For Quick Alerts
ALLOW NOTIFICATIONS  
For Daily Alerts

ಪುರುಷರ ಕೂದಲಿನ ಸಮಸ್ಯೆಗೆ ಇಲ್ಲಿದೆ ನೋಡಿ ನೈಸರ್ಗಿಕ ವರದಾನ!

|

ಬಹುತೇಕ ಪುರುಷರು ತ್ವಚೆ, ದೇಹ ಮತ್ತು ಕೂದಲಿನ ಬಗ್ಗೆ ಕಾಳಜಿವಹಿಸುವುದು ಗಂಡಸರ ಲಕ್ಷಣವಲ್ಲ ಎಂದು ಭಾವಿಸುತ್ತಾರೆ.ಸೌಂದರ್ಯ ಎಂಬುದು ಗಂಡು ಮತ್ತು ಹೆಣ್ಣು ಎಂಬ ಭೇದ ಭಾವವಿಲ್ಲದೆ ಒಪ್ಪಿಕೊಳ್ಳಬೇಕಾದ ಒಂದು ಅಂಶವಾಗಿದೆ. ಯಾರೇ ಸುಂದರವಾಗಿದ್ದರು, ಅವರು ತಮ್ಮ ಆಕರ್ಷಣೆಯನ್ನು ಪಡೆದೆ ತೀರುತ್ತಾರೆ. ಆದ್ದರಿಂದ ಇದರ ಕುರಿತು ಸ್ವಲ್ಪ ಕಾಳಜಿವಹಿಸಬೇಕಾದುದು ಅತ್ಯಗತ್ಯ.

ಗಂಡಸರು ತಮ್ಮ ಚಿಕ್ಕ ವಯಸ್ಸಿನಲ್ಲಿ ಇವುಗಳ ಬಗ್ಗೆ ಕಾಳಜಿವಹಿಸಿದರೆ ಮುಂದೆ ಉತ್ತಮ ಲಾಭವನ್ನು ಪಡೆಯಬಹುದು. ಏಕೆಂದರೆ ಮಹಿಳೆಯರಿಗೆ ಹೋಲಿಸಿದರೆ, ಗಂಡಸರು ಪರಿಸರ ಮಾಲಿನ್ಯ ಅಂದರೆ ಧೂಳು, ಬಿಸಿಲು ಮತ್ತು ಗಾಳಿಗೆ ಹೆಚ್ಚಾಗಿ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಇದರಿಂದ ಅವರಲ್ಲಿ ಕೂದಲು ಉದುರುವಿಕೆ, ತಲೆಹೊಟ್ಟು, ಬಕ್ಕ ತಲೆ ಮುಂತಾದ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತವೆ. ಮುಂದೆ ಇವು ನಿಮ್ಮ ನಿತ್ಯದ ಸಂಗಾತಿಗಳಾಗಿ ಬಿಡುವ ಸಾಧ್ಯತೆಯು ಉಂಟು.

ನಿಮಗೆ ಎಷ್ಟು ವಯಸ್ಸಾಗಿದ್ದರು ಪರವಾಗಿಲ್ಲ, ನಿಮ್ಮ ಕೂದಲಿನ ರಕ್ಷಣೆಗೆ ಒಂದು ಹೇರ್ ಪ್ಯಾಕ್ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಅದಕ್ಕಾಗಿ ನಾವು ಇಂದು ಪುರುಷರಿಗಾಗಿ ಸೂಕ್ತವಾದ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಪ್ಯಾಕ್‍ಗಳು ಯಾವುದೇ ರೀತಿಯ ದುಷ್ಪರಿಣಾಮವನ್ನು ಬೀರುವುದಿಲ್ಲ.

ಉದಾಹರಣೆಗೆ: ಒಂದು ವೇಳೆ ನಿಮಗೆ ಜಿಡ್ಡಿನಿಂದ ಕೂಡಿದ ಕೂದಲು ಇದ್ದಲ್ಲಿ, ಮೊಟ್ಟೆಯ ಬಿಳಿ ಭಾಗವನ್ನು ಬಳಸಿ. ಆದರೆ ಒಣ ಅಥವಾ ಸಿಕ್ಕು ಸಿಕ್ಕಾದ ಕೂದಲು ಇದ್ದಲ್ಲಿ ಮೊಟ್ಟೆಯ ಹಳದಿ ಭಾಗವನ್ನು ಬಳಸಿದರೆ ಒಳ್ಳೆಯದು. ಹೀಗೆ ಸುಮ್ಮನೆ ನಿಮ್ಮ ಕೂದಲಿನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಅಥವಾ ದುಬಾರಿ ಹೇರ್ ಪ್ಯಾಕ್‍ಗಳನ್ನು ಕೊಳ್ಳುವ ಬದಲಿಗೆ ಈ ಹೇರ್ ಪ್ಯಾಕ್‍ಗಳನ್ನು ಪ್ರಯೋಗಿಸಿ ನೋಡಿ. ಒಳ್ಳೆಯ ಫಲಿತಾಂಶಗಳನ್ನು ಕಾಣಬಹುದು. ಪುರುಷರಿಗಾಗಿ ಹೇಳಿ ಮಾಡಿಸಿದ ಟಾಪ್ ಬ್ಯೂಟಿ ಟಿಪ್ಸ್

