For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ಬ್ಯೂಟಿ ಟಿಪ್ಸ್: ಕಾಂತಿಯುತ, ಸುಂದರ ತ್ವಚೆಗಾಗಿ ಹೀಗೆ ಮಾಡಿ

|
Men Beauty Tips: How to Get Healthy, Glowing Skin
ಮಹಿಳೆಯರು ಸುಂದರ ಹಾಗೂ ಕಾಂತಿಯುತ ಚರ್ಮ ಬೇಕೆಂದು ಬಯಸುವುದು ಸಹಜ. ಸುಂದರವಾಗಿರಬೇಕು ಎನ್ನುವುದು ಕೇವಲ ಮಹಿಳೆಯರ ಬಯಕೆ ಮಾತ್ರವಲ್ಲ, ಪುರುಷರು ಕೂಡ ಸುಂದರವಾಗಿರಬೇಕೆಂದು ಬಯಸುವರು. ಇದಕ್ಕಾಗಿ ಪುರುಷರಿಗಾಗಿಯೇ ಹಲವಾರು ರೀತಿಯ ಸೌಂದರ್ಯ ವರ್ಧಕಗಳು ಬರುತ್ತಲೇ ಇದೆ. ಸೌಂದರ್ಯವನ್ನು ಮುಂದಿಟ್ಟುಕೊಂಡು ಕೆಲವೊಂದು ಕಂಪೆನಿಗಳು ಹೆಚ್ಚಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಅದರಿಂದ ಲಾಭ ಪಡೆಯುತ್ತಿದೆ. ಆದರೆ ಹೆಚ್ಚಿನ ಪುರುಷರು ಇಂದಿಗೂ ತಮ್ಮ ಚರ್ಮದ ಆರೋಗ್ಯದ ಕಡೆ ಗಮನಹರಿಸುವುದೇ ಇಲ್ಲ ಎಂದು ಹೇಳಬಹುದು. ಪುರುಷರು ಹೆಚ್ಚಾಗಿ ದಿನನಿತ್ಯವು ಮಾಡಬೇಕಾಗಿರುವಂತಹ ಚರ್ಮದ ಆರೈಕೆಯಿಂದ ದೂರ ಉಳಿಯುವರು. ಇದರಿಂದಾಗಿ ಪುರುಷರು ಕಾಂತಿಯುತ ಚರ್ಮವನ್ನು ಪಡೆಯುವುದು ತುಂಬಾ ಕಡಿಮೆ.

ಪ್ರತಿನಿತ್ಯವು ಸ್ವಚ್ಛತೆ, ಮಾಯಿಶ್ಚರೈಸ್ ಮತ್ತು ಚರ್ಮ ಕಿತ್ತು ಹಾಕುವ ಕ್ರಮಗಳನ್ನು ಪಾಲಿಸಬೇಕು. ಚರ್ಮವು ಕಾಂತಿ ಹಾಗೂ ತೇವಾಂಶದಿಂದ ಇರಬೇಕೆಂದರೆ ಆಗ ನೀವು ಸಮತೋಲಿತ ಆಗಿರುವ ಆಹಾರ ಸೇವನೆ ಮಾಡಬೇಕು. ಹೆಚ್ಚಾಗಿ ಬಿಸಿಲಿಗೆ ಮೈಯೊಡ್ಡುವುದು ಮತ್ತು ನಿದ್ರಾಹೀನತೆಯು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಈ ಲೇಖನದಲ್ಲಿ ಪುರುಷರು ತಮ್ಮ ಚರ್ಮವು ತುಂಬಾ ಕಾಂತಿಯುತ ಮತ್ತು ಆರೋಗ್ಯವಾಗಿ ಇರಬೇಕಾದರೆ ಮಾಡಬೇಕಾಗಿರುವ ಕೆಲವೊಂದು ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಪುರುಷರು ಇದನ್ನು ಪಾಲಿಸಿಕೊಂಡು ಹೋದರೆ ಆಗ ಸುಂದರ ಹಾಗೂ ಕಾಂತಿಯುತ ಚರ್ಮ ಪಡೆಯಬಹುದು.

