For Quick Alerts
ALLOW NOTIFICATIONS  
For Daily Alerts

ಮಸ್ಕರಾ ಹಚ್ಚಿಕೊಳ್ಳುವ ವೇಳೆ ಮಾಡುವ ಕೆಲವು ತಪ್ಪುಗಳು

|

ಮೇಕಪ್ ಬಳಸಿಕೊಳ್ಳುತ್ತಿದ್ದರೆ ಆಗ ನೀವು ಆ ಉತ್ಪನ್ನಗಳನ್ನು ಯಾವ ರೀತಿ ಬಳಸಿಕೊಳ್ಳುವುದು ಎಂದು ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ ಮೇಕಪ್ ನಿಂದ ಮುಖದ ಕಾಂತಿ ಹೆಚ್ಚಾಗುವ ಬದಲು ಕುಗ್ಗಬಹುದು. ಮೇಕಪ್ ನಲ್ಲಿ ಹಲವಾರು ರೀತಿಯ ಉತ್ಪನ್ನಗಳು ಇವೆ. ಇದರಲ್ಲಿ ಮುಖ್ಯವಾಗಿ ಹೈಶ್ಯಾಡೂ, ಹೈಲೈನರ್, ಬ್ಲಷ್, ಕೌನ್ಸಿಲರ್, ಫೌಂಡೇಶನ್ , ಲಿಪ್ ಸ್ಟಿಕ್ ಮತ್ತು ಮಸ್ಕರಾ.

ಸರಿಯಾದ ರೀತಿಯ ಹಾಗೂ ಮಿತವಾಗಿ ಇದನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಇದು ಮುಖದ ಕಾಂತಿ ಹೆಚ್ಚು ಮಾಡುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮೇಕಪ್ ಸರಿಯಾಗಿ ಮಾಡದೆ ಇದ್ದರೆ ಆಗ ಅದು ಮುಖದ ಸೌಂದರ್ಯವನ್ನು ಕೆಡಿಸಿಬಿಡುವುದು. ಈ ಲೇಖನದಲ್ಲಿ ಮಸ್ಕರಾ(ಕಣ್ಕಪ್ಪು) ಹಚ್ಚಿಕೊಳ್ಳುವ ವೇಳೆ ಮಾಡುವಂತಹ ತಪ್ಪುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

Mascara

1. ಕಣ್ಣಿನ ಕೆಳಗಿನ ರೆಪ್ಪೆಗಳಿಗೆ ಮಸ್ಕರಾ ಹಚ್ಚಿಕೊಳ್ಳುವ ಮೊದಲು ಮೇಲಿನ ರೆಪ್ಪೆಗಳಿಗೆ ಹಚ್ಚುವುದು

ಮಸ್ಕರಾವನ್ನು ನೀವು ಮೊದಲು ಮೇಲಿನ ರೆಪ್ಪೆಗಳಿಗೆ ಹಚ್ಚಿಕೊಂಡರೆ, ಬಳಿಕ ಕೆಳಗಿನ ಭಾಗಕ್ಕೆ ಹಚ್ಚಿಕೊಳ್ಳಲು ಹೋದರೆ ಆಗ ಮೇಲಿನ ಭಾಗದ ಮಸ್ಕರಾವು ಇಡೀ ಭಾಗಕ್ಕೆ ಹಬ್ಬಬಹುದು. ಇದಕ್ಕಾಗಿ ನೀವು ಮೊದಲು ಕೆಳಗಿನ ರೆಪ್ಪೆಗಳಿಗೆ ಮಸ್ಕರಾ ಹಚ್ಚಿಕೊಂಡು ಬಳಿಕ ಮೇಲಿನ ರೆಪ್ಪೆಗಳಿಗೆ ಹಚ್ಚಿಕೊಳ್ಳಿ.

2. ಮಸ್ಕರಾ ವ್ಯಾಂಡ್ ಗೆ ಗಾಳಿ ಹಾಕುವುದು

ನೀವು ಈ ರೀತಿ ಮಾಡಿದರೆ ಆಗ ಮಸ್ಕರಾವು ಬೇಗನೆ ಒಣಗುವುದು ಮತ್ತು ಹೆಚ್ಚು ಗಾಳಿಯು ಮಸ್ಕರಾ ಟ್ಯೂಬ್ ನ ಒಳಗಡೆ ಹೋದಂತೆ ಅದರಿಂದ ರೆಪ್ಪೆಗಳಲ್ಲಿ ಉಂಡೆಯಂತೆ ಆಗುವುದು.

