ಪುರುಷರಿಗೆ ಬ್ಯೂಟಿ ಟಿಪ್ಸ್: ಮೊಡವೆಯ ಕಾಟಕ್ಕೆ ಸರಳ ಮನೆಮದ್ದುಗಳು

By: Hemanth
Subscribe to Boldsky

ಮಹಿಳೆಯರ ಹಾಗೂ ಪುರುಷರ ದೇಹ ರಚನೆಯು ತುಂಬಾ ಭಿನ್ನವಾಗಿರುವುದರಿಂದ ಬಳಸುವಂತಹ ಸೌಂದರ್ಯವರ್ಧಕಗಳಲ್ಲೂ ಬದಲಾವಣೆಗಳು ಆಗುತ್ತಾ ಇರುತ್ತದೆ. ಮಹಿಳೆಯರ ದೇಹವು ತುಂಬಾ ಮೃಧುವಾದರೆ ಪುರುಷರ ದೇಹವು ಗಡುಸಾಗಿರುತ್ತದೆ. ಹಿಂದೆ ಪುರುಷರು ಕೂಡ ಮಹಿಳೆಯರಿಗಾಗಿ ಇರುವಂತಹ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಿಕೊಳ್ಳುತ್ತಾ ಇದ್ದರು. ಆದರೆ ಇಂದಿನ ದಿನಗಳಲ್ಲಿ ಪುರುಷರಿಗಾಗಿಯೂ ಹಲವಾರು ರೀತಿಯ ಸೌಂದರ್ಯವರ್ಧಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮಹಿಳೆಯರಂತೆ ಪುರುಷರು ಕೂಡ ಮೊಡವೆಯ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಮೊಡವೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬೇಕಾದರೆ ಪುರುಷರು ಹಲವಾರು ರೀತಿಯ ಕ್ರೀಮ್‌ಗಳನ್ನು ಬಳಸಿಕೊಂಡಿರಬಹುದು. ಇದರ ಪ್ರತಿಫಲ ಮಾತ್ರ ಶೂನ್ಯ. ಯಾಕೆಂದರೆ ಇಂತಹ ಕ್ರೀಮ್ ಗಳು ಕೆಲವು ದಿನಗಳ ಮಟ್ಟಿಗೆ ಪರಿಹಾರ ನೀಡಿದರೂ ಬಳಿಕ ಹಲವಾರು ಸಮಸ್ಯೆಗಳು ಎದುರಾಗುತ್ತದೆ. 

ಲಿಂಬೆ ಹಣ್ಣಿನ ಫೇಸ್‌ಪ್ಯಾಕ್- ಇದು ಪುರುಷರಿಗೆ ಮಾತ್ರ!

ಪುರುಷರು ಅತಿಯಾಗಿ ಬಿಸಿಲು ಹಾಗೂ ಧೂಳಿನಲ್ಲಿ ಇರುವ ಕಾರಣ ಮುಖ, ಕುತ್ತಿಗೆ, ಕೈ ಹಾಗೂ ಭುಜಗಳಲ್ಲಿ ಕಾಣಿಸಿಕೊಳ್ಳುವುದು. ಈ ಮೊಡವೆಗಳನ್ನು ಸಂಪೂರ್ಣವಾಗಿ ಹೋಗಲಾಡಿಲು ಕ್ರೀಮ್ ಬಳಸುವ ಬದಲು ಕೆಲವೊಂದು ಮನೆಮದ್ದುಗಳನ್ನು ಬಳಸಬಹುದಾಗಿದೆ. ಅದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.

ಸೂಚನೆ: ಪರಿಣಾಮಕಾರಿ ಫಲಿತಾಂಶ ಪಡೆಯಬೇಕಾದರೆ ಈ ಚಿಕಿತ್ಸೆಯನ್ನು ನೀವು ನಿಯಮಿತವಾಗಿ ಬಳಸಿಕೊಳ್ಳಿ. ಚರ್ಮದ ಪರೀಕ್ಷೆ ಮಾಡಿಸಿಕೊಂಡು ಯಾವ ಸಾಮಗ್ರಿ ನಿಮಗೆ ಹೊಂದಿಕೊಳ್ಳುವುದು ಎಂದು ನೋಡಿ....

