For Quick Alerts
ALLOW NOTIFICATIONS  
For Daily Alerts

ಗಡ್ಡ ಬಿಟ್ಟ ಪುರುಷರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

By Manu
|

ಒಬ್ಬ ಹುಡುಗ ಒಂದು ಜೊತೆ ಪಾದರಕ್ಷೆಯನ್ನು ಎತ್ತಿಕೊಂಡು ಓಡುತ್ತಾ ಹೋಗುತ್ತಿದ್ದನಂತೆ. ಅನುಮಾನದಿಂದ ಪೋಲೀಸ್ ಹಿಡಿದು ವಿಚಾರಿಸಿದಾಗ ನಿಜವಾಗಿಯೂ ಆತ ಹಣ ಕೊಟ್ಟು ಕೊಂಡೇ ಹೋಗುತ್ತಿದ್ದನಂತೆ. ಓಡುತ್ತಿದ್ದುದು ಏಕೆಂದರೆ ಫ್ಯಾಷನ್ ಬದಲಾಗುವ ಮೊದಲು ಇವನ್ನು ತೊಟ್ಟುಕೊಳ್ಳಬೇಕೆಂದು ಓಡುತ್ತಿದ್ದನಂತೆ! ನಗು ಬರಿಸುವ ಈ ಜೋಕು ವಾಸ್ತವಕ್ಕೆ ನಿಜವಾಗಿಯೂ ಹತ್ತಿರವಾಗಿದೆ. ಏಕೆಂದರೆ ಫ್ಯಾಷನ್ ಯಾವ ರೀತಿ ಬದಲಾಗುತ್ತದೆ ಎಂದು ಹೇಳಲು ಬರುವುದಿಲ್ಲ! ಪುರುಷರೇ, ಸಕತ್ ಹ್ಯಾಂಡ್ಸಮ್ ಲುಕ್ ನಿಮ್ಮದಾಗಬೇಕೇ?

ಅಂತೆಯೇ ಇಂದು ನಾವು ಹೇಳಹೊರಟಿರುವುದು, ಫ್ಯಾಷನ್ ಆಗಿರುವುದು ವಿವಿಧ ರೀತಿಯಲ್ಲಿ ಗಡ್ಡ ಬೆಳೆಸಿಕೊಳ್ಳುವುದು! ಹೌದು, ಸಾಮಾನ್ಯವಾಗಿ ಗಡ್ಡ ಬಿಡುವುದೆಂದರೆ ಅದಕ್ಕೆ ಕೆಲವು ಕಾರಣಗಳಿರಬೇಕೆಂದೇ ಜನರು ತಿಳಿದುಕೊಂಡಿದ್ದಾರೆ. ವಿಫಲವಾದ ಪ್ರೇಮ, ದೇವರಿಗೆ ಬಿಟ್ಟಿದ್ದು, ತಮ್ಮ ನೆಚ್ಚಿನ ನಟನ ಅನುಕರಣೆ, ಧಾರ್ಮಿಕ ಅಗತ್ಯತೆ ಮೊದಲಾದವು ಸಾಮಾನ್ಯವಾದ ಕಾರಣಗಳಾಗಿವೆ. ಆದರೆ ಇಂದು ಗಡ್ಡ ಬಿಡುವುದು ಈ ಕಾರಣಗಳನ್ನೆಲ್ಲಾ ಮೀರಿ ಒಂದು ಫ್ಯಾಷನ್ ಎನಿಸಿಕೊಳ್ಳುತ್ತಿದೆ.

ನಿಯಮಿತವಾಗಿ ಒಪ್ಪ ಓರಣ ಮಾಡಿಸಿಕೊಂಡಿರುವ ಜನರ ಗಡ್ಡ ಆಕರ್ಷಕವಾಗಿದ್ದು ಅವರ ಸ್ವಚ್ಛತಾ ಕಾಳಜಿಯನ್ನು ಪ್ರಕಟಿಸಿದರೆ ಗಡ್ಡವನ್ನು ಎರ್ರಾಬಿರ್ರಿ ಬೆಳೆಯಲು ಬಿಟ್ಟು ಯಾವುದೇ ಆರೈಕೆಯಿಲ್ಲದೇ ಇರದಂತಿರುವವರನ್ನು ಒಂದೇ ಅಪ್ಪಟ ಸೋಮಾರಿ ಅಥವಾ ತಪಸ್ಸಿನಲ್ಲಿರುವ ಸನ್ಯಾಸಿ ಎಂದು ನಿರ್ಧರಿಸಿಬಿಡಬಹುದು..! ಸೌಂದರ್ಯ ಟಿಪ್ಸ್, ಇದು ಪುರುಷರಿಗೆ ಮಾತ್ರ..!

