ಪಾರ್ಟಿಗೆ ಹೋಗುವಾಗ ಮೇಕಪ್ ಹೇಗಿರಬೇಕು? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By: Hemanth
Subscribe to Boldsky

ಕೆಲವು ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗಡೆ ಹೋಗುವುದೇ ಇಲ್ಲ. ಸುಂದರವಾಗಿ ಕಾಣಬೇಕೆಂದರೆ ನೈಜ ಸೌಂದರ್ಯದೊಂದಿಗೆ ಸ್ವಲ್ಪ ಮಟ್ಟಿನ ಮೇಕಪ್ ಕೂಡ ಬೇಕಾಗುವುದು. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಮೇಕಪ್ ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಕೂಡ ಮಹಿಳೆಯರಿಗೆ ಇಷ್ಟವಾಗಿರುವಂತಹ ಪ್ರತಿಯೊಂದು ಮೇಕಪ್ ಸಾಮಗ್ರಿಗಳು ದೊರೆಯುತ್ತದೆ.

ಸುಂದರವಾಗಿ ಕಾಣಿಸಿಕೊಂಡು ಎಲ್ಲರನ್ನು ಸೆಳೆಯಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುವುದು. ಹೆಚ್ಚಿನ ಮಹಿಳೆಯರು ಪ್ರತೀ ದಿನ ಮೇಕಪ್ ಮಾಡಿಕೊಳ್ಳುತ್ತಾರೆ. ಮೇಕಪ್ ಬಗ್ಗೆ ಸರಿಯಾದ ಜ್ಞಾನವಿದ್ದರೆ ಮೇಕಪ್ ಮಾಡಿಕೊಳ್ಳಬಹುದು. ಇಲ್ಲವಾದರೆ ಸರಿಯಾದ ಪರಿಣಾಮ ಪಡೆಯಲು ಸಾಧ್ಯವಿಲ್ಲ.

ಚಿಟಿಕೆ ಹೊಡೆಯುವುದರೊಳಗೆ, 'ಮೇಕಪ್' ಮಾಡಿ ಮುಗಿಸಿ!

ಮೇಕಪ್ ಮಾಡುವುದರಿಂದ ಚರ್ಮದಲ್ಲಿರುವ ರಂಧ್ರಗಳು ತುಂಬಿಕೊಳ್ಳುವುದು. ಇದರಿಂದ ಮೊಡವೆಗಳು ಹಾಗೂ ಮುಖದಲ್ಲಿ ಬೊಕ್ಕೆಗಳು ಮೂಡುವುದು. ಮೊಡವೆಗಳ ಮೇಲೆ ಮೇಕಪ್ ಮಾಡಿಕೊಂಡರೂ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಚರ್ಮದ ವಿಧವನ್ನು ಅನುಸರಿಸಿಕೊಂಡು ಮೇಕಪ್ ಮಾಡಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಇಲ್ಲವಾದರೆ ಮೇಕಪ್ ನಿಂದ ಮುಖ ಕೂಡ ಕೆಡಬಹುದು. ಚರ್ಮದಲ್ಲಿರುವ ತೈಲಗ್ರಂಥಿಗಳು ಅತಿಯಾಗಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಕಾರಣದಿಂದ ಚರ್ಮದಲ್ಲಿ ಜಿಡ್ಡು ಕಾಣಿಸಿಕೊಳ್ಳುವುದು. ಪದೇ ಪದೇ ಮುಖ ತೊಳೆದುಕೊಳ್ಳುವುದರಿಂದ ಸಮಸ್ಯೆ ನಿವಾರಣೆ ಮಾಡಬಹುದು. ಮೇಕಪ್ ಅನ್ನುವುದು ಕೆಲವು ಹಂತಗಳನ್ನು ಹೊಂದಿದೆ. ಕೆಲವು ಮಹಿಳೆಯರು ಮೊಡವೆಗಳ ಭೀತಿಯಿಂದ ಮೇಕಪ್ ಮಾಡಿಕೊಳ್ಳಲು ಭೀತಿಪಡುತ್ತಾರೆ.

ಲಿಪ್‍ಸ್ಟಿಕ್ ಬಣ್ಣ ಹಾಗೇ ಉಳಿಯಬೇಕೆಂದರೆ ಇಲ್ಲಿದೆ ನೋಡಿ ಸುಲಭ ಉಪಾಯ...

ಪ್ರತೀ ದಿನ ಮೇಕಪ್ ಮಾಡಿಕೊಳ್ಳುವುದನ್ನು ಕಡೆಗಣಿಸಬೇಕು. ಯಾವುದೇ ಕಾರ್ಯಕ್ರಮಗಳಿಗೆ ಹೋಗುವಾಗ ಮಾತ್ರ ಮೇಕಪ್ ಮಾಡಿಕೊಂಡರೆ ಒಳ್ಳೆಯದು. ಎಣ್ಣೆಯಂಶವಿರುವ ಚರ್ಮದ ಮೇಲೆ ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ಹೇಳಿಕೊಡಲಿದೆ.... 

