Just In
Don't Miss
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫಿಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯೂಟಿ ಟಿಪ್ಸ್: ಪುರುಷರ ಎಣ್ಣೆಯುಕ್ತ ತ್ವಚೆಗೆ ಪರ್ಫೆಕ್ಟ್ ಮನೆಮದ್ದುಗಳು
ತ್ವಚೆಯ ಸಮಸ್ಯೆ ಕೇವಲ ಮಹಿಳೆಯರಿಗೆ ಸಂಬಂಧಿಸಿದ್ದಾಗಿರುವುದಿಲ್ಲ. ತ್ವಚೆಯ ಸಮಸ್ಯೆಯು ಮಹಿಳೆಯರ ಸಹಿತ ಪುರುಷರಲ್ಲೂ ಕಾಣಿಸುವುದು. ಪುರುಷರು ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇರುವುದೇ ಇದಕ್ಕೆ ಕಾರಣ. ನೂರರಲ್ಲಿ ಹತ್ತು ಮಂದಿ ಪುರುಷರು ಮಾತ್ರ ತಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳುವರು.
ಪುರುಷರಲ್ಲೂ ಒಣಚರ್ಮ, ಎಣ್ಣೆಯುಕ್ತ ಚರ್ಮವಿರುವುದು. ಇದರಿಂದಾಗಿ ಮೊಡವೆ, ಬೊಕ್ಕೆ ಇತ್ಯಾದಿ ಸಮಸ್ಯೆ ಕಾಣಿಸುವುದು. ಅದರಲ್ಲೂ ಪುರುಷರು ಹೆಚ್ಚಾಗಿ ಬಿಸಿಲಿಗೆ ಮೈಯೊಡ್ಡಿಕೊಳ್ಳುವ ಕಾರಣ ಅವರ ತ್ವಚೆಯು ಕಪ್ಪಾಗಿರುವುದು ಮತ್ತು ಹಲವಾರು ರೀತಿಯ ಕಲ್ಮಶ ಹಾಗೂ ಧೂಳು ತ್ವಚೆ ಸೇರಿಕೊಂಡಿರುವುದು. ಅದರಲ್ಲೂ ಎಣ್ಣೆಯುಕ್ತ ಚರ್ಮವಿರುವ ಪುರುಷರ ಮುಖವು ಜಿಡ್ಡುಜಿಡ್ಡಾಗಿರುವುದು. ಇಂತಹ ಪುರುಷರು ಯಾವುದಾದರೂ ಸಲೂನ್ ಅಥವಾ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವರು.
ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!
ಇದು ಕೇವಲ ತಾತ್ಕಾಲಿಕ ಪರಿಹಾರ. ಪುರುಷರು ಇಂತಹದ್ದಕ್ಕೆ ಹಣ ವ್ಯಯ ಮಾಡುವ ಬದಲು ಮನೆಯಲ್ಲೇ ಕೆಲವು ಫೇಸ್ ಮಾಸ್ಕ್ ಆರಿಸಿಕೊಳ್ಳಬಹುದು. ಇದು ಸ್ವಲ್ಪ ನಿಧಾನಗತಿಯಲ್ಲಿ ಫಲಿತಾಂಶ ನೀಡಿದರೂ, ಖಂಡಿತವಾಗಿಯೂ ಸಮಸ್ಯೆ ನಿವಾರಣೆ ಮಾಡುವುದು. ಮೊಡವೆ, ಕಲೆ ಮತ್ತು ಬೊಕ್ಕೆಗಳು ಇರುವಂತಹ ಪುರುಷರು ಚರ್ಮದ ಆರೈಕೆ ಹೇಗೆ ಮಾಡಿಕೊಳ್ಳಬಹುದು ಎಂದು ನೀವೇ ತಿಳಿದುಕೊಳ್ಳಿ....

