Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಸುಸ್ತು ಆಗಿಬಿಟ್ಟಿದೆ, ಎಂದು ಹೇಳಿ ಹಾಗೆಯೇ ಮಲಗಬೇಡಿ!
ದಿನವಿಡೀ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದರೂ ದಣಿದು ಮನೆಗೆ ಬಂದ ಬಳಿಕ ಮನಸ್ಸು ಹೇಗಾಗಿರುತ್ತದೆ ಎಂದರೆ ನೇರವಾಗಿ ಹಾಸಿಗೆಗೆ ಬಿದ್ದುಕೊಳ್ಳೋಣ ಎನಿಸುತ್ತದೆ. ಅದರಲ್ಲೂ ದೂರದಿಂದ ಡ್ರೈವ್ ಮಾಡಿಕೊಂಡು ಬಂದ ಪುರುಷರಂತೂ ದೈಹಿಕಕ್ಕಿಂತ ಮಾನಸಿಕರಾಗಿ ಎಷ್ಟು ದಣಿದಿರುತ್ತಾರೆಂದರೆ ಬಟ್ಟೆಬರೆ ಇರಲಿ, ಕಾಲಿನ ಕಾಲುಚೀಲ ಸಹಾ ಕಳಚದೇ ಹಾಗೇ ಹಾಸಿಗೆ ಮೇಲೆ ಬಿದ್ದೇ ಬಿಡುತ್ತಾರೆ. ಆದರೆ ಮಹಿಳೆಯರಿಗೆ? ಸರಿಸುಮಾರು ಅಷ್ಟೇ ಸುಸ್ತಾಗಿದ್ದರೂ ಕಣ್ಣಿನ ಕಾಂಟಾಕ್ಟ್ ಲೆನ್ಸ್, ಮೇಕಪ್, ಆಭರಣಗಳು ಇತ್ಯಾದಿಗಳನ್ನು ಕಳಚಲೇಬೇಕು. ಏಕೆ ಎಂದು ಕೇಳಿದಿರಾ.. ಮುಂದೆ ಓದಿ........

ಆಭರಣಗಳು
ಭಾರತೀಯ ಮಹಿಳೆಯರಿಗೆ ಆಭರಣಗಳೆಂದರೆ ಕೇವಲ ಸೌಂದರ್ಯದ ವಿಷಯವಲ್ಲ, ಆತ್ಮವಿಶ್ವಾಸದ ಪ್ರತೀಕ. ವಿಶೇಷವಾಗಿ ಮದುವೆ, ಸಮಾರಂಭ ಮೊದಲಾದ ಶುಭಕಾರ್ಯಗಳಿಗೆ ಆಗಮಿಸುವ ಮಹಿಳೆಯರು ತಪ್ಪದೇ ತಮ್ಮಲ್ಲಿರುವ ಅತ್ಯುತ್ತಮ ಆಭರಣಗಳನ್ನು ಧರಿಸಿಯೇ ಆಗಮಿಸುತ್ತಾರೆ. ಚಿನ್ನದ ಕಿವಿಯೋಲೆ,ಮೂಗುತಿ, ಉಂಗುರ, ಸರ, ಬಳೆ, ಡಾಬು, ಮತ್ತೂ ಹಲವು ಆಭರಣಗಳು ಈ ಸಂದರ್ಭದಲ್ಲಿ ಮೇಳೈಸುತ್ತವೆ.
ಮನೆಗೆ ಹಿಂದಿರುಗಿದ ಹೊತ್ತಿನಲ್ಲಿ ತಡರಾತ್ರಿಯಾಗಿದ್ದರೆ ಒಮ್ಮೆ ಹಾಸಿಗೆಗೆ ಬಿದ್ದರೆ ಸಾಕು ಎನ್ನುವಂತಿದ್ದಾಗ ಈ ಆಭರಣಗಳನ್ನು ಕಳಚುವುದು ಕೊಂಚವೂ ಇಷ್ಟವಾಗುವುದಿಲ್ಲ. ಆದರೆ ನಿಮಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಇವನ್ನು ಕಳಚಲೇಬೇಕು. ಏಕೆಂದರೆ ನಿದ್ದೆಯ ಭರದಲ್ಲಿ ಆಭರಣದ ಮೇಲೆ ಬಿದ್ದ ಭಾರ ಗಾಯವನ್ನುಂಟುಮಾಡಬಹುದು.