ಪ್ರಿಮೆರ್‌ನೊಂದಿಗೆ ಚರ್ಮ ಸಿದ್ಧಗೊಳಿಸಿ

ಪ್ರಿಮೆರ್‌ನೊಂದಿಗೆ ಚರ್ಮ ಸಿದ್ಧಗೊಳಿಸಿ

ಎಣ್ಣೆಯಂಶ ಕಾಣಿಸದೆ ಇರಲು ಮತ್ತು ದೀರ್ಘಕಾಲ ಮೇಕಪ್ ಉಳಿಯಲು ಇದು ಪ್ರಮುಖ ಅಂಶವಾಗಿದೆ. ಎಣ್ಣೆಯಂಶವಿರುವ ಚರ್ಮಕ್ಕೆ ಮಾಯಿಶ್ಚರೈಸರ್ ಮಾಡಿಕೊಳ್ಳುವುದು ಅತೀ ಅಗತ್ಯ. ಮೊಶ್ಚಿರೈಸರ್ ಮಾಡಿದರೆ ಚರ್ಮದಲ್ಲಿನ ಎಣ್ಣೆಯಂಶವನ್ನು ಸಮತೋಲನ ದಲ್ಲಿಡುವುದು ಮತ್ತು ಮೇಕಪ್ ಕೂಡ ಹೊಳೆಯುವುದು. ಪ್ರಿಮೆರ್ ಅತಿಯಾದ ಎಣ್ಣೆಯನ್ನು ಹೀರಿಕೊಳ್ಳುವುದು ಮತ್ತು ಮೇಕಪ್ ಹರಡದಂತೆ ಹಾಗೂ ಕರಗದಂತೆ ನೋಡಿಕೊಳ್ಳುವುದು. ಚರ್ಮಕ್ಕೆ ಚೆನ್ನಾಗಿ ಮಾಯಿಶ್ಚರೈಸರ್ ನೀಡಿ ಬಳಿಕ ಎಣ್ಣೆ ನಿಯಂತ್ರಿಸುವಂತಹ ಪ್ರಿಮೆರ್ ಹಾಕಿ. ಈಗ ಮೇಕಪ್ ಗೆ ಚರ್ಮವು ಸಿದ್ಧವಾಗಿದೆ.

ಎರಡನೇ ಹಂತ

ಎರಡನೇ ಹಂತ

ಎಣ್ಣೆಯಂಶವಿರುವ ಚರ್ಮಕ್ಕೆ ಕನ್ಸೆಲಿಂಗ್ ಮಾಡಿಕೊಳ್ಳುವುದರಿಂದ ಕಲೆಗಳು ಮತ್ತು ಗುರುತು ಮೂಡಬಹುದು. ಒಳ್ಳೆಯ ಕನ್ಸೀಲರ್ ನಿಂದ ಇದನ್ನು ಅಡಗಿಸುವುದು ತುಂಬಾ ಒಳ್ಳೆಯದು. ಇದು ಫೌಂಡೇಶನ್‌ಗಿಂತ ಸ್ವಲ್ಪ ದಪ್ಪವಾಗಿರಲಿ. ಅಡಗಿಡುವ ಮತ್ತು ಹಗುರವಾಗಿರುವಂತಹ ಕನ್ಸೀಲರ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬೆರಳಿನ ತುದಿಯಿಂದ ಕನ್ಸೀಲರ್ ಅನ್ನು ಹಚ್ಚಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಇದು ಸರಿಯಾಗಿ ಹೊಂದಿಕೊಳ್ಳುವುದು. ಬೆರಳಿನ ತುದಿಯಲ್ಲಿ ಕನ್ಸೀಲರ್ ನ್ನು ತೆಗೆದುಕೊಂಡು ಅದನ್ನು ಕಪ್ಪು ಕಲೆಗಳು ಹಾಗೂ ಮೊಡವೆಗಳ ಕಲೆಗಳ ಮೇಲೆ ಹಚ್ಚಿಕೊಳ್ಳಿ. ಕಣ್ಣ ಕೆಳಗಿನ ಕಪ್ಪು ಕಲೆಗಳಿಗೆ ಕನ್ಸೀಲರ್ ನ್ನು ವಿ ಆಕೃತಿಯಲ್ಲಿ ಹಚ್ಚಿಕೊಳ್ಳಿ.