ಮುಖ ಹಾಗೂ ದೇಹವನ್ನು ದಿನನಿತ್ಯ ತೊಳೆಯಿರಿ

ಮುಖ ಹಾಗೂ ದೇಹವನ್ನು ದಿನನಿತ್ಯ ತೊಳೆಯಿರಿ. ನೀವು ಶಾವರ್, ಮೊಶ್ಚಿರೈಸರ್ ಇರುವಂತಹ ಸೋಪ್ ಅಥವಾ ಬಾಡಿ ವಾಶ್ ಬಳಸಿಕೊಂಡು ಚರ್ಮದ ಸತ್ತಕೋಶ ತೆಗೆಯಬಹುದು ಮತ್ತು ಚರ್ಮದಲ್ಲಿ ಪ್ರಮುಖವಾಗಿರುವ ಮೊಶ್ಚಿರೈಸರ್ ನ್ನು ಕಾಪಾಡಿಕೊಳ್ಳಬಹುದು. ನಿಮ್ಮದು ಸಾಮಾನ್ಯ ಅಥವಾ ಒಣ ಚರ್ಮವಾಗಿದ್ದರೆ ಆಗ ನೀವು ದಿನದಲ್ಲಿ ಒಂದು ಸಲ ಅಥವಾ ಎರಡು ದಿನಕ್ಕೊಮ್ಮೆ ದೇಹವನ್ನು ತೊಳೆಯಿರಿ. ನಿಮ್ಮ ದೇಹವು ಎಣ್ಣೆಯಂಶದಿಂದ ಕೂಡಿದ್ದರೆ ಆಗ ನೀವು ದಿನದಲ್ಲಿ ಎರಡು ಸಲ ದೇಹವನ್ನು ತೊಳೆಯಬೇಕು. ಅದಾಗ್ಯೂ, ವ್ಯಾಯಾಮದ ಬಳಿಕ ದೇಹವು ತುಂಬಾ ಬೆವರಿದಾಗ ನೀವು ಚರ್ಮವನ್ನು ತೊಳೆಯಿರಿ.

ಮೊಶ್ಚಿರೈಸರ್ ಇಲ್ಲದೆ ಇರುವಂತಹ ಸೋಪ್ ಗಳನ್ನು ನೀವು ಕಡೆಗಣಿಸಿ. ಬಾರ್ ಸೋಪ್ ಗಳು ಚರ್ಮವನ್ನು ಒಣಗಿಸುವುದು ಮತ್ತು ಇದನ್ನು ನೀವು ಪ್ರತಿನಿತ್ಯವು ಬಳಸಿದರೆ ಅದರ ಪರಿಣಾಮವು ಚರ್ಮದಲ್ಲಿ ಕಾಣಿಸಿಕೊಳ್ಳುವುದು. ನೀರು ಬಿಸಿಯಾಗಿರಲಿ, ಆದರೆ ಇದು ಅತಿಯಾಗಿ ಬಿಸಿಯಾಗಿರಬಾರದು. ಯಾಕೆಂದರೆ ಬಿಸಿ ನೀರು ಚರ್ಮವನ್ನು ಮತ್ತಷ್ಟು ಒಣಗುವಂತೆ ಮಾಡುವುದು.

ದಿನಕ್ಕೊಮ್ಮೆ ದೇಹ ಮತ್ತು ಮುಖಕ್ಕೆ ಮಾಯಿಶ್ಚರೈಸ್ ಮಾಡಿ

ನೀವು ಮೊಶ್ಚಿರೈಸರ್ ನ್ನು ಮಿತ ಪ್ರಮಾಣದಲ್ಲಿ ಅಂಗೈಗೆ ಹಾಕಿಕೊಂಡು ಅದನ್ನು ಉಜ್ಜಿಕೊಂಡು ಮುಖ ಹಾಗೂ ದೇಹಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವಾಗ ನೀವು ಹಣೆ, ಕೆನ್ನೆ, ಮೂಗು ಮತ್ತು ಕಣ್ಣಿನ ಕೆಳಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ನಿಮ್ಮ ದೇಹದಕ್ಕೆ ದಿನಕ್ಕೆ ಒಂದು ಸಲ ಮಿತ ಪ್ರಮಾಣದಲ್ಲಿ ಲೋಷನ್ ಹಚ್ಚಿಕೊಳ್ಳಿ. ಬೆಳಗ್ಗೆ ಹಾಗೂ ಸಂಜೆ ವೇಳೆಗೆ ನೀವು ಲೋಷನ್ ಹಚ್ಚಿಕೊಳ್ಳಿ. ಕೆಲವೊಂದು ಚರ್ಮಕ್ಕೆ ಎರಡು ಸಲ ಲೋಷನ್ ಹಚ್ಚಿಕೊಳ್ಳುವುದು ಅತೀ ಅಗತ್ಯ.

