For Quick Alerts
ALLOW NOTIFICATIONS  
For Daily Alerts

ಪುರುಷರೇ ನಿಮ್ಮ ಕೂದಲು ಉದುರುತ್ತಿದ್ಯಾ? ಈ 6 ಟಿಪ್ಸ್ ಸರಿಯಾಗಿ ಪಾಲಿಸಿದ್ರೆ ಹೇರ್ ಫಾಲ್ ಗೆ ಹೇಳಿಬಹುದು ಗುಡ್‌ಬೈ

|

ಕೂದಲು ಉದುರುವಿಕೆ ಈಗೀನ ಕಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇದು ಕೇವಲ ಉದ್ದ ಕೂದಲಿನ ಮಹಿಳೆಯರಿಗೆ ಸೀಮಿತವಾಗಿಲ್ಲ. ಪುರುಷರಲ್ಲೂ ಇಂದಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿ ಬಿಟ್ಟಿದೆ. ಗಿಡ್ಡ ಕೂದಲು ಇದ್ದರು ಪುರುಷರಲ್ಲಿ ಹೇರ್ ಫಾಲ್ ಉಂಟಾಗುತ್ತಿದೆ. ಕೂದಲು ಉದುರಲು ಇಂತಹುದೇ ಕಾರಣ ಎಂದು ಇಲ್ಲ. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ, ಅತಿಯಾದ ಯೋಚನೆ, ನಿದ್ರಾಹೀನತೆ, ಟೆನ್ಶನ್, .ಕಲುಷಿತ ನೀರು, ಧೂಳು, ಹಾರ್ಮೋನ್‌ಗಳ ವ್ಯತ್ಯಾಸ, ಪೋಷಕಾಂಶಗಳ ಕೊರತೆ ಹೀಗೆ ವಿವಿಧ ಕಾರಣಗಳಿಂದ ಕೂದಲು ಉದುರುತ್ತದೆ. ಸಾಮಾನ್ಯವಾಗಿ ಪುರುಷರು ಮೂವತ್ತು ವರ್ಷಕ್ಕೆ ಬಂದಾಗ ಅವರ ಕೂದಲು ಉದುರಲು ಆರಂಭವಾಗುತ್ತದೆ. ಕೆಲವರ ಕೂದಲು ಸಂಪೂರ್ಣವಾಗಿ ಬೋಳಾಗುತ್ತದೆ. ಅದಕ್ಕೆ ಹಾರ್ಮೋನ್ ಗಳು ಅಥವಾ ಹೆರಿಡಿಟರಿಯಾಗಿದೆ. ಇದನ್ನು ಸರಿ ಪಡಿಸಲು ಅನೇಕರು ಕಷ್ಟಪಡುತ್ತಾರೆ. ನಿಮ್ಮ ಕೂದಲು ಈ ರೀತಿ ಉದುರುತ್ತಿದ್ದರೆ.

ಈ ಲೇಖನ ನಿಮಗೆ ತುಂಬಾನೇ ಉಪಯುಕ್ತವಾಗಲಿದೆ. ಈ ಆರು ಟಿಪ್ಸ್ ಅಥವಾ ಔಷಧದ ವಿಧವನ್ನು ನೀವು ಫಾಲೋ ಮಾಡಿದರೆ ನಿಮ್ಮ ಕೂದಲು ಉದುರುವುದರಿಂದ ನೀವು ತಪ್ಪಿಸಿಕೊಳ್ಳಬಹುದಾಗಿದೆ. ಹಾಗಾದರೆ ಏನದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಿನೊಕ್ಸಿಡಿಲ್ ಅಥವಾ ರೋಗೈನ್

ಮಿನೊಕ್ಸಿಡಿಲ್ ಅಥವಾ ರೋಗೈನ್

ರೋಗೈನ್ ಕಂಪನಿಯ ಮಿನೊಕ್ಸಿಡಿಲ್ ಎಂಬ ಔಷಧ ತುಂಬಾನೇ ಉಪಯುಕ್ತವಾಗಿದೆ. ಇದು ನೀವು ಕಳೆದುಕೊಂಡಿರುವ ಕೂದಲನ್ನು ಪುನಃಸ್ಥಾಪಿಸುವುದಿಲ್ಲ, ಆದರೆ ಉಳಿದಿರುವ ಕೂದಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಕಾರ್ಯವನ್ನು ಇದು ಮಾಡುತ್ತದೆ. ಈ ಔಷಧವು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಕಿರುಚೀಲಗಳಿಗೆ ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನೀಡುತ್ತದೆ. ಈ ಮೂಲಕ ಕೂದಲು ಉದುರಂತೆ ನೋಡಿಕೊಳ್ಳುತ್ತದೆ. ಕೂದಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.

