ಈ ಸರಳ ಟಿಪ್ಸ್ ಅನುಸರಿಸಿದರೆ ಸಾಕು, ಮೀಸೆ-ಗಡ್ಡ ಚೆನ್ನಾಗಿ ಬೆಳೆಯುತ್ತದೆ!

By: Hemanth
Subscribe to Boldsky

ಹಿಂದಿನ ಕಾಲದ ರಾಜಮಹಾರಾಜರನ್ನು ನೋಡಿದರೆ ನಮಗೆ ಕಾಣಸಿಗುವುದು ಉದ್ದಗಿನ ಮೀಸೆ ಮತ್ತು ಗಡ್ಡ. ಕಾಲಕ್ರಮೇಣ ಬ್ರಿಟಿಷರ ಆಗಮನವಾಗುತ್ತಿದ್ದಂತೆ ಭಾರತೀಯರು ಮೀಸೆ ಬೋಳಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡರು. ಆದರೆ ಗಡ್ಡ ಮತ್ತು ಮೀಸೆ ಎನ್ನುವುದು ಬಲಿಷ್ಠ ಪುರುಷನ ಲಕ್ಷಣವಾಗಿದೆ. ಬ್ರಿಟಿಷರು ಭಾರತ ಬಿಟ್ಟು ತೊಳಗಿದರೂ ಗಡ್ಡ ಮೀಸೆ ಬೋಳಿಸುವಂತಹ ಸಂಪ್ರದಾಯ ಭಾರತೀಯರಲ್ಲಿ ಹಾಗೆ ಉಳಿದುಕೊಂಡಿತು.

ಇದಕ್ಕೆ ಪ್ರಮುಖ ಕಾರಣವೆಂದರೆ ಬಾಲಿವುಡ್ ನ ನಾಯಕರು ಕೂಡ ಗಡ್ಡಮೀಸೆ ಬೋಳಿಸಿಕೊಳ್ಳುತ್ತಾ ಇದ್ದರು. ಗಡ್ಡ ಬೆಳೆಸುವುದು ತುಂಬಾ ಸುಲಭವೆಂದು ಹೆಚ್ಚಿನವರು ಭಾವಿಸಿದ್ದಾರೆ. ಇಂದಿನ ದಿನಗಳಲ್ಲಿ ಗಡ್ಡ ಬೆಳೆಸುವ ಮಂದಿ ಹೆಚ್ಚಾಗುತ್ತಾ ಇದ್ದಾರೆ. ಇದಕ್ಕೆ ಬಾಲಿವುಡ್ ಕೂಡ ಸಾಕ್ಷಿಯಾಗಿದೆ. ವಯಸ್ಸನ್ನು ಅನುಸರಿಸಿಕೊಂಡು ಮುಖದ ಮೇಲಿನ ಕೂದಲು ದಪ್ಪ ಹಾಗೂ ಉದ್ದಗೆ ಬೆಳೆಯುತ್ತದೆ. ಆದರೆ ಗಡ್ಡವನ್ನು ನೈಸರ್ಗಿಕವಾಗಿ ವೇಗವಾಗಿ ಬೆಳೆಸಲು ಕೆಲವು ವಿಧಾನಗಳು ಕೂಡ ಇವೆ. ಗಡ್ಡವು ವೇಗ ಹಾಗೂ ಬಲಿಷ್ಠವಾಗಿ ಬೆಳೆಯಬೇಕೆಂದರೆ ಅದಕ್ಕೆ ಸರಿಯಾಗಿ ಪೋಷಣೆ ನೀಡಬೇಕು. 

ಗಡ್ಡಕ್ಕೂ, ಆರೋಗ್ಯಕ್ಕೂ ಬಿಡಿಸಲಾಗದ ನಂಟಿದೆಯಂತೆ!

