ಯುವತಿಯರ ಫ್ಯಾಷನ್ ಲೋಕದಲ್ಲಿ ಒಂಬ್ರೆ ಲಿಪ್‌‌ಸ್ಟಿಕ್ ಟ್ರೆಂಡ್

By: Suhani
Subscribe to Boldsky

ಹೆಣ್ಣಿಗೆ ಅಲಂಕಾರವೇ ಭೂಷಣ.ಪ್ರತಿಯೊಂದು ಹೆಣ್ಣಿಗೂ ತಾನು ಸುಂದರಿಯಾಗಿ ಕಾಣಬೇಕೆಂದು ಬಯಸುತ್ತಾಳೆ. ಅದ್ರಲ್ಲೂ ಮಹಿಳೆಯರ ತುಟಿ ಅತ್ಯಂತ ಆಕರ್ಷಕ ಭಾಗ .ಕೆಂಪು ಬಣ್ಣದ ತುಟಿಯಿಂದ ತನ್ನ ಸೌಂದರ್ಯಕ್ಕೆ ಇನ್ನೂ ಹೆಚ್ಚಿನ ಮೆರುಗನ್ನು ನೀಡುವುದೆಂದು ಹಲವಾರು ಹೆಂಗಳೆಯರ ಅಂಬೋಣ.

ಈಗೇನಿದ್ದರೂ ಲಿಪ್ ಸ್ಟಿಕ್ ಟ್ರೆಂಡ್‌ನಲ್ಲಿ ಗುಲ್ಲೆಬ್ಬಿಸಿರುವುದು ಒಂಬ್ರೆ ಲಿಪ್ ಸ್ಟಿಕ್. ಈಗ ಲಿಪ್ ಸ್ಟಿಕ್ ಸಾಧನ ಎಲ್ಲಾ ಹೆಂಗಳೆಯರ ಕಿಟ್ಟಿನಲ್ಲಿ ಭದ್ರವಾಗಿ ಕುಳಿತಿವೆ. ಅದರಲ್ಲೂ ಸೌಂದರ್ಯವರ್ಧಕ ಸಾಧನಗಳು ಟಿವಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತುಗಳಿಂದಲೇ ತುಂಬಿ ಹೋಗಿರುತ್ತವೆ.

Ombre Lipstick Trend

ಬೇರೆ ಬೇರೆ ಬಣ್ಣದ ಲಿಪ್ ಸ್ಟಿಕ್ ಶ್ಯಾಡೋಗಳು ಮಾರುಕಟ್ಟೆಯಲ್ಲಿ ತಾನೇ ರಾಜನೆಂದು ಆಳುತ್ತಿವೆ. ಲಿಪ್ ಸ್ಟಿಕ್ ಶ್ಯಾಡೋಗಳನ್ನು ಬಳಸುವವರ ಸಂಖ್ಯೆ ಹೆಚ್ಚು. ಓಂಬ್ರೆ ಲಿಪ್ ಸ್ಟಿಕ್ ಟ್ರೆಂಡ್‌ನಲ್ಲಿ ತುಟಿಯ ಅಂಚಿನಲ್ಲಿ ಒಂದು ಬಣ್ಣ ಹೊಮ್ಮಿದರೆ ತುಟಿಯ ಮೇಲ್ಭಾಗದಲ್ಲಿ ಇನ್ನೊಂದು ಬಣ್ಣ ಹೊರ ಹೊಮ್ಮುತ್ತವೆ. ಈ ಸೌಂದರ್ಯವರ್ಧಕ ಬಣ್ಣಗಳಲ್ಲಿ ತುಟಿಗಳು ನೋಡುಗರ ಕಣ್ಮನ ಸೆಳೆಯುತ್ತದೆ. ಓಂಬ್ರೆ ಲಿಪ್ ಸ್ಟಿಕ್ ತುಟಿಗೆ ಹಚ್ಚುವಾಗ ತುಂಬ ಜಾಗರೂಕತೆಯಿಂದ ಹಚ್ಚಬೇಕು.

Ombre Lipstick Trend

ಒಂದು ವೇಳೆ ನೀವು ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಹೋಗಬೇಕೆಂದುಕೊಂಡಿದ್ದಲ್ಲಿ ಒಂಬ್ರೆ ಲಿಪ್ ಸ್ಟಿಕ್ ಹಚ್ಚುವುದನ್ನು ಅಭ್ಯಾಸ ಮಾಡಿ ಹಚ್ಚಿಕೊಂಡು ಹೋದಲ್ಲಿ ತುಟಿಗೆ ಮೆರುಗು ನೀಡುತ್ತದೆ. ಹಚ್ಚುವ ವಿಧಾನ ತಪ್ಪಿದ್ದಲ್ಲಿ ಅಸಹ್ಯ ಕಾಣಿಸಿಕೊಳ್ಳಬಹುದು. ಆದ್ದರಿಂದ ಜಾಗರೂಕತೆ ಅತೀ ಮುಖ್ಯ. ಹಾಗಾಗಿ ಮನೆಯಲ್ಲೇ ಸೌಂದರ್ಯವರ್ಧಕವನ್ನು ಬಳಸುವಾಗ ಗಮನದಲ್ಲಿಟ್ಟುಕೊಂಡು ತುಟಿಯಂಚಿಗೆ ಹಚ್ಚಲು ಕೆಲವು ಸಲಹೆಗಳು ಅನುಸರಿಸಿವುದು ಉತ್ತಮ.