ಅದು ಏನೇ ಇರಲಿ, ಆದರೆ ಒಂದು ಅಂತೂ ಸತ್ಯ, ಗಡ್ಡವು ಗಂಡಸರ ಒಂದು ಹೆಮ್ಮೆಯ ಸಂಕೇತ, ಹಲವಾರು ಮಹನೀಯರು ತಮ್ಮ ಗಡ್ಡಗಳಿಂದಲೆ ಗುರುತಿಸಲ್ಪಡುತ್ತಿದ್ದರು. ಇದು ನಿಮಗೆ ಒಳ್ಳೆಯ ಲುಕ್ ಜೊತೆಗೆ ಅದ್ಭುತವಾದ ಐಡೆಂಟಿಟಿಯನ್ನು ಸಹ ಕೊಡುತ್ತದೆ. ನಿಮಗೆ ಇದ್ದಕ್ಕಿದ್ದಂತೆ ಗಡ್ಡ ಬೆಳೆಸುವ ಕುರಿತು ಆಸಕ್ತಿ ಮೂಡಿದರೆ, ಅದಕ್ಕಾಗಿ ಸಹಾಯ ಮಾಡಲು ನಾವಿದ್ದೇವೆ. ಬನ್ನಿ ಗಡ್ಡವನ್ನು ಬೇಗ ಬೆಳೆಸಲು ಬೇಕಾಗಿರುವ ಸಲಹೆಗಳು ಯಾವುದು ಎಂದು ತಿಳಿದುಕೊಂಡು ಬರೋಣ...

ಕ್ಲೀನ್ ಶೇವ್ ಮಾಡಿಸಿ

ಕ್ಲೀನ್ ಶೇವ್ ಮಾಡಿಸಿ

ಗಡ್ಡ ಬಿಡುವ ಇರಾದೆ ಮಾಡಿಕೊಂಡ ಬಳಿಕ ಮೊತ್ತ ಮೊದಲನೆಯದಾಗಿ ಉತ್ತಮ ಸೌಂದರ್ಯ ಮಳಿಗೆಯೊಂದರಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಮುಖದ ಚರ್ಮದ ಫೇಶಿಯಲ್ ಮಾಡಿಸಿಕೊಳ್ಳಿ. ಇದರಿಂದ ಚರ್ಮದ ಮೇಲಿದ್ದ ಸತ್ತ ಜೀವಕೋಶಗಳು ನಿವಾರಣೆಯಾಗಿ (exfoliate) ಮುಂದೆ ಬೆಳಯುವ ಕೂದಲಿಗೆ ಭದ್ರವಾದ ಅಡಿಪಾಯ ನೀಡುತ್ತದೆ.

ನೈಸರ್ಗಿಕ ಫೇಸ್ ವಾಶ್ ಬಳಸಿ

ನೈಸರ್ಗಿಕ ಫೇಸ್ ವಾಶ್ ಬಳಸಿ

ಗಡ್ಡದ ಬೆಳವಣಿಗೆಗೆ ಧೂಳು, ಪ್ರದೂಷಣೆ, ಪರಾಗ, ಬ್ಯಾಕ್ಟೀರಿಯಾ ಮೊದಲಾದವು ಅಡ್ಡಿಪಡಿಸುತ್ತವೆ. ನಿಮ್ಮ ತಲೆಗೂದಲಿನಂತೆಯೇ ಗಡ್ಡಕ್ಕೂ ಪೋಷಣೆಯ ಅಗತ್ಯವಿದೆ. ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಮುಖದ ಚರ್ಮವನ್ನು ಉತ್ತಮ ಮಾರ್ಜಕ ಬಳಸಿ (ಫೇಸ್ ವಾಶ್ ಉತ್ತಮ) ಸ್ವಚ್ಛಗೊಳಿಸುತ್ತಿರಿ.

ವಿಟಮಿನ್‌‌ಯುಕ್ತ ಆಹಾರ

ವಿಟಮಿನ್‌‌ಯುಕ್ತ ಆಹಾರ

ಕೆಲವೊಂದು ವಿಟಮಿನ್‌ಗಳು ಮತ್ತು ಖನಿಜಾಂಶಗಳು ಮುಖದಲ್ಲಿ ಗಡ್ಡವನ್ನು ಬೇಗ ಬೆಳೆಸಲು ಸಹಾಯ ಮಾಡುತ್ತವೆ. ಅದಕ್ಕಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಎ,ಬಿ,ಸಿ ಮತ್ತು ಇ ಯನ್ನು ಸೇರಿಸಲು ಮರೆಯಬೇಡಿ. ಈ ವಿಟಮಿನ್‌ಗಳು ಕೂದಲು ಬೆಳೆಯಲು ಸಹಾಯ ಮಾಡುತ್ತವೆ.

