For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಪ್ರಿಯ ಮಹಿಳೆಯರಿಗೆ ಸಿಂಪಲ್ ಮೇಕಪ್ ಟಿಪ್ಸ್

By Arshad
|

ವಿಶೇಷ ಸಂದರ್ಭಗಳಲ್ಲಿ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದೇ ಮಹಿಳೆಯರು ಹೆಚ್ಚಿನ ಕಾಳಜಿಯಿಂದ ಮೇಕಪ್ ಧರಿಸಿಕೊಂಡು ಹೋಗುತ್ತಾರೆ. ಆದರೆ ಸಮಯ ಕಳೆದಂತೆ ಬೆವರು, ಗಾಳಿಯಲ್ಲಿನ ಆರ್ದ್ರತೆ, ಬಿಸಿಲು, ಒಣಹವೆ ಇತ್ಯಾದಿಗಳ ಕಾರಣದಿಂದ ಮೇಕಪ್ ಸ್ವಾಭಾವಿಕವಾಗಿ ಕಳೆಗುಂದುತ್ತದೆ.

ಇದನ್ನು ಆಗಾಗ ಕೊಂಚವಾಗಿ ಸರಿಪಡಿಸುತ್ತಲೇ ಇರಬೇಕು. ವಿಶೇಷವಾಗಿ ತಡರಾತ್ರಿಯವರೆಗೆ ನಡೆಯುವ ಕೂಟಗಳು, ಸಮುದ್ರತೀರ ಅಥವಾ ಈಜುಕೊಳದ ಪಕ್ಕದ ಪಾರ್ಟಿ, ಹೆಚ್ಚು ಜನರು ಸೇರಿದ್ದು ಸೆಖೆ ಹೆಚ್ಚಿರುವ ಮದುವೆ ಮೊದಲಾದ ಸ್ಥಳಗಳಲ್ಲಿ ಮೇಕಪ್ ಅಂದಗೆಡುವ ಸಾಧ್ಯತೆ ಹೆಚ್ಚು.

Tips To Touch Up Your Makeup In Minutes!

ಮೇಕಪ್ ತಪ್ಪು: ಇಂಗು ತಿಂದ ಮಂಗನಂತೆ ಆಗಬೇಡಿ!

ಕೆಲವು ಸುಲಭ ಕ್ರಮಗಳಿಂದ ನೀವು ಅತಿ ಕಾಳಜಿಯಿಂದ ಸಮಯವನ್ನು ವ್ಯಯಿಸಿ ಧರಿಸಿಕೊಂಡಿರುವ ಮೇಕಪ್ ಹೆಚ್ಚು ಹೊತ್ತು ನಿಮ್ಮ ಸೌಂದರ್ಯವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕೆ ಹೆಚ್ಚು ಸಮಯವೇನೂ ಬೇಕಾಗಿಲ್ಲ, ಕೆಲವು ನಿಮಿಷಗಳೇ ಸಾಕು.

Tips To Touch Up Your Makeup In Minutes!

* ಮೇಕಪ್‌ನಲ್ಲಿ ಮೊದಲಾಗಿ ಹಾಳಾಗಲು ಪ್ರಾರಂಭವಾಗುವುದು ಎಂದರೆ ತುಟಿಗಳ ಬಣ್ಣ. ಪಾರ್ಟಿಯಲ್ಲಿದ್ದಾಗ ಸಾಮಾನ್ಯವಾಗಿ ಏನಾದರೂ ಕುಡಿಯಲು ಅಥವಾ ತಿನ್ನಲು ಇದ್ದೇ ಇರುತ್ತದೆ. ಈ ಸಂಬರ್ಭದಲ್ಲಿ ಕೊಂಚ ಲಿಪ್ ಸ್ಟಿಕ್ ನಷ್ಟವಾಗಿಯೇ ಇರುತ್ತದೆ. ಇದಕ್ಕಾಗಿ ಇಂದು ಬಳಸಿರುವ ಲಿಪ್ ಸ್ಟಿಕ್ ಅನ್ನು ನಿಮ್ಮ ಹ್ಯಾಂಡ್ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದರೆ ತಿಂದ/ಕುಡಿದ ತಕ್ಷಣ ಕೊಂಚ ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದರಿಂದ ಏನೂ ಆಗದೇ ಇರುವಂತೆ ನೋಡಿಕೊಳ್ಳಬಹುದು.

