For Quick Alerts
ALLOW NOTIFICATIONS  
For Daily Alerts

ಪುರುಷರ ಮುಖದ ಕಾಂತಿಗೆ ನೈಸರ್ಗಿಕ ಫೇಸ್‪‌ಪ್ಯಾಕ್‌ಗಳು

|

ಪುರುಷರ ಚರ್ಮವು ಸಾಮಾನ್ಯವಾಗಿ ಒರಟಾಗಿರುತ್ತದೆ. ಹೀಗಾಗಿ ಪುರುಷರು ತಮ್ಮ ಚರ್ಮದ ಆರೈಕೆ, ಪೋಷಣೆ ಮಾಡದಿದ್ದಲ್ಲಿ ಬಿಸಿಲು ಹಾಗೂ ಇನ್ನಿತರ ಕಾರಣಗಳಿಂದ ಚರ್ಮದ ಬಣ್ಣ ಕಪ್ಪಾಗುವ ಸಾಧ್ಯತೆ ಇರುತ್ತದೆ. ಅಕಸ್ಮಾತ್ ಪುರುಷರ ಚರ್ಮ ಕಾಂತಿಯನ್ನು ಕಳೆದುಕೊಂಡಿದ್ದಲ್ಲಿ ಕೆಲ ಸುಲಭ ವಿಧಾನಗಳ ಮೂಲಕ ಚರ್ಮದ ಹೊಳಪನ್ನು ಮತ್ತೆ ಮರುಕಳಿಸುವಂತೆ ಮಾಡಲು ಸಾಧ್ಯ. ಮನೆಯಲ್ಲಿ ಸರಳವಾಗಿ ಕೆಲ ವಸ್ತುಗಳನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸಿ ಬಳಸುವ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸಬಹುದು.

Face Pack for Men

ಬ್ಲೀಚಿಂಗ್ ರಾಸಾಯನಿಕಗಳನ್ನು ಬಳಸದೆ ಮನೆಯಲ್ಲಿಯೇ ಲಭ್ಯವಿರುವ ನೈಸರ್ಗಿಕ ವಸ್ತುಗಳನ್ನು ಬಳಸಿ ಈ ಫೇಸ್ ಪ್ಯಾಕ್‌ಗಳನ್ನು ತಯಾರಿಸಬಹುದು. ಈ ನೈಸರ್ಗಿಕ ವಸ್ತುಗಳು ಸಹಜವಾಗಿಯೇ ಪುರುಷರ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಪುರುಷರ ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸರಳ ಹಾಗೂ ನೈಸರ್ಗಿಕವಾದ ವಿಧಾನಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ನೀವೂ ಟ್ರೈ ಮಾಡಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ. ಪುರುಷರ ಮುಖದ ಕಾಂತಿ ಹೆಚ್ಚಿಸಲು ಸರಳ ಫೇಸ್ ಪ್ಯಾಕ್ ವಿಧಾನಗಳು:

