ನೆನಪಿಡಿ: ಮಲಗುವ ಮೊದಲು ಹಾಕಿದ ಮೇಕಪ್ ತೆಗೆದುಬಿಡಿ!

By: Hemanth
Subscribe to Boldsky

ರಾತ್ರಿ ಸಾಕಷ್ಟು ಮೇಕಪ್ ಹಾಕಿಕೊಂಡು ಯಾವುದೋ ಪಾರ್ಟಿಗೆ ಹೋಗಿರುತ್ತೀರಿ. ಬರುವಾಗ ಸಕತ್ತ್ ನಿದ್ರೆ ಬರುತ್ತಾ ಇರುತ್ತದೆ. ಏನು ಮಾಡಬೇಕೆಂದು ನಿಮಗೆ ತೋಚುವುದಿಲ್ಲ. ಒಮ್ಮೆ ಹಾಸಿಗೆಗೆ ಬೆನ್ನು ಒರಗಿದರೆ ಸಾಕು ಎನ್ನುವಷ್ಟು ಆಯಾಸ ನಿಮಗೆ ಆಗಿರುತ್ತದೆ. ಸುಸ್ತು ಆಗಿಬಿಟ್ಟಿದೆ, ಎಂದು ಹೇಳಿ ಹಾಗೆಯೇ ಮಲಗಬೇಡಿ!

ಇಂತಹ ಸಮಯದಲ್ಲಿ ನೀವು ಮುಖಕ್ಕೆ ಹಚ್ಚಿಕೊಂಡಿರುವ ಮೇಕಪ್ ಅನ್ನು ತೆಗೆಯದೆ ನಿದ್ರೆ ಮಾಡುತ್ತೀರಿ. ಬೆಳಿಗ್ಗೆ ಎದ್ದು ಮೇಕಪ್ ತೆಗೆದು ಮತ್ತೆ ಕಚೇರಿಗೆ ಹೋಗಲು ಮೇಕಪ್ ಮಾಡಿಕೊಳ್ಳುತ್ತೀರಿ. ಆದರೆ ಇದು ಸರಿಯಾದ ಕ್ರಮವೇ ಎಂದು ನೀವು ಯೋಚಿಸಬೇಕು. ಯಾಕೆಂದರೆ ಮೇಕಪ್ ಹಾಕಿಕೊಂಡು ಮಲಗಲೇ ಬಾರದು.  ದಿನನಿತ್ಯ ಮೇಕಪ್ ಬಿಟ್ಟಾಕಿ-ಖಂಡಿತ ಸುಂದರವಾಗಿ ಕಾಣುವಿರಿ!

ಮೇಕಪ್ ಹಾಕಿಕೊಂಡು ಮಲಗಿದರೆ ಅದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತದೆ. ಇದರಿಂದ ಚರ್ಮದ ಮೇಲೆ ಕೂಡ ಅಡ್ಡಪರಿಣಾಮ ಉಂಟಾಗುತ್ತದೆ. ಇಂತಹ ಸಮಯದಲ್ಲಿ ರಾತ್ರಿ ವೇಳೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಇಂದು ಹೇಳಿಕೊಡಲಿದೆ. ಇದನ್ನು ಪಾಲಿಸಿಕೊಂಡು ಹೋಗಿ ಸೌಂದರ್ಯವನ್ನು ಕಾಪಾಡಿಕೊಳ್ಳಿ...

ಮುಖವನ್ನು ತೊಳೆಯುವುದು

ಮುಖವನ್ನು ತೊಳೆಯುವುದು

ಪ್ರತಿ ದಿನವೂ ನೀವು ಹಲವಾರು ಕಡೆಗೆ ಹೋಗುವಾಗ ಹೊರಗಿನ ಕಲುಷಿತ ವಾತಾವರಣದಿಂದ ಮುಖದ ಮೇಲೆ ಪರಿಣಾಮ ಉಂಟಾಗುತ್ತದೆ. ಇಂದಿನ ದಿನಗಳಲ್ಲಿ ಯಾವ ಕಡೆ ಹೋದರೂ ಅಲ್ಲಿನ ವಾತಾವರಣ ಕಲುಷಿತವಾಗಿಯೇ ಇರುತ್ತದೆ. ಇದು ನೇರವಾಗಿ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಧೂಳು ಚರ್ಮದ ರಂಧ್ರವನ್ನು ತುಂಬಿ ಬಿಡುತ್ತದೆ. ಇದರಿಂದ ಮೊಡವೆಗಳು ಉಂಟಾಗಿ ಸಮಸ್ಯೆಯಾಗಿ ಕಾಡುವುದು. ಇದರಿಂದ ಮಲಗುವ ಮೊದಲು ಮುಖವನ್ನು ಸರಿಯಾಗಿ ತೊಳೆಯಿರಿ. ಮುಖ ತೊಳೆಯಲು ಫೇಸ್ ವಾಶ್ ಬಳಸಬೇಕೆಂದಿಲ್ಲ. ಕೇವಲ ನೀರಿನಲ್ಲಿ ಮುಖವನ್ನು ತೊಳೆದರೆ ಸಾಕು.

