ಚರ್ಮದ ಆರೈಕೆಗೆ ಉತ್ತಮ ಪರಿಹಾರ ಟೋನರ್ ಬಳಕೆ

Posted By: Divya Pandit
Subscribe to Boldsky

ನಾವೆಷ್ಟೇ ಸೌಂದರ್ಯ ವರ್ಧಕಗಳನ್ನು ಬಳಸಿದರೂ ಅದರೊಂದಿಗೆ ಟೋನರ್ಗಳನ್ನು ಬಳಸಬೇಕು ಎಂದು ಸೌಂದರ್ಯ ತಜ್ಞರು ಹೇಳುತ್ತಾರೆ. ನಿತ್ಯ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಿದ್ದರೆ ಕ್ರಮೇಣ ತ್ವಚೆಯು ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಫೇಶಿಯಲ್ ಟೋನರ್ಅನ್ನು ಕ್ಲೀನ್ಸರ್ ಬಳಸಿದ ನಂತರ ಅನ್ವಯಿಸಬೇಕು. ಆಗ ಟೋನರ್ ತ್ವಚೆಯ ಮೇಲೆ ಸುಲಭವಾಗಿ ಹೀರಲ್ಪಡುತ್ತದೆ. ಜೊತೆಗೆ ತ್ವಚೆಯ ಮೇಲೆ ಮಾಯ್ಚುರೈಸ್ ಗುಣವು ಹಾಗೆ ಇರುವಂತೆ ಮಾಡುತ್ತದೆ.

ಹಾಗಾಗಿಯೇ ಟೋನರ್ಅನ್ನು ಚರ್ಮದ ರಕ್ಷಣೆ ಮಾಡುವ ಸೌಂದರ್ಯ ವರ್ಧಕ ಎಂದು ಕರೆಯಲಾಗುತ್ತದೆ. ಮಾರುಕಟ್ಟೆ ಹಾಗೂ ಅಂಗಡಿಯಲ್ಲಿ ದೊರೆಯುವ ಟೋನರ್ಗಳಲ್ಲಿ ವಿವಿಧಬಗೆಯನ್ನು ಕಾಣಬಹುದು. ಅದನ್ನು ವಿವಿಧ ಬಗೆಯ ತ್ವಚೆಗಳಿಗನುಗುಣವಾಗಿಯೇ ಬಳಸಬೇಕು. ಇತರ ನಿರ್ದಿಷ್ಟ ಚರ್ಮದ ಕಾಳಜಿಯನ್ನು ಇದು ನಿರ್ವಹಿಸುತ್ತದೆ ಎನ್ನುವುದನ್ನು ಸಹ ತಜ್ಞರು ಹೇಳುತ್ತಾರೆ. ಹಾಗಾದರೆ ಟೋನರ್ ಯಾವ ಬಗೆಯಲ್ಲಿ ನಮ್ಮ ತ್ವಚೆಗೆ ಸ್ನೇಹ ಪೂರಕವಾದ ವರ್ತನೆಯನ್ನು ತೋರುತ್ತದೆ ಎನ್ನುವುದನ್ನು ತಿಳಿಯೋಣ.

ಚರ್ಮವನ್ನು ಬಿಗಿ ಗೊಳಿಸುತ್ತದೆ:

ಚರ್ಮವನ್ನು ಬಿಗಿ ಗೊಳಿಸುತ್ತದೆ:

ಮುಖದ ಸೌಂದರ್ಯಕ್ಕಾಗಿ ಬಳಸುವ ಟೋನರ್ ನಿಮ್ಮ ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ. ದೊಡ್ಡ ರಂಧ್ರಗಳು ಚರ್ಮವನ್ನು ಬಹುಬೇಗ ಹಾಳುಮಾಡಬಹುದು. ಜೊತೆಗೆ ಅಸಹ್ಯಕರವಾದ ಬ್ರೇಕ್ಔಟ್ಗೆ ಕಾರಣವಾಗುವುದು. ಮುಖದ ಟೋನರ್ ಬಳಸುವುದರಿಂದ ತ್ವಚೆಯು ಹೆಚ್ಚು ಬಿಗಿತವನ್ನು ಕಂಡು, ವಯಸ್ಸಾದ ಚಿಹ್ನೆಯನ್ನು ಮರೆಮಾಚುವುದು.