ಎಣ್ಣೆಯುಕ್ತ ಚರ್ಮದ ಪುರುಷರಿಗೆ ಮನೆಮದ್ದು: ಟೋನರ್ 1
*ಎಣ್ಣೆಯುಕ್ತ ಚರ್ಮವಿರುವ ಪುರುಷರಿಗೆ ಮನೆಮದ್ದನ್ನು ತಯಾರಿಸಲು ಕೇವಲ ಎರಡು ರೀತಿಯ ಸಾಮಗ್ರಿಗಳು ಬೇಕಾಗಿದೆ. ಆ್ಯಪಲ್ ಸೀಡರ್ ವಿನೇಗರ್ ಮತ್ತು ಭಟ್ಟಿ ಇಳಿಸಿದ ನೀರು(ಡಿಸ್ಟಿಲ್ ವಾಟರ್)
• ವಿನೇಗರ್ ಮತ್ತು ಭಟ್ಟಿ ಇಳಿಸಿದ ನೀರಿನ ಪ್ರಮಾಣವು 1:3ರಲ್ಲಿರಬೇಕು. ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಹಾಕಿದರೆ ಮೂರು ಚಮಚ ಭಟ್ಟಿ ಇಳಿಸಿದ ನೀರು ಹಾಕಿ.
• ಹತ್ತಿ ಉಂಡೆ ಬಳಸಿಕೊಂಡು ದಿನದಲ್ಲಿ ಎರಡು ಸಲ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮನೆಯಿಂದ ಹೊರಗೆ ಹೋಗುವಾಗ ಮತ್ತು ರಾತ್ರಿ ಮಲಗುವ ಮೊದಲು ಇದನ್ನು ಹಚ್ಚಿಕೊಳ್ಳಿ.

ಎಣ್ಣೆಯುಕ್ತ ತ್ವಚೆಯಿರುವ ಪುರುಷರಿಗೆ ಮನೆಮದ್ದು: ಟೋನರ್2
ಈ ಮನೆಮದ್ದನ್ನು ಬಳಸುವುದು ನಿಮ್ಮ ಆಯ್ಕೆಗೆ ಬಿಟ್ಟಿರುವ ವಿಚಾರ. ಇದನ್ನು ಸಂಗ್ರಹಿಸಿಡುವುದು ತುಂಬಾ ಕಷ್ಟ. ಇದನ್ನು ತಯಾರಿಸಿ ತಾಜಾ ಇರುವಾಗಲೇ ಬಳಸಿಕೊಳ್ಳಬೇಕು.
•ಈ ಮನೆಮದ್ದನ್ನು ತಯಾರಿಸಲು ಬೇಕಾಗಿರುವ ಎರಡು ಸಾಮಗ್ರಿಯೆಂದರೆ, ಹಸಿ ಹಾಲು ಮತ್ತು ಲ್ಯಾವೆಂಡರ್ ಸಾರಭೂತ ತೈಲ
•ಒಂದು ಚಮಚ ಹಸಿ, ತಣ್ಣಗಿನ ಹಾಲಿಗೆ ಐದು ಹನಿಯಷ್ಟು ಲ್ಯಾವೆಂಡರ್ ಸಾರಭೂತ ತೈಲ ಹಾಕಿ.
•ಒಂದು ಹತ್ತಿ ಉಂಡೆ ಬಳಸಿಕೊಂಡು ಇದನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿಕೊಳ್ಳಿ. ನೈಸರ್ಗಿಕವಾಗಿ ಇದು ಒಣಗಲಿ. ಇದನ್ನು ದಿನನಿತ್ಯ ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ.

ಎಣ್ಣೆಯುಕ್ತ ಚರ್ಮದ ಪುರುಷರಿಗೆ ಮನೆಮದ್ದು: ಹೀರಿಕೊಳ್ಳುವ ಪೇಪರ್
ಎಣ್ಣೆಯಂಶದ ಚರ್ಮವಿರುವಂತಹ ಪುರುಷರು ಯಾವತ್ತು ಕೈವಸ್ತ್ರ ಬಳಸಿಕೊಳ್ಳಬಾರದು. ಕೈವಸ್ತ್ರವು ಚರ್ಮದ ಮೇಲೆ ಕಠಿಣವಾಗಿ ವರ್ತಿಸುವುದು ಇದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುವುದು ಮತ್ತು ಎಣ್ಣೆಯ ಸ್ರವಿಸುವಿಕೆ ಹೆಚ್ಚಾಗುವುದು. ಇದರ ಬದಲಿಗೆ ಹೀರಿಕೊಳ್ಳುವ ಪೇಪರ್ ಬಳಸಿ. ಈ ಪೇಪರ್ ಅನ್ನು ಎರಡು ತುಂಡು ಮಾಡಿಕೊಂಡು ಎಣ್ಣೆ ಹೆಚ್ಚಿರುವ ಜಾಗಕ್ಕೆ ಒತ್ತಿ ಹಿಡಿಯಿರಿ. ಪೇಪರ್ ಎಣ್ಣೆ ಹೀರಿಕೊಳ್ಳುವುದು ಮತ್ತು ನಿಮಗೆ ಒಳ್ಳೆಯ ಭಾವನೆಯಾಗುವುದು. ಹೀರಿಕೊಳ್ಳುವ ಪೇಪರ್ ತುಂಬಾ ಅಗ್ಗ ಮತ್ತು ಮನೆಯಿಂದ ಹೊರಗಡೆ ಹೋಗುವಾಗ ಇದನ್ನು ಬಳಸಿ.

