Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿನನಿತ್ಯ ಮೇಕಪ್ ಬಿಟ್ಟಾಕಿ-ಖಂಡಿತ ಸುಂದರವಾಗಿ ಕಾಣುವಿರಿ!
ಪ್ರತೀ ದಿನ ಒಂದೊಂದು ರೀತಿಯಲ್ಲಿ ಮೇಕಪ್ ಮಾಡಿಕೊಂಡು ಹೋಗದೆ ಇದ್ದರೆ ಕಚೇರಿಯಲ್ಲಿ ಬೇರೆಯವರ ಎದುರು ನಿಲ್ಲಲು ಹಿಂಜರಿಕೆಯಾಗುತ್ತದೆ. ಹಾಗಾಗಿ ಪ್ರತೀ ದಿನ ಆಫೀಸ್‌ಗೆ ಹೋಗುವ ಮುನ್ನ ಕನ್ನಡಿ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಮೇಕಪ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಸಮಯದ ಅಭಾವದಿಂದಾಗಿ ಕೆಲವೊಮ್ಮೆ ಮೇಕಪ್ ಕೆಟ್ಟದಾಗಿ ಕಾಣಿಸುತ್ತದೆ.

ಮಾರುಕಟ್ಟೆಯಲ್ಲಿ ಸಿಗುವಂತಹ ಮೇಕಪ್ ಸಾಮಗ್ರಿಗಳು ತುಂಬಾ ದುಬಾರಿ ಹಾಗೂ ಅದರಲ್ಲಿ ಹಲವಾರು ರೀತಿಯ ರಾಸಾಯನಿಕಗಳನ್ನು ಹಾಕಿರುವ ಕಾರಣದಿಂದ ದಿನಾಲೂ ಬಳಸಿದರೆ ಮುಂದೆ ನಿಮ್ಮ ಚರ್ಮದ ಮೇಲೆ ಅದರ ಪರಿಣಾಮ ಉಂಟಾಗಬಹುದು. ದುಂಡಗಿನ ಮುಖಕ್ಕೆ ಸೂಕ್ತವಾಗಿರುವ 7 ಮೇಕಪ್ ಸಲಹೆಗಳು
ಇದಕ್ಕಾಗಿ ಯಾವುದೇ ಮೇಕಪ್ ಹಾಕಿಕೊಳ್ಳದೆ ಸುಂದರವಾಗಿ ಕಾಣಿಸಿಕೊಳ್ಳುವ ಬಗ್ಗೆ ನಾವು ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ. ಈ ಸರಳ ಸೂತ್ರಗಳನ್ನು ಅಳವಡಿಸಿಕೊಂಡರೆ ನೀವು ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಿಸಿಬಹುದು. ಹದಿಹರೆಯಕ್ಕೆ ಕಾಲಿಡುವ ಹುಡುಗಿಯರಿಗೆ ಮೇಕಪ್ ಟಿಪ್ಸ್
1.ಮೇಕಪ್ ಇಲ್ಲದೆ ಇರಬೇಕೆಂದರೆ ನೀವು ಮುಖಕ್ಕೆ ಕ್ಲೆನ್ಸಿಂಗ್, ಪದರ ತೆಗೆಯುತ್ತಿರಬೇಕು ಮತ್ತು ಮುಖದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಬೇಕು.
2. ಪದರ ತೆಗೆದು ಹಾಕುವುದರಿಂದ ಕಾಂತಿಯುತವಾದ ಚರ್ಮವನ್ನು ಪಡೆಯಬಹುದು. ಇದರಿಂದ ನೀವು ಫೌಂಡೇಶನ್ ಮೇಲೆ ನಿರ್ಬರವಾಗಿರಬೇಕಿಲ್ಲ.
3.ತುಟಿಗಳ ಪದರಗಳನ್ನು ತೆಗೆದುಹಾಕಲು ವಾರದಲ್ಲಿ ಕೆಲವು ಸಲ ಹಲ್ಲುಜ್ಜುವ ಬ್ರಶ್ ನಿಂದ ತುಟಿಗಳನ್ನು ಉಜ್ಜಿಕೊಳ್ಳಿ. ಇದರಿಂದ ನೈಸರ್ಗಿಕವಾಗಿ ಗುಲಾಬಿ ತುಟಿಯು ನಿಮ್ಮದಾಗುವುದು.
4.ಬೆರಳುಗಳನ್ನು ಬಳಸಿಕೊಂಡು ಪ್ರತೀ ದಿನ ರಾತ್ರಿ ವೇಳೆ ಮುಖಕ್ಕೆ ಮಸಾಜ್ ಮಾಡಿಕೊಳ್ಳೂವುದರಿಂದ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಿಸಿಕೊಳ್ಳಬಹುದು.
5.ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ದಿನಾಲೂ ಹಲ್ಲುಜ್ಜಿ. ಇದರಿಂದ ಹಲ್ಲುಗಳು ಹೊಳೆಯುವುದು.
6.ಕಣ್ಣಿನ ರೆಪ್ಪೆಗಳು ಸುಂದರವಾಗಿ ಕಾಣಬೇಕಾದರೆ ನೈಸರ್ಗಿಕವಾಗಿ ನೀವು ಪೆಟ್ರೋಲಿಯಂ ಜೆಲ್ ಅನ್ನು ಬಳಸಬಹುದು.
7.ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಬೇಕಾದರೆ ಕೂದಲು ಒಂದೇ ರೀತಿಯಾಗಿರಲು ನೀವು ಮಾಯಿಶ್ಚಿರೈಸರ್ ಅನ್ನು ಬಳಸಿ. ಮೇಕಪ್ ತಪ್ಪು: ಇಂಗು ತಿಂದ ಮಂಗನಂತೆ ಆಗಬೇಡಿ!



Click it and Unblock the Notifications