ಉದ್ಯೋಗಸ್ಥ ಮಹಿಳೆಯರಿಗೆ ಒಂದಿಷ್ಟು ಮೇಕಪ್ ಟಿಪ್ಸ್

Tips To Touch Up Your Makeup In Minutes!

ಇದನ್ನು ಸರಿಪಡಿಸಲು ಕೆಲವು ಟಿಶ್ಯೂ ಪೇಪರುಗಳನ್ನು ಸದಾ ನಿಮ್ಮ ಚೀಲದಲ್ಲಿ ಇಟ್ಟಿರಿ. ಇದರಿಂದ ಕರಗಿರುವ ಅಂಚುಗಳನ್ನು ಒರೆಸಿಕೊಳ್ಳಲು ಸಾಧ್ಯವಾಗುತ್ತದೆ. ಕಾಜಲ್ ಅಥವಾ ಕೊಹ್ಲ್ ಬಳಸಿದ್ದರೆ ಇದು ಕರಗಿದಾಗ ಕಣ್ಣುಗಳ ಒಳಗೆ ಹೋಗಿಬಿಡುತ್ತದೆ. ಆದ್ದರಿಂದ ಇದನ್ನು ಸರಿಪಡಿಸಿಕೊಳ್ಳಲು ಕೊಂಚ ಟಚಪ್ ಮಾಡಿದರೆ ಸಾಕಾಗುತ್ತದೆ.

* ಮುಖದ ಮೇಕಪ್ ಒಂದು ವೇಳೆ ಘಾಸಿಗೊಂಡಿದ್ದರೆ ಇಡಿಯ ಮೇಕಪ್ ಅನ್ನು ಪ್ರಾರಂಭದಿಂದ ಮಾಡುವುದನ್ನು ಮಾತ್ರ ಯೋಚಿಸಬೇಡಿ. ಏಕೆಂದರೆ ಇದಕ್ಕಾಗಿ ತಳದಿಂದ ಎಲ್ಲವನ್ನೂ ನಿವಾರಿಸಿ ಮತ್ತೆ ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ. ಮನೆಯಲ್ಲಾದರೆ ಪರವಾಗಿಲ್ಲ, ನಿಮಗೆ ಅಗತ್ಯವಿದ್ದ ಎಲ್ಲವೂ ಕೈಗೆಟುಕುವಂತಿರುತ್ತವೆ.

ಆದರೆ ಪಾರ್ಟಿಗೆ ಹೋದ ಸ್ಥಳದಲ್ಲಿ? ಅಗತ್ಯವಿದ್ದ ಕೆಲವು ಕೈಗೆ ಸಿಗದೇ ಇದ್ದರೆ ನಿಮ್ಮ ಮೇಕಪ್ ಪೂರ್ಣವಾಗದು. ಆದ್ದರಿಂದ ಇದನ್ನು ಕೊಂಚ ನಾಜೂಕಿನಿಂದ ಟಚಪ್ ನೀಡುವ ಮೂಲಕ ಘಾಸಿಗೊಂಡಿದ್ದ ಸ್ಥಳವನ್ನು ಸರಿಪಡಿಸಿ. ಅಂತಿಮ ಟಚ್ ನೀಡುವ ಬ್ರಶ್ ಮತ್ತು ಇತರ ಚಿಕ್ಕ ಉಪಕರಣಗಳನ್ನು ನಿಮ್ಮ ಕೈಚೀಲದಲ್ಲಿದ್ದರೆ ಸಾಕಾಗುತ್ತದೆ. ಒಟ್ಟಾರೆ ಇದಕ್ಕೆ ಮೂರರಿಂದ ಐದು ನಿಮಿಷ ಸಾಕಾಗುತ್ತದೆ.

