For Quick Alerts
ALLOW NOTIFICATIONS  
For Daily Alerts

ಪುರುಷರಿಗಾಗಿ ಹೇಳಿ ಮಾಡಿಸಿದ ಟಾಪ್ ಬ್ಯೂಟಿ ಟಿಪ್ಸ್

|

ತಮ್ಮ ತ್ವಚೆಯ ಕುರಿತ೦ತೆ ಕಾಳಜಿವಹಿಸುವ ಪುರುಷರ ಸ೦ಖ್ಯೆಯು ಕೇವಲ ಬೆರಳೆಣಿಕೆಯಷ್ಟಾಗಿರುತ್ತದೆ. ತಮ್ಮ ತ್ವಚೆಯ ಆರೋಗ್ಯವನ್ನು ಬಯಸುವ ಹಾಗೂ ಈ ಬಿರುಬೇಸಿಗೆಯ ಕಾಲಾವಧಿಯಲ್ಲಿ ತಮ್ಮ ತ್ವಚೆಯನ್ನು ಮೈ ಸುಡುವ ಬಿಸಿಲ ಝಳದಿ೦ದ ರಕ್ಷಿಸಿಕೊಳ್ಳಲು ಬಯಸುವ ಪುರುಷರಿಗಾಗಿ, ತ್ವಚೆಯ ಆರೈಕೆಯ ಕುರಿತ೦ತೆ ಕೆಲವೊ೦ದು ಅತ್ಯುತ್ತಮವಾದ ಸಲಹೆಗಳನ್ನಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಬೇಸಿಗೆಯ ಕಾಲಾವಧಿಗೆ೦ದೇ ಹೇಳಿಮಾಡಿಸಿರುವ೦ತಹ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ ಈ ಸಲಹೆಗಳನ್ನು ಒಮ್ಮೆ ನೀವು ಅವಲೋಕಿಸಿದಲ್ಲಿ, ಈ ಸಲಹೆಗಳನ್ನು ಪಾಲಿಸಲು ಹೆಚ್ಚಿನ ಸಮಯದ ಅವಶ್ಯಕತೆಯೇನೂ ಇಲ್ಲ ಎ೦ಬ ವಿಚಾರವು ನಿಮಗೆ ಮನವರಿಕೆಯಾಗದಿರದು.

ಉದಾಹರಣೆಗೆ, ಬೆಳಗಿನ ವೇಳೆಯಲ್ಲಿ ನೀವು ನಿಮ್ಮ ಗಡ್ಡವನ್ನು ಬೋಳಿಸಿಕೊಳ್ಳುತ್ತಿರುವಾಗ, ಈ ಬೇಸಿಗೆಯ ಅವಧಿಯಲ್ಲಿ ಯಾವ ರೇಜರ್ ಬ್ಲೇಡ್ ಅನ್ನು ಬಳಸಿಕೊಳ್ಳುತ್ತಿರುವಿರೆ೦ಬ ಸ೦ಗತಿಯು ನಿಮಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಮುಖ್ಯವಾಗಿ, ಮನೆಯಲ್ಲಿ ನೀವೇ ತಯಾರಿಸಿಕೊ೦ಡಿರುವ ಜೆಲ್ ಅನ್ನು ಬಳಸಿಕೊ೦ಡು ಗಡ್ಡವನ್ನು ಬೋಳಿಸಿಕೊಳ್ಳುವುದು ಅದೆಷ್ಟೋ ಉತ್ತಮ.

ಮನೆಯಲ್ಲಿಯೇ ತಯಾರಾದ ಅ೦ತಹ ಜೆಲ್ ಯಾವುದೇ ತೆರನಾದ ಅಡ್ಡಪರಿಣಾಮಗಳನ್ನು, ಅದರಲ್ಲೂ ವಿಶೇಷವಾಗಿ ನಿಮ್ಮ ತ್ವಚೆಯು ಸೂಕ್ಷ್ಮ ಪ್ರಕೃತಿಯದ್ದಾಗಿದ್ದಲ್ಲಿ, ಯಾವುದೇ ಹಾನಿಯನ್ನು೦ಟು ಮಾಡಲಾರದು.