ಮೂರನೇ ಹಂತ

ಮೂರನೇ ಹಂತ

ಕನ್ಸೀಲರ್ ಬಳಿಕ ಪೌಂಡೇಶನ್ ಮಾಡಿಕೊಳ್ಳುವುದು ಅತೀ ಅಗತ್ಯ. ಮೇಕಪ್‌ನಲ್ಲಿ ಇದು ಪ್ರಾಮುಖ್ಯ ಹಂತವಾಗಿದೆ. ಇಲ್ಲಿ ಕೆಲವು ಮಂದಿ ತಪ್ಪು ಮಾಡುತ್ತಾರೆ. ಈ ಹಂತವು ನಿಮ್ಮ ಮೇಕಪ್ ನ್ನು ಸುಂದರಗೊಳಿಸಬಹುದು ಅಥವಾ ಕೆಡಿಸಬಹುದು. ಸರಿಯಾದ ಪೌಂಡೇಶನ್ ಖರೀದಿಸುವ ಮೊದಲು ಸರಿಯಾಗಿ ಅದರ ಬಗ್ಗೆ ತಿಳಿದುಕೊಳ್ಳಿ. ಯಾವ ಶೇಡ್ ಎನ್ನುವುದು ಮುಖ್ಯ. ಚರ್ಮದ ಬಣ್ಣಕ್ಕೆ ಹತ್ತಿರವಾಗಿರುವ ಶೇಡ್ ಬಳಸಿಕೊಳ್ಳಿ. ಎಲ್ಲಾ ಫೌಂಡೇಶನ್‌ಗಳು ತುಂಬಾ ದಪ್ಪವಾಗಿರುವುದು ಮತ್ತು ಇದರಿಂದ ಚರ್ಮದ ರಂಧ್ರಗಳು ತುಂಬಿಕೊಳ್ಳಬಹುದು. ಕೇವಲ ಕನ್ಸೀಲರ್ ನಿಂದ ಮೇಕಪ್ ಮಾಡಿಕೊಳ್ಳಬೇಕೆಂದು ಬಯಸಿದ್ದರೆ ಫೌಂಡೇಶನ್ ಹಾಕಿಕೊಳ್ಳಲು ಹೋಗಬೇಡಿ. ಇದರ ಬದಲಿಗೆ ಬಿಬಿ ಅಥವಾ ಸಿಸಿ ಕ್ರೀಮ್ ಬಳಸಿ. ಇದು ತುಂಬಾ ಲಘುವಾಗಿರುವುದು ಮತ್ತು ಮೊಡವೆ ಮೂಡುವ ಸಾಧ್ಯತೆ ತುಂಬಾ ಕಡಿಮೆ.

ಪೌಂಡೇಶನ್ ಬೇಕೇ ಬೇಕು ಎಂದು ನಿಮಗೆ ಅನಿಸುವುದಾದರೆ

ಪೌಂಡೇಶನ್ ಬೇಕೇ ಬೇಕು ಎಂದು ನಿಮಗೆ ಅನಿಸುವುದಾದರೆ

ಒಂದು ವೇಳೆ ಪೌಂಡೇಶನ್ ಬೇಕೇ ಬೇಕು ಎಂದು ನಿಮಗೆ ಅನಿಸುವುದಾದರೆ ಎಣ್ಣೆಯಂಶ ಇಲ್ಲದೆ ಇರುವ ನೀರಿನ ಅಥವಾ ಖನಿಜಾಂಶ ಮೂಲದ ಫೌಂಡೇಶನ್ ಬಳಸಿಕೊಳ್ಳಿ. ಇದರಿಂದ ಉಳಿದಿರುವಂತಹ ಜಾಗವು ತುಂಬಿಕೊಳ್ಳುವುದು. ಫೌಂಡೇಶನ್ ನ್ನು ಬೆರಳಿನ ತುದಿಯಿಂದ ಹಚ್ಚಿಕೊಳ್ಳಿ. ಮೊಡವೆ ಬರದಂತೆ ತಡೆಯಲು ಸ್ವಚ್ಛವಾಗಿರುವ ಸ್ಪಾಂಜ್ ಅಥವಾ ಬ್ರಷ್ ಬಳಸಿಕೊಳ್ಳಿ.

ಪೌಡರ್ ಹಾಕಿಕೊಳ್ಳುವುದು

ಪೌಡರ್ ಹಾಕಿಕೊಳ್ಳುವುದು

ಫೌಂಡೇಶನ್ ಹಾಕಿಕೊಂಡ ಬಳಿಕ ಸರಿಯಾದ ಪೌಡರ್ ಹಾಕಿಕೊಳ್ಳಬೇಕು. ಹೆಚ್ಚು ಹೊಳೆಯುವ ಪೌಡರ್ ಬಳಸಬೇಡಿ. ಎಣ್ಣೆಯಂಶ ಉಂಟು ಮಾಡುವ ಕೆಲವು ಜಾಗಗಳಿಗೆ ಸರಿಯಾಗಿ ಪೌಡರ್ ಹಾಕಿಕೊಳ್ಳಿ.

English summary

Step By Step Makeup Tips For oily Skin

Don't we all love makeup? It is an expression of our inner self. It makes us look good and confident even in the gloomiest of days. What's more...it also helps us get attention from the opposite sex. That is why we do not mind spending a few hours in front of the mirror to doll up for that important event. After all, first impressions last forever.
Subscribe Newsletter