ಕಿವಿಯೋಲೆ, ಮೂಗುತಿಗಳು ಚರ್ಮವನ್ನೇ ಹಿಸಿಯುವ ಸಂಭವವಿದೆ. ಮೈಭಾರಕ್ಕೆ ಆಭರಣಗಳ ಕೀಲು ಮೊದಲಾದ ಸೂಕ್ಷ್ಮ ಭಾಗಗಳೂ ಜಖಂಗೊಂಡು ಸುಲಭವಾಗಿ ತೆರೆಯಲು ಸಾಧ್ಯವಾಗದೇ ಅಕ್ಕಸಾಲಿಗರಿಂದ ನಿಮ್ಮ ನೆಚ್ಚಿನ ಆಭರಣವನ್ನು ಕತ್ತರಿಸಿ ತೆಗೆಯಬೇಕಾಗಬಹುದು. ಆಭರಣಗಳಲ್ಲಿ ಅಡಕಗೊಂಡಿದ್ದ ಸೂಕ್ಷ್ಮ ಮತ್ತು ಅತಿ ಚಿಕ್ಕ ವಜ್ರ, ಕಲ್ಲು ಅಥವಾ ಕರಿಮಣಿ ಮೊದಲಾದವು ಕಾಣೆಯಾಗಿ ಆಭರಣದ ಸೌಂದರ್ಯವೇ ಕುಂದಬಹುದು. ಅಷ್ಟೇ ಅಲ್ಲ, ಒಂದು ವೇಳೆ ಗಾಯವಾದರೆ ಸುರಿಯುವ ರಕ್ತ ನಿಮ್ಮ ನೆಚ್ಚಿನ ದುಬಾರಿ ಉಡುಪು ಸೀರೆಯನ್ನೂ ತೊಯ್ದು ಅಳಿಸಲಾರದ ಕಲೆಯುಂಟುಮಾಡಬಹುದು.
ಕೂದಲ ಅಲಂಕಾರಿಕ ವಸ್ತುಗಳು
ಹೇರ್ ಪಿನ್, ಹೇರ್ ಕ್ಲಿಪ್, ಹೇರ್ ಬ್ಯಾಂಡ್, ಹೂವಿನ ಸರ, ಕೃತಕ ಕೂದಲು ಮೊದಲಾದ ಹತ್ತು ಹಲವು ಅಲಂಕಾರಿಕಾ ವಸ್ತುಗಳನ್ನು ಕೂದಲ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಆದರೆ ಮಲಗುವ ಮುನ್ನ ಇವನ್ನೂ ಕಳಚಿಡುವುದು ಅನಿವಾರ್ಯ. ಏಕೆಂದರೆ ಕೆಲವೊಮ್ಮೆ ಈ ವಸ್ತುಗಳು ತಲೆಯ ಭಾರಕ್ಕೆ ಒಳಕ್ಕೆ ತಿರುಚಿಕೊಂಡು ಅಥವಾ ಬಗ್ಗಿ ತೆರೆಯಲಸಾಧ್ಯವಾಗಿ ಮರುದಿನ ರಂಪಾಟವಾಗುತ್ತದೆ.
ಅಲ್ಲದೇ ಮರುದಿನ ಕಛೇರಿ ಇದ್ದರೆ ಮೊದಲೇ ತಡವಾಗಿ ಎದ್ದ ಗಡಿಬಿಡಿಯಲ್ಲಿ ಈ ತೊಂದರೆಯೂ ಸೇರಿಕೊಂಡು ಆಧ್ವಾನವಾಗುತ್ತದೆ. ರಾತ್ರಿ ಎಷ್ಟೇ ಕಷ್ಟವಾದರೂ ಎಲ್ಲಾ ವಸ್ತುಗಳನ್ನು ನಿವಾರಿಸಿ ಕೂದಲನ್ನು ಬಿಡಿಯಾಗಿಸಿಯೇ ಮಲಗಬೇಕು. ಜಡೆಕಟ್ಟಿದ್ದರೂ ಸಹಾ. ಏಕೆಂದರೆ ಜಡೆಕಟ್ಟಿದ್ದ ಕೂದಲು ರಾತ್ರಿ ಸುಲಭವಾಗಿ ತುಂಡಾಗುವಂತಿರುತ್ತದೆ. ಹೇರ್ ಪಿನ್ನುಗಳು ಒಂದು ಹಂತದಲ್ಲಿ ತಲೆಗೆ ಚುಚ್ಚಿ ಗಾಯವನ್ನೂ ಮಾಡಬಹುದು.
ಮೇಕಪ್
ಮೇಕಪ್ ಎಷ್ಟೇ ಅಗತ್ಯವಿರಲಿ, ರಾತ್ರಿ ಮಲಗುವ ಮುನ್ನ ಸಂಪೂರ್ಣ ನಿವಾರಿಸಿಯೇ ಮಲಗಬೇಕು. ಇದನ್ನು ಒಂದು ಅಭ್ಯಾಸವಾಗಿಸುವುದೇ ಉತ್ತಮ. ಏಕೆಂದರೆ ರಾತ್ರಿ ಹೊತ್ತು ನಮ್ಮ ಚರ್ಮದ ಸೂಕ್ಷ್ಮ ರಂಧ್ರಗಳಿಗೆ ಗಾಳಿಯಾಡುವಂತಿರಬೇಕು. ಮೇಕಪ್ ಈ ರಂಧ್ರಗಳನ್ನು ಮುಚ್ಚಿಬಿಡುವ ಕಾರಣ ಚರ್ಮದ ಸೂಕ್ಷ್ಮರಂಧ್ರಗಳಿಂದ ಕಲ್ಮಶ ಹೊರಬರಲು ಸಾಧ್ಯವಾಗದೇ ಒಳಗೇ ಉಳಿದು ಬಿಡುತ್ತದೆ. ಮೇಕಪ್ ತಪ್ಪು: ಇಂಗು ತಿಂದ ಮಂಗನಂತೆ ಆಗಬೇಡಿ!