Ombre Lipstick Trend

ಲಿಪ್ ಲೈನರ್

ಲಿಪ್ ಬ್ರಷ್

ಲಿಪ್ ಕಂನ್ಸಿಲಿಯರ್ 

ಲೈಟ್ ಶೇಡ್ ಲಿಪ್ ಸ್ಟಿಕ್

ವಿವಿಧ ಬಣ್ಣಗಳಲ್ಲಿ ಪೂರಕವಾಗಿರುವಂತಹ ಲಿಪ್ ಸ್ಟಿಕ್.

ಲಿಪ್ ಕಂನ್ಸಿಲಿಯರ್

ಮೊಟ್ಟ ಮೊದಲು ಒಂಬ್ರೆ ಲಿಪ್ ಸ್ಟಿಕ್ ಅನ್ನು ಹಚ್ಚುವ ಮೊದಲು ಕಲೆಗಳನ್ನು ಮುಚ್ಚಲು ಕಂನ್ಸಿಲರ್ ನನ್ನು ಹಚ್ಚಿರಿ. ಕಂನ್ಸಿಲರ್ ನನ್ನು ಹಚ್ಚುವ ಮೊದಲು ಖಾತ್ರಿಪಡಿಸಿಕೊಳ್ಳಿ ನೀವು ಉಪಯೋಗಿಸುತ್ತಿರುವುದು ಲಿಪ್ ಕಂನ್ಸಿಲರೇ ವಿನಹಃ ಮುಖಕ್ಕೆ ಹಚ್ಚುವುದನಲ್ಲ. ಈ ಲಿಪ್ ಸ್ಟಿಕ್ ದೀರ್ಘಕಾಲಿಕ ಸಂರಕ್ಷಣೆಗಾಗಿ ಉಳಿಯುತ್ತವೆ. ಲಿಪ್ ಕಂನ್ಸಿಲರ್ ನನ್ನು ಬ್ರಶ್ ನಲ್ಲಿ ನೈಸರ್ಗಿಕ ಶೇಡ್ ನೊಂದಿಗೆ ಮೊದಲು ತುಟಿಯ ಮದ್ಯಭಾಗಕ್ಕೆ ಹಚ್ಚಿ ನಂತರ ತುಟಿಯ ಬದಿಗೆ ಹಚ್ಚಿರಿ.

Ombre Lipstick Trend

ಲಿಪ್ ಲೈನ್

ಕಂನ್ಸಿಲಿಂಗ್ ಹಚ್ಚಿದ ನಂತರ ಲಿಪ್ ಲೈನರ್ ಮೂಲಕ ತುಟಿಯ ಅಂಚಿಗೆ ಹಚ್ಚಿರಿ.

ಲಿಪ್ ಶೇಡಿಂಗ್

ಒಂಬ್ರೆ ಲಿಪ್ ಸ್ಟಿಕ್ ನಲ್ಲಿ ಇದು ಬಹಳ ಮುಖ್ಯವಾದ ವಿಷಯ. ತೆಳುವಾದ ಲಿಪ್ ಸ್ಟಿಕ್ ನನ್ನು ತುಟಿಯ ಮದ್ಯಭಾಗಕ್ಕೆ ಹಾಗೂ ತುಟಿಯ ತುದಿಗೆ ಹಚ್ಚಿರಿ. ತೆಳು ಬಣ್ಣದ ಲಿಪ್ ಸ್ಟಿಕ್ ಹಚ್ಚಿ ತುಟಿಯನ್ನು ಒಂದು ಬಾರಿ ಅಥವಾ ಎರಡು ಬಾರಿ ಒತ್ತಿದಾಗ ಬಣ್ಣಗಳು ಎಲ್ಲಾ ಕಡೆಗೆ ಸಮಾನಾಂತರವಾಗಿ ಹರಡುತ್ತೆ ಇಲ್ಲವಾದಲ್ಲಿ ತುಟಿಯ ಬಣ್ಣಗಳು ಹರಡಿ ಕೊಳೆಯಾಗುವ ಸಾಧ್ಯತೆಗಳಿವೆ.

Ombre Lipstick Trend

ವಿವಿಧ ಬಣ್ಣಗಳ ಮಿಶ್ರಣಗಳ ಪರಿಣಾಮ

ಕೊನೆಯಾಗಿ ಎಲ್ಲಾ ಬಣ್ಣಗಳನ್ನು ಸರಿಯಾಗಿ ಮಿಶ್ರಣ ಮಾಡುವುದು. ಓದುಗರೇ, ನೆನಪಿನಲ್ಲಿಡಿ ತುಟಿಯ ಮದ್ಯದಲ್ಲಿ ತೆಳು ಮತ್ತು ತುಟಿಯಂಚಿನಲ್ಲಿ ಗಾಢವಾದ ಬಣ್ಣ ಕಾಣಲು ಲಿಪ್ ಸ್ಟಿಕ್ ನನ್ನು ಸರಿಯಾಗಿ ಮಿಶ್ರಣ ಮಾಡುವುದು ಅತ್ಯಗತ್ಯ ಈ ಉತ್ತಮ ತಯಾರಿಯಲ್ಲಿ ಹಲವಾರು ಕ್ರಮಗಳನ್ನು ಅನುಸರಿಸಿದಲ್ಲಿ ನಮ್ಮ ತುಟಿಯ ಸೌಂದರ್ಯ ಇನ್ನೂ ಇಮ್ಮಡಿಗೊಂಡು ಹಲವಾರು ಜನರ ನೋಟ ತಮ್ಮತ್ತ ಸೆಳೆಯುವಂತೆ ಮಾಡುತ್ತದೆ.

English summary

Are You Following The Ombre Lipstick Trend?

The latest trend of ombre lipstick that the Internet and makeup buffs are following allows the use of two colours on the lips. The colours can be different shades of the same tone or two very different colours. In the ombre lipstick trend, the outline of the lips give one colour while the inside of it shows another. This makes the lips grab all attention from rest of the face.
Subscribe Newsletter