For Quick Alerts
ALLOW NOTIFICATIONS  
For Daily Alerts

ಕೃತಕ ಆಭರಣಗಳನ್ನು ಈ ರೀತಿ ಸಂಗ್ರಹಿಸಿಟ್ಟುಕೊಂಡರೆ ದೀರ್ಘಕಾಲದವರೆಗೂ ಶೈನ್‌ ಆಗಿರುತ್ತೆ..!

|

ಇತ್ತೀಚೆಗೆ ಚಿನ್ನದ ಆಭರಣಗಳಿಗಿಂತ ಹೆಚ್ಚು ಕೃತಕ ಫ್ಯಾನ್ಸಿ ಆಭರಣಗಳತ್ತ ಹೆಣ್ಣು ಮಕ್ಕಳು, ಮಹಿಳೆಯರು ಆಕರ್ಷಿತರಾಗುವುದು ಹೆಚ್ಚು. ಖರ್ಚೂ ಕಡಿಮೆ ಜೊತೆಗೆ ವಿವಿಧ ಡಿಸೈನ್‌ ಮಾತ್ರವಲ್ಲ ಎಲ್ಲಾ ಥರದ ಡ್ರೆಸ್‌ಗಳಿಗೂ ಒಪ್ಪುವಂತಹ ನಾನಾ ವಿಧದ ಆಭರಣಗಳು ಕೈಗೆಟಕುವಂತಹ ದರದಲ್ಲಿ ಸಿಗುತ್ತೆ. ಬಳೆ, ನೆಕ್ಲೇಸ್‌, ಕಿವಿಯೋಲೆಗಳ ಸೆಟ್‌ಗಳು ಸಂದರ್ಭಕ್ಕನುಸಾರ ಧರಿಸುವ ಕಾರಣದಿಂದ ಕೆಲವೊಮ್ಮೆ ಹೊಳಪು ಕಳೆದುಕೊಂಡು ಬಿಡುತ್ತವೆ. ಹಾಗಾಗಿ ಕೃತಕ ಆಭರಣಗಳನ್ನು ಕೊಂಚ ಜಾಗರೂಕತೆಯಿಂದ ನೋಡಿಕೊಂಡರೆ ದೀರ್ಘಕಾಲದವರೆಗೂ ಹೊಳಪು ಕಳೆದುಕೊಳ್ಳದಂತೆ ಮಾಡಬಹುದು. ಹಾಗಾದರೆ ಕೃತಕ ಆಭರಣಗಳನ್ನು ಹೇಗೆ ತೊಳೆಯುವುದು, ಹೇಗೆ ತೆಗೆದಿರಿಸಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ರಾಸಾಯನಿಕಗಳಿಂದ ದೂರವಿಡಿ

ರಾಸಾಯನಿಕಗಳಿಂದ ದೂರವಿಡಿ

ಎಲ್ಲಾ ರೀತಿಯ ಕೃತಕ ಆಭರಣಗಳನ್ನು ರಾಸಾಯನಿಕಗಳಿಗೆ ಒಡ್ಡಿದರೆ ಅದು ಬಣ್ಣ ಕಳೆದುಕೊಳ್ಳಬಹುದು ಮತ್ತು ಅದರ ಬಾಳಿಕೆಯೂ ಕಡಿಮೆಯಾಗಬಹುದು. ನೀವು ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕವನ್ನು ಬಳಸಿದರೂ ಕೂಡಾ ಅದು ಕೃತಕ ಆಭರಣಕ್ಕೆ ಹಾನಿಯುಂಟು ಮಾಡುತ್ತೆ. ರಾಸಾಯನಿಕವೆಂದರೆ ಆಭರಣಗಳನ್ನು ತೊಳೆಯಲು ಬಳಸುವ ದ್ರವಗಳು ಮಾತ್ರವಲ್ಲ. ನೀವು ದಿನಾ ಬಳಸುವ ಸುಗಂಧದ್ರವ್ಯ, ಹೇರ್‌ಸ್ಪ್ರೇ, ಸೀರಮ್‌ ಮತ್ತು ಇತರ ಸೌಂದರ್ಯವರ್ಧಕಗಳು ಕೆಲವೊಂದು ರಾಸಾಯನಿಕ ವಸ್ತುಗಳನ್ನು ಹೊಂದಿರುತ್ತೆ, ಇವು ನಿಮ್ಮ ಕೃತಕ ಆಭರಣಗಳ ಹೊಳಪನ್ನು ಕೆಡಿಸಬಹುದು. ಕೃತಕ ಆಭರಣಗಳ ಕಾಳಜಿ ಹೇಗೆ ವಹಿಸಬೇಕು ಎಂದರೆ,