ಸಾಬೂನನ್ನು ಎ೦ದಿಗೂ ಬಳಸಿಕೊಳ್ಳಬೇಡಿರಿ

ಸಾಬೂನನ್ನು ಎ೦ದಿಗೂ ಬಳಸಿಕೊಳ್ಳಬೇಡಿರಿ

ಗಡ್ಡದ ಮೇಲೆ ಸಾಬೂನನ್ನು ಬಳಸಿದಲ್ಲಿ, ನಿಮ್ಮ ಮುಖದ ಮೇಲಿನ ತ್ವಚೆಯು ಶುಷ್ಕವಾಗುತ್ತದೆ ಹಾಗೂ ತನ್ಮೂಲಕ ಅದು ನಿಮ್ಮ ಗಡ್ಡವು ಕತ್ತರಿಸಲ್ಪಟ್ಟು ಉದುರಿಹೋಗಲು ಕಾರಣವಾಗುತ್ತದೆ. ಸಾಬೂನುಗಳು ಗಡ್ಡದ೦ತಹ ಮೈಮೇಲಿನ ನಾಜೂಕಾದ ಭಾಗಗಳ ವಿಚಾರದಲ್ಲಿ ಗಡಸಾಗಿರುತ್ತವೆ. ಆದ್ದರಿ೦ದ, ಗಡ್ಡವನ್ನು ಸ್ವಚ್ಚಗೊಳಿಸಿಕೊಳ್ಳಲು ಶಾ೦ಪೂವನ್ನು ಮಾತ್ರವೇ ಬಳಸಿಕೊಳ್ಳಿರಿ. ಗಡ್ಡದ ಕುರಿತ ಕಾಳಜಿಗೆ ಸ೦ಬ೦ಧಿಸಿದ೦ತಹ ಅತೀ ಮಹತ್ವದ ಸಲಹೆಗಳ ಪೈಕಿ ಇದೂ ಸಹ ಒ೦ದು.

ಆರು ವಾರಕ್ಕೊಮ್ಮೆ ಟ್ರಿಮ್ ಮಾಡಿಸಿಕೊಳ್ಳಿ

ಆರು ವಾರಕ್ಕೊಮ್ಮೆ ಟ್ರಿಮ್ ಮಾಡಿಸಿಕೊಳ್ಳಿ

ನಿಯಮಿತವಾಗಿ ಆಕಾರ ನೀಡುವುದು ಅಥವಾ ಟ್ರಿಮ್ ಮಾಡುವುದು ಒಳ್ಳೆಯದಲ್ಲ. ಆರು ವಾರಕ್ಕೊಮ್ಮೆ ನಿಮ್ಮ ಗಡ್ಡವನ್ನು ಟ್ರಿಮ್ ಮಾಡಿ ಸಾಕು. ಇದರಿಂದ ನಿಮ್ಮ ಗಡ್ಡ ಚೆನ್ನಾಗಿ ಬೆಳೆಯಲು ಕಾಲಾವಕಾಶ ದೊರೆಯುತ್ತದೆ.

ಮೂಡನಂಬಿಕೆಗೆ ಕಿವಿ ಕೊಡಬೇಡಿ

ಮೂಡನಂಬಿಕೆಗೆ ಕಿವಿ ಕೊಡಬೇಡಿ

ಪ್ರತಿದಿನ ಶೇವ್ ಮಾಡಿದರೆ ನಿಮ್ಮ ಮುಖದಲ್ಲಿ ಗಡ್ಡ ಬೇಗ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಮೂಡನಂಬಿಕೆ, ಇದಕ್ಕೆ ಯಾವುದೆ ವೈಜ್ಞಾನಿಕ ಹಿನ್ನೆಲೆ ಇಲ್ಲ. ಹಾಗೆ ಮಾಡಲು ಹೋಗಬೇಡಿ.

English summary

Simple Steps To Grow Your Beard Faster

Don't get discouraged if your beard is not growing as quickly as you like, just follow some of these five simple steps on how to grow a beard ...
X
Desktop Bottom Promotion