ಇದು ನೇರವಾಗಿ ಮೊಡವೆಗೆ ಕಾರಣವಾಗುತ್ತದೆ. ಕಣ್ಣಿನ ಮೇಕಪ್ ರಾತ್ರಿ ಮಲಗಿರುವ ಸಮಯದಲ್ಲಿ ನಿಧಾನವಾಗಿ ಕರಗಿ ಕಣ್ಣಿನ ಒಳಗೆ ಇಳಿದು ನೀವು ಕಣ್ಣು ಬಿಡುವುದೇ ತಡ ಪಾಪೆಯ ಮೇಲೆ ಹಾಯ್ದು ಅಪಾರ ಉರಿಯುಂಟುಮಾಡುತ್ತದೆ. ಕೆಲವು ಬಾರಿ ಮೇಕಪ್ ನಲ್ಲಿರುವ ರಾಸಾಯನಿಕಗಳು ಕಣ್ಣಿಗೆ ಹಾನಿಕಾರಕವೂ ಆಗಿರಬಹುದು. ಆದ್ದರಿಂದ ಮಲಗುವ ಮುನ್ನ ಎಲ್ಲಾ ಮೇಕಪ್ ನಿವಾರಿಸಿಯೇ ಮಲಗಿ.
ಬಿಗಿಯಾದ ಉಡುಪು/ಒಳ ಉಡುಪುಗಳು
ತಜ್ಞರ ಸಲಹೆಯ ಪ್ರಕಾರ ರಾತ್ರಿ ಮಲಗುವಾಗ ಸ್ವಚ್ಛ ಮತ್ತು ಅತಿ ಸಡಿಲವಾದ ಬಟ್ಟೆಗಳೇ ಸೂಕ್ತವಾಗಿವೆ. ದಿನವಿಡೀ ಹೊರಗೆ ಹಲವಾರು ಕಡೆ ಓಡಾಡಿ ಬಂದಾಗ ನಮ್ಮ ಬಟ್ಟೆಗಳಲ್ಲೆಲ್ಲಾ ಧೂಳು ಕೊಳೆ ಕ್ರಿಮಿಗಳು ಆವರಿಸಿಕೊಂಡಿರುತ್ತವೆ. ಬೆವರು ಸಹಾ ಬಟ್ಟೆಯಲ್ಲಿ ಹೀರಲ್ಪಟ್ಟು ಈ ತೇವದಲ್ಲಿ ಬ್ಯಾಕ್ಟೀರಿಯಾ ವೈರಸ್ಸುಗಳೂ ಆಶ್ರಯ ಪಡೆದಿರುತ್ತವೆ. ಇವುಗಳ ಸಂಪರ್ಕದಲ್ಲಿದ್ದ ಒಳ ಉಡುಪುಗಳೂ ಮಲಿನಗೊಂಡಿರುತ್ತವೆ.
ರಾತ್ರಿ ಬಟ್ಟೆ ಕಳಚದೇ ಪವಡಿಸಿದರೆ ಇವೆಲ್ಲವೂ ನಿಮ್ಮ ಮಲಗಿದ್ದ ಸಮಯದಲ್ಲಿ ಧಾಳಿ ಮಾಡಲು ಸುಲಭವಾಗುತ್ತದೆ. ಅಂದರೆ ಸುಲಭವಾಗಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಒಳ ಉಡುಪುಗಳು ಕೊಂಚವಾದರೂ ಬಿಗಿಯಾಗಿಯೇ ಇರುತ್ತವೆ. ರಾತ್ರಿ ಮಲಗಿದ್ದಾಗ ಬಿಗಿ ಇದ್ದಲ್ಲೆಲ್ಲಾ ಚರ್ಮ ಹಿಸಿದಂತಿರುತ್ತದೆ.
ಇದು ಕೆಲವೊಮ್ಮೆ ಶಾಶ್ವತ ಕಲೆ ಅಥವಾ ಗಾಯದ ಕಲೆಯಂತೆ ಉಳಿಯಬಹುದು. ಬದಲಿಗೆ ಸ್ವಚ್ಛವಾದ ರಾತ್ರಿಯುಡುಪು ಮಾತ್ರ ಧರಿಸಿ ಮಲಗುವುದೇ ಆರೋಗ್ಯಕರವಾಗಿದೆ. ತಜ್ಞರ ಪ್ರಕಾರ ಸ್ನಾನ ಮಾಡಿ ಮಲಗಿದರೆ ಅತ್ಯುತ್ತಮ. ಸಾಧ್ಯವಾಗದಿದ್ದರೆ ಕೈ ಕಾಲು ಮುಖ ಕುತ್ತಿಗೆಗಳನ್ನು ತಣ್ಣೀರಿನಿಂದ ತೊಳೆದುಕೊಂಡು ಸ್ವಚ್ಛ ಟವೆಲ್ ನಿಂದ ಒರೆಸಿಕೊಂಡು ಮಲಗಬೇಕು.



Click it and Unblock the Notifications

