ಪುರುಷರ ತ್ವಚೆಯ ಕಾಂತಿಗಾಗಿ ನಿಂಬೆರಸ ಹಾಗೂ ಜೇನುತುಪ್ಪದ ಫೇಸ್ ಪ್ಯಾಕ್

ಪುರುಷರ ತ್ವಚೆಯ ಕಾಂತಿಗಾಗಿ ನಿಂಬೆರಸ ಹಾಗೂ ಜೇನುತುಪ್ಪದ ಫೇಸ್ ಪ್ಯಾಕ್

ಮುಖದ ತ್ವಚೆಯನ್ನು ಬೆಳ್ಳಗಾಗಿಸಲು ಹಾಗೂ ಕಾಂತಿಯುತಗೊಳಿಸಲು ಬಯಸುವ ಪುರುಷರಿಗೆ ಈ ಫೇಸ್ ಪ್ಯಾಕ್ ಅತ್ಯಂತ ಉಪಯುಕ್ತವಾಗಿದೆ. ಈ ಪ್ಯಾಕ್‌ನಲ್ಲಿನಲ್ಲಿ ಬಳಸಲಾಗುವ ನಿಂಬೆ ರಸದಿಂದ ಚರ್ಮಕ್ಕೆ ತಾಜಾತನ ದೊರಕಿ ಜಿಡ್ಡಿನಂಶ ನಿವಾರಣೆಯಾಗುತ್ತದೆ. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಮುಖ ಹಾಗೂ ಕುತ್ತಿಗೆಯ ಭಾಗದ ಚರ್ಮದ ಹೊಳಪು ಹೆಚ್ಚಾಗುತ್ತದೆ. ನಿಂಬೆರಸದ ಆಮ್ಲೀಯ ಗುಣವನ್ನು ಗುಣವನ್ನು ಜೇನುತುಪ್ಪ ಸಮತೋಲನಗೊಳಿಸುವುದರಿಂದ ಈ ಫೇಸ್ ಪ್ಯಾಕ್ ಎಲ್ಲ ರೀತಿಯ ಚರ್ಮದವರಿಗೂ ಉಪಯುಕ್ತವಾಗಿದೆ.

ನಿಂಬೆರಸ ಹಾಗೂ ಜೇನುತುಪ್ಪದ ಫೇಸ್ ಪ್ಯಾಕ್ ತಯಾರಿಸುವ ವಿಧಾನ

ನಿಂಬೆರಸ ಹಾಗೂ ಜೇನುತುಪ್ಪದ ಫೇಸ್ ಪ್ಯಾಕ್ ತಯಾರಿಸುವ ವಿಧಾನ

*ಒಂದು ಚಿಕ್ಕ ಬಟ್ಟಲಲ್ಲಿ 1 ಟೀ ಸ್ಪೂನ್ ನಿಂಬೆ ರಸ ತೆಗೆದುಕೊಂಡು ಅದಕ್ಕೆ 1 ಟೀ ಸ್ಪೂನ್ ಆರ್ಗ್ಯಾನಿಕ್ ಜೇನುತುಪ್ಪ ಸೇರಿಸಿ.

*ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮಿಶ್ರಣವನ್ನು ಮುಖದ ಮೇಲೆ ಮೃದುವಾಗಿ ಉಜ್ಜುತ್ತಾ ಹಚ್ಚಿಕೊಳ್ಳಿ.

*20 ನಿಮಿಷಗಳ ನಂತರ ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ.

ಮುಖ ತೊಳೆಯಲು ಬಿಸಿ ನೀರು ಬಳಸಬೇಡಿ.

ಓಟ್ ಮೀಲ್ ಹಾಗೂ ಟೊಮ್ಯಾಟೊ ರಸದ ಫೇಸ್ ಪ್ಯಾಕ್

ಓಟ್ ಮೀಲ್ ಹಾಗೂ ಟೊಮ್ಯಾಟೊ ರಸದ ಫೇಸ್ ಪ್ಯಾಕ್

*ಮುಖದ ಮೇಲೆ ಓಟ್ ಮೀಲ್ ನಿಂದ ಮೃದುವಾಗಿ ಉಜ್ಜುವುದರಿಂದ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ನಿವಾರಿಸಬಹುದು. ದಿನದಲ್ಲಿ ಬಹಳ ಹೊತ್ತು ಬಿಸಿಲಿನಲ್ಲಿ ಅಡ್ಡಾಡುವ ಪುರುಷರ ಚರ್ಮ ಬಿಸಿಲಿನಿಂದ ಕಳೆಗುಂದಿರುತ್ತದೆ. ಅಲ್ಲದೆ *ಬಿಸಿಲಿನಿಂದ ಚರ್ಮ ಸುಟ್ಟು ಹೋಗಿರುತ್ತದೆ. ಹೀಗಾಗಿ ಓಟ್ ಮಿಲ್ಸ್‌ನಿಂದ ಮುಖದ ಮೇಲೆ ರಬ್ ಮಾಡುವುದು ಉತ್ತಮ. ಇನ್ನು *ಸೂರ್ಯನ ಶಾಖದಿಂದ ಕಳೆಗುಂದಿರುವ ಚರ್ಮಕ್ಕೆ ಟೊಮ್ಯಾಟೊ ಜ್ಯೂಸ್ ಕಾಂತಿಯನ್ನು ನೀಡುತ್ತದೆ. ಈ ಫೇಸ್ ಪ್ಯಾಕ್ ಪ್ಯಾಕ್ *ಬಿಸಿಲಿನಲ್ಲಿ ಹೆಚ್ಚಾಗಿ ಸುತ್ತಾಡುವ ಪುರುಷರಿಗೆ ಹೇಳಿ ಮಾಡಿಸಿದಂತಿದೆ.