ದೇಹದ ಬಗ್ಗೆ ಕಾಳಜಿ ವಹಿಸುವಂತಹ ನಾವು ಗಡ್ಡವನ್ನು ನಿರ್ಲಕ್ಷ್ಯ ಮಾಡಿರುತ್ತೇವೆ. ಕೆಲವರು ಮಾತ್ರ ಗಡ್ಡದ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡಿದ್ದಾರೆ. ಗಡ್ಡವು ವೇಗವಾಗಿ ಬೆಳೆಯಲು ವಾರದಲ್ಲಿ ಒಂದು ಸಲ ಮುಖದ ಸತ್ತ ಚರ್ಮವನ್ನು ತೆಗೆದುಹಾಕಬೇಕು. ಇದರಿಂದ ಗಡ್ಡ ವೇಗವಾಗಿ ಬೆಳೆಯುವುದು. ಕೆಲವೊಂದು ಎಣ್ಣೆಗಳಿಂದ ಗಡ್ಡಕ್ಕೆ ಮಸಾಜ್ ಮಾಡಬಹುದು. ಇದರಿಂದ ಗಡ್ಡದ ಬೆಳವಣಿಗೆಗೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳು ಸಿಗುವುದು. ಬೋಲ್ಡ್ ಸ್ಕೈ ಯ ಈ ಲೇಖನ ಓದಿಕೊಂಡು ಸುಂದರ ಗಡ್ಡ ನಿಮ್ಮದಾಗಿಸಿಕೊಳ್ಳಿ.

Beard

ಆಹಾರ

ಪ್ರೋಟೀನ್ ಅಧಿಕವಾಗಿರುವ ಆಹಾರ, ಕಡಿಮೆ ಒತ್ತಡ ಮತ್ತು ಸರಿಯಾದ ನಿದ್ರೆಯಿದ್ದರೆ ಗಡ್ಡವು ವೇಗವಾಗಿ ಬೆಳೆಯುವುದು. ಪ್ರೋಟೀನ್ ನಿಂದ ದೇಹಕ್ಕೆ ಬೇಕಾಗುವಂತಹ ಸರಿಯಾದ ಪೋಷಕಾಂಶಗಳು ಸಿಗುತ್ತದೆ. ಇದರಿಂದ ಕೂದಲು ಬೆಳೆಯುವುದು. ಸರಿಯಾಗಿ ನಿದ್ರೆ ಮಾಡಿದರೆ ಕೂದಲು ವೇಗವಾಗಿ ಬೆಳೆಯಲು ನೆರವಾಗುವುದು. ದಿನದಲ್ಲಿ ಎಂಟು ಲೋಟ ನೀರು ಕುಡಿದರೆ ಕೂದಲು ದಪ್ಪ ಹಾಗೂ ಆರೋಗ್ಯಕರವಾಗಿ ಬೆಳೆಯುವುದು. ಒತ್ತಡದಿಂದ ಮುಕ್ತವಾಗಿದ್ದರೆ ಕೂದಲು ಉದುರುವುದನ್ನು ತಪ್ಪಿಸಬಹುದು ಮತ್ತು ಬೆಳೆವಣಿಗೆ ಹೆಚ್ಚಿಸಬಹುದು.

ಬೆಳೆಯಲು ಬಿಡಿ

ಕೂದಲು ಬೆಳೆಯಲು ಆರಂಭವಾಗುತ್ತಾ ಇರುವಂತೆ ಅದು ಅಲ್ಲಲ್ಲಿ ಬೆಳೆದಂತೆ ಮತ್ತು ಸಂಪೂರ್ಣವಾಗಿರದಂತೆ ಕಾಣುವುದು. ಕೂದಲು ದೊಡ್ಡದಾಗುತ್ತಾ ಇರುವಂತೆ ನಿಧಾನವಾಗಿ ಬೆಳೆಯುವಂತಹ ಕಿರುಚೀಲಗಳು ತಮ್ಮ ಕೂದಲನ್ನು ಮೊಳಕೆ ಭರಿಸಲು ಸಮಯ ತೆಗೆದುಕೊಳ್ಳುವುದು. ಕೂದಲು ದೊಡ್ಡದಾಗಿ ಬೆಳೆಯುವುದರಿಂದ ಅಲ್ಲಲ್ಲಿ ಇರುವ ಖಾಲಿ ಜಾಗಗಳು ತುಂಬುವುದು ಮತ್ತು ಸಣ್ಣ ಕೂದಲುಗಳು ನಿಧಾನವಾಗಿ ಬೆಳೆಯುವುದು. ತಾಳ್ಮೆಯಿಂದ ಇದ್ದರೆ ಕೂದಲು ಮೊಳಕೆ ಬಂದು ಬೆಳೆಯುವುದು.

