ಬಣ್ಣಗಳ ಮೆರಗಿನಿಂದ ಕಣ್ಣುಗಳ ಆಕರ್ಷಣೆಯ ಮೋಡಿ ನೋಡಿ

By Divya Pandith
Subscribe to Boldsky

ಮುಖದ ಆಕರ್ಷಣೆಗೆ ಪ್ರಮುಖ ಪಾತ್ರವಹಿಸುವುದು ಕಣ್ಣು. ಕಣ್ಣಿನ ಮೂಲಕ ಅನೇಕ ಭಾವನೆಗಳು ವ್ಯಕ್ತವಾಗುವುದು ಸಹಜ. ಹಾಗೆಯೇ ಸೌಂದರ್ಯದ ಪ್ರತೀಕವೂ ಹೌದು. ಇದರ ಆಕರ್ಷಣೆ ಅಥವಾ ಸೆಳೆತಗಳಿಂದಲೂ ಸೌಂದರ್ಯವು ಇಮ್ಮಡಿಯಾಗಿ ಪ್ರತಿಬಿಂಬಿಸುವುದು. ಹಾಗಾಗಿ ಮುಖದ ಮೇಕಪ್ ಮಾಡುವಾಗ ಕಣ್ಣಿನ ಮೇಕಪ್ ಗಳಿಗೂ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ನಾವು ಮಾಡುವ ಮೇಕಪ್ ಅಲ್ಲಿ ಕೊಂಚ ವ್ಯತ್ಯಾಸಗಳಾದರೂ ಮುಖದ ಆಕರ್ಷಣೆ ಹಾಳಾಗುವುದು. ಜೊತೆಗೆ ಕಣ್ಣಿನ ಸೌಂದರ್ಯವೂ ಕಡಿಮೆಯಾಗುವುದು.

ಹೌದು, ಮೇಕಪ್ ಮಾಡುವಾಗ ಕಣ್ಣಿನ ವಿಚಾರದಲ್ಲಿ ಹೆಚ್ಚು ಕಾಳಜಿ ಇರಬೇಕು. ಸೂಕ್ತ ರೀತಿಯ ಬಣ್ಣ ಹಾಗೂ ವಿನ್ಯಾಸದ ಮೂಲಕ ಕಣ್ಣಿನ ಮೇಕಪ್ ಮಾಡಿಕೊಂಡರೆ ಕಣ್ಣು ಹೆಚ್ಚು ಆಕರ್ಷಣೆಯಿಂದ ಕೂಡಿರುತ್ತದೆ. ಹೆಚ್ಚಿನ ಮೇಕಪ್ ಗೆ ಒಳಗಾಗದೆ ಕೇವಲ ಕಣ್ಣಿನ ಮೇಕಪ್ ಮಾಡಿಕೊಳ್ಳುವುದರ ಮೂಲಕವೂ ಮುಖದ ಸೌಂದರ್ಯ ಹೆಚ್ಚುವುದು.

ಕಂದು ಬಣ್ಣದಿಂದ ಕೂಡಿರುವ ಕಣ್ಣು ಹೆಚ್ಚು ಆಕರ್ಷಣೆಯಿಂದ ಕೂಡಿರುತ್ತವೆ. ಕಂದು ಬಣ್ಣದ ಕಣ್ಣಿನ ಮೇಕಪ್ ಗೆ ಯಾವ ಬಣ್ಣಗಳ ಆಯ್ಕೆ ಮಾಡಿಕೊಳ್ಳಬೇಕು? ಕಣ್ಣು ಎದ್ದು ಕಾಣುವಂತೆ ಹೇಗೆ ಮಾಡುವುದು? ಯಾವೆಲ್ಲಾ ಬಣ್ಣಗಳು ಹೆಚ್ಚು ಆಕರ್ಷಣೆಗೆ ಒಳಪಡಿಸುವುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಗಾಢವಾದ ಕಂದು ಬಣ್ಣದ ಕಣ್ಣಿನ ಮೇಕಪ್ ವಿಧಾನಗಳು:

1. ಪ್ಲಮ್ ಐಷಾಡೋ

1. ಪ್ಲಮ್ ಐಷಾಡೋ

ಪ್ಲಮ್ ಛಾಯೆಗಳು ಕಂದು ಬಣ್ಣದ ಉತ್ತಮವಾದ ಆಕರ್ಷಣೆಯನ್ನು ನೀಡುತ್ತದೆ. ಇದು ಅತ್ಯುತ್ತಮ ರೀತಿಯಲ್ಲಿ ನೈಸರ್ಗಿಕವಾದ ನೋಟವನ್ನು ನೀಡುವುದರಿಂದ ಶರತ್ಕಾಲದಲ್ಲಿ ಈ ವಿಧಾನದ ಕಣ್ಣಿನ ಮೇಕಪ್ ಮಾಡಬಹುದು. ಪ್ಲಮ್ ಐಷಾಡೋ ಮೇಕಪ್ ಅಲ್ಲಿ ನೀವು ಧರಿಸಿರುವ ಜೀನ್ಸ್, ಟಾಪ್ ಅಥವಾ ಬೂಟ್‍ಗಳಿಗೆ ಹೊಂದಿಕೆಯಾಗುವ ಬಣ್ಣಗಳ ಐಷಾಡೋ ಗಳನ್ನು ಅನ್ವಯಿಸಬಹುದು.

ಸಾಮಾಗ್ರಿಗಳು:

1. ಪ್ಲಮ್ ಐಷಾಡೋ

2. ಬ್ರೌನ್ ಐಷಾಡೋ

3. ಡಾರ್ಕ್ ಪರ್ಪಲ್/ ಕಡು ನೀಲಿ ಐಷಾಡೋ

4. ಮಸ್ಕರಾ

5. ಐ ಲೈನರ್

ಅನ್ವಯಿಸುವ ವಿಧಾನ

ಅನ್ವಯಿಸುವ ವಿಧಾನ

1. ಗುಲಾಬಿ ಬಣ್ಣದ ಮತ್ತು ಕಂದು ಬಣ್ಣದ ಐಷಾಡೋ ಅವನ್ನು ರೆಪ್ಪೆಯ ಮೇಲೆ ಸುಕ್ಕು ಕಾಣದಂತೆ ಅನ್ವಯಿಸಿ.

2. ಕಣ್ಣಿನ ರೆಪ್ಪೆಯ ಮಧ್ಯ ಭಾಗದಲ್ಲಿ ಪ್ಲಮ್ ಐಷಾಡೋ ಅನ್ನು ಅನ್ವಯಿಸಿ.

3. ಕಡು ನೀಲಿ ಐಷಾಡೋ ಅನ್ನು ಕಣ್ಣಿನ ಹೊರ ವಲಯಗಳಲ್ಲಿ ಅನ್ವಯಿಸಿ, ನಂತರ ಸರಿಯಾಗಿ ಹರಡಿ(ಬ್ಲೆಂಡ್).

4. ಬಳಿಕ ಮಸ್ಕರ ಹಾಗೂ ಐ ಲೈನರ್ ಅನ್ವಯಿಸುವುದರ ಮೂಲಕ ಕಣ್ಣಿನ ಮೇಕಪ್ ಮುಗಿಸಿ.

ಹಸಿರು ಬಣ್ಣದ ಐಷಾಡೋ

ಹಸಿರು ಬಣ್ಣದ ಐಷಾಡೋ

ಗಾಢ ಹಸಿರು ಹುಬ್ಬು ಬಣ್ಣದ ಕಣ್ಣುಗಳು ಮೋಡಿಮಾಡುತ್ತದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಮೆಟ್ಟೆ ಅಥವಾ ಸಿಮ್ಮರ್ ಬಳಸಬಹುದು. ಮುಂಜಾನೆಯ ಮೇಕಪ್ ಮಾಡಲು ಮೆಟ್ಟೆ ಅತ್ಯುತ್ತಮ ಆಯ್ಕೆಯಾಗಿರುತ್ತದೆ. ನೀವು ಯಾವುದಾದರೂ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದಾದರೆ ಈ ಕ್ರಮವನ್ನು ಅನ್ವಯಿಸಬಹುದು.

