For Quick Alerts
ALLOW NOTIFICATIONS  
For Daily Alerts

ಪುರುಷರ ಕಾಲುಗಳ ಕಾಳಜಿಗೆ ಇಲ್ಲಿದೆ ಸುಲಭ ಉಪಾಯ!

|

ಕೈ ಕಾಲುಗಳು ಸ್ವಚ್ಛವಾಗಿ ಆಕರ್ಷಕವಾಗಿದ್ದರೆ ನಿಮ್ಮ ವ್ಯಕ್ತಿತ್ವಕ್ಕೆ ಒಂದು ಮೆರಗು ಸಿಗುವುದು. ದೈನಂದಿನ ಪ್ರತಿನಿತ್ಯದ ಜಂಜಾಟದಲ್ಲಿ ಓಡಾಟ ಮತ್ತು ನಡೆದಾಟದಿಂದಾಗಿ ಕಾಲಿನ ಮೇಲೆ ಅದೆಷ್ಟೋ ಒತ್ತಡಗಳು ಬೀಳುತ್ತಿರುತ್ತವೆ.

ನಿಮ್ಮ ಜೀವನಶೈಲಿಗೆ ಅನುಗುಣವಾಗಿ ನಿಮ್ಮ ಕಾಲುಗಳು ವಿವಿಧ ರೀತಿಯ ಒತ್ತಡಗಳಿಗೆ ಬೀಳುತ್ತವೆ ಹಾಗೂ ವಿವಿಧ ರೀತಿಯ ಕೆಲಸಗಳನ್ನು ಮಾಡಬೇಕಾಗುತ್ತದೆ. ನಿಮ್ಮ ದೇಹದ ಇತರ ಭಾಗಗಳಿಗೆ ಮಾಡಿದಂತೆ ಅಥವಾ ಅದಕ್ಕೂ ಹೆಚ್ಚಿನ ಕಾಳಜಿಯನ್ನು ನೀವು ನಿಮ್ಮ ಕಾಲುಗಳಿಗೆ ನೀಡಬೇಕಾಗುತ್ತದೆ.

ಕಾಲಿನ ಬಹುಮುಖ್ಯ ಭಾಗವಾದ ಉಗುರುಗಳನ್ನೂ ನೀವು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು. ಅದರಲ್ಲೂ ಪುರುಷರು ಹೆಚ್ಚು ಹೊರಗಿನ ಕೆಲಸಗಳನ್ನು ಮಾಡುವುದರಿಂದ ಅವರು ಬಹಳ ಕಾಳಜಿ ವಹಿಸಬೇಕಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೀಟಾದ ಶೇವಿಂಗ್ ನ ಹತ್ತು ಹಂತಗಳು

ಸ್ವಚ್ಛತೆ:

ಸ್ವಚ್ಛತೆ:

ಕಾಲಿನ ಸ್ವಚ್ಛತೆಗೆ ಗಮನ ಹರಿಸುವುದು ಅತ್ಯವಶ್ಯಕ. ಪ್ರತಿ ದಿನ ಸ್ನಾನ ಮಾಡುವಾಗ ಸ್ವಚ್ಛಗೊಳಿಸುವ ಜೊತೆಗೆ ಇತರ ಅವಧಿಯಲ್ಲೂ ಕಾಲುಗಳು ಸ್ವಚ್ಛವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಾಲನ್ನು ತೊಳೆಯುವಾಗ ಹಿಮ್ಮಡಿಗಳನ್ನೂ ಸರಿಯಾಗಿ ತೊಳೆಯಲು ಮರೆಯದಿರಿ. ಬೆರಳುಗಳ ನಡುವೆ ಮತ್ತು ಉಗುರುಗಳ ಬಳಿಯಲ್ಲೂ ಸರಿಯಾಗಿ ಸ್ವಚ್ಛ ಮಾಡಿ.

ಪೆಡಿಕ್ಯೂರ್:

ಪೆಡಿಕ್ಯೂರ್:

ಪೆಡಿಕ್ಯೂರ್ ಎಂದಾಕ್ಷಣ ಇದು ಮಹಿಳೆಯರಿಗೆ ಸಂಬಂಧ ಪಟ್ಟ ವಿಷಯ ಎಂದು ನಿಮಗೆ ಅನಿಸಬಹುದು!. ಆದರೆ ನಿಮ್ಮ ಕಾಲಿಗೆ ಸಾಧ್ಯವಾದಷ್ಟು ಪೆಡಿಕ್ಯೂರ್ ಮಾಡಿಸಿಕೊಳ್ಳಿ. ಉಗುರನ್ನು ಕತ್ತರಿಸಿ. ಅದಕ್ಕೊಂದು ಚೆಂದದ ಶೇಪ್ ಕೊಡಿ. ಕಾಲನ್ನು ತೊಳೆದು ಟವಲ್ ನಿಂದ ಒರೆಸಿಕೊಳ್ಳುವುದನ್ನು ಮರೆಯದಿರಿ. ಆದಷ್ಟು ನಿಮ್ಮ ಕಾಲಿನ ಒಣಗಿದ ಹಾಗೂ ಸಿಪ್ಪೆಯೆದ್ದ ಚರ್ಮವನ್ನು ತೆಗೆದು ಹೊಸ ಚರ್ಮ ಬರಲು ದಾರಿ ಮಾಡಿಕೊಡಿ. ಕಾಲಿನ ಉಗುರುಗಳನ್ನು ಸಾಧ್ಯವಾದಷ್ಟು ಸಣ್ಣದಾಗಿ ಇಟ್ಟುಕೊಳ್ಳಿ. ಹಿಮ್ಮಡಿಗಳಿಗೆ ಹಾಗೂ ಬದಿಗಳಿಗೆ ತೇವಾಂಶಕಾರಕ ಕ್ರೀಮ್‌ಗಳನ್ನು ಹಚ್ಚಿಕೊಳ್ಳಿ.

ಮಾಯಿಶ್ಚರೈಸರ್ ಬಳಸಿ:

ಮಾಯಿಶ್ಚರೈಸರ್ ಬಳಸಿ:

ಪ್ರತಿನಿತ್ಯ ಸ್ನಾನವಾದ ಬಳಿಕ ನಿಮ್ಮ ಕಾಲಿಗೆ ಮಾಯಿಶ್ಚರೈಸರ್ ಹಚ್ಚಿ, ಪೆಟ್ರೋಲಿಯಂ ಜೆಲ್ಲಿ ಹಾಗೂ ಇತರೆ ಕ್ರೀಮಗಳನ್ನು ಕಾಲಿಗೆ ಬಳಸುವುದು ಸೂಕ್ತ.

 ಸೂಕ್ತವಾಗಿರುವ ಪಾದರಕ್ಷೆಗಳನ್ನು ಧರಿಸಿ:

ಸೂಕ್ತವಾಗಿರುವ ಪಾದರಕ್ಷೆಗಳನ್ನು ಧರಿಸಿ:

ಆದಷ್ಟು ಶೂ ಗಳು ಅಥವಾ ಕೆಲವವೊಂಡು ಸೆಂಡಲ್‌ಗಳನ್ನು ಧರಿಸಿ. ನಿಮ್ಮ ಕಾಲನ್ನು ಇಡಿಯಾಗಿ ಆವರಿಸುವ ಪಾದರಕ್ಷೆಗಳನ್ನು ಧರಿಸಲು ಅಭ್ಯಾಸ ಮಾಡಿ. ಇದರಿಂದಾಗಿ ಹೆಚ್ಚಿನ ಬಿಸಿ ಕಾಲಿಗೆ ತಾಗುವುದಿಲ್ಲ. ಸ್ವಚ್ಛವಾಗಿ ತೊಳೆದ ಸಾಕ್ಸ್‌ಗಳು ಹಾಗೂ ಶೂಗಳ ಒಳಭಾಗಗಳನ್ನು ಖಾತರಿ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಕಾಲುಗಳು ಯಾವುದೇ ಇತರೆ ತೊಂದರೆಗಳಿಗೆ ಒಳಗಾಗುವುದಿಲ್ಲ.

ಮಸಾಜ್:

ಮಸಾಜ್:

ನಿಮ್ಮ ಕಾಲು ಸಾಕಷ್ಟು ಒತ್ತಡಗಳನ್ನು ಸಹಿಸಿಕೊಳ್ಳುತ್ತದೆ. ನಿಮ್ಮ ಭಾರದಿಂದ ಹಿಡಿದು ಮತ್ತೆಷ್ಟೋ ಒತ್ತಡಗಳು ಅದರ ಮೇಲಿರುತ್ತವೆ. ಹಾಗಾಗಿ ನಿಯಮಿತವಾಗಿ ಮಸಾಜ್ ಮಾಡಲು ಮರೆಯದಿರಿ. ಹಾಗಾಗಿ ಇಲ್ಲಿ ಸರಿಯಾದ ಮಸಾಜ್ ಮಾಡುವುದು ಬಹಳ ಅಗತ್ಯ.


English summary

Foot care tips for men

One of the most abused and used part of your body, your feet, needs to be cared for and protected to sustain it for your old age. With walking and running on a daily basis, there will be a lot of wear and tear that would show on your feet. 
Story first published: Thursday, April 10, 2014, 10:59 [IST]
X
Desktop Bottom Promotion