ಓಟ್ ಮೀಲ್ ಹಾಗೂ ಟೊಮ್ಯಾಟೊ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

ಓಟ್ ಮೀಲ್ ಹಾಗೂ ಟೊಮ್ಯಾಟೊ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

* 1 ಟೀ ಸ್ಪೂನ್‌ನಷ್ಟು ಓಟ್ ಮೀಲ್ ತೆಗೆದುಕೊಂಡು ಅದಕ್ಕೆ 3 ಟೀ ಸ್ಪೂನ್ ಟೊಮ್ಯಾಟೊ ಸೇರಿಸಿ.

* ಒಂದು ಟೊಮೆಟೊವನ್ನು ಅರ್ಧಕ್ಕೆ ಕತ್ತರಿಸಿ ಹಿಂಡುವ ಮೂಲಕ ಜ್ಯೂಸ್ ತೆಗೆದುಕೊಳ್ಳಿ.

* ಇದರಲ್ಲಿ ಕೆಲ ಟೊಮೇಟೊ ಬೀಜಗಳು ಇದ್ದರೂ ಅವನ್ನು ತೆಗೆಯುವ ಅವಶ್ಯಕತೆ ಇಲ್ಲ.

* ಓಟ್ ಮೀಲ್ ಹಾಗೂ ಟೊಮೆಟೊ ಜ್ಯೂಸ್ ಎರಡನ್ನು ಸರಿಯಾಗಿ ಮಿಕ್ಸ್ ಮಾಡಿ ಐದು ನಿಮಿಷ ಹಾಗೇ ಇಡಿ.

* ಹೀಗೆ ಐದು ನಿಮಿಷ ಬಿಡುವುದರಿಂದ ಓಟ್ ಮೀಲ್ ನೆನೆದು ಸಾಫ್ಟ್ ಆಗುತ್ತದೆ.

* 5 ನಿಮಿಷಗಳ ನಂತರ ಓಟ್ ಮೀಲ್ ಅನ್ನು ಅರೆದು ಮಿಕ್ಸ್ ಮಾಡಿ ಈ ಮಿಶ್ರಣವನ್ನು ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿಕೊಳ್ಳಿ.

* 20 ನಿಮಿಷ ಬಿಟ್ಟು ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ.

* ವಾರಕ್ಕೆ ಮೂರು ಬಾರಿ ಈ ವಿಧಾನ ಅನುಸರಿಸಬಹುದು. ಇದು ಎಲ್ಲ ರೀತಿಯ ಚರ್ಮದವರಿಗೂ ಉಪಯುಕ್ತವಾಗಿದೆ