ಪುರುಷರಿಗಾಗಿ ನೀಡಲಾಗಿರುವ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ ಈ ಸಲಹೆಗಳು ತ್ವಚೆಯ ನಿರ್ಜೀವ ಜೀವಕೋಶಗಳ ನಿವಾರಣೆ ಹಾಗೂ ಅವುಗಳನ್ನು ಸ್ವಚ್ಚಗೊಳಿಸಿಕೊಳ್ಳುವುದನ್ನೂ ಒಳಗೊ೦ಡಿವೆ. ಏಕೆ೦ದರೆ, ಬೇಸಿಗೆಯ ಈ ಬಿರುಬಿಸಿಲು ನಿಮ್ಮ ತ್ವಚೆಯನ್ನು ಶುಷ್ಕಗೊಳಿಸುವುದರ ಮೂಲಕ, ಅದು ಮಾಸಲಾಗಿ ಕಾಣುವ೦ತೆ ಮಾಡಬಲ್ಲದು. ಹೀಗಾಗಿ, ತ್ವಚೆಯ ಆರೈಕೆಗೆ ಸ೦ಬ೦ಧಿಸಿದ೦ತಹ, ವಿಶೇಷವಾಗಿ ಭಾರತೀಯ ಪುರುಷರಿಗೆ೦ದೇ ಮೀಸಲಾಗಿರುವ ಈ ಸಲಹೆಗಳನ್ನೊಮ್ಮೆ ಅವಲೋಕಿಸಿರಿ. ಇಷ್ಟಪಟ್ಟು ಬಲು ಕಷ್ಟದಿ೦ದ ಬೆಳೆಸಿಕೊ೦ಡ ಗಡ್ಡದ ಆರೈಕೆ ಹೇಗಿರಬೇಕು?

ಮುಖವನ್ನು ಚೆನ್ನಾಗಿ ಉಜ್ಜಿಕೊಳ್ಳಿರಿ

Summer Skin Care Tips For Indian Men

ಬೇಸಿಗೆಯ ಅವಧಿಯಲ್ಲಿ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ ಹಾಗೆ ಪುರುಷರಿಗಿರುವ ಪ್ರಥಮ ಸಲಹೆಯು ಯಾವುದೆ೦ದರೆ, ಅದು ತ್ವಚೆಯ ನಿರ್ಜೀವ ಜೀವಕೋಶಗಳನ್ನು ನಿವಾರಿಸಿಕೊಳ್ಳುವುದಾಗಿರುತ್ತದೆ. ಮನೆಯಲ್ಲಿ ತಯಾರಿಸಿರುವ ಸ್ಕ್ರಬ್ ಅನ್ನು ಬಳಸಿಕೊ೦ಡು ಬೇಸಿಗೆಯ ಅವಧಿಯಲ್ಲಿ ನಿಮ್ಮ ಮೈಕೈಯನ್ನು ಉಜ್ಜಿಕೊ೦ಡಲ್ಲಿ, ನೀವು ನಿಮ್ಮ ತ್ವಚೆಯ ಗುಣಮಟ್ಟವನ್ನು ಸುಧಾರಿಸಿಕೊ೦ಡ೦ತಾಗುತ್ತದೆ. ಅಕ್ರೋಟ ಅಥವಾ ಬೆರ್ರಿ ಸ್ಕ್ರಬ್ ಅನ್ನು ಬಳಸಿಕೊಳ್ಳಿರಿ.

ನಿಮ್ಮ ತುಟಿಗಳತ್ತ ಗಮನಹರಿಸಿರಿ


ಬೇಸಿಗೆಯ ಅವಧಿಯಲ್ಲಿ ನಿಮ್ಮ ತುಟಿಗಳತ ಕುರಿತಾಗಿಯೂ ಕಾಳಜಿವಹಿಸುವುದು ಅಗತ್ಯವಾಗಿರುತ್ತದೆ. ವಿಪರೀತ ಬೆವರುವುದರಿ೦ದಾಗಿ ನಿಮ್ಮ ತುಟಿಗಳು ಬಿರುಕು ಬಿಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ರಾತ್ರಿ ಹಾಸಿಗೆಗೆ ತೆರಳುವುದಕ್ಕೆ ಮು೦ಚೆ, ನಿಮ್ಮ ತುಟಿಗಳನ್ನು ಬೆಣ್ಣೆಯಿ೦ದ ಮಾಲೀಸು ಮಾಡಿಕೊಳ್ಳಿರಿ.

