. ಮೊಡವೆ ಮಾಯವಾದರೂ ಮೊಡವೆಯಿಂದ ಉಂಟಾದ ಗಾಯ, ಕಲೆ ಶಾಶ್ವತವಾಗಿ ಉಳಿಯುವುದರಿಂದ ಮೊಡವೆ ಕಂಡರೆ ಎಲ್ಲರಿಗೂ ಭಯ. ಲುಕ್ಕಿಲ್ಲದ ಒರಟು ಮುಖದ ಹುಡುಗ ಹುಡುಗಿಯರನ್ನೂ ಮೊಡವೆ ಬಿಡುವುದಿಲ್ಲ. ಅದರಲ್ಲೂ ಸಿಂಪಲ್, ಡಿಂಪಲ್, ಹೇಮಾಮಾಲಿನಿಯಂಥ ನುಣುಪು ಗಲ್ಲದ ಟೀನೇಜಿನ ಸುಂದರಿಯರನ್ನು ಕಂಡರಂತೂ ಬಲು ಪ್ರೀತಿ ಪಿಂಪಲ್ ಗೆ.

ಮೊಡವೆಗಳಿಗೆ ಮದ್ದಿಲ್ಲ ಎಂದಲ್ಲ. ಕ್ಲಿನಿಕ್, ಮೆಡಿಕಲ್ ಶಾಪುಗಳಲ್ಲಿ ಇದಕ್ಕೆ ಬೇಕಾದಷ್ಟು ಕ್ರೀಮ್ ಗಳೂ ಸಿಗುತ್ತವೆ. ಗಾಯ ಮಾಯವಾದರೂ ಕಲೆ ಮಾಯವಾಗಲು ಎಂಬುದು ಕ್ಲಿನಿಕ್ ನಲ್ಲಿ ಮೊಡವೆಗೆ ಟ್ರೀಟ್ ಮೆಂಟ್ ಮಾಡಿಸಿಕೊಂಡಿರುವ ಅನೇಕ ಲಲನಾಮಣಿಗಳ ಕಂಪ್ಲೇಟ್. ಕೆಲವೊಮ್ಮೆ ಮೊಡವೆಗೆ ಇದ್ದಬದ್ದ ಕ್ರೀಮ್ ಗಳನ್ನೆಲ್ಲ ಹಚ್ಚಲು ಹೋಗಿ ಇನ್ಫೆಕ್ಷನ್ ಆಗುವುದೂ ಉಂಟು. ನಾಳೆ ಮದುವೆಯಿದೆ ಎನ್ನುವಾಗ ಹಿಂದಿನ ದಿನ ಏನೇನೋ ಕ್ರೀಮ್ ಹಚ್ಚಿ ಮುಖ ಕೆಡೆಸಿಕೊಂಡವರ ಕಥೆಗಳನ್ನು ನೀವು ಓದಿರುತ್ತೀರಿ.

ಮೊಡವೆಯಿಂದ ಉಂಟಾದ ಗಾಯದ ಕಲೆ ಮಾಯವಾಗಲು ನಮ್ಮ ಮನೆಯಲ್ಲಿಯೇ ಮದ್ದು ಮಾಡಬಹುದು. ನೈಸರ್ಗಿಕವಾಗಿ ದೊರಕುವ ಇಂತಹ ಮನೆಮದ್ದುಗಳಿಂದ ಸೈಡ್ ಎಫೆಕ್ಟ್ ಅಂತೂ ಇಲ್ಲವೇ ಇಲ್ಲ. ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಇಲ್ಲೊಂದಿಷ್ಟು ಪರಿಹಾರಗಳಿವೆ. ಟ್ರೈಮಾಡಿ ನೋಡಿ.

1. ನಿಂಬೆ ರನ : ಮೊಡವೆಯಿಂದ ಉಂಟಾಗುವ ಗಾಯ ಮಾಯವಾಗಿಸಲು ನಿಂಬೆ ರಸ ಅತ್ಯುತ್ತಮ ಆಯ್ಕೆ. ಇದನ್ನು ದಿನದಲ್ಲಿ ಎರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಕಳೆದ ನಂತರ ಮುಖ ತೊಳೆದರೆ ಸಾಕು. ಇದರಿಂದ ಚರ್ಮದ ಕಲೆ ಮಾಯವಾಗುತ್ತದೆ. ಚರ್ಮ ಮೃದುವಾಗಿ ಕಾಂತಿ ಹೆಚ್ಚಾಗುತ್ತದೆ.

2. ಆಲಿವ್ ಎಣ್ಣೆ : ಇದರಿಂದ ಕೂಡ ಮುಖದ ಕಾಂತಿ ಹೆಚ್ಚಿಸುತ್ತದೆ. ಇದನ್ನು ದಿನಾ ಬಳಸಬಹುದು.

3. ಟೊಮೆಟೊ : ಟೊಮೆಟೊದಲ್ಲಿ ಹೇರಳವಾಗಿ ವಿಟಮಿನ್ ಎ ಇದ್ದು, ಮುಖದ ಜಿಡ್ಡಿನಂಶ ಕಡಿಮೆ ಮಾಡುತ್ತದೆ. ಟೊಮೆಟೊ ತುಂಡುಗಳನ್ನು ಮೊಡವೆಯಿಂದಾದ ಗಾಯದ ಮೇಲೆ ಇಡುವುದರಿಂದ ಮುಖದ ಅಂದ ಹೆಚ್ಚುತ್ತದೆ. ಮೊಡವೆ ಗಾಯಗಳೂ ಮಂಗಮಾಯವಾಗುತ್ತವೆ.