ಸಾಮಾಗ್ರಿಗಳು

1. ಕಂದು ಬಣ್ಣದ ಐಷಾಡೋ

2. ಕಡು ಹಸಿರು ಐಷಾಡೋ

3. ಕಪ್ಪು ಬಣ್ಣದ ಐಷಾಡೋ

4. ಐ ಲೈನರ್

5. ಮಸ್ಕರಾ

ಅನ್ವಯಿಸುವ ವಿಧಾನ

ಅನ್ವಯಿಸುವ ವಿಧಾನ

1. ಕಣ್ಣ ರೆಪ್ಪೆಯ ಮೇಲೆ ಸುಕ್ಕಾಗಿರುವ ಸ್ಥಳದಲ್ಲಿ ಕಂದು ಬಣ್ಣದ ಐ ಷಾಡೋ ಅನ್ನು ಮುಸುಕಿನ ರೂಪದಲ್ಲಿರುವಂತೆ ಅನ್ವಯಿಸಿ.

2. ರೆಪ್ಪೆಯ ಮೇಲೆ ಕಡು ಹಸಿರು ಬಣ್ಣದ ಷಾಡೋವನ್ನು ಅನ್ವಯಿಸಿ.

3. ಕಣ್ಣಿನ ಹೊರ ಮೂಲೆಯಲ್ಲಿ ಕಪ್ಪು ಬಣ್ಣದ ಐಷಾಡೋ ಅನ್ವಯಿಸಿ.

4. ಬಳಿಕ ಮಸ್ಕರ ಹಾಗೂ ಐ ಲೈನರ್ ಅನ್ವಯಿಸುವುದರ ಮೂಲಕ ಕಣ್ಣಿನ ಮೇಕಪ್ ಮುಗಿಸಿ.

ಗ್ರೇ ಐಷಾಡೋ

ಗ್ರೇ ಐಷಾಡೋ

ನೀವು ಗಾಢವಾದ ಅಥವಾ ಸೂಕ್ಷ್ಮವಾದ ಐಷಾಡೋ ಬಣ್ಣವನ್ನು ಹುಡುಕುತ್ತಿದ್ದರೆ ಬೂದು ಬಣ್ಣದ (ಗ್ರೇ) ಐಷಾಡೋ ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ. ಇದರೊಟ್ಟಿಗೆ ಸಿಲ್ವರ್ ಬಣ್ಣದ ಗ್ಲಿಟರ್ ಅನ್ನು ಐ ಲೈನರ್ ಅಡಿಯಲ್ಲಿ ಅನ್ವಯಿಸಿದರೆ ಉತ್ತಮ ನೋಟವನ್ನು ಹೊಂದಬಹುದು.

ಸಾಮಾಗ್ರಿಗಳು

1. ಗ್ರೇ ಐಷಾಡೋ

2. ಮೃದುವಾದ ಕಂದು ಬಣ್ಣದ ಐಷಾಡೋ

3. ಸಿಲ್ವರ್ ಐ ಲೈನರ್

4. ಕಪ್ಪು ಬಣ್ಣದ ಐ ಲೈನರ್

5. ಮಸ್ಕರಾ

ಅನ್ವಯಿಸುವ ವಿಧಾನ

ಅನ್ವಯಿಸುವ ವಿಧಾನ

1. ಕಣ್ಣ ರೆಪ್ಪೆಯ ಮೇಲೆ ಸುಕ್ಕಾಗಿರುವ ಸ್ಥಳದಲ್ಲಿ ಮೃದುವಾದ ಕಂದು ಬಣ್ಣವನ್ನು ಅನ್ವಯಿಸಿ.

2. ರೆಪ್ಪೆಯ ಮೇಲ್ಭಾಗದಲ್ಲಿ ಬೂದು ಬಣ್ಣದ ಐಷಾಡೋವನ್ನು ಅನ್ವಯಿಸಿ. ನಂತರ ಸರಿಯಾಗಿ ಹರಡಿ(ಬ್ಲೆಂಡ್).