ನ್ಯೂಟ್ರಾಫೊಲ್

ನ್ಯೂಟ್ರಾಫೊಲ್

ನ್ಯೂಟ್ರಾಫೊಲ್ ಅನ್ನೋದು ಕೂದಲು ಬೆಳೆಯುವ ಸಪ್ಲಿಮೆಂಟ್ ಆಗಿದೆ. ಇದು ವಿಟಮಿನ್‌ಗಳು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡಿರುತ್ತದೆ, ಇದು ಟೆಸ್ಟೋಸ್ಟೆರಾನ್‌ನ ಉಪ ಉತ್ಪನ್ನವಾದ ಡೈಹೈಡ್ರೊಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಈ ಉಪಉತ್ಪನ್ನವು ಕೂದಲಿನ ಉದುರುವಿಕೆಯ ಕಾರಣಗಳ ಮೇಲೆ ಕೆಲಸ ಮಾಡುತ್ತ ಉದುರುವಿಕೆ ಕಡಿಮೆ ಮಾಡುತ್ತದೆ.

ವಿಟಮಿನ್

ವಿಟಮಿನ್

ಆಂಟಿ ಆಕ್ಸಿಡೆಂಟ್ ಗುಣಗಳುಳ್ಳ ವಿಟಮಿನ್-ಎ ಪದಾರ್ಥಗಳು ಆರೋಗ್ಯಕರ ಕೂದಲು ಮತ್ತು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸಿಹಿ ಆಲೂಗೆಡ್ಡೆ, ಕ್ಯಾರೆಟ್, ಕರಿಬೇವಿನ ಸೊಪ್ಪು, ಒಣಗಿದ ಏಪ್ರಿಕಾಟ್, ಸ್ವೀಟ್ ಕೆಂಪು ಮೆಣಸು, ಟ್ಯೂನಾ ಮೀನು,ಮಾವು ವಿಟಮಿನ್-ಎ ಅಂಶವನ್ನು ಒಳಗೊಂಡಿರುತ್ತದೆ. ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ನಷ್ಟವನ್ನು ತಡೆಯುತ್ತದೆ. ಇನ್ನು ವಿಟಮಿನ್ ಡಿ ಯುಕ್ತ ಆಹಾರ ಕೂಡ ಕೂದಲನ್ನು ಸಂರಕ್ಷಣೆ ಮಾಡುವುದಲ್ಲದೇ ಕೂದಲು ಬೆಳವಣಿಗೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ.

ಕಾರ್ಟಿಕೊಸ್ಟೆರಾಯ್ಡ್

ಕಾರ್ಟಿಕೊಸ್ಟೆರಾಯ್ಡ್

ಸ್ವಯಂ ನಿರೋಧಕ ಅಸ್ವಸ್ಥತೆಗಳಂತಹ ವೈದ್ಯಕೀಯ ಪರಿಸ್ಥಿತಿಗಳಿಂದ ಉರಿಯೂತ ಉಂಟಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ಕೂದಲು ಉದುರುತ್ತದೆ. ಇದನ್ನು ಅಲೋಪೆಸಿಯಾದ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಉರಿಯೂತವನ್ನು ನಿಲ್ಲಿಸಲು ಸಹಾಯ ಮಾಡಲು ಕಾರ್ಟಿಕೊಸ್ಟೆರಾಯ್ಡ್ ಔಷಧಿ ತೆಗೆದುಕೊಳ್ಳುವುದು ಉತ್ತಮ ಆಯ್ಕೆ. ಕಾರ್ಟಿಕೊಸ್ಟೆರಾಯ್ಡ್ ಔಷಧಿಯನ್ನು ಸಿರಿಂಜ್ ಮೂಲಕ ತಲೆಗೆ ಚುಚ್ಚಬಹುದಾಗಿದೆ. . ಈ ಚಿಕಿತ್ಸೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನೀವು ಅದನ್ನು ಪಡೆಯಲು ಯೋಚಿಸುವ ಮೊದಲು, ವೈದ್ಯರ ಶಿಫಾರಸು ಅತ್ಯಗತ್ಯವಾಗಿದೆ.

