For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಟಿಪ್ಸ್, ಇದು ಪುರುಷರಿಗೆ ಮಾತ್ರ..!

By Manu
|

ಸೌಂದರ್ಯವೆಂಬುದು ಹೆಣ್ಣಿಗೆ ಮಾತ್ರವಲ್ಲದೆ ಗಂಡಿಗೂ ಅತ್ಯಂತ ಪ್ರಮುಖ ಅಂಶವಾಗಿದೆ. ಸುಂದರ ಪುರುಷನ ಎದ್ದುಗಾಣುವ ಅಂದ ಆತನಿಗೆ ಪ್ಲಸ್ ಪಾಯಿಂಟ್ ಎಂದೆನಿಸಿದೆ. ನೀಟಾಗಿ ಮಾಡಿದ ಹೇರ್ ಕಟ್, ಶೇವ್, ಸುಂದರವಾದ ಅಂಗಸೌಷ್ಟವ, ನವಿರಾದ ಅಲಂಕಾರ, ಫ್ಯಾಷನ್ ಪ್ರಿಯತೆ, ಟಿಪ್ ಟಾಪ್ ಆಗಿ ದಿರಿಸು ಧರಿಸಿರುವುದು ಹೀಗೆ ಗಂಡು ಕೂಡ ಹೆಣ್ಣಿನಂತೆಯೇ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಿದರೆ ಆತನನ್ನು ದಿಟ್ಟಿಸಿ ನೋಡದ ಹುಡುಗಿಯರೇ ಇರಲಾರರು.

ಆದರೆ ಹೆಚ್ಚಿನ ಗಂಡಸರು ತಮ್ಮನ್ನು ಯಾರು ನೋಡುತ್ತಾರೆ ಎಂಬ ಅಸಡ್ಡೆಯಿಂದಲೇ ಕೈಬಿಟ್ಟ ಎಷ್ಟೋ ಅವಕಾಶಗಳಿವೆ. ಅವರುಗಳು ಮಾಡುವ ತಪ್ಪು ಇದೇ ಆಗಿದೆ. ಸಾಧಾರಣವಾಗಿ ಇರುವುದಕ್ಕಿಂತ ಕೊಂಚ ಭಿನ್ನವಾಗಿದ್ದರೆ ನೀವೂ ಎಲ್ಲರನ್ನೂ ಆಕರ್ಷಿಸುತ್ತೀರಿ ಮತ್ತು ನಿಮ್ಮ ಸುಂದರತೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಖಂಡಿತ. ನಿಮ್ಮಲ್ಲಿ ಧೈರ್ಯ ತುಂಬಲು ನಿಮ್ಮ ಸುಂದರತೆ ಸಹಕಾರಿಯಾಗಿದೆ. ನೀವು ಆಗ ಕೀಳರಿಮೆಯಿಂದ ತೊಳಲಾಡುವುದಿಲ್ಲ. ಪುರುಷರು ಆಕರ್ಷಕವಾಗಿ ಕಾಣಲು ಕೆಲ ಸಲಹೆಗಳು

ಪುರುಷರಿಗೂ ಮಹಿಳೆಯರಂತೆ ಅಂದವಾಗಿ ಕಾಣಬೇಕೆಂಬ ಹಂಬಲ ಇರುವುದು ಸಹಜವೇ ಆಗಿದೆ. ಹುಡುಗಿಯೊಬ್ಬಳು ಕುಡಿನೋಟದಲ್ಲಿ ನಿಮ್ಮನ್ನು ನೋಡಿದಾಗ ಯಾವ ಪುರುಷರಿಗೂ ಇದು ಖುಷಿಯನ್ನು ತಂದುಕೊಡದೇ ಇರಲಾರದು. ಹಾಗಿದ್ದರೆ ಈ ಸೌಂದರ್ಯವನ್ನು ಪಡೆದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಚಿಂತೆ ಬಿಟ್ಟು ಇಂದಿನ ಲೇಖನದಲ್ಲಿ ನಾವು ತಿಳಿಸಿರುವ ಕೆಲವೊಂದು ಸೌಂದರ್ಯ ರಹಸ್ಯಗಳನ್ನು ಪುರುಷರೇ ನೀವು ಕೂಡ ಪಾಲಿಸಿ...

ಕೇಶವಿನ್ಯಾಸ

ಕೇಶವಿನ್ಯಾಸ

ಹೆಚ್ಚಿನ ಸಮಯ ಪಾರ್ಟಿಗಳಲ್ಲಿ ವ್ಯಸ್ಥರಾಗಿರುವವರಿಗೆ ಡ್ರೈ ಶಾಂಪೂ ಉತ್ತಮವಾಗಿದೆ. ಜಿಡ್ಡಿನಂಶವನ್ನು ಇದು ದೂರಮಾಡುವುದರಿಂದ ನಿಮ್ಮ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಬಹುದು. ಹೇರ್ ಜೆಲ್, ವ್ಯಾಕ್ಸ್, ಮೌಸ್ ಅಥವಾ ಕ್ರೀಮ್‎ಗಳು ಇತರ ಸ್ಟೈಲಿಂಗ್ ಪರಿಕರಗಳಾಗಿದ್ದು ನಿಮಗೆ ಬೇಕಾದ ಹೇರ್ ಸ್ಟೈಲ್ ಮಾಡಲು ಇದು ಅತ್ಯುತ್ತಮವಾಗಿದೆ.