ಮೇಕಪ್ ತೆಗೆಯಿರಿ

ಮೇಕಪ್ ತೆಗೆಯಿರಿ

ಮಲಗುವ ಮೊದಲು ಮೇಕಪ್ ತೆಗೆಯುವುದು ಅತೀ ಅಗತ್ಯವಾಗಿ ನೀವು ಮಾಡಬೇಕಾದಂತಹ ಕೆಲಸವಾಗಿದೆ. ಮೇಕಪ್ ಸಾಧನಗಳಿಗೆ ಹಲವಾರು ರೀತಿಯ ರಾಸಾಯನಿಕ ಹಾಗೂ ವಿಷಕಾರಿ ಅಂಶಗಳನ್ನು ಹಾಕಿರುತ್ತಾರೆ. ನೀವು ಮೇಕಪ್ ತೆಗೆಯದೆ ಹಾಗೆ ಮಲಗಿದರೆ ಆಗ ವಿಷಕಾರಿ ಅಂಶಗಳು ಚರ್ಮದಲ್ಲಿ ತಮ್ಮ ಕಾರ್ಯಚಟುವಟಿಕೆಯನ್ನು ಆರಂಭಿಸುತ್ತವೆ. ಇದರಿಂದ ಮಲಗುವ ಮೊದಲು ಮೇಕಪ್ ತೆಗೆಯಿರಿ. ಮೇಕಪ್ ರಿಮೂವರ್ ಅನ್ನು ಬಳಸಲು ಬಯಸದೆ ಇದ್ದರೆ ತೆಂಗಿನ ಎಣ್ಣೆ ಮತ್ತು ಆಲಿವ್ ತೈಲವನ್ನು ಬಳಸಿಕೊಂಡು ಮೇಕಪ್ ನ್ನು ತೆಗೆಯಬಹುದು.

ಕೂದಲನ್ನು ಸರಿಯಾಗಿ ಕಟ್ಟಿಕೊಳ್ಳಿ

ಕೂದಲನ್ನು ಸರಿಯಾಗಿ ಕಟ್ಟಿಕೊಳ್ಳಿ

ಕೂದಲು ಬಿಟ್ಟುಕೊಂಡು ಯಾವತ್ತೂ ಮಲಗಬೇಡಿ. ಯಾಕೆಂದರೆ ಕೂದಲು ಚರ್ಮಕ್ಕೆ ಕಿರಿಕಿರಿಯನ್ನು ಉಂಟು ಮಾಡುವುದು. ಇದರಿಂದ ಸೋಂಕು ಅಥವಾ ಚರ್ಮದ ಸಮಸ್ಯೆ ಕಾಣಿಸಬಹುದು. ತಲೆಹೊಟ್ಟಿನ ಸಮಸ್ಯೆಯಿದ್ದರೆ ನೀವು ಕೂದಲನ್ನು ಬಿಟ್ಟುಕೊಂಡು ಮಲಗಲೇ ಬಾರದು. ಯಾಕೆಂದರೆ ತಲೆಹೊಟ್ಟು ಚರ್ಮಕ್ಕೆ ತಗುಲಿ ಅದರಿಂದ ಮೊಡವೆಗಳು ಉಂಟಾಗಬಹುದು. ಇದರಿಂದ ಮೃದುವಾದ ರಬ್ಬರ್ ಬ್ಯಾಂಡ್ ಬಳಸಿ ಕೂದಲನ್ನು ಕಟ್ಟಿ ಮಲಗಿ.