ಬಾಳೆಹಣ್ಣಿನ ಹೇರ್ ಪ್ಯಾಕ್

 Home Made Hair Packs For Men

ನಿಮ್ಮ ಕೂದಲು ಒರಟಾಗಿ, ಸಿಕ್ಕು ಸಿಕ್ಕು ಆಗಿದೆಯೇ? ಹಾಗಾದರೆ ನೀವು ಒಣ ಕೂದಲನ್ನು ಹೊಂದಿರುತ್ತೀರಿ. ಬಾಳೆಹಣ್ಣು ಪುರುಷರ ಕೂದಲಿಗೆ ಉತ್ತಮವಾದ ಪದಾರ್ಥವಾಗಿರುತ್ತದೆ. ಇದಕ್ಕಾಗಿ ಬಾಳೆಹಣ್ಣನ್ನು 1 ಟೀ.ಚಮಚ ಜೇನು ತುಪ್ಪ ಮತ್ತು ನಿಂಬೆರಸದ ಜೊತೆಗೆ ಬೆರೆಸಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ. ನಂತರ ಒಂದು ಮೈಲ್ಡ್ ಶಾಂಪೂವಿನಿಂದ ಇದನ್ನು ತೊಳೆಯಿರಿ.

ಎಗ್ ಪ್ಯಾಕ್


ಮೊಟ್ಟೆಯು ಯಾವ ಕೂದಲಿಗಾದರು ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ. ಒಂದು ವೇಳೆ ನಿಮ್ಮದು ಒಣ ಕೂದಲಾಗಿದ್ದಲ್ಲಿ, ಮೊಟ್ಟೆಯ ಹಳದಿ ಭಾಗವನ್ನು ತೆಗೆದುಕೊಳ್ಳಿ. ಅದಕ್ಕೆ ತಲಾ ಒಂದು ಟೇಬಲ್ ಚಮಚ ಜೇನು ತುಪ್ಪ, ಲಿಂಬೆರಸ ಮತ್ತು ಆಲೀವ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಇವುಗಳ ಮಿಶ್ರಣವನ್ನು ಚೆನ್ನಾಗಿ ಕಲೆಸಿಕೊಳ್ಳಿ, ನಂತರ ಅದನ್ನು ಕೂದಲಿಗೆ ಲೇಪಿಸಿ. 20 ನಿಮಿಷ ಬಿಟ್ಟು ಇದನ್ನು ತೊಳೆಯಿರಿ.

ಮೆಂತ್ಯೆ ಮ್ಯಾಜಿಕ್
ನಿಮ್ಮ ಕೂದಲನ್ನು ಹೊಳಪಿನಿಂದ ಕೂಡಿರುವಂತೆ ಮಾಡಬೇಕೆ ಅಥವಾ ಮೃದುವಾಗಿಸಬೇಕೆ. ಅದಕ್ಕಾಗಿ ಅಂಗಡಿಗೆ ತೆರಳುವ ಅಗತ್ಯವಿಲ್ಲ, ನಿಮ್ಮ ಮನೆಯಲ್ಲಿರುವ ಮೆಂತ್ಯೆಕಾಳುಗಳನ್ನು ರಾತ್ರಿಯೆಲ್ಲ ನೆನೆಸಿ ಇಡಿ. ಬೆಳಗ್ಗೆ ಇದರ ಪೇಸ್ಟ್ ತಯಾರಿಸಿಕೊಂಡು, ಆ ಪೇಸ್ಟ್‌ನ ಅರ್ಧ ಪ್ರಮಾಣದಷ್ಟು ಮೊಸರನ್ನು ಬೆರೆಸಿಕೊಂಡು ಕೂದಲಿಗೆ ಹಚ್ಚಿ. ಇದು ಒಣಗುವವರೆಗೆ ಬಿಡಿ. ನಂತರ ಒಂದು ಮೈಲ್ಡ್ ಶಾಂಪೂವಿನಿಂದ ಇದನ್ನು ತೊಳೆಯಿರಿ. ಇಷ್ಟಪಟ್ಟು ಬಲು ಕಷ್ಟದಿ೦ದ ಬೆಳೆಸಿಕೊ೦ಡ ಗಡ್ಡದ ಆರೈಕೆ ಹೇಗಿರಬೇಕು?

ಮೆಹಂದಿಯಿಂದ ಬಣ್ಣ


ಒಂದು ವೇಳೆ ನೀವು ರಾಸಾಯನಿಕದ ಬಣ್ಣವನ್ನು ಬಳಸುತ್ತಿದ್ದಲ್ಲಿ, ನಿಮ್ಮ ಕೂದಲು ಮತ್ತು ಕೂದಲಿನ ಬುಡಗಳು ಹಾನಿಗೊಳಗಾಗುತ್ತವೆ. ಇದಕ್ಕಾಗಿ ಮೆಹಂದಿಯ ಪ್ಯಾಕ್ ಬಳಸಬಹುದು. ಮೆಹಂದಿ ಮತ್ತು ಆಮ್ಲಾ ( ಬೆಟ್ಟದ ನೆಲ್ಲಿಕಾಯಿ) ಪೇಸ್ಟ್ ತಯಾರಿಸಿಕೊಳ್ಳಿ, ಇದಕ್ಕೆ 2 ಟೀ.ಚಮಚ ಹಾಲನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಲೇಪಿಸಿ ಮತ್ತು 1 ಗಂಟೆ ಬಿಟ್ಟು ಸ್ನಾನ ಮಾಡಿ.
English summary

Home Made Hair Packs For Men

There are many men who think that taking care of skin, hair and body is completely something that effeminate matters. But, it is always good to take care of your hair and skin from that early age. As you have to spend maximum time outside, the dirt and pollution damages your hair and problems like hair fall
Story first published: Tuesday, April 14, 2015, 14:05 [IST]
X
Desktop Bottom Promotion