For Quick Alerts
ALLOW NOTIFICATIONS  
For Daily Alerts

ಪುರುಷರ ಚರ್ಮದ ಬಗ್ಗೆ ತಜ್ಞರು ಏನು ಸಲಹೆ ನೀಡುತ್ತಾರೆ?

By Super
|

ಸಿಂಗಾರ ಏನಿದ್ದರೂ ಹೆಂಗಸರಿಗೆ, ಗಂಡಸರಾದ ನಮಗೆ ಪೌಡರ್ ಏತಕೆ ಎಂದು ಹೇಳುವ ಕಾಲ ಎಂದೋ ಕಳೆದು ಹೋಗಿದೆ. ಇಂದು ಮಹಿಳೆಯರಷ್ಟೇ ಪುರುಷರೂ ತಮ್ಮ ಸೌಂದರ್ಯಕ್ಕೆ, ಆರೋಗ್ಯ ಮತ್ತು ಆರೈಕೆಗೆ ಕಾಳಜಿ ವಹಿಸುತ್ತಿದ್ದಾರೆ. ನಮ್ಮ ದೇಹದ ಅತಿ ವಿಸ್ತಾರವಾದ ಮತ್ತು ಹೊರಜಗತ್ತಿಗೆ ತೆರೆದಿರುವ ಅಂಗವಾದ ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿದೆ.

ಪುರುಷರಿಗೂ ಇಂದು ಚರ್ಮದ ಆರೈಕೆಯಲ್ಲಿ ಹಲವು ಸೇವೆಗಳು ಲಭ್ಯವಿದ್ದು ಇವುಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ಯಾವುದೇ ಸಂಕೋಚಪಟ್ಟುಕೊಳ್ಳದಿರಲು ಚರ್ಮತಜ್ಞರು ಸಲಹೆ ಮಾಡುತ್ತಾರೆ. ಮಹಿಳೆಯರ ಚರ್ಮಕ್ಕೂ ಪುರುಷರ ಚರ್ಮಕ್ಕೂ ಕೆಲವು ವ್ಯತ್ಯಾಸಗಳಿವೆ. ಮುಖ್ಯವಾಗಿ ಮುಖದ ಕೂದಲು.

ಆದ್ದರಿಂದ ಪುರುಷರ ಮತ್ತು ಮಹಿಳೆಯರ ಸೌಂದರ್ಯ ಪ್ರಸಾಧನಗಳೂ ಬೇರೆಬೇರೆಯಾಗಿವೆ.ಪುರುಷರ ಚರ್ಮ ಕೊಂಚ ಗಡಸು ಮತ್ತು ದಪ್ಪನಾಗಿರುವ ಕಾರಣ ಮಹಿಳೆಯರ ಚರ್ಮದ ಪ್ರಸಾಧನಗಳು ಸಮರ್ಥವಾಗಿ ಕೆಲಸ ಮಾಡುವುದಿಲ್ಲ. ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!

ಆದರೆ ಪುರುಷರಿಗಾಗಿಯೇ ಇರುವ ಪ್ರಸಾಧನಗಳ ಸರಿಯಾದ ಮತ್ತು ನಿಯಮಿತ ಬಳಕೆಯಿಂದ ಪುರುಷರ ಚರ್ಮವೂ ಮೃದು ಮತ್ತು ಕಾಂತಿಯುತವಾಗಲು ಸಾಧ್ಯ. ಈ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

65% ಪುರುಷರ ಚರ್ಮ ಸೂಕ್ಷ್ಮ ಸಂವೇದಿಯಾಗಿದೆ

65% ಪುರುಷರ ಚರ್ಮ ಸೂಕ್ಷ್ಮ ಸಂವೇದಿಯಾಗಿದೆ

ಗಡ್ಡಬಿಟ್ಟವರ ಚರ್ಮ ಗಡಸು ಎಂದು ಭಾವಿಸುವ ಕಾಲವೊಂದಿತ್ತು. ಆದರೆ ಒಂದು ಸಂಶೋಧನೆಯ ಪ್ರಕಾರ 65% ಪುರುಷರ ಚರ್ಮ ಸೂಕ್ಷ್ಮ ಸಂವೇದಿಯಾಗಿದ್ದು ಸೂಕ್ತ ಪ್ರಸಾಧನಗಳ ಮತ್ತು ಆರೈಕೆಯ ಅಗತ್ಯವಿದೆ.