3. ಮಸ್ಕರಾ ಬಳಸಿದ ಬಳಿಕ ಕಣ್ಣರೆಪ್ಪೆಗಳನ್ನು ಗುಂಗುರು ಮಾಡುವುದು

ಮಸ್ಕರಾ ಹಚ್ಚಿಕೊಂಡ ಬಳಿಕ ಕಣ್ಣಿನ ರೆಪ್ಪೆಗಳನ್ನು ಗುಂಗುರು ಮಾಡಿಕೊಳ್ಳುತ್ತಿದ್ದರೆ ಅದು ನೀವು ಮಾಡುವ ದೊಡ್ಡ ತಪ್ಪು. ನೀವು ಮೊದಲಿಗೆ ಕಣ್ಣಿನ ರೆಪ್ಪೆಯನ್ನು ಹೈಲ್ಯಾಶ್ ಕರ್ಲರ್ ಬಳಸಿಕೊಂಡು ಗುಂಗುರು ಮಾಡಿಕೊಳ್ಳಿ ಮತ್ತು ಬಳಿಕ ಇದಕ್ಕೆ ಮಸ್ಕರಾ ಹಚ್ಚಿಕೊಳ್ಳಿ.

4. ರೆಪ್ಪೆಯ ಬದಿಗೆ ಮಸ್ಕರಾ ಹಚ್ಚುವುದು

ಕಣ್ಣ ರೆಪ್ಪೆಯ ಒಂದು ಭಾಗಕ್ಕೆ ಮಾತ್ರ ಮಸ್ಕರಾ ಹಚ್ಚಿಕೊಂಡರೆ, ಆಗ ಅತಿಯಾದ ಭಾರದಿಂದ ನೀವು ಗುಂಗುರು ಮಾಡಿದ ಕಣ್ಣ ರೆಪ್ಪೆಗಳು ಮಾಯವಾಗುವುದು. ಇದನ್ನು ತಪ್ಪಿಸಲು ಸಂಪೂರ್ಣ ಕಣ್ಣ ರೆಪ್ಪೆಗಳ ಮೇಲೆ ಮಸ್ಕರಾ ಹಚ್ಚಿಕೊಳ್ಳಿ.

5. ಮೇಲ್ಮುಖವಾಗಿ ಮಸ್ಕರಾ ಹಚ್ಚುವುದು

ಹೆಚ್ಚಾಗಿ ಮಹಿಳೆಯರು ಕಣ್ಣಿನ ರೆಪ್ಪೆಯು ಗುಂಗುರು ಬರಲಿ ಎನ್ನುವ ಕಾರಣಕ್ಕಾಗಿ ಮಸ್ಕರಾವನ್ನು ಮೇಲ್ಮುಖವಾಗಿ ಹಚ್ಚಿಕೊಳ್ಳೂವರು. ಆದರೆ ಇದು ಮಸ್ಕರಾ ಹಚ್ಚಿಕೊಳ್ಳುವಂತಹ ತುಂಬಾ ಕೆಟ್ಟ ವಿಧಾನವಾಗಿದೆ. ನೀವು ಯಾವಾಗಲೂ ಕಣ್ಣ ರೆಪ್ಪೆಯ ಕೆಳಗೆ ಮಸ್ಕರಾ ವ್ಯಾಂಡ್ ನ್ನು ಹಿಡಿದುಕೊಂಡು ಅದನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಹಚ್ಚಿಕೊಳ್ಳಬೇಕು.

6. ಮಸ್ಕರಾವನ್ನು ಹಂಚಿಕೊಳ್ಳುವುದು

ನೀವು ಯಾವತ್ತೂ ಬೇರೆಯವರ ಜತೆಗೆ ಈ ಮಸ್ಕರಾ ವ್ಯಾಂಡ್ ನ್ನು ಹಂಚಿಕೊಳ್ಳಬಾರದು. ಇದು ಲಿಪ್ ಸ್ಟಿಕ್ ಗೆ ಕೂಡ ಅನ್ವಯ ಆಗುವುದು. ನಿಮ್ಮ ತುಂಬಾ ಆಪ್ತ ಗೆಳತಿ ಅಥವಾ ಕಾಲೇಜಿನ ಸಹಪಾಠಿ ಆಗಿದ್ದರೂ ನೀವು ಇದನ್ನು ಹಂಚಿಕೊಳ್ಳಲೇ ಬಾರದು. ನೀವು ಇದನ್ನು ಬೇರೆಯವರಿಂದ ಬಳಸಿಕೊಂಡರೆ ಆಗ ಕೀಟಾಣುಗಳು ಹರಡಿ ಕಣ್ಣಿನ ಸೋಂಕು ಕಾಣಿಸಿಕೊಳ್ಳಬಹುದು.

