For Quick Alerts
ALLOW NOTIFICATIONS  
For Daily Alerts

ಕ್ವಾರೆಂಟೈನ್ ಟೈಮ್‌: ಬೇಡದ ಕೂದಲು ತೆಗೆಯಲು 5 ಬ್ಯೂಟಿ ಟಿಪ್ಸ್

|

ಈಗ ಎಲ್ಲಿ ನೋಡಿದರೂ ಕರೋನಾ ಭೀತಿ. ಎಲ್ಲರೂ ಗೃಹಬಂಧನದಲ್ಲಿಯೇ ಇರಲು ಸರ್ಕಾರವೂ ಆದೇಶ ಹೊರಡಿಸಿದೆ. ಹೀಗಿರುವಾಗ ಮನೆಯಲ್ಲಿಯೇ ಇದ್ದು ನಿಮಗೆ ಬೇಜಾರಾಗಬಹುದು. ಅಥವಾ ನಿಮ್ಮ ಸೌಂದರಕ್ಕೆ ಸಂಬಂಧಪಟ್ಟಂತೆ ಬ್ಯೂಟಿ ಪಾರ್ಲರ್ ಗಳಿಗೂ ಹೋಗಲು ಸಾಧ್ಯವಾಗದೇ ಇದ್ದಿರಬಹುದು.

Removing Unwanted Hair At Home

ಹೀಗಾಗಿ, ಐಬ್ರೋ, ಹೇರ್ ರಿಮೂವಿಂಗ್, ಮುಖದ ಮೇಲಿನ ಕೂದಲನ್ನು ತೆಗೆದುಹಾಕಲು ಯಾವ ಬ್ಯೂಟಿ ಪಾರ್ಲರ್ ಗಳಿಗೂ ಹೋಗಲು ಸಾಧ್ಯವಿಲ್ಲ. ಆದರೆ ನಿಯಮಿತವಾಗಿ ನೀವು ಮಾಡುತ್ತಿರುವ ಈ ಕಾರ್ಯಗಳು ನಿಂತುಹೋದರೆ ಹೇಗೆ? ಚಿಂತೆ ಬೇಡ, ನೀವು ಮನೆಯಲ್ಲಿಯೇ ಕುಳಿತು ಈ ಕೆಲವು ವಿಧಾನಗಳ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹೌದು, ಮುಖದಲ್ಲಿನ ಕೂದಲನ್ನು ತೆಗೆಯಲು ನೀವು ಮನೆಯಲ್ಲಿಯೇ ಇದ್ದು ಪ್ರಯತ್ನಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.
ಟ್ವೀಜರ್ ಬಳಸಿ (ಕೂದಲು ತೆಗೆಯುವ ಒಂದು ಸಾಧನ)

ಟ್ವೀಜರ್ ಬಳಸಿ (ಕೂದಲು ತೆಗೆಯುವ ಒಂದು ಸಾಧನ)

ನಿಮಗೆ ಹೈಬ್ರೋ ಬೇಡವಾದರೆ, ನೀವು ಟ್ವೀಜರ್ ಅನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕು! ಎಲ್ಲಾ ಕೂದಲನ್ನು ಒಂದೇ ಬಾರಿಗೆ ಎಳೆಯುವುದು ನಿಜವಾಗಿಯೂ ಹೆಚ್ಚು ನೋವನ್ನು ಉಂಟುಮಾಡುತ್ತದೆ. ಅಲ್ಲದೇ ಹುಬ್ಬುಗಳು ಅಥವಾ ಕೂದಲು ಎಳೆದ ಮುಖದ ಯಾವುದೇ ಭಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ನಿರ್ವಹಿಸಲು ಉತ್ತಮ ವಿಧಾನವೆಂದರೆ ನಿಯಮಿತವಾಗಿ ಕೆಲವು ಎಳೆಗಳನ್ನು ತೆಗೆದುಹಾಕುವುದು.

ವ್ಯಾಕ್ಸ್ ನ ಪಟ್ಟಿಗಳನ್ನು ಪ್ರಯತ್ನಿಸಿ

ವ್ಯಾಕ್ಸ್ ನ ಪಟ್ಟಿಗಳನ್ನು ಪ್ರಯತ್ನಿಸಿ

ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಮುಖಕ್ಕಾಗಿ ಬಳಸಬಹುದು. ನೀವು ವ್ಯಾಕ್ಸ್ ಪಟ್ಟಿಗಳನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ನಿಮ್ಮ ಮುಖದ ಕೂದಲನ್ನು ತೆಗೆಯಲು ಬಳಸಬಹುದು. ಆದಾಗ್ಯೂ, ನೀವು ಇದನ್ನು ಮುಖಕ್ಕೆ ಪ್ರಯತ್ನಿಸುವ ಮೊದಲು ಸ್ವಲ್ಪ ಭಾಗಕ್ಕೆ ಹಚ್ಚಿ ಪರೀಕ್ಷೆಯನ್ನು ಮಾಡಲು ನಾವು ಶಿಫಾರಸು ಮಾಡುತ್ತೇವೆ!