ಮಂಜುಗಡ್ಡೆ

ಮಂಜುಗಡ್ಡೆ

ಮನೆಯ ಫ್ರಿಡ್ಜ್‌ನಲ್ಲಿ ಮಂಜುಗಡ್ಡೆ ಇದ್ದೇ ಇರುತ್ತದೆ. ಐಸ್ ತುಂಬಾ ಸರಳವಾಗಿರುವ ಚಿಕಿತ್ಸೆಯಾಗಿದೆ. ಮೊಡವೆಯ ಗಾತ್ರ, ಕೆಂಪಾಗಿರುವುದು, ನೋವು ಮತ್ತು ದೀರ್ಘ ಕಾಲ ಇದು ಉಳಿದಂತೆ ಐಸ್ ಕೆಲಸ ಮಾಡುವುದು. ಐಸ್ ನ್ನು ಕೆಲವು ದಿನಗಳ ಕಾಲ ಮೊಡವೆಗಳ ಮೇಲಿಟ್ಟರೆ ಕೆಲವೇ ದಿನಗಳಲ್ಲಿ ಮೊಡವೆ ಮಾಯವಾಗುವುದು.

ವಿಧಾನ

ವಿಧಾನ

*ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ

*ಒಂದು ಬಟ್ಟೆಗೆ ಐಸ್ ಕಟ್ಟಿಕೊಂಡು ಅದನ್ನು ಮೊಡವೆ ಮೇಲಿಡಿ. ನೇರವಾಗಿ ಚರ್ಮದಲ್ಲಿ ಇಡಬೇಡಿ.

ಐಸ್ ನ ತುಂಡನ್ನು ಕರವಸ್ತ್ರ ಅಥವಾ ಟಿಶ್ಯೂನಲ್ಲಿ ಇಟ್ಟುಕೊಂಡು ಮೊಡವೆ ಮೇಲಿಡಿ.

ಮೊಡವೆ ಜಾಗವು ತೊಳೆದಿರಬೇಕು ಮತ್ತು ಒಣಗಿರಬೇಕು. ಐಸ್ ಇರುವ ಬಟ್ಟೆಯನ್ನು ಮೊಡವೆ ಮೇಲಿಡಿ. ನಿಮಿಷ ಕಾಲ ಇದು ಹಾಗೆ ಇರಲಿ.

ಐಸ್ ಅನ್ನು ನೇರವಾಗಿ ಮೊಡವೆ ಮೇಲಿಡಬೇಡಿ. ಇದರಿಂದ ವ್ಯತಿರಿಕ್ತ ಪರಿಣಾಮವಾಗಬಹುದು.

ಮೊಡವೆ ಇರುವಂತಹ ಜಾಗವು ಯಾವುದೇ ಸ್ಪರ್ಶದ ಅನುಭವ ನೀಡದೆ ಇದ್ದಾಗ ಐಸ್ 6ನ್ನು ಅಲ್ಲಿಂದ ತೆಗೆದು ಐದು ನಿಮಿಷ ಬಿಟ್ಟು ಮತ್ತೆ ಐಸ್ ಇಡಿ.

ಹಲ್ಲಿನ ಪೇಸ್ಟ್

ಹಲ್ಲಿನ ಪೇಸ್ಟ್

ಪುರುಷರ ಮೊಡವೆಗಳಿಗೆ ತುಂಬಾ ಸರಳ ಹಾಗೂ ಸುಲಭ ಉಪಾಯವೆಂದರೆ ಮನೆಯಲ್ಲೇ ಸಿಗುವಂತಹ ಹಲ್ಲಿನ ಪೇಸ್ಟ್. ಇದು ಮೊಡವೆಗಳಿಗೆ ಪ್ರಾಥಮಿಕ ಚಿಕಿತ್ಸೆ ಅಲ್ಲದೆ ಇದ್ದರೂ ಸರಿಯಾದ ಕ್ರಮದಿಂದ ಹಚ್ಚಿದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮೊಡವೆಗಳಿಗೆ ಹಲ್ಲಿನ ಪೇಸ್ಟ್ ನ್ನು ಯಾವ ರೀತಿ ಹಚ್ಚಬೇಕು ಎನ್ನುವ ಬಗ್ಗೆ ನಿಮ್ಮಲ್ಲಿ ಪ್ರಶ್ನೆಯೇಳುತ್ತಾ ಇದ್ದರೆ ಇದಕ್ಕೆ ಸರಿಯಾದ ವಿಧಾನವಿದೆ.

ವಿಧಾನ

ವಿಧಾನ

ಮುಖವನ್ನು ಬಿಸಿ ನೀರು ಅಥವಾ ಫೇಸ್ ಕ್ಲೀನರ್ ನಿಂದ ಮೊದಲು ತೊಳೆದುಕೊಳ್ಳಬೇಕು. ಯಾವುದೇ ಹೆಚ್ಚುವರಿ ಸುಗಂಧ ಇಲ್ಲದೆ ಇರುವಂತಹ ಬಿಳಿ ಹಲ್ಲಿನ ಪೇಸ್ಟ್ ನ್ನು ಆಯ್ಕೆ ಮಾಡಿಕೊಳ್ಳಿ. ಹತ್ತಿಯ ಉಂಡೆಯ ಮೇಲೆ ಪೇಸ್ಟ್ ನ್ನು ಸ್ವಲ್ಪ ಹಾಕಿಕೊಂಡು ಅದನ್ನು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ.