ಎಣ್ಣೆಯುಕ್ತ ಚರ್ಮದವರಿಗೆ ಮನೆಮದ್ದು: ಫೇಸ್ ಪ್ಯಾಕ್
ಫೇಸ್ ಪ್ಯಾಕ್ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿ ಕುಳಿತುಕೊಳ್ಳಲು ಹೆಚ್ಚಿನ ಪುರುಷರಿಗೆ ಇಷ್ಟವಿರಲ್ಲ. ಆದರೆ ಇಲ್ಲಿ ತುಂಬಾ ವೇಗವಾಗಿ ಮಾಡಬಹುದಾದ ಫೇಸ್ ಪ್ಯಾಕ್ ಇದೆ. ಈ ಫೇಸ್ ಪ್ಯಾಕ್ ಚರ್ಮದ ರಂಧ್ರಗಳನ್ನು ಮುಚ್ಚಿಹಾಕಿ ಎಣ್ಣೆ ಹೊರಬರದಂತೆ ತಡೆಯುವುದು.
• ಈ ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಗುಲಾಬಿ ನೀರು(ರೋಸ್ ವಾಟರ್) ಮತ್ತು ಬೆಂಟೋನೈಟ್ ಕ್ಲೇ
• ಒಂದು ಚಿಟಿಕೆ ಬೆಂಟೋನೈಟ್ ಕ್ಲೇ ಗೆ ಒಂದು ಚಮಚ ಗುಲಾಬಿ ನೀರು ಬೆರೆಸಿಕೊಳ್ಳಿ.
• ಮಣ್ಣು ಮತ್ತು ಗುಲಾಬಿ ನೀರಿನ ಪೇಸ್ಟ್ ಮಾಡಿ. ಸ್ನಾನ ಮಾಡುವ ಮೊದಲು ಮುಖಕ್ಕೆ ಈ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ.
• 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಎಣ್ಣೆಯಂಶವಿರುವ ಚರ್ಮಕ್ಕೆ ಮನೆಮದ್ದು: ಫೇಸ್ ಮಾಸ್ಕ್
ಪುರುಷರಲ್ಲಿ ಎಣ್ಣೆಯಂಶವಿರುವ ತ್ವಚೆಗೆ ಈ ಫೇಸ್ ಮಾಸ್ಕ್ ತಯಾರಿಸಲು ಕೇವಲ ಒಂದು ಸಾಮಗ್ರಿ ಮಾತ್ರ ಬೇಕಾಗಿದೆ.
•ಈ ಫೇಸ್ ಮಾಸ್ಕ್ ತಯಾರಿಸಲು ಕೇವಲ ಮೊಟ್ಟೆಯ ಬಿಳಿ ಲೋಳೆ ಬೇಕಾಗಿದೆ.
•ಮೊಟ್ಟೆಯ ಬಿಳಿ ಲೋಳೆಯನ್ನು ಸರಿಯಾಗಿ ಕಲಸಿಕೊಂಡರೆ ನಿಮ್ಮ ಫೇಸ್ ಮಾಸ್ಕ್ ತಯಾರಾಗುವುದು.
•ಮೊಟ್ಟೆಯ ಬಿಳಿ ಲೋಳೆಯ ತೆಳು ಪದರವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗಲು ಬಿಡಿ ಮತ್ತು ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.
•ಮೊಟ್ಟೆಯ ವಾಸನೆ ನಿಮಗೆ ಹಿಡಿಸದಿದ್ದರೆ ಇದಕ್ಕೆ ಸ್ವಲ್ಪ ಲ್ಯಾವೆಂಡರ್ ತೈಲ ಬಳಸಿಕೊಳ್ಳಬಹುದು.