ಸಕ್ಕರೆ ಬಳಸಲು ಪ್ರಯತ್ನಿಸಿ

ಸಕ್ಕರೆ ಬಳಸಲು ಪ್ರಯತ್ನಿಸಿ

ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಇಟ್ಟುಕೊಂಡಿರದಿದ್ದರೆ, ನೀವು ಸುಲಭವಾಗಿ ಮನೆಯಲ್ಲಿ ನಿಮ್ಮ ಸ್ವಂತ ಬಿಸಿ ವ್ಯಾಕ್ಸ್ ನ್ನು ತಯಾರಿಸಬಹುದು. ಇದನ್ನು ತಯಾರಿಸಲು ನಿಮಗೆ ಬೇಕಾಗಿರುವುದು ಸ್ವಲ್ಪ ನೀರು, ನಿಂಬೆ ರಸ ಮತ್ತು ಸಕ್ಕರೆ ಮಾತ್ರ. ಉತ್ತಮವಾದುದಲ್ಲವೇ? ಇದಕ್ಕೆ ವ್ಯಾಕ್ಸಿಂಗ್ ಪಟ್ಟಿಗಳು ಕೂಡ ಅಗತ್ಯವಿಲ್ಲ.

ಟಿಂಕಲ್ ರೇಜರ್ ಅನ್ನು ಪ್ರಯತ್ನಿಸಿ

ಟಿಂಕಲ್ ರೇಜರ್ ಅನ್ನು ಪ್ರಯತ್ನಿಸಿ

ನೀವು ಮನೆಯಲ್ಲಿ ಫೇಸ್ ರೇಜರ್ಗಳನ್ನು ಹೊಂದಿದ್ದರೆ, ನೀವೇ ಅದೃಷ್ಟವಂತರು! ಅವು ಚರ್ಮದ ಮೇಲೆ ಕಠಿಣವಾಗಿರುವುದಿಲ್ಲ ಮತ್ತು ಮುಖದ ಕೂದಲನ್ನು ಸುಲಭವಾಗಿ ತೆಗೆದುಹಾಕಬಹುದು. ಹುಬ್ಬುಗಳಿಗಾಗಿ, ಕೂದಲನ್ನು ತೆಗೆಯುವಾಗ ಹೆಚ್ಚು ಜಾಗರೂಕರಾಗಿರಿ, ಏಕೆಂದರೆ ನಿಮ್ಮ ಹುಬ್ಬಿನ ಆಕಾರವೇ ಹಾಳಾಗಿ ಬಿಡಬಹುದು. ನಿಧಾನವಾಗಿ ಕನ್ನಡಿಯನ್ನು ನೋಡುತ್ತಲೇ ರೇಜರ್ ಬಳಸಿ ಕೂದಲನ್ನು ತೆಗೆಯಿರಿ.

ಥ್ರೆಡ್ (ದಾರ) ನಿಂದ ಕೂದಲು ತೆಗೆಯಲು ಕಲಿಯಿರಿ

ಥ್ರೆಡ್ (ದಾರ) ನಿಂದ ಕೂದಲು ತೆಗೆಯಲು ಕಲಿಯಿರಿ

ಥ್ರೆಡ್ ಮಾಡುವುದು ಹೇಗೆ ಎಂದು ಕಲಿಯುವ ಮೂಲಕ ನೀವು ಮನೆಯಲ್ಲಿಯೇ ಇದ್ದು ಐಬ್ರೋ ಗಳನು ಮಾಡಬಹುದು. ಇದು ತುಂಬಾ ಸರಳವಾಗಿದೆ ಮತ್ತು ಗಲ್ಲದ ಮತ್ತು ಮೇಲಿನ ತುಟಿಗಳ ಮೇಲೆ ಕೂಡ ಪ್ರಯತ್ನಿಸಬಹುದು. ಕೂದಲು ಪೂರ್ಣ ಬೆಳೇಯುವ ಮೊದಲೇ ಹೆಚ್ಚು ನೋವನ್ನು ತಪ್ಪಿಸಲು ಇದನ್ನು ನಿಯಮಿತವಾಗಿ ಮಾಡಿ.

English summary

quarantine skincare : Ways To Remove Unwanted Facial Hair at Home

In this quarantine time here are 5 tips to get rid of unwanted hair, read on.
X
Desktop Bottom Promotion