7. ದೀರ್ಘಕಾಲ ತನಕ ಒಂದೇ ಮಸ್ಕರಾ ಬಳಸುವುದು

ದೀರ್ಘಕಾಲ ತನಕ ಒಂದೇ ಮಸ್ಕರಾ ಬಾಟಲಿ ಬಳಸಿಕೊಳ್ಳುವುದು ಒಳ್ಳೆಯದು ಎಂದು ಕೆಲವರು ಭಾವಿಸಿರಬಹುದು. ಆದರೆ ಇದು ತಪ್ಪು. ಮೇಕಪ್ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾವು ಬೇಗನೆ ಕಾಣಿಸುವುದು. ಇದರಿಂದ ಸೋಂಕು ಬರಬಹುದು. ಇದರಿಂದಾಗಿ ನೀವು ಯಾವುದೇ ರೀತಿಯ ಸೋಂಕು ತಡೆಯಲು ಅಥವಾ ಅಸ್ವಸ್ಥತೆ ದೂರ ಮಾಡಲು ಮೇಕಪ್ ಉತ್ಪನ್ನಗಳನ್ನು ಆಗಾಗ ಬದಲಾಯಿಸುತ್ತಾ ಇರಬೇಕು. ಇದರ ಎಕ್ಸ್ ಪಯರಿ ದಿನಾಂಕವನ್ನು ನೋಡಿಕೊಂಡು, ಸುರಕ್ಷಿತವಾಗಿ ಬಳಸಿಕೊಂಡರೆ ಸೋಂಕು ತಡೆಯಬಹುದು.

8. ಕಣ್ಣ ರೆಪ್ಪೆಗಳಿಗೆ ಕೌನ್ಸಿಲರ್ ಹಾಕದೆ ಇರುವುದು

ಇದನ್ನು ಹೆಚ್ಚಿನ ಮಹಿಳೆಯರು ಮಾಡುವರು. ಇದು ನೀವು ಮಾಡುವಂತಹ ತಪ್ಪಾಗಿದೆ. ಮಸ್ಕರಾವು ಒದ್ದೆಯಾದ ಕೂಡಲೇ ಅದು ಹರಡಲು ಆರಂಭಿಸುವುದು. ಇದರಿಂದಾಗಿ ಮಸ್ಕರಾ ಹಚ್ಚಿಕೊಳ್ಳುವ ಮೊದಲು ಅಥವಾ ಬಳಿಕ ನೀವು ಕೌನ್ಸಿಲರ್ ಬಳಸಿ.

9. ಕಣ್ಣ ರೆಪ್ಪೆಯ ಬುಡಗಳಿಗೆ ವ್ಯಾಂಡ್ ನಿಂದ ಮುಚ್ಚಲು ಪ್ರಯತ್ನಿಸುವುದು

ನೀವು ಕೂಡ ಹೀಗೆ ಮಾಡುತ್ತಲಿದ್ದರೆ, ಆಗ ಇದನ್ನು ತಕ್ಷಣವೇ ನಿಲ್ಲಿಸಿಬಿಡಿ. ಕಣ್ಣ ರೆಪ್ಪೆಯ ಬುಡಗಳನ್ನು ಮಸ್ಕರಾ ವ್ಯಾಂಡ್ ನಿಂದ ಮುಚ್ಚಲು ಪ್ರಯತ್ನಿಸುವ ಕಾರಣದಿಂದಾಗಿ ಅದು ದೊಡ್ಡ ಮಟ್ಟದ ಸಮಸ್ಯೆ ಉಂಟು ಮಾಡಬಹುದು. ನೇರವಾದ ಕಣ್ಣರೆಪ್ಪೆ ಹೊಂದಿರುವಂತ ಮಹಿಳೆಯರು ಮಸ್ಕರಾವನ್ನು ಕಣ್ಣಿನ ಬುಡಕ್ಕೆ ಹಚ್ಚಿಕೊಳ್ಳಬಹುದು. ಇದು ಹರಡುವ ಅಥವಾ ನಿಮ್ಮ ಸೌಂದರ್ಯ ಕೆಡಿಸುವ ಭೀತಿ ಇರದು.

10.ಮಸ್ಕರಾ ಹಚ್ಚಿಕೊಂಡು ಮಲಗುವುದು

ನೀವು ಮಸ್ಕರಾ ಹಚ್ಚಿಕೊಂಡು ಮಲಗುತ್ತಿದ್ದರೆ ಆಗ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು. ಯಾವುದೇ ಹಾನಿ ಅಥವಾ ತುಂಡಾಗುವುದನ್ನು ತಪ್ಪಿಸಲು ನೀವು ಪ್ರತಿನಿತ್ಯ ಮಸ್ಕರಾ ತೆಗೆದು ಮಲಗಬೇಕು ಮತ್ತು ಮತ್ತೆ ಬೆಳಗ್ಗೆ ಹಚ್ಚಿಕೊಳ್ಳಬೇಕು. ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲಿವ್ ತೈಲ ಹಚ್ಚಿಕೊಂಡು ಕಣ್ಣಿನ ರೆಪ್ಪೆಗಳಿಗೆ ನಿಯಮಿತವಾಗಿ ಕಂಡೀಷನಿಂಗ್ ಮಾಡಿದರೆ ತುಂಬಾ ಒಳ್ಳೆಯದು.

English summary

Mistakes You Make While Applying Mascara

If you like wearing make-up, you might know and understand the importance of using all the products correctly. As you might already know, make-up consists of various products like eyeshadow, eyeliner, blush, concealer, foundation, lipstick, bronzer, and a mascara. And it is essential that we apply these products correctly so that our make-up looks good and our face does not look cakey or older.
X
Desktop Bottom Promotion