ಮೇಕಪ್ ಟ್ರಿಕ್ಸ್- ಪ್ರತಿಯೊಬ್ಬ ಮಹಿಳೆಯೂ ತಿಳಿದಿರಲೇ ಬೇಕು!

By: Arshad
Subscribe to Boldsky

ಮೇಕಪ್ ಮಾಡಿಕೊಳ್ಳುವುದೆಂದರೆ ಅತಿ ಕಲಾತ್ಮಕ ಕೆಲಸವಾಗಿದ್ದು ಇದು ಎಲ್ಲರಿಗೆ ಒಲಿಯುವುದಿಲ್ಲ. ತಾರುಣ್ಯದಲ್ಲಿ ಚರ್ಮ ಸಹಜ ಸೆಳೆತ ಹೊಂದಿರುವ ಕಾರಣ ಮೇಕಪ್ ಕೊಂಚವೇ ಆಗಿದ್ದರೆ ಸಾಕು ಹಾಗೂ ಆರೋಗ್ಯಕರವೂ ಹೌದು. ಆದರೆ ವಯಸ್ಸಾಗುತಿದ್ದಂತೆಯೇ ಚರ್ಮ ನಿಧಾನವಾಗಿ ಸಡಿಲಗೊಳ್ಳುವ ಕಾರಣ ಹಿಂದಿನ ತಾರುಣ್ಯದ ಸೊಬಗನ್ನು ಉಳಿಸಿಕೊಳ್ಳಲು ಮೇಕಪ್ ಅನ್ನು ಹೆಚ್ಚು ಕಲಾತ್ಮಕವಾಗಿ ಹಚ್ಚಿಕೊಳ್ಳಬೇಕಾಗುತ್ತದೆ.  ಮೇಕಪ್ ತಪ್ಪು: ಇಂಗು ತಿಂದ ಮಂಗನಂತೆ ಆಗಬೇಡಿ!

ವಿಶೇಷವಾಗಿ ಕಣ್ಣ ಕೆಳಗಿನ ಕಪ್ಪು ವರ್ತುಲ ಹಾಗೂ ಕಲೆಗಳು. ಇವನ್ನು ಅಡಗಿಸಲು ಮೇಕಪ್ ಪ್ರಸಾಧನಗಳನ್ನು ಹೆಚ್ಚೂ ಆಗಬಾರದು, ಕಲೆಯೂ ಕಾಣಬಾರದು ಎಂಬಷ್ಟು ಅಲ್ಪಪ್ರಮಾಣದಲ್ಲಿ ಮಾತ್ರವೇ ಉಪಯೋಗಿಸುವುದೇ ಜಾಣತನದ ಕ್ರಮವಾಗಿದೆ. ದಿನನಿತ್ಯ ಮೇಕಪ್ ಬಿಟ್ಟಾಕಿ-ಖಂಡಿತ ಸುಂದರವಾಗಿ ಕಾಣುವಿರಿ!  

ಸಾಮಾನ್ಯವಾಗಿ ಯಾವುದೇ ಪ್ರಸಾಧನ ರಾಸಾಯನಿಕದಿಂದ ಮುಕ್ತವಿಲ್ಲ. ಆದರೆ ನಮ್ಮ ದೇಹದ ರಸದೂತಗಳ ಪ್ರಭಾವ, ಗಾಳಿಯಲ್ಲಿನ ಪ್ರದೂಷಣೆ ಮೊದಲಾದ ಹಲವಾರು ಕಾರಣಗಳಿಂದ ತನ್ನ ನೈಜಸೌಂದರ್ಯವನ್ನು ವಯಸ್ಸಾಗುತ್ತಿದ್ದಂತೆ ಕಳೆದುಕೊಳ್ಳುತ್ತಾ ಹೋಗುತ್ತದೆ.

ಆದರೆ ಸರಿಯಾದ ಕ್ರಮದಲ್ಲಿ ಮತ್ತು ಸುರಕ್ಷಿತವಾದ ಪ್ರಸಾಧನಗಳನ್ನು ಬಳಸುವುದರಿಂದ ತಾರುಣ್ಯವನ್ನು ಹೆಚ್ಚು ಕಾಲ ಕಾಪಾಡಿಕೊಳ್ಳಬಹುದು. ಬನ್ನಿ, ಈ ಬಗ್ಗೆ ಪ್ರತಿ ಯುವತಿಯೂ ತಿಳಿದಿರಬೇಕಾದ ಕೆಲವು ಸೂಕ್ಷ್ಮ ಕಲೆಗಳನ್ನು ನೋಡೋಣ.... 