ಐರನ್ ಸಪ್ಲಿಮೆಂಟ್ಸ್ ಅಥವಾ ಕಬ್ಬಿಣಾಂಶಯುಕ್ತ ಆಹಾರ

ಐರನ್ ಸಪ್ಲಿಮೆಂಟ್ಸ್ ಅಥವಾ ಕಬ್ಬಿಣಾಂಶಯುಕ್ತ ಆಹಾರ

ಕೂದಲಿನ ಬೆಳವಣಿಗೆಗೆ ಕಬ್ಬಿಣ ಬಹಳ ಮುಖ್ಯ. ನಮ್ಮ ಕೂದಲು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಆಮ್ಲಜನಕವನ್ನು ಅವಲಂಬಿಸಿರುವುದೇ ಇದಕ್ಕೆ ಕಾರಣ. ಕಬ್ಬಿಣವು ಹಿಮೋಗ್ಲೋಬಿನ್'ನ ನಿರ್ಣಾಯಕ ಅಂಶವಾಗಿರುವುದರಿಂದ ಕೂದಲು ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ.ದೇಹದ ಭಾಗವಾಗಿರದಿದ್ದರೂ ಕೂದಲಿಗೆ ಆಮ್ಲಜನಕ ಏಕೆ ಬೇಕು ಎಂದು ನಿಮಗೆ ಆಶ್ಚರ್ಯವಾಗುತ್ತಿರಬೇಕು. ಕೂದಲು ನಿರ್ಜೀವವಾಗಿದ್ದರೂ ಸಹ, ಅವು ಉಳಿವು ಮತ್ತು ಬೆಳವಣಿಗೆಗೆ ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ಕೂದಲ ಬೆಳವಣಿಗೆಗೆ ಮತ್ತು ದಪ್ಪವಾಗಲು ಆಮ್ಲಜನಕ ಬಹಳ ಮುಖ್ಯ. ಹೀಗಾಗಿ ಕಬ್ಬಿಣಾಂಶಯುಕ್ತ ಆಹಾರವನ್ನು ಸೇವಿಸಬೇಕು.

ಯೋಗ ಮತ್ತು ವ್ಯಾಯಾಮ

ಯೋಗ ಮತ್ತು ವ್ಯಾಯಾಮ

ದೈನಂದಿನ ಜಂಜಾಟದಿಂದ ಮನಸ್ಸು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತದೆ.. ಸರಿಯಾದ ರೀತಿಯಲ್ಲಿ ನಿದ್ರೆ ಆಗುವುದಿಲ್ಲ.. ಜವಾಬ್ದಾರಿಗಳು ಹೆಚ್ಚಿದಷ್ಟು ಮನಸ್ಸಿನ ಮೇಲೆ ಭಾರ ಬೀಳುತ್ತದೆ.. ಹೀಗಾಗಿ ಆದಷ್ಟು ಮನಸ್ಸನ್ನು ಸಂತೋಷ ಹಾಗೂ ಉಲ್ಲಾಸದಿಂದ ಇಟ್ಟುಕೊಳ್ಳಬೇಕು.. ಒಂದು ವೇಳೆ ಮಾನಸಿಕ ಒತ್ತಡ ಹೆಚ್ಚಾದರೆ ಕೂದಲುದುರುವ ಸಮಸ್ಯೆಯೂ ಅಧಿಕವಾಗಲಿದೆ.. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಕೂದಲು ಉದುರುವುದನ್ನು ತಡೆಯಬಹುದು. ಇನ್ನು ಮಾನಸಿಕ ಆರೋಗ್ಯ ಚೆನ್ನಾಗಿಡಲು ನೀವು ಯೋಗ ಹಾಗೂ ವ್ಯಾಯಾಮದ ಮೊರೆ ಹೋಗಬಹುದು. ಯೋಗ ಹಾಗೂ ವ್ಯಾಯಾಮ ಮಾಡುವುದರಿಂದ ಒತ್ತಡ, ಆತಂಕ, ಭಯ ಕಡಿಮೆ ಆಗುತ್ತದೆ. ಉತ್ತಮ ನಿದ್ರೆಯು ನಿಮ್ಮ ಪಾಲಾಗಲಿದೆ.

English summary

Ways Men Can Tackle Severe Hair Loss in kannada

Do you have hair falling, follow this tips, read on...
X
Desktop Bottom Promotion