ಕೂದಲು ಬೆಳೆದ ಬಳಿಕ

ಕೂದಲು ಬೆಳೆದ ಬಳಿಕ ಅದನ್ನು ಒಳ್ಳೆಯ ಸ್ಥಿತಿಯಲ್ಲಿ ಇಟ್ಟುಕೊಂಡರೆ ಆಗ ಕೂದಲನ್ನು ಟ್ರಿಮ್ ಮಾಡಿ ಮತ್ತೆ ಬೆಳೆಸುವ ಅಗತ್ಯ ಕಾಣಿಸುವುದಿಲ್ಲ. ಹರಳೆಣ್ಣೆಯು ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾದ ತೈಲವಾಗಿದೆ. ಇದು ಕೂದಲನ್ನು ಸರಿಯಾದ ಮಾರ್ಗದಲ್ಲಿ ಬೆಳೆಯುವಂತೆ ಮಾಡುವುದು. ಆಲಿವ್ ತೈಲ, ತೆಂಗಿನೆಣ್ಣೆ, ಪುದೀನಾ ಎಣ್ಣೆ ಕೂಡ ಕೂದಲಿಗೆ ಪೋಷಣೆ ನೀಡಲು ತುಂಬಾ ಒಳ್ಳೆಯದು. 

ಇಷ್ಟಪಟ್ಟು ಬಲು ಕಷ್ಟದಿ೦ದ ಬೆಳೆಸಿಕೊ೦ಡ ಗಡ್ಡದ ಆರೈಕೆ ಹೇಗಿರಬೇಕು?

ವಿಟಮಿನ್‌ಗಳು

ಆಹಾರ ಮತ್ತು ಸೌಂದರ್ಯವರ್ಧಕಗಳಲ್ಲಿ ವಿಟಮಿನ್ ಬಿಯನ್ನು ಸೇರಿಸಿಕೊಳ್ಳಿ. ವಿಟಮಿನ್ ಬಿ1, ಬಿ6 ಮತ್ತು ಬಿ12 ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಪ್ರತಿನಿತ್ಯ ಬಯೋಟಿನ್ ಸೇವಿಸಿ. ಈ ಆಹಾರ ಪೂರಕವು ಕೂದಲು ಮತ್ತು ಉಗುರು ಬೆಳೆಯಲು ನೆರವಾಗುವುದು. ಪ್ರಾಣಿಗಳ ಯಕೃತ್, ಸಿಂಪಿ, ಹೂಕೋಸು, ಬೀನ್ಸ್, ಮೀನು, ಕ್ಯಾರೆಟ್, ಬಾಳೆಹಣ್ಣು, ಸೋಯಾ ಹಿಟ್ಟು, ಮೊಟ್ಟೆಯ ಹಳದಿ ಭಾಗ, ಧಾನ್ಯಗಳು ಇತ್ಯಾದಿಗಳಲ್ಲಿ ಇದು ಕಂಡುಬರುವುದು.

Beard

ಕಿತ್ತು ಹಾಕುವುದು

ನಿಮ್ಮ ಜೀವನಕ್ರಮಕ್ಕೆ ಅನುಗುಣವಾಗಿ ಚರ್ಮವನ್ನು ಆಗಾಗ ಕಿತ್ತುಹಾಕುವುದು ಅಗತ್ಯವಾಗಿದೆ. ಪುರುಷರು ಯಾವಾಗಲೂ ಸ್ಕ್ರಬ್ ಬಳಸಿಕೊಂಡರೆ ತುಂಬಾ ಒಳ್ಳೆಯದು. ಚರ್ಮದ ಸತ್ತಕೋಶಗಳನ್ನು ತೆಗೆದುಹಾಕುವುದರಿಂದ ಕೂದಲು ಬೆಳೆಯುವುದು. ಪುರುಷರ ಚರ್ಮಕ್ಕೆ ಹೊಂದಿಕೊಳ್ಳುವಂತಹ ಯಾವುದಾದರೂ ಒಳ್ಳೆಯ ಸ್ಕ್ರಬ್ ಬಳಸಿಕೊಳ್ಳಿ.

English summary

Faster Beard Growth: Tips

Even though clean plain and smooth beardless face is a chick magnet, most men love to sport beard. Large number of men love to play with their beard style and grow them in various forms. Historically beard is considered to be an emblem of power. A hard and strong beard is associated with powerful men with strength. Beard is a symbol of masculinity and not all men can pull of a manly beard look.
Story first published: Tuesday, August 22, 2017, 23:33 [IST]
Subscribe Newsletter