ಮೇಕಪ್ ತಪ್ಪು: ಇಂಗು ತಿಂದ ಮಂಗನಂತೆ ಆಗಬೇಡಿ!

By Manjula Balaraj

ಕೆಲವರು ಮೇಕಪ್ ಮಾಡದೆನೇ ಅಂದವಾಗಿ ಕಾಣಿಸುತ್ತಾರೆ. ಇನ್ನು ಕೆಲವರನ್ನು ಮೇಕಪ್ ಅಂದಗೊಳಿಸುತ್ತದೆ. ಇನ್ನೂ ಕೆಲವರು ಮೇಕಪ್ ಮಾಡಿಯೂ ಅಂದವಾಗಿ ಕಾಣಿಸುವುದಿಲ್ಲ. ಈ ಲೇಖನದಲ್ಲಿ ಮೇಕಪ್ ಗಳಿಂದಾಗುವ ಕೆಲವೊಂದು ತಪ್ಪುಗಳ ಪಟ್ಟಿಯನ್ನು ಮಾಡಲಾಗಿದೆ. ಓದಿ..

ಪ್ರಕೃತಿದತ್ತವಾದ ಅಂದವು ಒಬ್ಬರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಆದರೂ ಬಹಳ ಜನರಿಗೆ ಮೇಕಪ್ ಮಾಡುವುದರಿಂದ ತಮ್ಮ ಅಂದವು ಹೆಚ್ಚುತ್ತದೆ ಎನ್ನುವ ಭಾವನೆ ಜಾಸ್ತಿ. ಹಾಗಾಗಿ, ಸಣ್ಣ ಸಣ್ಣ ಸಮಾರಂಭಗಳಿಗೂ ಭರ್ಜರಿಯಾಗಿ ಮೇಕಪ್ ಮಾಡಿಕೊಂಡು ಹೋಗುವುದು ಸರ್ವೇ ಸಾಮಾನ್ಯ. ತಮ್ಮ ಸೌಂದರ್ಯ ಹೆಚ್ಚಾಗುವುದು ಮೇಕಪ್ ನಿಂದ ಮಾತ್ರ ಎನ್ನುವ ನಂಬಿಕೆ ಬಹಳಷ್ಟು ಜನರಿಗಿದೆ.

Most Common Makeup Mistakes To Avoid

ಮೊದಲ ಸಲ ಮೇಕಪ್ ಮಾಡುವಾಗ ಅದು ನಿಸ್ಸಂಶಯವಾಗಿ ಕುತೂಹಲವೆಂದೆನಿಸುತ್ತದೆ, ನಂತರ ಅದು ಅನಗತ್ಯ ಎಂದು ಕಾಣುವ ಸಾಧ್ಯತೆಯಿದೆ. ಮತ್ತೆ ಕೆಲವು ಸಲ ಇದು ಹಾಸ್ಯಾಸ್ಪದವೂ ಆಗಬಹುದು. ಮೇಕಪ್ ಧರಿಸಿ ಪ್ರಭಾವಿ ಎನಿಸಿಕೊಳ್ಳುವ ಪ್ರವೃತ್ತಿ ಮಹಿಳೆಯರಲ್ಲಿ ಜಾಸ್ತಿ ಎಂದರೆ ಇದು ಉತ್ಪ್ರೇಕ್ಷೆಯಲ್ಲ. ಆದರೆ ನಿಸ್ಸಂಶಯವಾಗಿ, ತಮ್ಮ ಸೌಂದರ್ಯದ ಬಗ್ಗೆ ಅತ್ಯಂತ ಜಾಗೃತವಿರುವ ಮಹಿಳೆಯರು ಸರಿಯಾದ ರೀತಿಯಲ್ಲಿ ಮೇಕಪ್ ಬಳಸುತ್ತಾರೆ ಮತ್ತು ಅವರು ನಿಸ್ಸಂದೇಹವಾಗಿ ಸುಂದರವಾಗಿ ಕಾಣುತ್ತಾರೆ. ಮುಖದಲ್ಲಿ ಮೊಡವೆಯೇ? ಹಾಗಾದರೆ ಮೇಕಪ್ ಹೀಗಿರಲಿ

ಕೆಲವು ಸಲ ಖಂಡಿತವಾಗಿಯೂ ಕೆಲವೊಂದು ವಸ್ತುಗಳ ಬಳಕೆಯಿಂದ ವಿಕಾರವಾಗಿ ಕಾಣುವಂತಹ ತಪ್ಪು ಆಗಬಹುದು. ಇದು ಮಹಿಳೆಯರಲ್ಲಿರುವ ಅಜ್ಞಾನದಿಂದಲೂ ಇರಬಹುದು ಅಥವಾ ಅತೀ ಬುದ್ಧಿವಂತಿಕೆ ತೋರಿಸುವ ಸಲುವಾಗಿಯೂ ಇರಬಹುದು. ಅಜ್ಞಾನದಿಂದ ಆಗುವಂತಹ ತಪ್ಪುಗಳನ್ನು ಸರಿಯಾದ ಮಾರ್ಗದರ್ಶನ ಕೊಡುವ ಮೂಲಕ, ವ್ಯಕ್ತಿಯ ಅಭಿರುಚಿಗೆ ತಕ್ಕಂತೆ ತಿದ್ದಬಹುದು. ಸಾಮಾನ್ಯವಾಗಿ ಮೇಕಪ್ ತಪ್ಪುಗಳನ್ನು ತಪ್ಪಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ವಿಧಾನಗಳಿವೆ.