3. ಈಗ ರೆಕ್ಕೆಯಂತಹ(ವಿಂಗ್ಡ್) ಲೈನರ್ ಅನ್ವಯಿಸಿ. ಅದರ ಕೆಳಭಾಗದಲ್ಲಿ ಸಿಲ್ವರ್ ಲೈನ್ ಅನ್ವಯಿಸಿ.

4. ಬಳಿಕ ಮಸ್ಕರ ಅನ್ವಯಿಸುವುದರ ಮೂಲಕ ಮುಕ್ತಾಯಗೊಳಿಸಿ.

ಮಧ್ಯಮ ಕಂದು ಬಣ್ಣದ ಕಣ್ಣಿನ ಮೇಕಪ್

1. ಗೋಲ್ಡನ್ ಐಷಾಡೋ

1. ಗೋಲ್ಡನ್ ಐಷಾಡೋ

ಕಪ್ಪು ಮತ್ತು ಚಿನ್ನದ ಬಣ್ಣದ ಹೊಂದಾಣಿಕೆಯಲ್ಲಿ ಅನ್ವಯಿಸುವ ಐಷಾಡೋ ಅತ್ಯುತ್ತಮ ಆಕರ್ಷಣೆಯನ್ನು ಸೃಷ್ಟಿಸುತ್ತದೆ. ಹೊಂಬಣ್ಣದ ಐ ಷಾಡೋ ಮಧ್ಯಮ ಕಂದು ಬಣ್ಣದ ಮೇಕಪ್‍ಗೆ ಸಹಾಯ ಮಾಡುತ್ತದೆ.

ಸಾಮಾಗ್ರಿಗಳು

1. ಗೋಲ್ಡ್ ಐಷಾಡೋ

2. ಬ್ರೌನ್ ಐಷಾಡೋ

3. ಬ್ಲ್ಯಾಕ್ ಐಷಾಡೋ

4. ಮಸ್ಕರಾ

ಅನ್ವಯಿಸುವ ವಿಧಾನ

ಅನ್ವಯಿಸುವ ವಿಧಾನ

1. ಕಣ್ಣ ರೆಪ್ಪೆಯ ಮೇಲೆ ಸುಕ್ಕಾಗಿರುವ ಸ್ಥಳದಲ್ಲಿ ಮೃದುವಾದ ಕಂದು ಬಣ್ಣವನ್ನು ಅನ್ವಯಿಸಿ, ನಂತರ ಸರಿಯಾಗಿ ಹರಡಿ(ಬ್ಲೆಂಡ್).

2. ದಪ್ಪದಾದ ರೆಕ್ಕೆ ವಿನ್ಯಾಸದ ಐ ಲೈನರ್ ಅನ್ವಯಿಸಿ.

3. ಈಗ ರೆಪ್ಪೆಯ ಉಳಿದ ಭಾಗಕ್ಕೆ ಗೋಲ್ಡನ್ ಷಾಡೋ ಅನ್ವಯಿಸಿ, ಬಳಿಕ ಕಪ್ಪು ಬಣ್ಣದ ಸಂಯೋಜನೆಯಲ್ಲಿ ಸೂಕ್ತ ರೀತಿಯಲ್ಲಿ ಹರಡಿ (ಬ್ಲೆಂಡ್ ಮಾಡಿ)

4. ಬ್ರಶ್‍ಗಳ ಸಹಾಯದಿಂದ ಕನ್ಸೀಲರ್ ಅನ್ನು ಅನ್ವಯಿಸಿ. ಸುಕ್ಕು ಅಥವಾ ಗೆರೆಗಳು ಕಾಣಿಸದಂತೆ ಸೂಕ್ತ ರೀತಿಯಲ್ಲಿ ಅನ್ವಯಿಸಿ.

5. ಅಂತಿಮವಾಗಿ ಮಸ್ಕರ ಅನ್ವಯಿಸುವ ಮೂಲಕ ಮುಕ್ತಾಯಗೊಳಿಸಿ.

