For Quick Alerts
ALLOW NOTIFICATIONS  
For Daily Alerts

ಗಡ್ಡ ಮೀಸೆ ಇಲ್ಲದೆ ಇರುವ ಪುರುಷರ ಸಂಕಷ್ಟಗಳು

|

ಹಿಂದಿನ ಕಾಲದಲ್ಲಿ ಹೆಚ್ಚಾಗಿ ಗಡ್ಡ ಹಾಗೂ ಮೀಸೆ ಬಿಡುವುದು ಒಂದು ರೀತಿಯಲ್ಲಿ ಪ್ರತಿಷ್ಠೆಯಾಗಿತ್ತು. ಇದರ ಬಳಿಕ ಸಿನಿಮಾ ನಟರಂತೆ ಮೀಸೆ ಹಾಗೂ ಗಡ್ಡ ಬೋಳಿಸಿಕೊಳ್ಳಲು ಆರಂಭಿಸಿದರು. ಈಗ ಮತ್ತೆ ಇತಿಹಾಸ ಮರುಕಳಿಸಿದೆ. ಅದೇನೆಂದರೆ ಜನರು ಮತ್ತೆ ಗಡ್ಡ ಮೀಸೆ ಬೆಳೆಸಲು ಆರಂಭಿಸಿದ್ದಾರೆ. ಯಾಕೆಂದರೆ ಗಡ್ಡಮೀಸೆ ಬಿಡುವುದು ಇಂದಿನ ದಿನಗಳಲ್ಲಿ ದೊಡ್ಡ ಫ್ಯಾಶನ್ ಆಗಿದೆ. ಆದರೆ ಕೆಲವು ಜನರಿಗೆ ಪೂರ್ತಿಯಾಗಿ ಗಡ್ಡ ಮೀಸೆ ಬರುವುದೇ ಇಲ್ಲ. ಇದಕ್ಕಾಗಿ ಅವರು ತುಂಬಾ ಶ್ರಮ ವಹಿಸುವರು. ಆದರೆ ಗಡ್ಡಮೀಸೆ ಪೂರ್ತಿಯಾಗಿ ಬೆಳೆಯದೆ ಇರುವಂತಹ ಪುರುಷರು ಯಾವ ರೀತಿಯಲ್ಲಿ ತೊಂದರೆಯಲ್ಲಿ ಸಿಲುಕುವರು ಎಂದು ನಾವು ಇಲ್ಲಿ ತಿಳಿಯುವ...

full beard

ಮಧ್ಯಮ ಮತ್ತು ಇಂಟರ್ನೆಟ್ ನಿಂದ ದೂರವಿರುವಿರಿ

ನೀವು ಪೂರ್ತಿಯಾಗಿ ಗಡ್ಡ ಮೀಸೆ ಬೆಳೆಸದೆ ಇದ್ದರೆ ಆಗ ಮಾಧ್ಯಮ ಮತ್ತು ಇಂಟರ್ನೆಟ್ ನ್ನು ಇಷ್ಟಪಡದೆ ಇರಬಹುದು. ಯಾಕೆಂದರೆ ಇದು ಮುಖದ ಮೇಲಿನ ಕೂದಲನ್ನು ಅತಿಯಾಗಿ ವಿಜೃಂಭಿಸುವುದು. ಪ್ರತೀ ಸಲ ನೀವು ನೋಡಬಹುದು, ಓದಬಹುದು ಅಥವಾ ಇಂಟರ್ನೆಟ್ ನಲ್ಲಿ ಹುಡುಕಾಡಿದರೂ ಗಡ್ಡಮೀಸೆ ಇರುವಂತಹ ಪುರುಷರು ಕಂಡುಬರುವರು.

ಎಲ್ಲಾ ರೀತಿಯ ಗಿಡಮೂಲಿಕೆ ಚಿಕಿತ್ಸೆ ಪ್ರಯತ್ನಿಸಿರವುದು ವಿಫಲ

ಹಲವಾರು ರೀತಿಯ ಟಾನಿಕ್ ಮತ್ತು ಆಯುರ್ವೇದಿಕ್ ರೀತಿಯಲ್ಲಿ ಕೂದಲು ಬೆಳೆಯುವ ಉತ್ಪನ್ನಗಳನ್ನು ಬಳಸಿದ್ದರೂ ಅದರಿಂದ ಯಾವುದೇ ಪ್ರಯೋಜನ ಆಗದೆ ಇರಬಹುದು ಮತ್ತು ಇದರಿಂದ ಮತ್ತಷ್ಟು ಸಮಸ್ಯೆ ಕಾಡಿರಬಹುದು.