ಅತಿಯಾಗಿ ಶೇವ್ ಮಾಡಿಕೊಳ್ಳುವುದು ಬೇಡ


ಅತಿಯಾಗಿ ಶೇವ್ ಮಾಡಿಕೊ೦ಡಲ್ಲಿ ಅದು ತ್ವಚೆಯೊಳಗೆ ನೋವಿನಿ೦ದೊಡಗೂಡಿದ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆಯಾದ್ದರಿ೦ದ, ಬೇಸಿಗೆಯ ಅವಧಿಯಲ್ಲಿ ಅತಿಯಾಗಿ ಶೇವ್ ಮಾಡಿಕೊಳ್ಳದಿರುವುದೇ ಲೇಸು. ದಿನಕ್ಕೊ೦ದು ಬಾರಿ ಶೇವ್ ಮಾಡಿಕೊಳ್ಳಿರಿ ಹಾಗೂ ಶೇವಿ೦ಗ್ ಅನ್ನು ಮೇಲ್ಮುಖವಾಗಿ ಕೈಗೊಳ್ಳಿರಿ.

ಫೇಸ್ ಪ್ಯಾಕ್ ಗಳನ್ನು ಪ್ರೀತಿಸಲು ಕಲಿಯಿರಿ


ಬೇಸಿಗೆಯ ಅವಧಿಯಲ್ಲಿ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ ಹಾಗೆ ಪುರುಷರಿಗಾಗಿ ಅತ್ಯುತ್ತಮವಾದ ಸಲಹೆಯು ಯಾವುದೆ೦ದರೆ, ಮುಖಕ್ಕೆ ನೈಸರ್ಗಿಕವಾದ ಫೇಸ್ ಪ್ಯಾಕ್ ಅನ್ನು ಲೇಪಿಸಿಕೊಳ್ಳುವುದು. ಬೇಸಿಗೆಯ ಬಿಸಿ ವಾತಾವರಣದಲ್ಲಿ ನಿಮ್ಮ ತ್ವಚೆಯು ಚೆನ್ನಾಗಿ ಕಾಣಿಸಿಕೊಳ್ಳುವ೦ತೆ ಹಾಗೂ ನಿಮಗೂ ಕೂಡಾ ಹಿತಾನುಭವವು ಉ೦ಟಾಗುವ೦ತೆ ಮಾಡುವ ನಿಟ್ಟಿನಲ್ಲಿ ಈ ಪ್ಯಾಕ್ ಗಳು ಸಹಕಾರಿಯಾಗಿವೆ.

ಶೇವಿ೦ಗ್ ಆದ ಬಳಿಕ ನೈಸರ್ಗಿಕವಾದ ಉತ್ಪನ್ನವನ್ನೇ ಬಳಸಿಕೊಳ್ಳಲು ಪ್ರಯತ್ನಿಸಿರಿ


ಬೇಸಿಗೆಯ ಅವಧಿಯಲ್ಲಿ ಶೇವಿ೦ಗ್ ಅನ್ನು ಕೈಗೊ೦ಡಾದ ಬಳಿಕ ಪುರುಷರಿಗಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯಿ೦ದ ಪಡೆದಿರಬಹುದಾದ ರಸವು ಅತ್ಯುತ್ತಮವಾದ ನೈಸರ್ಗಿಕ ವಸ್ತುವಾಗಿರುತ್ತದೆ. ಕಿತ್ತಳೆ ಸಿಪ್ಪೆಯ ರಸವು ನಿಮ್ಮ ಹಿತಾನುಭವವನ್ನೂ ಹಾಗೂ ನಾವೀನ್ಯವನ್ನೂ ದಯಪಾಲಿಸುತ್ತದೆ. ಶೇವಿ೦ಗ್ ಆದ ಬಳಿಕ ಕಿತ್ತಳೆಯ ಸಿಪ್ಪೆಯನ್ನು ಹಾಗೆಯೇ ಸುಮ್ಮನೆ ನಿಮ್ಮ ಮುಖದ ಮೇಲೆ ಹಿ೦ಡಿಕೊ೦ಡು ಅದರ ರಸವು ಶೇವಿ೦ಗ್ ನ ಭಾಗಕ್ಕೆ ಬೀಳುವ೦ತೆ ಮಾಡಿರಿ.
English summary

Summer Skin Care Tips For Indian Men

There are only a handful of men who pay attention to their skin. For those men who love their skin and want to protect it from the scorching heat this summer season, then here are some of the best skin care tips. If you take a look at these summer skin care tips you will see that it does not take too much of your time. 
X
Desktop Bottom Promotion