ಚರ್ಮದ ಸಮತೋಲನ ಕಾಪಾಡುವುದು:

ಚರ್ಮದ ಸಮತೋಲನ ಕಾಪಾಡುವುದು:

ಚರ್ಮದಲ್ಲಿರುವ ಕಡಿಮೆ ಅಥವಾ ಉನ್ನತ ಮಟ್ಟದ ಪಿಎಚ್ ಸೋಂಕುಗಳು ಮತ್ತು ಮೊಡವೆ ಬ್ರೇಕ್ಔಟ್ಗಳಿಗೆ ದುರ್ಬಲವಾಗಬಹುದು. ನಿಮ್ಮ ಚರ್ಮದಲ್ಲಿ ಸೂಕ್ತವಾದ ಪಿಎಚ್ ಸಮತೋಲನವನ್ನು ಕಾಪಾಡಲು ಮುಖದ ಟೋನರ್ಅನ್ನು ಬಳಸುವುದು ಸೂಕ್ತ. ಸೌಂದರ್ಯ ವರ್ಧಕಗಳೊಂದಿಗೆ ಬಳಸುವುದರಿಂದ ಚರ್ಮವು ಆರೋಗ್ಯಕರವಾಗಿರುವುದು.

ತೇವಾಂಶವನ್ನು ಕಾಪಾಡುವುದು:

ತೇವಾಂಶವನ್ನು ಕಾಪಾಡುವುದು:

ಮುಖದ ಟೋನರ್ ನಿಮ್ಮ ಚರ್ಮಕ್ಕೆ ತೇವಾಂಶವನ್ನು ಲಾಕ್ ಮಾಡುವ ಮೂಲಕ ಉತ್ತಮ ಕಾರ್ಯ ನಿರ್ವಹಿಸುವುದು. ತೇವಾಂಶದ ನಷ್ಟವು ನಿಮ್ಮ ಚರ್ಮದ ಆರೋಗ್ಯ ಮತ್ತು ಅದರ ವಿನ್ಯಾಸದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇದರಿಂದ ವಯಸ್ಸಾದ ಮತ್ತು ಮಂದಗತಿಯ ಅಕಾಲಿಕ ಚಿಹ್ನೆಗಳಿಗೆ ಕಾರಣವಾಗಬಹುದು. ನಿಮ್ಮ ಚರ್ಮವನ್ನು ನಿಯಮಿತವಾಗಿ ಮುಖದ ಟೋನರ್ನೊಂದಿಗೆ ಚಿಕಿತ್ಸೆ ನೀಡಿ, ನಿಮ್ಮ ಚರ್ಮವು ಎಲ್ಲಾ ಸಮಯದಲ್ಲೂ ಚೆನ್ನಾಗಿ ಆರೋಗ್ಯಕರವಾಗಿರುತ್ತದೆ.

ನಿಮ್ಮ ಚರ್ಮವು ಹೈಡ್ರೇಡ್ ಆಗಿ ಉಳಿಯಲು ಸಹಾಯ ಮಾಡುತ್ತದೆ:

ನಿಮ್ಮ ಚರ್ಮವು ಹೈಡ್ರೇಡ್ ಆಗಿ ಉಳಿಯಲು ಸಹಾಯ ಮಾಡುತ್ತದೆ:

ಮುಖದ ಟೋನರ್ ತ್ವಚೆಯನ್ನು ಹೈಡ್ರೇಟ್ ಅಥವಾ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಮಾಲಿನ್ಯದ ಗಾಳಿ ಮತ್ತು ಅಲಂಕಾರಿಕ ವಸ್ತುಗಳ ಬಳಕೆಯು ನಿಮ್ಮ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಸೌಂದರ್ಯ ದಿನಚರಿಯಲ್ಲಿ ಮುಖದ ಟೋನರ್ ಅನ್ನು ಸೇರಿಸಿಕೊಳ್ಳಬೇಕು . ಇದು ನಿಮ್ಮ ತ್ವಚೆಯನ್ನು ಮೃದುವಾಗಿರಲು ಸಹಾಯ ಮಾಡುತ್ತದೆ.

ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ:

ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ:

ನಿಮ್ಮ ಚರ್ಮದ ಉತ್ಪಾದನೆಯು ರಂಧ್ರಗಳನ್ನು ಮುಚ್ಚಿಹಾಕಬಹುದು . ಮೊಡವೆಯಿಂದ ಚರ್ಮದ ಮೇಲೆ ಪರಿಣಾಮಕಾರಿಯಾದ ಹಾನಿಯಾಗುತ್ತದೆ. ನಿಮ್ಮ ದೈನಂದಿನ ಚರ್ಮದ ಆರೈಕೆ ಕಟ್ಟುಪಾಡುಗಳಲ್ಲಿ ನೀವು ಮುಖದ ಟೋನರನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆಗ ಚರ್ಮವು ಹೆಚ್ಚುವರಿ ಎಣ್ಣೆಯಿಂದ ಮುಕ್ತವಾಗಿ ಇರುತ್ತದೆ.

ಕೊಳಕನ್ನು ತೆಗೆಯುವುದು:

ಕೊಳಕನ್ನು ತೆಗೆಯುವುದು:

ಮುಖದ ಟೋನರ್ ಬಳಸುವುದರಿಂದ ಉಂಟಾಗುವ ಇನ್ನೊಂದು ಪ್ರಮುಖ ಪ್ರಯೋಜನ ಇದು. ಪ್ರತಿದಿನ ನಮ್ಮ ಚರ್ಮದ ಮೇಲ್ಮೈಯಲ್ಲಿ ಕೊಳಕು ಮತ್ತು ಕಸವನ್ನು ನಿರ್ಮಿಸಲು ಕಾರಣವಾಗುವ ಕಠಿಣವಾದ ಬಾಹ್ಯ ಅಂಶಗಳಿಗೆ ಒಡ್ಡಿಕೊಳ್ಳುತ್ತದೆ. ರಂಧ್ರಗಳನ್ನು ತಡೆಗಟ್ಟಲು ಮತ್ತು ಸೋಂಕು ಉಂಟುಮಾಡುವುದನ್ನು ತಡೆಗಟ್ಟಲು ಮುಖದ ಟೋನರ್ ಅನ್ನು ಬಳಸಬಹುದು.

ಚರ್ಮದ ತಾಜಾತನಕ್ಕೆ:

ಚರ್ಮದ ತಾಜಾತನಕ್ಕೆ:

ಮುಖದ ಟೋನರ್ ನಿಮ್ಮ ಚರ್ಮದ ಆರೈಕೆಗೆ ಒಂದು ಉತ್ತಮ ಪರಿಹಾರವಾಗಿದೆ. ತ್ವಚೆಯನ್ನು ತಾಜಾತನದಿಂದ ಕೂಡಿರುವಂತೆ ಮಾಡಲು ಮತ್ತು ಸದಾ ಕಾಂತಿಯಿಂದ ಕಂಗೊಳಿಸಲು ಸಹಾಯಮಾಡುವುದು. ಹಾಗಾಗಿ ನಿಮ್ಮ ತ್ವಚೆಯ ಆರೈಕೆಗಾಗಿ ಮನೆಯಲ್ಲಿ ನೀವೇ ಟೋನರ್ ತಯಾರಿಸಿ ಬಳಸಬಹುದು ಅಥವಾ ಅಂಗಡಿಯಿಂದ ಟೋನರ್ ಖರೀದಿಸಿ ಬಳಸಬಹುದು.

Read more about: beauty
English summary

Why You Should Add A Face Toner To Your Beauty Routine?

The latest skin care product to go viral in the beauty community is a facial toner. Its trend has been blowing up for the past few years and finally the skin care experts all over the world have declared it to be a must-use skin care item.
Story first published: Thursday, November 16, 2017, 17:33 [IST]