ಉಗುರಿನ ಸ್ವಚ್ಛತೆ

ಉಗುರಿನ ಸ್ವಚ್ಛತೆ

ಪಾರ್ಟಿಗಳಲ್ಲಿ ಗ್ಲಾಸ್ ಅಥವಾ ತಟ್ಟೆಗಳನ್ನು ಹಿಡಿದುಕೊಂಡು ಸಂಭಾಷಿಸುವುದು ಸಹಜವಾಗಿದೆ. ಆಗ ನಿಮ್ಮ ಉಗುರು ಮತ್ತೊಬ್ಬರಿಗೆ ತಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಯಾವಾಗಲೂ ಅವುಗಳನ್ನು ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಉದ್ದನೆಯ ಉಗುರುಗಳನ್ನು ಬಿಡುವ ಹವ್ಯಾಸಗಳನ್ನು ಇರಿಸಿಕೊಳ್ಳದಿರಿ.

ಸುಗಂಧ ದ್ರವ್ಯ

ಸುಗಂಧ ದ್ರವ್ಯ

ನೀವು ಡಿಯೋಡ್ರೆಂಟ್ ಅನ್ನು ಬಳಸುತ್ತಿದ್ದಲ್ಲಿ, ಪರ್ಫ್ಯೂಮ್ ಸಿಂಪಡಿಸುವುದಕ್ಕೆ ಮರೆಯದಿರಿ. ನಿಮ್ಮ ಕುತ್ತಿಗೆಗೆ ಮಾತ್ರವೇ ಇದನ್ನು ಸ್ಪ್ರೇ ಮಾಡುವುದರ ಬದಲಿಗೆ, ಎದೆ ಮತ್ತು ಕಂಕುಳಿಗೆ ಸಿಂಪಡಿಸಿಕೊಳ್ಳಿ ದೇಹದ ಈ ಭಾಗಗಳು ಬೆವರಿಗೆ ಬೇಗನೇ ಗುರಿಯಾಗುತ್ತವೆ. ನಿಮ್ಮ ಮಣಿಗಂಟು ಮತ್ತು ಅಂಗೈಗೂ ಸಿಂಪಡಿಸಿಕೊಳ್ಳಿ.

ಮುಖಕ್ಕೆ ಏರ್ ಬ್ರಶ್

ಮುಖಕ್ಕೆ ಏರ್ ಬ್ರಶ್

ನಿಮ್ಮ ಒಣಮುಖವನ್ನು ಹೊಳೆಯುವಂತೆ ಮಾಡುವ ಮತ್ತು ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೊರಹಾಕುವ ಮಾಯಿಶ್ಚರೈಸರ್ ಬಗ್ಗೆ ಕೇಳಿದ್ದೀರಾ? ಎಣ್ಣೆ ಹೊರಹಾಕುವ ಕ್ರೀಮ್‎ಗಳು ಮತ್ತು ಏರ್ ಬ್ರಶಿಂಗ್ ಪರಿಕರಗಳಿಗಾಗಿ ನೀವು ಹಣ ವ್ಯಯಿಸಬೇಕಾಗುತ್ತದೆ. ಕೆಲವೊಂದು ಮುಖದ ಕ್ರೀಮ್‎ಗಳು ಬೆಳಕನ್ನು ಪ್ರತಿಫಲಿಸುವ ಅಂಶಗಳನ್ನು ಹೆಚ್ಚು ಹೊಂದಿರುವುದರಿಂದ ಕಲೆಗಳನ್ನು ಮರೆಯಾಗಿಸಲು ಸಹಕಾರಿಯಾಗಿವೆ. ಪುರುಷರಿಗಾಗಿ ನಿರ್ದಿಷ್ಟವಾಗಿರುವ ಕನ್ಸಿಲರ್‎ಗಳು ಕಪ್ಪು ಕಲೆಗಳನ್ನು ನಿವಾರಿಸಿ ನಿಮಗೆ ಸುಂದರ ಮುಖಾರವಿಂದವನ್ನು ದಯಪಾಲಿಸುತ್ತದೆ.

ಫ್ರೆಶ್ ಆಗಿರಿ

ಫ್ರೆಶ್ ಆಗಿರಿ

ನಿಮ್ಮ ಕಚೇರಿ ಕೆಲಸ ಮುಗಿಸಿ ಆಯಾಸಗೊಂಡಿದ್ದಿರಾ ಮತ್ತು ಆ ಬಳಲಿಕೆ ಮುಖದಲ್ಲಿ ಎದ್ದುಗಾಣುತ್ತಿದೆಯೇ? ಹಾಗಿದ್ದರೆ ಮುಖದಲ್ಲಿ ಕೊಂಚ ಯುವತ್ವವನ್ನು ತಂದುಕೊಳ್ಳಿ. ಉತ್ಸಾಹವನ್ನು ನೀಡುವ ಸ್ಕ್ರಬ್‎ನ ಬಳಕೆಯನ್ನು ಮಾಡಿ. ಇದರ ಆಳವಾಗಿ ಸ್ವಚ್ಛಮಾಡುವ ಗುಣ ತ್ವಚೆಯನ್ನು ಉತ್ಸಾಹಿಯಾಗಿ ಇರಿಸುವುದು ಮಾತ್ರವಲ್ಲದೆ ಅದನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾಗಿ ಇರಿಸುತ್ತದೆ. ಮುಖದಿಂದ ಕೊಳೆ ಮತ್ತು ಮೃತ ಕೋಶಗಳನ್ನು ಹೊರತಗೆಯಲು ಇದು ಉತ್ತಮ ವಿಧಾನವಾಗಿದೆ.

English summary

Grooming basics every man shouldn't skip

With weddings and festive parties in full swing, it's quite a challenge to look good, when you've spent the whole day at work and have to attend a function in the eveningTo make sure you appear freshfaced and appropriately groomed for any party, it's essential to keep a few simple grooming tips in mind. We show you how to prep up and head out in style!
Story first published: Friday, February 26, 2016, 10:04 [IST]
X
Desktop Bottom Promotion