ಆಭರಣಗಳನ್ನು ಇಡಲು ಪ್ರತ್ಯೇಕ ಪೆಟ್ಟಿಗೆ ಬಳಸಿ

ಆಭರಣಗಳನ್ನು ಇಡಲು ಪ್ರತ್ಯೇಕ ಪೆಟ್ಟಿಗೆ ಬಳಸಿ

ನಿಮ್ಮಲ್ಲಿರುವ ಕೃತಕ ಆಭರಣಗಳ ಪಾಲಿಶ್‌ ದೀರ್ಘಕಾಲದವರೆಗೂ ಇರಬೇಕೆಂದರೆ ಅದನ್ನು ಗಾಳಿಯಾಡದ ಬಾಕ್ಸ್‌ ಅಥವಾ ಜಿಪ್‌ಲಾಕ್‌ ಬ್ಯಾಗ್‌ನಲ್ಲಿ ಸಂಗ್ರಹಿಸಿ. ಆಭರಣಗಳ ಸಂಗ್ರಹಣೆಗೆ ಪ್ರತ್ಯೇಕವಾದ ಗಾಳಿಯಾಡದ ಪ್ಲಾಸ್ಟಿಕ್‌ ಬಾಕ್ಸ್‌ಗಳು ಉತ್ತಮ ಯಾಕೆಂದರೆ ಇತರ ಆಭರಣಗಳ ಬಾಕ್ಸ್‌ಗಳು ಗಮ್‌ ಹೊಂದಿರುತ್ತದೆ. ಅವುಗಳ ಅಂಟುಗಳಲ್ಲಿ ರಾಸಾಯನಿಕವಿರುತ್ತದೆ. ಅದು ನಿಮ್ಮ ಆಭರಣದ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ಬಾಕ್ಸ್‌ನಲ್ಲಿ ಕೃತಕ ಆಭರಣಗಳನ್ನು ಇಡುವಾಗ ಒಂದರ ಮೇಲೊಂದು ಆಭರಣಗಳನ್ನು ಇಡಬೇಡಿ. ಪ್ರತಿಯೊಂದಕ್ಕೂ ಪ್ರತ್ಯೇಕವಾದ ಬಾಕ್ಸ್‌ ಬಳಸಿ. ಯಾಕೆಂದರೆ ಒಂದು ಆಭರಣದ ಪಾಲಿಶ್‌ ಇನ್ನೊಂದು ಆಭರಣದ ಪಾಲಿಶ್‌ಗೆ ಅಂಟಿಕೊಳ್ಳಬಹುದು.