ಬಿಸಿಲಿಗೆ ಪುರುಷರ ಚರ್ಮವೂ ಘಾಸಿಗೊಳ್ಳುತ್ತದೆ

ಬಿಸಿಲಿಗೆ ಪುರುಷರ ಚರ್ಮವೂ ಘಾಸಿಗೊಳ್ಳುತ್ತದೆ

ಬಿಸಿಲಿನಲ್ಲಿ ಹೋಗುವಾಗ ಮಹಿಳೆಯರು ಕೊಡೆ ಹಿಡಿದುಕೊಂಡು ಹೋದರೆ ಪುರುಷರು ಯಾವುದೇ ರಕ್ಷಣೆಯಿಲ್ಲದೇ ನಡೆಯುವುದಕ್ಕೆ ನಮ್ಮ ಪೂರ್ವಾಗ್ರಹ ನಂಬಿಕೆಯೇ ಕಾರಣವಾಗಿದೆ. ಎಂದರೆ ಬಿಸಿಲಿಗೆ ಪುರುಷರ ಚರ್ಮ ಹಾಳಾಗುವುದಿಲ್ಲ ಎಂಬುದು. ಆದರೆ ವಾಸ್ತವವಾಗಿ ಮಹಿಳೆಯರ ಚರ್ಮದಷ್ಟು ಅಲ್ಲದಿದ್ದರೂ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಪುರುಷರ ಚರ್ಮವನ್ನೂ ಘಾಸಿಗೊಳಿಸಬಲ್ಲದು. ಇದೇ ಕಾರಣಕ್ಕೆ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಸಾದನಗಳಲ್ಲಿ ಸನ್ ಸ್ಕ್ರೀನ್, ಬಿಬಿ ಕ್ರೀಂ ಗಳೂ ಪ್ರಮುಖವಾಗಿ ಮಾರಾಟವಾಗುತ್ತಿದೆ.

56% ಪುರುಷರ ಚರ್ಮ ಒಣಗಿರುತ್ತದೆ

56% ಪುರುಷರ ಚರ್ಮ ಒಣಗಿರುತ್ತದೆ

ಒಂದು ಸಂಶೋಧನೆಯ ಪ್ರಕಾರ 56% ಪುರುಷರ ಚರ್ಮ ಆರ್ದ್ರತೆಯಿಲ್ಲದೇ ಒಣಗಿರುತ್ತದೆ. ಗಾಳಿಯಲ್ಲಿ ಆರ್ದ್ರತೆಯ ಕೊರತೆಯೇ ಇದಕ್ಕೆ ಕಾರಣ. ಇದನ್ನು ಸರಿಪಡಿಸಲು ಆರ್ದ್ರತೆ ನೀಡುವ ಕ್ರೀಂ (moisturiser) ಹೆಚ್ಚಿಕೊಳ್ಳುವುದು ಅಗತ್ಯವಾಗಿದೆ.

ಚರ್ಮದ ಸ್ವಚ್ಟತೆ, ಆರೈಕೆಗೆ ಆದ್ಯತೆ ನೀಡಿ

ಚರ್ಮದ ಸ್ವಚ್ಟತೆ, ಆರೈಕೆಗೆ ಆದ್ಯತೆ ನೀಡಿ

ಚರ್ಮದ ಆರೈಕೆಯಲ್ಲಿ ಸೋಮಾರಿತನ ವಹಿಸುವವರ ಚರ್ಮ ಕಾಂತಿರಹಿತವಾಗಿದ್ದು ಸಾಮಾನ್ಯಕ್ಕಿಂತಲೂ ಹೆಚ್ಚು ಕೃಷ್ಣವರ್ಣ ಪಡೆದಿರುತ್ತದೆ. ಆದ್ದರಿಂದ ನಿತ್ಯವೂ ಸ್ವಚ್ಟತೆ, ರಕ್ಷಣೆ ಮತ್ತು ಆರೈಕೆಗಳನ್ನು ಪಾಲಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ಒರಟು ಶೇವ್ ಚರ್ಮವನ್ನು ಘಾಸಿಗೊಳಿಸಬಹುದು