Tips To Touch Up Your Makeup In Minutes!

* ಒಂದು ವೇಳೆ ನಿಮ್ಮ ಚರ್ಮ ಎಣ್ಣೆಚರ್ಮವಾಗಿದ್ದರೆ ಬೆವರಿನೊಂದಿಗೆ ಎಣ್ಣೆಯಪಸೆಯೂ ಒಸರಲು ಪ್ರಾರಂಭವಾಗುತ್ತದೆ. ಇದು ನಿಮ್ಮ ಮೇಕಪ್ ನೊಂದಿಗೆ ಮಿಶ್ರಣಗೊಂಡು ಹೆಚ್ಚು ಎಣ್ಣೆ ಪಸರಿದ ಸ್ಥಳದಲ್ಲಿ, ವಿಶೇಷವಾಗಿ ಟಿ-ಜ಼ೋನ್ ಅಂದರೆ ಮೂಗಿನ ಮೇಲ್ಭಾಗದಿಂದ ಹುಬ್ಬುಗಳ ಮೇಲ್ಭಾಗದ ಸ್ಥಳದಲ್ಲಿ ಹೆಚ್ಚು ಹೊಳಪು ಕಾಣುತ್ತದೆ. ಇದನ್ನು ಸರಿಪಡಿಸಲು ನಿಮ್ಮ ಕೈಚೀಲದಲ್ಲಿ ಕೆಲವು ಟಿಶ್ಯೂ ಪೇಪರ್ ಇಟ್ಟಿರಿ ಇದನ್ನು ಬಳಸಿ ಹೆಚ್ಚಿನ ಎಣ್ಣೆ ಪಸೆಯನ್ನು ಆಗಾಗ ಹೀರಿಕೊಳ್ಳುತ್ತಿರಿ ಮತ್ತು ಈ ಸ್ಥಳದಲ್ಲಿ ಕೊಂಚ ಕಾಂಪಾಕ್ಟ್ ಪೌಡರ್ ಬಳಸಿ ಸರಿಪಡಿಸಿಕೊಳ್ಳಿ.

Tips To Touch Up Your Makeup In Minutes!

ಲಿಪ್ ಸ್ಟಿಕ್ ತುಟಿಗೆ ಮಾತ್ರವಲ್ಲ, ಹೀಗೂ ಬಳಸಿಕೊಳ್ಳಬಹುದು..

Tips To Touch Up Your Makeup In Minutes!

ಇದನ್ನುಸರಿಪಡಿಸಲು ಲಿಪ್ ಬಾಮ್ ಒಂದನ್ನು ಸದಾ ಕೈಚೀಲದಲ್ಲಿಟ್ಟು ಆಗಾಗ ತುಟಿಗಳಿಗೆ ಸವರುತ್ತಿರಬೇಕು. ಕಣ್ಣಿನ ಮೇಕಪ್ ಸಹಾ ಪದರವೇಳಲು ಪ್ರಾರಂಭಿಸಬಹುದು. ಇದನ್ನು ಸರಿಪಡಿಸಲು ಕೊಂಚ ಲೋಶನ್ ಅನ್ನು ಹತ್ತಿಯ ಪ್ಯಾಡ್ ನಲ್ಲಿ ಮುಳುಗಿಸಿ ಕಣ್ಣುಗಳಿಗೆ ಒತ್ತಿಕೊಂಡು ಸರಿಪಡಿಸಿ. ಸೌಂದರ್ಯ ಪ್ರಜ್ಞೆ ಇರುವ ಮಹಿಳೆಯರಿಗೆ ಈ ಸರಳ ಸಲಹೆಗಳು ಸದಾ ಉಪಯುಕ್ತವಾಗಿವೆ.

English summary

Tips To Touch Up Your Makeup In Minutes!

Haven't seen the ladies taking a touch up break? Touch up makeup is basically needed when you are going for an event that is going to last really long, overnight parties and beach/pool parties where there is a chance of your makeup fading away. Here are some tips to do some quick touch up makeup within minutes and come out looking as gorgeous as before.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more