Most Read: ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ

ಮೊಡವೆ ನಿವಾರಣೆಗೆ ಸರಿಯಾದ ಕ್ರೀಮ್ ಬಳಸಿ

ತ್ವಚೆಯಲ್ಲಿ ಯಾವಾಗಲೂ ಮೊಡವೆ, ಬೊಕ್ಕೆ ಮತ್ತು ಕಲೆಗಳು ಇದ್ದರೆ ಆಗ ನೀವು ಸ್ಯಾಲಿಸಿಲಿಕ್ ಆಮ್ಲ ಅಥವಾ ಬೆನ್ಝಾಯ್ಲ್ ಪೆರಾಕ್ಸೈಡ್ ಇರುವಂತಹ ಕ್ರೀಮ್ ನ್ನು ಬಳಸಿಕೊಳ್ಳಬೇಕು. ನೀವು ಈ ಕ್ರೀಮ್ ನ್ನು ದಿನಕ್ಕೆ ಒಂದು ಸಲ ಬಳಸಿಕೊಳ್ಳಿ. ಅದರಲ್ಲೂ ನೀವು ಬೆಳಗ್ಗೆ ಇದನ್ನು ಹಚ್ಚಿಕೊಳ್ಳಿ. ಇದರ ಬಳಿಕ ನೀವು ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಳ್ಳಬಹುದು. ನಿಮ್ಮ ಆಯ್ಕೆಯ ಮೊಡವೆಯ ಕ್ರೀಮ್ ನ್ನು ಮುಖ, ಭುಜ, ಬೆನ್ನು ಮತ್ತು ಮೊಡವೆಗಳು ಇರುವಂತಹ ಬೇರೆ ಯಾವುದೇ ಭಾಗಕ್ಕೆ ಹಚ್ಚಿಕೊಳ್ಳಿ.

ಶೇ.2ರಷ್ಟು ಸ್ಯಾಲಿಸಿಲಿಕ್ ಆಮ್ಲವು ಇರುವಂತಹ ಕ್ರೀಮ್ ನ್ನು ನೀವು ಮೊಡವೆಗಳಿಗೆ ಹಚ್ಚಿಕೊಳ್ಳಿ ಮತ್ತು ಇದರ ಬಳಿಕ ಶೇ. 5-10ರಷ್ಟು ಬೆನ್ಝಾಯ್ಲ್ ಪೆರಾಕ್ಸೈಡ್ ಇರುವಂತಹ ಲೋಷನ್ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಒಣ ಹಾಗೂ ಪದರ ಕಿತ್ತು ಬರುವಂತೆ ಮಾಡಬಹುದು. ಇದರಿಂದಾಗಿ ನೀವು ನಿಯಮಿತವಾಗಿ ಇದನ್ನು ಬಳಸಿಕೊಳ್ಳಬೇಕಾಗಿಲ್ಲ.