ಒರಟು ಶೇವ್ ಚರ್ಮವನ್ನು ಘಾಸಿಗೊಳಿಸಬಹುದು

ಶೇವ್ ಮಾಡಲು ಉಪಯೋಗಿಸುವ ಬ್ಲೇಡ್ ಬಳಸುವ ಒಂದು ಮಿತಿ ಇದೆ. ಇದಕ್ಕೂ ಹೆಚ್ಚಿನ ಬಾರಿ ಬಳಸಿದರೆ ಅಥವಾ ಕೂದಲು ಬೆಳೆಯುವ ದಿಕ್ಕಿಗೆ ವಿರುದ್ದವಾಗಿ ಗಡ್ಡ ಹೆರೆಯುವ ಮೂಲಕ ಚರ್ಮವನ್ನೂ ಕೂದಲ ಬುಡಗಳನ್ನೂ ಘಾಸಿಗೊಳಿಸಿ ಹಲವು ತೊಂದರೆಗಳನ್ನು ಹುಟ್ಟುಹಾಕಬಹುದು.

79% ಜನರು ಸನ್ ಸ್ಕ್ರೀನ್ ಬಳಸುವುದೇ ಇಲ್ಲ

79% ಜನರು ಸನ್ ಸ್ಕ್ರೀನ್ ಬಳಸುವುದೇ ಇಲ್ಲ

ಒಂದು ಸಮೇಕ್ಷೆಯ ಪ್ರಕಾರ 79% ಜನರು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವಾಗ ಅಗತ್ಯವಾಗಿರುವ ಸನ್ ಸ್ರ್ಕೀನ್ ಲೇಪನವನ್ನು ಉಪಯೋಗಿಸುವುದೇ ಇಲ್ಲ. ಇದರಿಂದ ಚರ್ಮ ಅತಿ ಹೆಚ್ಚು ಕಪ್ಪಗಾಗುವುದು. ಕಣ್ಣುಗಳ ಕೆಳಗೆ ಕಪ್ಪುವರ್ತುಲ ನಿರ್ಮಾಣವಾಗುವುದು, ಕಣ್ಣುಗಳ ಕೆಳಗೆ ಚೀಲಗಳಂತೆ ಚರ್ಮ ಉಬ್ಬಿಕೊಳ್ಳುವುದು, ನೆರಿಗೆಗಳು ಚಿಕ್ಕ ಪ್ರಾಯದಲ್ಲಿಯೇ ಮೂಡುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಗಡ್ಡ ಇತರ ಭಾಗದ ಕೂದಲುಗಳಿಗಿಂತ 999% (ಸಾವಿರ ಪಟ್ಟು ಹೆಚ್ಚು ಗಡಸು)

ಗಡ್ಡ ಇತರ ಭಾಗದ ಕೂದಲುಗಳಿಗಿಂತ 999% (ಸಾವಿರ ಪಟ್ಟು ಹೆಚ್ಚು ಗಡಸು)

ಮುಖದ ಗಡ್ಡದ ಕೂದಲು ದೇಹದ ಇತರ ಭಾಗದ ಕೂದಲುಗಳಿಗಿಂತ ಸಾವಿರ ಪಟ್ಟು ಹೆಚ್ಚು ಗಡಸಾಗಿರುತ್ತವೆ. ಇದೇ ಕಾರಣಕ್ಕೆ ಗಡ್ಡ ಹೆರೆಯುವ ಬ್ಲೇಡ್ ಮೂರು ನಾಲ್ಕು ಬಾರಿ ಉಪಯೋಗಿಸಿದ ಬಳಿಕ ಮೊಂಡಾಗುತ್ತದೆ. ಈ ಗಡಸು ಕೂದಲನ್ನು ಮೃದುಗೊಳಿಸಲು ಕಂಡೀಶನರ್ ಅಗತ್ಯವಾಗಿದೆ.

English summary

7 Facts About Men's Skin

Most of the men lack any interest in following any particular routine to maintain healthy skin. In fact, skin is skin and it needs the attention that it rightfully deserves whether it is a man or a woman. So, skin experts suggest that men don't need to shy away from using men's skin products that help a bit in protecting the skin.
Story first published: Friday, July 31, 2015, 12:54 [IST]
X
Desktop Bottom Promotion