ರಾತ್ರಿ ಸಂಪೂರ್ಣವಾಗಿ ಪೇಸ್ಟ್ ಮೊಡವೆಗಳ ಮೇಲೆ ಇರುತ್ತದೆ ಎನ್ನುವ ನಂಬಿಕೆ ಇದ್ದರೆ ಹಾಗೆ ಬಿಡಬಹುದು ಮತ್ತು ಬೆಳಿಗ್ಗೆ ತೊಳೆಯಬಹುದು. ಇಲ್ಲವಾದಲ್ಲಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಒಣ ಟವೆಲ್ ನಿಂದ ಮುಖ ಒರೆಸಿಕೊಳ್ಳಿ. ಒಳ್ಳೆಯ ಫಲಿತಾಂಶ ಕಾಣಬೇಕಾದರೆ ವಾರದಲ್ಲಿ ಮೂರು ಸಲ ಹಲ್ಲಿನ ಪೇಸ್ಟ್ ನ ಚಿಕಿತ್ಸೆಯನ್ನು ಬಳಸಿಕೊಳ್ಳಬೇಕು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿರುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಅದೇ ಬೆಳ್ಳುಳ್ಳಿ ಪುರುಷರಲ್ಲಿನ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ, ಅಲಿಸಿನ್, ಫಂಗಲ್ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಮೊಡವೆಗಳನ್ನು ನಿವಾರಣೆ ಮಾಡುವುದು. ಥಾಯಸ್ರೆಮೊನೊನ್ ಎನ್ನುವ ಬೆಳ್ಳುಳ್ಳಿಯಲ್ಲಿರುವ ಸಲ್ಪರ್ ನೇರವಾಗಿ ಪುರುಷರ ರಕ್ತಸಂಚಾರದಲ್ಲಿ ಕೆಲಸ ಮಾಡುತ್ತದೆ.

ವಿಧಾನ

ವಿಧಾನ

ಬೆಳ್ಳುಳ್ಳಿಯನ್ನು ನೇರವಾಗಿ ಮೊಡವೆಗಳ ಮೇಲೆ ಹಚ್ಚಿಕೊಂಡರೆ ಸುಟ್ಟ ಅನುಭವವಾಗಬಹುದು. ಇದಕ್ಕಾಗಿ ಸ್ವಲ್ಪ ನೀರು ಹಾಕಿಕೊಂಡು ಬಳಸಿ.

ಐದು ಬೆಳ್ಳುಳ್ಳಿಯ ಎಸಲಿನ ಸಿಪ್ಪೆ ತೆಗೆದು ಅದನ್ನು ಜಜ್ಜಿಕೊಂಡು ಎರಡು ಚಮಚ ನೀರಿನೊಂದಿಗೆ ಬೆರೆಸಿಕೊಂಡು ಹಚ್ಚಿಕೊಳ್ಳಿ.

ಈ ಮಿಶ್ರಣವನ್ನು ಮೊಡವೆಗಳ ಮೇಲೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ತೊಳೆದರೆ ವೇಗವಾಗಿ ಪರಿಹಾರ ಸಿಗುವುದು.

ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಪಪ್ಪಾಯಿ

ಪಪ್ಪಾಯಿ

ಸಿಪ್ಪೆ ತೆಗೆದಿರುವಂತಹ ಪಪ್ಪಾಯಿಯ ಐದು ತುಂಡುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

ಪಪ್ಪಾಯಿಯ ಪೇಸ್ಟ್ ಅನ್ನು ಮುಖದಲ್ಲಿರುವ ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ಪೇಸ್ಟ್ ಹಚ್ಚಿಕೊಂಡು 30 ನಿಮಿಷ ಹಾಗೆ ಬಿಟ್ಟು ಬಳಿಕ ನೀರಿನಿಂಧ ತೊಳೆಯಬಹುದು. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ಮೊಡವೆ ಹಾಗೂ ಬೊಕ್ಕೆಗಳಿಂಧ ಸಂಪೂರ್ಣ ವಿರಾಮ ಸಿಗುವುದು.

ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

English summary

Home Remedies To Treat Stubborn Pimples For Men

Men might not be so beauty-conscious or interested in the same, but there are some acute hair or skin problems that men face and are tired of or intensely are concerned about these. One of such skin problem that men constantly battle with is their pimples. Men's pimple treatment can be worked at with simple home remedies. Continuous exposure of the skin and face to extreme weather conditions and overactive sebum secretion from the oil glands leads to the occurrence of pimples. Sadly, the stubborn pimples in men spread to their face, neck, hands, and shoulders as well.
Subscribe Newsletter