ಕಿವಿಯೋಲೆಗಳನ್ನು ಹೀಗೆ ಸಂಗ್ರಹಿಸಿಡಿ

ಕಿವಿಯೋಲೆಗಳನ್ನು ಹೀಗೆ ಸಂಗ್ರಹಿಸಿಡಿ

ಕೃತಕ ಆಭರಣದ ಕಿವಿಯೋಲೆಗಳನ್ನು ಬಬಲ್‌ ಕವರ್‌ ಅಥವಾ ಜಿಪ್‌ಲಾಕ್‌ ಬ್ಯಾಗ್‌ನಲ್ಲಿ ಸಂಗ್ರಹಿಸಿಡುವುದು ಉತ್ತಮ. ಅದರಲ್ಲೂ ಬಬಲ್‌ ಕವರ್‌ ಕೃತಕ ಆಭರಣಗಳಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ. ಆಭರಣಗಳನ್ನು ಬೇರ್ಪಡಿಸಿ ಇಡಲು ಜಿಪ್‌ಲಾಕ್‌ ಬ್ಯಾಗ್‌ ಒಳ್ಳೆಯದು. ಈ ಬ್ಯಾಗ್‌ಗಳು ಹೊರಗಿನ ವಾತಾವರಣಕ್ಕೆ ಆಭರಣಗಳು ಹೆಚ್ಚು ಕಾಲ ಒಡ್ಡಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದರಿಂದ ಹೊಳಪೂ ದೀರ್ಘಕಾಲದವರೆಗೆ ಇರುತ್ತದೆ ಜೊತೆಗೆ ಒಂದು ಆಭರಣಕ್ಕೆ ಇನ್ನೊಂದು ಸಿಕ್ಕಿಹಾಕಿಕೊಳ್ಳದಂತೆ, ಗಂಟು ಬೀಳದಂತೆ ನೋಡಿಕೊಳ್ಳಬಹುದು.

ನೀರಿಗೆ ಆಭರಣಗಳನ್ನು ಒಡ್ಡಬೇಡಿ

ನೀರಿಗೆ ಆಭರಣಗಳನ್ನು ಒಡ್ಡಬೇಡಿ

ಯಾವುದೇ ಆಭರಣವಾಗಲಿ ಅದನ್ನು ನಿರಿಗೆ ಒಡ್ಡಿಕೊಂಡರೆ ಅದರ ಹೊಳಪು ಕಳೆದುಕೊಳ್ಳುವುದಲ್ಲದೇ ದೀರ್ಘಕಾಲ ಬಾಳಿಕೆಯೂ ಬರದು. ಹಾಗಾಗಿ ತೇವಾಂಶವನ್ನು ಆಭರಣಗಳ ದೊಡ್ಡ ಶತ್ರು ಎನ್ನುತ್ತಾರೆ. ತೇವಾಂಶಕ್ಕೆ ಆಭರಣಗಳು ಒಡ್ಡಿಕೊಂಡರೆ ಬೇಗನೆ ಹಾಳಾಗುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಕೃತಕ ಆಭರಣಗಳನ್ನು ನೀರಿಗೆ ಒಡ್ಡುವುದಾಗಲಿ ಅಥವಾ ನೀರಿನಿಂದ ತೊಳೆಯುವುದಾಗಲಿ ಮಾಡಬೇಡಿ. ಆಭರಣಗಳು ಒದ್ದೆಯಾದರೆ ಯಾವಾಗಲೂ ಮೃದುವಾದ ಒಣಗಿದ ಬಟ್ಟೆಯಿಂದ ಒರೆಸಿ, ಒಣಗಿಸಿದ ನಂತರ ಅದನ್ನು ಜಿಪ್‌ಲಾಕ್‌ ಬ್ಯಾಗ್‌ನಲ್ಲಿ ಸಂಗ್ರಹಿಸಿಡಿ.

ಸ್ವಚ್ಛಗೊಳಿಸಲು ಒಣ ಹತ್ತಿ ಬಳಸಿ

ಸ್ವಚ್ಛಗೊಳಿಸಲು ಒಣ ಹತ್ತಿ ಬಳಸಿ

ನಿಮ್ಮ ಆಭರಣಗಳನ್ನು ಸ್ವಚ್ಛಗೊಳಿಸಲು ಉತ್ತಮ ಆಯ್ಕೆಯೆಂದರೆ ಒಣ ಹತ್ತಿ ಅಥವಾ ಮೃದು ಟವಲ್‌ಗಳನ್ನು ಬಳಸುವುದು. ಇದು ಆಭರಣದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಅಲ್ಲದೇ ಆಭರಣಗಳನ್ನು ಬ್ಯಾಕ್ಟೀರಿಯಾ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಆಭರಣದ ಮೆಲೆ ಧೂಳು ಇದ್ದರೆ ಸಣ್ಣ ಮೃದುವಾದ ಬ್ರಷ್‌ ಬಳಸಬಹುದು. ಆಭರಣಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಒರೆಸುವ ಬಟ್ಟೆಗಳನ್ನು ಕೂಡಾ ಬಳಸಬಹುದು.