4. ಐಸ್ ಕ್ಯೂಬ್ : ಐಸ್ ಕ್ಯೂಬ್ ನ್ನು ಮೊಡವೆ ಗಾಯದ ಮೇಲೆ ನಯವಾಗಿ ತಿಕ್ಕಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

5. ಗಂಧದ ಪುಡಿ : ಮೊಡವೆ ಗಾಯದ ನೋವಿನ ಶಮನಕ್ಕೆ ಗಂಧದ ಪುಡಿ ಒಳ್ಳೆಯ ಔಷಧಿ. ಗಂಧದ ಪೇಸ್ಟನ್ನು ಚರ್ಮದ ಮೇಲೆ ಮತ್ತು ಮೊಡವೆ ಇತ್ಯಾದಿಗಳಿಂದ ಉಂಟಾದ ಗಾಯದ ಮೇಲೆ ಹಚ್ಚಿ. ಎಲ್ಲ ಇನ್ಫೆಕ್ಷನ್ ಗಳಿಂದಲೂ ಮುಕ್ತವಾಗುತ್ತದೆ. ಮನಸ್ಸಿಗೂ ಹಿತವೆನಿಸುತ್ತದೆ.

7. ಮೊಟ್ಟೆಯ ಲೋಳೆ : ಚರ್ಮದ ಆರೋಗ್ಯಕ್ಕೆ ಮೊಟ್ಟೆಯ ಬಿಳಿ ಲೋಳೆ ಭಾಗ ಬಳಸಿ. ಇದು ಮುಖವನ್ನು ಹೆಚ್ಚು ಬಿಗಿ ಗೊಳಿಸುತ್ತದೆ. ದಿನಕ್ಕೊಮ್ಮೆಯಾದರೂ ಮೊಡವೆಯಿಂದ ಗಾಯವಾಗಿರುವ ಭಾಗಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿರಿ ಕೆಲ ಹೊತ್ತುಬಿಟ್ಟು ತೊಳೆಯಿರಿ.

7. ಜೇನುರಸ : ಜೇನಿಗೆ ಹಲವು ಔಷಧೀಯ ಗುಣಗಳಿವೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹೆಚ್ಚು ಕಾಂತಿಯುಕ್ತವಾಗಿಸಿ ಮುಖದ ಅಂದ ಹೆಚ್ಚಿಸುತ್ತದೆ.

ಮೊಡವೆಯಿಂದ ಉಂಟಾದ ಗಾಯಗಳಿಗೆ, ಆರೋಗ್ಯಕರ ಚರ್ಮಕ್ಕೆ ಮೇಲೆ ತಿಳಿಸಿದ ಟ್ರೀಟ್ ಮೆಂಟ್ ಗಳನ್ನು ಬಳಸಿ. ಇದು ಭವಿಷ್ಯದಲ್ಲೂ ಮೊಡವೆ ಆಗುವುದನ್ನು ತಪ್ಪಿಸುತ್ತದೆ. ಮೊಡವೆಯ ಗೊಡವೆ ಬೇಡವೆಂದರೆ ಕರಿದ ಆಹಾರಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಮೊಡವೆಯಾದರೆ ಉಗುರಿನಿಂದ ಕೆರೆಯುವುದನ್ನು, ಯಾವುದ್ಯಾವುದೋ ಸೋಪುಗಳನ್ನು ಹಚ್ಚುವುದನ್ನು ನಿಲ್ಲಿಸಬೇಕು. ಬೇಕೆಂದರೆ ತಜ್ಞರ ಸಲಹೆ ಪಡೆಯಿರಿ.

ಎಲ್ಲಕ್ಕಿಂತ ಹೆಚ್ಚಾಗಿ, ಮೊಡವೆಗಳಾದರೂ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುವುದನ್ನು ಬಿಡಿ. ಇದು ನೈಸರ್ಗಿಕ ಕ್ರಿಯೆ. ಹಾಲುಗಲ್ಲದ ಐಶ್ವರ್ಯ ರೈಳನ್ನೂ ಬಿಟ್ಟಿರಲಾರದು ಪಿಂಪಲ್. ಯೌವನದ ಹೊಸ್ತಿಲಲ್ಲಿರುವ ಎಲ್ಲರಿಗೂ ಕೆಲಕಾಲ ಬಂದುಹೋಗುವ ಉಪಟಳ ಈ ಮೊಡವೆ. ಮೋರೆಯನ್ನು ಹಾಳುಗೆಡವುವ ಮೊಡವೆ ಕಾಣಿಸದಂತೆ ಮಾಡಲು ಬ್ಯೂಟಿ ಪಾರ್ಲರುಗಳಿಗೆಲ್ಲ ಹೋಗಿ ದುಡ್ಡು ಸುರಿಯುವ ಬದಲು ಮನೆಮದ್ದಿಗೆ ಮೊರೆಹೋಗಿ.

English summary

Acne home remedies | Pimple scars home remedies | Skin treatment home medicine | ಮೊಡವೆ ನಿವಾರಣೆಗೆ ಮನೆಮದ್ದು | ಪಿಂಪಲ್ ಮತ್ತು ಆರೋಗ್ಯ ಸಲಹೆ

Here are some remedies for pimple scars, which cause embarrassment specially for teenagers. Use these home medicine for treating skin ailments for better effect. These home remedies have no side effects too.
Story first published: Thursday, May 31, 2012, 11:04 [IST]
X
Desktop Bottom Promotion