ಆರೆಂಜ್ ಜ್ಯೂಸ್ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಆರೆಂಜ್ ಜ್ಯೂಸ್ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಆರೆಂಜ್ ಜ್ಯೂಸ್ ಮತ್ತು ಮುಲ್ತಾನಿ ಮಿಟ್ಟಿಯ ಈ ಫೇಸ್ ಪ್ಯಾಕ್ ಮೊಡವೆ ಹಾಗೂ ಎಣ್ಣೆ ತ್ವಚೆ ಹೊಂದಿರುವ ಮತ್ತು ಸಾಮಾನ್ಯ ತ್ವಚೆ ಹೊಂದಿರುವ ಪುರುಷರಿಗೆ ಮಾತ್ರ ಸೂಕ್ತವಾಗಿದೆ. ಈ ಫೇಸ್ ಪ್ಯಾಕ್‌ನಲ್ಲಿ ಬಳಸಲಾಗುವ ಮುಲ್ತಾನಿ ಮಿಟ್ಟಿ ಮುಖದ ಮೇಲಿನ ಹೆಚ್ಚುವರಿ ಎಣ್ಣೆಯಂಶವನ್ನು ಹೋಗಲಾಡಿಸಿ ಮಣ್ಣು, ಧೂಳುಗಳನ್ನು ನಿವಾರಿಸುತ್ತದೆ. ಈ ಫೇಸ್ ಪ್ಯಾಕ್ ಬಳಸುವುದರಿಂದ ಮುಖದ ಕಾಂತಿ ಹೆಚ್ಚಾಗಿ ಮೊಡವೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ಆರೆಂಜ್ ಜ್ಯೂಸ್ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

ಆರೆಂಜ್ ಜ್ಯೂಸ್ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

* ಒಂದು ಬಟ್ಟಲಿಗೆ 1 ಟೀ ಸ್ಪೂನ್ ಮುಲ್ತಾನಿ ಮಿಟ್ಟಿ ಹಾಕಿ ಇದಕ್ಕೆ ಒಂದಿಷ್ಟು ಆರೆಂಜ್ ಜ್ಯೂಸ್ ಸೇರಿಸಿ.

* ಎರಡನ್ನೂ ಮಿಕ್ಸ್ ಮಾಡಿ ನುಣ್ಣನೆಯ ಪೇಸ್ಟ್ ತಯಾರಿಸಿಟ್ಟುಕೊಳ್ಳಿ.

* ಒಂದು ವೇಳೆ ಆರೆಂಜ್ ಜ್ಯೂಸ್ ಸಿಗದಿದ್ದರೆ ಕಬ್ಬಿನ ರಸ ಅಥವಾ ನಿಂಬೆಯ ರಸವನ್ನು ಉಪಯೋಗಿಸಬಹುದು.

* ಹೀಗೆ ತಯಾರಿಸಿದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಂಡು ೨೦ ನಿಮಿಷ ಇರಲು ಬಿಡಿ.

* ನಂತರ ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ.

ಪಪ್ಪಾಯಿ ಹಾಗೂ ಬಾಳೆಹಣ್ಣಿನ ಫೇಸ್ ಪ್ಯಾಕ್

ಪಪ್ಪಾಯಿ ಹಾಗೂ ಬಾಳೆಹಣ್ಣಿನ ಫೇಸ್ ಪ್ಯಾಕ್

ಪಪ್ಪಾಯಿ ಹಾಗೂ ಬಾಳೆ ಹಣ್ಣನ್ನು ಬಳಸಿ ತಯಾರಿಸುವ ಈ ಫೇಸ್ ಪ್ಯಾಕ್ ಎಲ್ಲ ರೀತಿಯ ಚರ್ಮದವರಿಗೂ ಉಪಯುಕ್ತವಾಗಿದೆ. ಈ ಫೇಸ್ ಪ್ಯಾಕ್ ಚರ್ಮದ ಶುಷ್ಕತನವನ್ನು ಹೋಗಲಾಡಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ. ಪಪ್ಪಾಯಿ ಚರ್ಮದ ಮೆಲನಿನ್ ಅಂಶವನ್ನು ಸಮತೋಲನದಲ್ಲಿಟ್ಟು ಹೊಳಪು ನೀಡುವ ಅಂಶಗಳನ್ನು ಒಳಗೊಂಡಿರುತ್ತದೆ. ಬಾಳೆಹಣ್ಣು ಪುರುಷರ ಒಣಗಿದ ತ್ವಚೆಗೆ ಮೃದುತ್ವ ನೀಡಿ ಕಾಂತಿ ಹೆಚ್ಚಿಸುತ್ತದೆ.