ಒಂದು ವ್ಯಕ್ತಿಯು ಯಾವುದೇ ವಸ್ತುಗಳನ್ನು ಬಳಸುವಾಗ ಮಾಡಬಹುದಾದ ವಿವಿಧ ತಪ್ಪುಗಳು ಮತ್ತು ಅದನ್ನು ಸರಿಪಡಿಸಲು ಇರುವ ವಿಧಾನಗಳ ಬಂಡಾರವೇ ಸಿಗುತ್ತದೆ. ಮೇಕಪ್ ಕಲಾವಿದರಿಂದ ಮೇಕಪ್ ತಪ್ಪುಗಳನ್ನು ತಿಳಿಯುವುದು ಉಪಯುಕ್ತ ವಿಧಾನ. ಕೆಳಗೆ ಹೇಳಿರುವಂತಹ ಕೆಲವು ಸಾಮಾನ್ಯ ವಿಧಾನಗಳನ್ನು ಅನುಸರಿಸಿದರೆ ಮೇಕಪ್ ತಪ್ಪುಗಳನ್ನು ತಪ್ಪಿಸಬಹುದಾಗಿದೆ

ಗಾಢವಾದ ಫೌಂಡೇಶನ್ ಬಳಸುವುದು
ಗಾಢವಾದ ಫೌಂಡೇಶನ್ ಬಳಸುವುದರಿಂದ ಮುಖದಲ್ಲಿನ ನೋಟ ಅಸ್ಪಷ್ಟವಾಗಿ ಕಾಣಬಹುದು. ಗಾಡವಾದ ಫೌಂಡೇಶನ್ ಬಳಸುವುದರ ಬದಲಾಗಿ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು, ನಯವಾಗಿ ಮುಖದ ಮೇಲೆ ಹಚ್ಚುವುದರಿಂದ ಮುಖವು ಸುಂದರವಾಗಿ ಮತ್ತು ಪರಿಪೂರ್ಣವಾಗಿ ಕಾಣುತ್ತದೆ. ನಂತರ ಸ್ಪಂಜನ್ನು ತೆಗೆದುಕೊಂಡು ಕೆಳಮುಖವಾಗಿ ನಿಧಾನವಾಗಿ ಒರೆಸಿಕೊಳ್ಳೂವ ಮೂಲಕ ಜಾಸ್ತಿಯಾದ ಫೌಂಡೇಶನಿನ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಹದಿಹರೆಯಕ್ಕೆ ಕಾಲಿಡುವ ಹುಡುಗಿಯರಿಗೆ ಮೇಕಪ್ ಟಿಪ್ಸ್

ಮೇಕಪ್ ತಪ್ಪು 2 : ಜಾಸ್ತಿ ಬಣ್ಣ ಹಚ್ಚುವುದು
ಜಾಸ್ತಿ ಬಣ್ಣ ಹಚ್ಚುವುದನ್ನು ಮೇಕಪ್ ಮಾಡುವಾಗ ತಪ್ಪಿಸಲೇ ಬೇಕು. ಜಾಸ್ತಿ ಬಣ್ಣ ಹಚ್ಚುವುದರಿಂದ ನಗೆಪಟಾಲಿಗೆ ಗುರಿ ಯಾಗಬೇಕಾದೀತು. ಬಣ್ಣವನ್ನು ಹಚ್ಚುವಾಗ ಅದನ್ನು ಹರಡಲು ಕೈಬೆರಳನ್ನು ಬಳಸಬಾರದು ಬದಲಾಗಿ ಬ್ರಷ್ ಬಳಸಬೇಕು. ಬ್ರಷ್ ಬಳಸುವುದರಿಂದ ಮುಖಕ್ಕೆ ಪರಿಪೂರ್ಣವಾದ ನೋಟ ಬರುತ್ತದೆ. ಬಣ್ಣವನ್ನು ಹರಡುವಾಗ ಒಂದೇ ಜಾಗದಲ್ಲಿ ನಿಲ್ಲದಂತೆ ಎಲ್ಲಾ ಕಡೆ ಸರಿ ಸಮನಾಗಿ ಹರಡುವಂತೆ ಮುಖದ ಮೇಲೆ ಪಸರಿಸುವಂತೆ ನೋಡಿಕೊಳ್ಳಬೇಕು.