ಆಭರಣದೊಂದಿಗೆ ಸಿಲಿಕಾ ಪ್ಯಾಕೆಟ್‌ಗಳನ್ನು ಇರಿಸಿಕೊಳ್ಳಿ

ಸಿಲಿಕಾ ಪ್ಯಾಕೆಟ್‌ಗಳನ್ನು ಇಟ್ಟುಕೊಳ್ಳುವುದು ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ನಿಮ್ಮ ಆಭರಣಗಳನ್ನು ಕೊಳೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬೆಳ್ಳಿ ಆಭರಣಗಳಿಗೆ ಅವು ಹೆಚ್ಚು ಸೂಕ್ತವಾಗಿವೆ ಏಕೆಂದರೆ ಅವು ತುಕ್ಕು ಹಿಡಿಯುವ ಸಾಧ್ಯತೆಯನ್ನು ಶೇಕಡಾ 90ಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೆ. ನಿಮ್ಮ ಆಭರಣಗಳನ್ನು ವಿಪರೀತ ಶಾಖದಿಂದ ದೂರವಿಡುವುದು ಯಾವಾಗಲೂ ಒಳ್ಳೆಯದು.

ಅಮೆರಿಕನ್ ಡೈಮಂಡ್ ನೆಕ್ಲೇಸ್‌ಗಳು, ಅಮೆರಿಕನ್ ಡೈಮಂಡ್ ಬ್ರೇಸ್‌ಲೆಟ್‌ಗಳು ಮತ್ತು ಕೃತಕ ವಧುವಿನ ಆಭರಣ ಸೆಟ್‌ಗಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ ಮತ್ತು ಈ ಮೇಲೆ ವಿವರಿಸಿದ ಟಿಪ್ಸ್‌ಗಳು ಖಂಡಿತವಾಗಿಯೂ ನಿಮ್ಮ ಆಭರಣಗಳನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ಹೊಳಪನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಒದ್ದೆ ಆಭರಣಗಳನ್ನು ಸಂಗ್ರಹಿಸಬೇಡಿ

ಹೆಚ್ಚಿನವರು ಬೆಲೆಬಾಳುವ ಆಭರಣಗಳನ್ನು ಧರಿಸುತ್ತಾರೆ ಆದರೆ ಅದನ್ನು ಹೇಗೆ ಸಂಗ್ರಹಿಸಬೇಕು ಎಂದು ತಿಳಿದಿರುವುದಿಲ್ಲ.ಕೆಲವೊಮ್ಮೆ ಒದ್ದೆ ಮಾಡಿ ಹಾಗೆಯೇ ಎತ್ತಿಟ್ಟುಬಿಡುತ್ತಾರೆ. ಇದರಿಂದ ಆಭರಣವ ಹೊಳಪನ್ನು ಕಳೆದುಕೊಳ್ಳುವುದು ಮಾತ್ರವಲ್ಲ. ಬೇಗನೆ ಹಾಳಾಗಬಹುದು.ಆದ್ದರಿಂದ, ಪೆಟ್ಟಿಗೆಯಲ್ಲಿ ಸಂಗ್ರಹಿಸುವ ಮೊದಲು ನಿಮ್ಮ ಆಭರಣವನ್ನು ಒಣಗಿಸಬೇಕು. ಒದ್ದೆಯಾದ ಆಭರಣಗಳನ್ನು ಸಂಗ್ರಹಿಸಿದರೆ ಅದು ಆಭರಣದ ಹೊಳಪು, ಬಾಳಿಕೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಅದರಲ್ಲಿ ಕೊಳೆ ಕುಳಿತುಕೊಳ್ಳುವಂತೆ ಮಾಡಬಹುದು.

Read more about: jewellery beauty fashion
English summary

How to take care of artificial Jewellery In Kannada

How To Keep artificial Jewellery long lost read on....
X
Desktop Bottom Promotion