2. ನೇರಳೆ ಐಷಾಡೋ

2. ನೇರಳೆ ಐಷಾಡೋ

ವಿಶೇಷ ಸಂದರ್ಭದಲ್ಲಿ, ಪಾರ್ಟಿ, ಮದುವೆ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ನೇರಳೆ ಬಣ್ಣದ ಐಷಾಡೋ ಅನ್ವಯಿಸುವುದರಿಂದ ಉತ್ತಮ ಆಕರ್ಷಣೆಯನ್ನು ಪಡೆಯಬಹುದು.

ಸಲಕರಣೆಗಳು

1. ನೇರಳೆ ಐಷಾಡೋ

2. ಮೃದುವಾದ ಬ್ರೌನ್ ಐಷಾಡೋ

3. ಕಪ್ಪು ಬಣ್ಣದ ಐಷಾಡೋ

4. ಐ ಲೈನರ್

5. ಮಸ್ಕರಾ

ಅನ್ವಯಿಸುವ ವಿಧಾನ

ಅನ್ವಯಿಸುವ ವಿಧಾನ

1. ತಿಳಿ ಗುಲಾಬಿ ಮತ್ತು ಮೃದು ಕಂದು ಬಣ್ಣದ ಸಂಯೋಗದಲ್ಲಿ ಮಂದವಾಗಿ ಷಾಡೋ ಅನ್ವಯಿಸಿ.

2. ರೆಪ್ಪೆಯ ಮೇಲ್ಭಾಗದಲ್ಲಿ ನೇರಳೆ ಐಷಾಡೋ ಅನ್ವಯಸಿ, ಸೂಕ್ತ ರೀತಿಯಲ್ಲಿ ಹರಡಿ (ಬ್ಲೆಂಡ್ ಮಾಡಿ)

3. ಕಪ್ಪು ಬಣ್ಣದ ಐಷಾಡೋ ಮೂಲಕ ಕಣ್ಣಿನ ಹೊರವಲಯದ ಮೂಲೆಯಲ್ಲಿ ಅನ್ವಯಿಸಿ, ಬಳಿಕ ಸ್ಮೋಕಿ ನೋಟ ಬರುವಂತೆ ಸೂಕ್ತ ರೀತಿಯಲ್ಲಿ ಅನ್ವಯಿಸಿ.

4. ಮಸ್ಕರ ಅನ್ವಯಿಸುವ ಮೂಲಕ ಮೇಕಪ್ ಮುಕ್ತಾಯಗೊಳಿಸಿ.

ಕಂಚಿನ ಬಣ್ಣದ ಐಷಾಡೋ

ಕಂಚಿನ ಬಣ್ಣದ ಐಷಾಡೋ

ಕಂಚಿನ ಬಣ್ಣದ ಐಷಾಡೋ ಕಣ್ಣನ್ನು ಹಗುರ ಮತ್ತು ಎದ್ದುಕಾಣುವಂತಹ ನೋಟವನ್ನು ನೀಡುತ್ತದೆ. ರಾತ್ರಿಯ ಪಾರ್ಟಿಗಳಿಗೆ ಹಾಗೂ ಹೊರಾಂಗಣದ ಕಾರ್ಯಕ್ರಮಗಳಿಗೆ ಈ ಮೇಕಪ್ ಅತ್ಯುತ್ತಮ ನೋಟ ನೀಡುವುದು. ಬೇಸಿಗೆ ಕಾಲದಲ್ಲಿ ಈ ನೋಟ ಅತ್ಯುತ್ತಮವಾದದ್ದು ಎಂದು ಹೇಳಲಾಗುವುದು.

ಬೇಕಾಗುವ ಸಾಮಾಗ್ರಿಗಳು:

1. ಬ್ರೌನ್ ಐಷಾಡೋ

2. ಕಂದು ಬಣ್ಣದ ಐಷಾಡೋ

3. ಕಂಚಿನ ಬಣ್ಣದ ಐಷಾಡೋ

4. ಐ ಲೈನರ್

ಅನ್ವಯಿಸುವ ವಿಧಾನ

ಅನ್ವಯಿಸುವ ವಿಧಾನ

1. ರೆಪ್ಪೆಯ ಮೇಲೆ ಸುಕ್ಕು ಅಥವಾ ಗೆರೆಗಳು ಕಾಣದಂತೆ ಕಂದು ಬಣ್ಣದ ಐಷಾಡೋ ಅನ್ವಯಿಸಿ.