ಮೇಕಪ್ ತಪ್ಪು 3 : ಅಪೂರ್ಣ ಲಿಪ್ಸ್ಟಿಕ್ ಬಳಕೆ
ತುಟಿಗೆ ಬಳಸುವ ಲಿಪ್ಸ್ಟಿಕ್ ಬಣ್ಣದ ಆಯ್ಕೆ ಮತ್ತು ಇದರ ತಪ್ಪಾದ ಬಳಕೆಯಿಂದಾಗಿ ಮೇಕಪ್ ಗಬ್ಬೆದ್ದು ಹೋಗುತ್ತದೆ. ಲಿಪ್ಸ್ಟಿಕ್ ನಾವು ತೊಡುವ ಬಟ್ಟೆಗೆ ಅನುಗುಣವಾಗಿರಬೇಕು, ಹಬ್ಬಹರಿದಿನಗಳ ಸಮಯದಲ್ಲಿ ನಾವು ತೊಡುವ ಬಟ್ಟೆಗಳಿಗೆ ಹೊಂದುವಂತಹ ಲಿಪ್ಸ್ಟಿಕ್ ಹೊಂದಿರಬೇಕು ಎಂದು ಬಯಸುತ್ತೇವೆ. ಕಡು ಬಣ್ಣವುಳ್ಳ ಲಿಪ್ಸ್ಟಿಕ್ ಬಳಸಿದರೆ, ಸುಂದರ ಮತ್ತು ಪರಿಪೂರ್ಣವಾಗಿ ಕಾಣಲು ಅಡ್ಡಿಯುಂಟು ಮಾಡುತ್ತದೆ.

ಮೇಕಪ್ ತಪ್ಪು 4 : ಐ ಲೈನರ್ ಗೆರೆ ಎಳೆಯುವಾಗ
ಕಣ್ಣರೆಪ್ಪೆಗಳನ್ನು ಹೇಗಿದೆಯೊ ಹಾಗೆ ಬಿಟ್ಟು, ಅವುಗಳಿಗೆ ಮೇಕಪ್ ಬಳಸದೇ ಇರುವುದು ಒಳ್ಳೆಯದು. ಆದರೂ ಮಹಿಳೆಯರು ಕಣ್ಣ ರೆಪ್ಪೆಗಳಿಗೆ ತೆಳುವಾಗಿ ಐ ಶ್ಯ್ಯಾಡೊ ಹಚ್ಚಿ ಅದು ಗಾಢವಾಗಿ ತೋರುವಲ್ಲಿ ಹೆಚ್ಚಿನ ಒಲವು ತೋರುತ್ತಾರೆ. ಹೀಗಾಗಿ, ಆದುದರಿಂದ ಕಣ್ಣಿಗೆ ಪರಿಪೂರ್ಣ ನೋಟ ಬರಲು ಐ ಲೈನರನ್ನು ಬಳಸುತ್ತಾರೆ. ಹೀಗೆ ಬಳಸುವಾಗ ಜಾಸ್ತಿ ಪ್ರಮಾಣದಲ್ಲಿ ಹಚ್ಚಿದಲ್ಲಿ ಅದು ಮುಖದ ಸ್ವರೂಪವೇ ವಿಕಾರೂಪವಾಗಿ ಕಾಣುವಂತೆ ಮಾಡುತ್ತದೆ.

ಈ ಮೇಲೆ ಹೇಳಿರುವಂತಹ ತಪ್ಪುಗಳು ಮಹಿಳೆಯರು ಸಾಮಾನ್ಯವಾಗಿ ಮಾಡುತ್ತಾರೆ. ಇಂತಹ ಕೆಲವು ತಪ್ಪುಗಳನ್ನು ಮಾಡುವುದರಿಂದ ಸುಂದರವಾಗಿ ಕಾಣುವ ಬದಲು ಕುರೂಪವಾಗಿ ಕಾಣುವಂತಾಗುತ್ತದೆ. ಮತ್ತು ಒಬ್ಬರು ನಿಮ್ಮ ಕಡೆಗೆ ಬೊಟ್ಟುಮಾಡಿ ನಗುವಂತೆ ಆಗಬಹುದು. ಆದುದರಿಂದ ಮೇಕಪ್ ಮಾಡುವಾಗ ಅದರಲ್ಲಾಗಬಹುದಾದಂತಹ ತಪ್ಪುಗಳನ್ನು ಪರಿಗಣಿಸಿ ಅತೀ ಜಾಗರೂಕತೆಯಿಂದ ಮೇಕಪ್ ಮಾಡಿ.

English summary

Most Common Makeup Mistakes To Avoid

Take a look at the common mistakes that you need to avoid during makeup. These are the makeup mistakes that happens with most of us.
X
Desktop Bottom Promotion