ಪಪ್ಪಾಯಿ ಹಾಗೂ ಬಾಳೆಹಣ್ಣಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

ಪಪ್ಪಾಯಿ ಹಾಗೂ ಬಾಳೆಹಣ್ಣಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

* ಒಂದು ಹೋಳು ಬಾಳೆಹಣ್ಣು ಮತ್ತು ಒಂದು ಹೋಳು ಪಪ್ಪಾಯಿ ತೆಗೆದುಕೊಳ್ಳಿ.

* ಇವೆರಡನ್ನು ನುಣ್ಣಗೆ ಅರೆದುಕೊಂಡು ಒಂದು ಚೂರು ಜೇನುತುಪ್ಪ ಸೇರಿಸಿ.

* ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ.

* ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ೨೦ ನಿಮಿಷ ಬಿಡಿ. ನಂತರ ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ.

* ವಾರಕ್ಕೆ ಮೂರು ಬಾರಿ ಈ ವಿಧಾನ ಬಳಸಬಹುದು.

ಕಬ್ಬು ಹಾಗೂ ಕಡಲೆ ಹಿಟ್ಟಿನ ಫೇಸ್ ಪ್ಯಾಕ್

ಕಬ್ಬು ಹಾಗೂ ಕಡಲೆ ಹಿಟ್ಟಿನ ಫೇಸ್ ಪ್ಯಾಕ್

ಕಬ್ಬಿನ ಜಲ್ಲೆಯಲ್ಲಿರುವ ಗ್ಲೈಕೊಲಿಕ್ ಎಂಬ ಆಸಿಡ್ ಚರ್ಮಕ್ಕೆ ಕಾಂತಿಯನ್ನು ನೀಡುವ ಗುಣ ಹೊಂದಿದೆ. ಹೀಗಾಗಿ ಕಬ್ಬಿನ ರಸದ ಫೇಸ್ ಪ್ಯಾಕ್ ಮುಖದ ಚರ್ಮಕ್ಕೆ ಉತ್ತಮವಾಗಿದೆ.

ಕಬ್ಬು ಹಾಗೂ ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

ಕಬ್ಬು ಹಾಗೂ ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನ :

* ಸ್ವಲ್ಪ ಕಬ್ಬಿನ ಹಾಲು ತೆಗೆದುಕೊಂಡು ಅದಕ್ಕೆ ಕಡಲೆಹಿಟ್ಟು ಸೇರಿಸಿ ಇವೆರಡನ್ನು ಸರಿಯಾಗಿ ಮಿಕ್ಸ್ ಮಾಡಿ.

* ಮಿಶ್ರಣವು ಹದವಾದ ಪೇಸ್ಟ್ ರೀತಿ ಇರಲಿ.

* ಪೇಸ್ಟ್ ತೀರಾ ಗಟ್ಟಿ ಅಥವಾ ತೀರಾ ತೆಳುವಾಗಿರದಂತೆ ನೋಡಿಕೊಳ್ಳಿ.

* ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ಸಾದಾ ನೀರಿನಿಂದ ತೊಳೆದುಕೊಳ್ಳಿ.

ಕೊನೆ ಮಾತು

ಮೇಲೆ ತಿಳಿಸಲಾದ ಫೇಸ್ ಪ್ಯಾಕ್‌ಗಳು ಪುರುಷರ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ. ವಾರಕ್ಕೆ ಎರಡರಿಂದ ಮೂರು ಬಾರಿ ಇವನ್ನು ಬಳಸಿ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಆದರೂ ಯಾವುದೇ ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ ಬಳಸುವ ಮುಂಚೆ ಕೈ ಚರ್ಮದ ಮೇಲೆ ಬಳಸಿ ಅಲರ್ಜಿ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

English summary

Best Homemade Skin Whitening Face Pack for Men

Men have rough skin and when they don’t take sufficient care then the skin turns dark due to over exposure of the sun. We will share home best homemade face packs and face mask to whiten the skin naturally for men’s skin. These face packs have natural skin lightening and can be easily prepared by the men to get the whiter complexion without applying the skin bleaches most of these products are natural skin bleach for the rough skin of men.
X
Desktop Bottom Promotion