ಮೊಡವೆಗಳನ್ನು ಮುಚ್ಚಲು

ಮೊಡವೆಗಳನ್ನು ಮುಚ್ಚಲು

ಮೊಡವೆಗಳು ಪ್ರತಿ ಹದಿಹರೆಯದ ಯುವತಿಯರನ್ನು ಕಾಡುವ ಸಮಸ್ಯೆ. ನಡುವಯಸ್ಸು ದಾಟುವವರೆಗೂ ಇದು ಮುಂದುವರೆಯುತ್ತದೆ. ಮೊಡವೆಗಳನ್ನು ಚಿವುಟಿ ಇದರ ಮೇಲೆ ಮೇಕಪ್ ಸವರಿಕೊಳ್ಳುವುದು ಸರ್ವಥಾ ಜಾಣತನವಲ್ಲ. ಬದಲಿಗೆ ಹಸಿರು ಬಣ್ಣದ ಕರೆಕ್ಟರ್, ಕೆಲವು ಸಹಜವರ್ಣದ ಕಂಸೀಲರ್, ಫೌಂಡೇಶನ್ ಹಾಗೂ ಒತ್ತಿರುವ ಪೌಡರ್ ಅಗತ್ಯವಿದೆ. ಹಸಿರು ಏಕೆಂದರೆ ಮೊಡವೆಯ ಗುಲಾಬಿ ಬಣ್ಣವನ್ನು ಪೂರ್ಣವಾಗಿ ಮರೆಮಾಚಲು ಈ ಬಣ್ಣವೇ ಸೂಕ್ತವಾಗಿದೆ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಕಣ್ಣುಗಳ ಕೆಳಗಿನ ವರ್ತುಲಗಳಿಗೆ

ಕಣ್ಣುಗಳ ಕೆಳಗಿನ ವರ್ತುಲಗಳಿಗೆ

ಸಾಮಾನ್ಯವಾಗಿ ರಾತ್ರಿ ಮಲಗಲು ತಡಮಾಡಿದಷ್ಟೂ ಕಣ್ಣುಗಳ ಕಪ್ಪು ವರ್ತುಲಗಳು ಹೆಚ್ಚು ದಟ್ಟವಾಗುತ್ತಾ ಹೊಗುತ್ತವೆ. ಈ ವರ್ತುಲಗಳನ್ನು ಮರೆಮಾಚಲು ಮೊದಲು ಸಾಲ್ಮನ್ ಥವಾ ಕಿತ್ತಳೆ ಬಣ್ಣದ ಕಂಸೀಲರ್ ಬಳಸಿ. ಕಿತ್ತಳೆ ಬಣ್ಣ ಕಪ್ಪು ವರ್ತುಲದ ನಿಜವಾದ ಬಣ್ಣವಾದ ಗಾಢ ನೇರಳೆ ಬಣ್ಣಕ್ಕೆ ವಿರುದ್ಧವಾದ ಬಣ್ಣವಾದ ಕಾರಣ ಈ ವರ್ತುಲಗಳನ್ನು ಸಮರ್ಥವಾಗಿ ಮರೆಮಾಚಲು ಸಾಧ್ಯವಾಗುತ್ತದೆ. ಇದರಿಂದ ಅತಿ ಕಡಿಮೆ ಸಮಯದಲ್ಲಿ ನಿಮ್ಮ ಮೇಕಪ್ ಪೂರ್ಣಗೊಂಡು ಸೌಂದರ್ಯ ಇಮ್ಮಡಿಗೊಳ್ಳುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಕೆಲವು ದಿನ ಚರ್ಮದ ಕಾಂತಿ ಕಳೆದುಕೊಂಡಿದ್ದು ಇದನ್ನು ಪುನಃ ಪಡೆಯಬೇಕೆಂದರೆ ಹೈಲೈಟಿಂಗ್ ಕ್ರೀಂ ಬಳಸಿ. ಇದನ್ನು ನಿಮ್ಮ ಫೌಂಡೇಶನ್ ಅಥವಾ ಬಿಬಿ ಕ್ರೀಂ ನೊಂದಿಗೆ ಬೆರೆಸಿ ಹಚ್ಚಿಕೊಳ್ಳಿರಿ ಇದರಿಂದ ಚರ್ಮದ ಸಹಜಕಾಂತಿ ಹೆಚ್ಚುತ್ತದೆ. ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!

ಗಾಢಕೆಂಪು ತುಟಿಗಳಿಗಾಗಿ

ಗಾಢಕೆಂಪು ತುಟಿಗಳಿಗಾಗಿ

ಪ್ರತಿ ಯುವತಿಯೂ ತುಟಿಗಳಿಗೆ ಕೆಂಪು ಬಣ್ಣವನ್ನು ಹಚ್ಚಿಕೊಳ್ಳುವುದು ಉತ್ತಮ. ಮುಖದ ತ್ವಚೆಯ ಬಣ್ಣ ಯಾವುದೇ ಇರಲಿ ತುಟಿಗೆ ಕೆಂಪುಬಣ್ಣ ಹಚ್ಚಿಕೊಂಡರೆ ಯಾವುದೇ ವರ್ಣಕ್ಕೆ ಇದು ಹೊಂದಿಕೊಳ್ಳುತ್ತದೆ. ಕೆಂಪು ವರ್ಣ ಗಾಢವಾಗಿದ್ದಷ್ಟೂ ಇದು ನಿಮಗೆ ಸೌಂದರ್ಯ ತಾರೆಯ ಮೆರುಗನ್ನು ನೀಡುತ್ತದೆ.

 
English summary

Makeup Tricks Every Girl Should Know

As we all know, these can show up quite a lot even in pictures. And then there's the dilemma of having skin that may not look nice all month long, because let's face it, our hormones love to play games with our skin. So, makeup tricks can really come in handy. Here are some makeup tricks every girl should know!
Please Wait while comments are loading...
Subscribe Newsletter