ಯಾವಾಗಲೂ ಹೀಯಾಳಿಸುವುದು

ಯಾವಾಗಲೂ ನಿಮ್ಮ ಮುಖದ ಮೇಲಿನ ಕೂದಲಿನ ಬಗ್ಗೆ ಪ್ರಶ್ನಿಸುತ್ತಾ ಹೀಯಾಳಿಸುತ್ತಾ ಇರುವವರಿಂದ ಸ್ನೇಹವನ್ನು ನೀವು ಕಳೆದುಕೊಳ್ಳಬಹುದು. ಮುಖದ ಮೇಲಿನ ಕೂದಲಿನ ಬಗ್ಗೆ ಪ್ರಶ್ನೆ ಕೇಳಿದರೆ ಆಗ ನಿಮಗೆ ತುಂಬಾ ಕೋಪ ಬರಬಹುದು. ಇದರಿಂದ ನೀವು ದಿನನಿತ್ಯವು ಹಲವಾರು ರೀತಿಯ ತೊಂದರೆಗಳನ್ನು ಎದುರಿಸುತ್ತಾ ಇರಬೇಕಾಗಿ ಬರಬಹುದು.

ಗಡ್ಡ ಮೀಸೆ ಇಲ್ಲದೆ ಇರುವ ಲಾಭಗಳ ಬಗ್ಗೆ ಕೆಲವು ಜನರು ಸಲಹೆ ನೀಡುವಾಗ

ಗಡ್ಡ ಮೀಸೆ ಸರಿಯಾಗಿ ಬೆಳೆಯದೆ ಇರುವುದರಿಂದಾಗಿ ಪ್ರತಿನಿತ್ಯವು ಶೇವ್ ಮಾಡಬೇಕಾಗಿಲ್ಲ ಅಥವಾ ಶೇವಿಂಗ್ ಗಾಗಿ ಖರ್ಚು ಮಾಡಬೇಕಾಗಿಲ್ಲ ಎಂದು ಕೆಲವರು ಬಂದು ನಿಮಗೆ ಸಲಹೆ ನೀಡಬಹುದು ಮತ್ತು ಶೇವಿಂಗ್ ಮಾಡಿದರೆ ಅದರಿಂದ ತುರಿಕೆ ಮತ್ತು ಗಡುಸಾದ ಚರ್ಮವು ಕಾಣಿಸುವುದು. ಗಡ್ಡ ಮೀಸೆ ಬೆಳೆಸಲು ನೀವು ಎಷ್ಟು ಶ್ರಮ ವಹಿಸುತ್ತಿದ್ದೀರಿ ಎಂದು ಅವರಿಗೆ ಖಂಡಿತವಾಗಿಯೂ ತಿಳಿದಿರಲಿಕ್ಕಿಲ್ಲ.

ನೀವು ಯಾವಾಗಲೂ ಒಂಟಿಯಾಗಿ ಇರಬಹುದು

ಗಡ್ಡಮೀಸೆ ಇರುವಂತಹ ಹುಡುಗರ ಕಡೆಗೆ ಹುಡುಗಿಯರು ತುಂಬಾ ಆಕರ್ಷಿತರಾಗುತ್ತಾರೆ ಎಂದು ತಿಳಿದರೆ ಆಗ ನಿಮಗೆ ಖಿನ್ನತೆ ಆವರಿಸಬಹುದು. ನಿಮಗೆ ಗಡ್ಡ ಮೀಸೆ ಬೆಳೆಯದೆ ಇರುವ ಕಾರಣದಿಂದಾಗಿ ಹುಡುಗಿಯರು ಸಿಗದೆ ಇರಬಹುದು.

English summary

Struggles of men who can't grow a full beard

If you cannot grow a full beard, you perhaps dislike the internet and media for a simple reason that it glorifies facial hair. Every time you watch, read or browse the internet, what you see are men with a fully grown beard.In spite of trying out numerous types of tonics and Ayurvedic potions to activate hair follicles, you end up with a face that burns badly and at times, smells bland.
X
Desktop Bottom Promotion