ಕಣ್ಣಿನ ಕ್ರೀಮ್ ಬಳಸುವುದು

ಕಣ್ಣಿನ ಕ್ರೀಮ್ ಬಳಸುವುದು

ಹೆಚ್ಚಿನ ಸಮಯ ಮೊಬೈಲ್, ಟಿವಿ ಅಥವಾ ಲ್ಯಾಪ್ ಟಾಪ್ ನಲ್ಲಿ ಕಳೆದಿದ್ದರೆ ಆಗ ಕಣ್ಣು ಕೆಂಪಗೆ ಆಗುವುದು ಖಚಿತ. ಕಣ್ಣಿನ ಸುತ್ತಲು ಕ್ರೀಮ್ ಬಳಸುವುದರಿಂದ ಕಣ್ಣು ಕೆಂಪಗೆ ಆಗುವುದು ಮತ್ತು ಕಣ್ಣಿನ ಸುತ್ತ ಕಪ್ಪು ಕಲೆಗಳು ಮೂಡುವುದನ್ನು ತಡೆಯಬಹುದು. ಕಣ್ಣಿನ ಸುತ್ತಲು ಯಾವುದೇ ತೈಲ ಗ್ರಂಥಿಗಳು ಇಲ್ಲದೆ ಇರುವ ಕಾರಣದಿಂದ ಕಣ್ಣುಗಳ ಸುತ್ತಲು ತೇವಾಂಶವಿರುವುದಿಲ್ಲ.

ಚರ್ಮಕ್ಕೆ ಮಾಯಿಶ್ಚರೈಸರ್

ಚರ್ಮಕ್ಕೆ ಮಾಯಿಶ್ಚರೈಸರ್

ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಚರ್ಮಕ್ಕೆ ಮಾಯಿಶ್ಚರೈಸರ್‌ ನೀಡುವುದು ತುಂಬಾ ಮುಖ್ಯ. ಹೆಚ್ಚು ರಾಸಾಯನಿಕಗಳು ಇಲ್ಲದ ಹಾಗೂ ಆಯುರ್ವೇದೀಕ್ ಮಾಯಿಶ್ಚರೈಸರ್‌ಗಳನ್ನು ಬಳಸಬಹುದು. ಇದು ಸತ್ತಚರ್ಮ, ಕಲ್ಮಶ ಹಾಗೂ ಧೂಳನ್ನು ಚರ್ಮದಿಂದ ತೆಗೆದುಹಾಕುವುದು. ಆದರೆ ಕೆಲವೊಂದು ಮಾಯಿಶ್ಚರೈಸರ್‌ ಗಳು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುತ್ತದೆಯಾ ಎಂದು ಪರೀಕ್ಷಿಸಿಕೊಳ್ಳಿ. ಮಾಯಿಶ್ಚರೈಸರ್‌ಗಳಲ್ಲಿ ಕೆಲವೊಂದು ವಿಟಮಿನ್ ಹಾಗೂ ಪ್ರೋಟೀನ್ ಗಳಿರುತ್ತದೆ. ಇದು ಪಿಎಚ್ ಮಟ್ಟವನ್ನು ಕಾಪಾಡಿಕೊಂಡು ಕೋಶಗಳ ಉತ್ಪಾದನೆಗೆ ನೆರವಾಗುತ್ತದೆ. ಕಾಂತಿಯುವ ಚರ್ಮವನ್ನು ಪಡೆಯಲು ಮೊಶ್ಚಿರೈಸರ್ ಬಳಸಿಕೊಳ್ಳುವುದು ಅತೀ ಅಗತ್ಯ.

ತುಟಿಗಳ ಆರೈಕೆ ಮಾಡಿ

ತುಟಿಗಳ ಆರೈಕೆ ಮಾಡಿ

ದೇಹದ ಪ್ರತಿಯೊಂದು ಭಾಗವು ಅತೀ ಅಗತ್ಯ ಮತ್ತು ಅವುಗಳನ್ನು ಆರೈಕೆ ಮಾಡುತ್ತಿರಬೇಕು. ಆದರೆ ಹೆಚ್ಚಿನವರು ತುಟಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ತುಟಿಗಳು ಒಡೆದುಹೋಗಿ ಅವುಗಳಿಂದ ರಕ್ತ ಒಸರುವಾಗ ಮಾತ್ರ ತುಟಿಗಳ ನೆನಪಾಗುತ್ತದೆ. ತುಟಿಗಳು ತುಂಬಾ ಸೂಕ್ಷ್ಮ ಭಾಗವಾಗಿರುವ ಕಾರಣದಿಂದ ಅವುಗಳ ಆರೈಕೆ ಮಾಡಲೇಬೇಕು. ಮಲಗುವ ಮೊದಲು ತುಟಿಗಳಿಗೆ ಮುಲಾಮ್ ಅಥವಾ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಎಣ್ಣೆಯು ಒಡೆದ ತುಟಿಗಳಿಗೆ ತೇವಾಂಶವನ್ನು ನೀಡಿ ಒಡೆಯುವ ಸಮಸ್ಯೆ ನಿವಾರಣೆ ಮಾಡುವುದು.

 
English summary

Important Bed Time Ritual To Follow Every Night

Following a morning beauty regime and not paying attention to your skin at night can altogether lead to no improvement on the skin. Here we mention to you essential bed-time skin care routine that you need to follow before going to bed.
Please Wait while comments are loading...
Subscribe Newsletter