2. ರೆಪ್ಪೆಯ ಹೊರ ಭಾಗದಲ್ಲಿ ಗಾಢವಾದ ಕಂದುಬಣ್ಣದ ಷಾಡೋವನ್ನು ಅನ್ವಯಿಸಿ, ಬಳಿಕ ಸೂಕ್ತ ರೀತಿಯಲ್ಲಿ ಹರಡಿ.

3. ಈಗ ಕಣ್ಣು ರೆಪ್ಪೆಗಳ ಮೇಲೆ ಕಂಚಿನ ಬಣ್ಣದ ಷಾಡೋ ಅನ್ವಯಿಸಿ, ಸೂಕ್ತ ರೀತಿಯಲ್ಲಿ ಬ್ಲೆಂಡ್ ಮಾಡಿ.

4. ಲೈನರ್ ಅನ್ವಯಿಸುವುದರ ಮೂಲಕ ಮೇಕಪ್ ಮುಕ್ತಾಯಗೊಳಿಸಿ.

ಸಾಫ್ಟ್ ಬ್ರೌನ್ ಐಷಾಡೋ

ಸಾಫ್ಟ್ ಬ್ರೌನ್ ಐಷಾಡೋ

ಮೃದುವಾದ ಕಂದು ಬಣ್ಣದ ಐಷಾಡೋ ದೈನಂದಿನ ಮೇಕಪ್‍ಗಳಿಗೆ ಪರಿಪೂರ್ಣ ನೋಟವನ್ನು ನೀಡುತ್ತದೆ. ಇದರಿಂದ ಕಣ್ಣು ನೈಸರ್ಗಿಕ ಆಕರ್ಷಣೆಯಿಂದ ಕೂಡಿರುವುದು.

ಬೇಕಾಗುವ ಸಲಕರಣೆಗಳು

1. ಮೃದುವಾದ ಕಂದು ಬಣ್ಣದ ಐಷಾಡೋ

2. ಕಂದು ಬಣ್ಣದ ಐ ಲೈನರ್

3. ಮಸ್ಕರಾ

4. ಟೇಪ್

ಅನ್ವಯಿಸುವ ವಿಧಾನ

ಅನ್ವಯಿಸುವ ವಿಧಾನ

1. ಕಣ್ಣಿನ ಹೊಡೆಯ ಭಾಗದಲ್ಲಿ ಟೇಪ್‍ಅನ್ನು ಅಂಟಿಸಿ. ನಂತರ ತೀಕ್ಷ್ಣವಾದ ಲೈನರ್ ವಿಂಗ್ ರಚಿಸಿ.

2. ರೆಪ್ಪೆಯ ಮೇಲ್ಭಾಗದಲ್ಲಿ ಮೃದುವಾದ ಕಂದು ಬಣ್ಣದ ಐಷಾಡೋ ಅನ್ವಯಿಸಿ.

3. ಮೇಲಿನ ರೆಪ್ಪೆಗೆ ಕಂದು ಬಣ್ಣದ ಲೈನರ್ ಅನ್ವಯಿಸಿ, ಸೂಕ್ತ ರೀತಿಯಲ್ಲಿ ಬ್ಲೆಂಡ್ ಮಾಡಿ.

4. ಟೇಪ್‍ಅನ್ನು ತೆಗೆದು ಮಸ್ಕರವನ್ನು ಅನ್ವಯಿಸಿ.

For Quick Alerts
ALLOW NOTIFICATIONS
For Daily Alerts

    Read more about: beauty makeup
    English summary

    Makeup Tips For Brown Eyes

    Women with brown eyes have a lot of advantages because nearly all kinds of eye colours will look good on them. Sometimes, we are unaware of the different methods to use makeup in order to accentuate our eyes. Different eye colours require different shades of eye makeup because the same colour may not look good on two different eye colours. Luckily, the internet is filled with various makeup tutorials which are actually easy to follow.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more