ಚರ್ಮಕ್ಕೆ ಹಾನಿಯಾಗದಂತೆ ತಡೆಯುವುದು

ನೀವು ಹೆಚ್ಚು ಬಿಸಿಲಿಗೆ ಹೋಗುತ್ತಲಿದ್ದರೆ ಆಗ ನೀವು ಸನ್ ಸ್ಕ್ರೀನ್ ಬಳಸಿಕೊಳ್ಳಿ. ಪ್ರತಿನಿತ್ಯವು ನೀವು 30 ಎಸ್ ಪಿಎಫ್ ಇರುವಂತಹ ಸನ್ ಸ್ಕ್ರೀನ್ ನ್ನು ಬಳಸಿಕೊಳ್ಳಿ. ನಿಮ್ಮ ಚರ್ಮವು ತುಂಬಾ ಬಿಳಿಯಾಗಿದ್ದರೆ ಆಗ ನೀವು ತಲೆಗೆ ಒಂದು ಟೋಪಿ ಮತ್ತು ನಿಮ್ಮ ಚರ್ಮವನ್ನು ಲಘುವಾದ ಬಟ್ಟೆಯಿಂದ ರಕ್ಷಿಸಿಕೊಳ್ಳಿ. ಬಿಸಿಲಿಗೆ ಮೈಯೊಡ್ಡುವ ಮೊದಲು ಸನ್ ಸ್ಕ್ರೀನ್ ನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಯಾಕೆಂದರೆ ಯಾವುದೇ ಸಮಸ್ಯೆ ಎದುರಿಸುವ ಬದಲು ಅದನ್ನು ಬರದಂತೆ ತಡೆಯುವುದು ಒಳ್ಳೆಯದು. ನೀವು ಸನ್ ಸ್ಕ್ರೀನ್ ಹಚ್ಚಿಕೊಳ್ಳದೆ ಇದ್ದರೆ ಆಗ ಚರ್ಮವು ಒಣ, ಒಡೆದ, ನಿಸ್ತೇಜವಾಗಿ ಕಾಣಿಸಿಕೊಳ್ಳುವುದು. ಇದಕ್ಕೆ ನಿಮಗೆ ಚಿಕಿತ್ಸೆ ಮಾಡಲು ತುಂಬಾ ಕಷ್ಟವಾಗಬಹುದು.ಸನ್ ಸ್ಕ್ರೀನ್ ನ್ನು ನೀವು ನಿಯಮಿತವಾಗಿ ಬಳಸಿಕೊಂಡರೆ ಆಗ ಚರ್ಮದ ಕೆಲವೊಂದು ಸಮಸ್ಯೆಗಳಾಗಿರುವಂತಹ ಇಸುಬು ಮತ್ತು ಮೆಲನೊಮಾವನ್ನು ತಡೆಯಬಹುದು. ಇದು ಯುವಿ ಕಿರಣಗಳಿಂದಾಗಿ ಬರುವುದು.

Most Read: ಪುರುಷರ ಮುಖದ ಕಾಂತಿಗೆ ನೈಸರ್ಗಿಕ ಫೇಸ್‪‌ಪ್ಯಾಕ್‌ಗಳು

ದಿನನಿತ್ಯ ನೀವು 2 ಲೀಟರ್ ನಷ್ಟು ನೀರು ಕುಡಿಯಿರಿ

ಚರ್ಮವು ಸುಂದರ ಹಾಗೂ ಕಾಂತಿಯುತವಾಗಿ ಇರಬೇಕಾದರೆ ಆಗ ನೀವು ಸರಿಯಾಗಿ ನೀರು ಕುಡಿಯುವುದು ಅತೀ ಅಗತ್ಯವಾಗಿರುವುದು. ನೀವು ದಿನಕ್ಕೆ ಸುಮಾರು 0.24 ಲೀಟರ್ ನಷ್ಟು ನೀರು ಸೇವಿಸಬೇಕು ಎಂದು ಹೇಳಲಾಗುತ್ತದೆ. ಅದಾಗ್ಯೂ, ಒಳ್ಳೆಯ ವ್ಯವಸ್ಥೆಯೆಂದರೆ ಬಾಯಾರಿಕೆ ಆದಾಗ ನೀರು ಕುಡಿಯಿರಿ. ನೀವು ಸರಿಯಾಗಿ ನೀರು ಕುಡಿದಿದ್ದೀರಾ ಇಲ್ಲವಾ ಎನ್ನುವುದು ನಿಮ್ಮ ಮೂತ್ರದ ಬಣ್ಣದಿಂದ ತಿಳಿದುಬರುವುದು. ಬಿಳಿ ಅಥವಾ ಲಘು ಹಳದಿ ಬಣ್ಣ ಇದ್ದರೆ ಆಗ ತೇವಾಂಶವು ಇದೆ ಎಂದು ಹೇಳಬಹುದು. ಇದು ಕಡು ಹಳದಿಯಾಗಿದ್ದರೆ ಆಗ ಸರಿಯಾದ ತೇವಾಂಶವು ಇಲ್ಲ ಎಂದು ಹೇಳಬಹುದು.

English summary

Men Beauty Tips: How to Get Healthy, Glowing Skin

Let's be real—having flawless skin is just as much of a concern for men as it is for women. As a guy, it’s possible to keep your skin looking and feeling great without resorting to stealing lotion from your girlfriend or flipping through your sister's beauty magazines for advice. The main thing is to establish a consistent skin-care routine that includes cleaning, moisturizing, and exfoliating. It will also help to stay hydrated, eat a balanced diet, and minimize risk factors like sun exposure and sleep deprivation that can have harmful effects on your skin.
X
Desktop Bottom Promotion