For Quick Alerts
ALLOW NOTIFICATIONS  
For Daily Alerts

ಉದ್ಯೋಗಸ್ಥ ಮಹಿಳೆಯರಿಗೆ ಒಂದಿಷ್ಟು ಮೇಕಪ್ ಟಿಪ್ಸ್

By Manu
|

ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ. ಬೆಳಗಿನ ಕೆಲಸಕ್ಕೆ ಹೋಗುವ ಧಾವಂತದಲ್ಲಿ ನಿತ್ಯದ ಅಲಂಕಾರವನ್ನೂ ಮುಗಿಸಿ ಹೊರಡುವುದು ಎಲ್ಲಾ ಉದ್ಯೊಗಸ್ಥ ಮಹಿಳೆಯರಿಗೆ ದೊಡ್ಡ ಸವಾಲು. ಅದರಲ್ಲೂ ಮಕ್ಕಳಿದ್ದವರಿಗಂತೂ ಬೆಳಗಿನ ಒಂದೊಂದು ಕ್ಷಣವೂ ಅತ್ಯಂತ ಅಮೂಲ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ಬೇರೇನಾದರೂ ಕೆಲಸ ಬಂದರೆ ತಲೆ ಚಿಟ್ಟು ಹಿಡಿಯುವುದು ಖಂಡಿತ.

ಒಂದು ಕಡೆ ಆಫೀಸ್‌ಗೆ ಬೇಗನೇ ಸೇರುವ ಧಾವಂತ ಹಾಗೂ ಇನ್ನೊಂದು ಕಡೆ ಮನೆಯ ಕೆಲಸಗಳನ್ನು ಪೂರೈಸಿಕೊಳ್ಳುವ ಆತಂಕ. ಈ ಧಾವಂತದಲ್ಲಿ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೆಚ್ಚಿನವರಿಗೆ ಒಂದು ದೊಡ್ಡ ಸವಾಲೇ ಸರಿ. ಆದರೆ ಇದನ್ನು ನಿರ್ವಹಿಸಲು ಕೆಲವು ಉಪಯುಕ್ತ ಮಾಹಿತಿಗಳಿವೆ. ಇದಕ್ಕೆ ಹೆಚ್ಚಿನ ಸಮಯದ ಅಗತ್ಯವಿಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ಪ್ರೈಮರ್ ಮೇಕಪ್ ಅನ್ನು ಮರೆಯಬೇಡಿ

ಪ್ರೈಮರ್ ಮೇಕಪ್ ಅನ್ನು ಮರೆಯಬೇಡಿ

ಪ್ರೈಮರ್ ನಿಮ್ಮ ಮೇಕಪ್ ನ ಮುಖ್ಯ ಭಾಗ. ಅದರಲ್ಲೂ ಒಂದು ವೇಳೆ ನಿಮ್ಮ ಆಯಸ್ಸು ಮೂವತ್ತಕ್ಕೂ ಮೀರಿದ್ದರೆ ನಿಮ್ಮ ಬೆಳಗ್ಗಿನ ಸಮಯವನ್ನು ಇದು ಅಪಾರವಾಗಿ ಕಡಿಮೆಗೊಳಿಸುತ್ತದೆ. ಸೂಕ್ತ ಎಸ್ ಪಿ ಎಫ್ ಮತ್ತು ಬೆಳಕನ್ನು ಪ್ರತಿಫಲಿಸುವ ಗುಣದಿಂದ ಹಾಗೂ ಉತ್ತಮ ತೇವಕಾರಕವಾಗಿರುವ ಪ್ರೈಮರ್ ಬಳಸುವುದರಿಂದ ನಿಮಗೆ ಬೇರೆಯ ಫೌಂಡೇಶನ್ ನ ಅಗತ್ಯವೇ ಇಲ್ಲ.

ಪ್ರೈಮರ್ ಮೇಕಪ್ ಅನ್ನು ಮರೆಯಬೇಡಿ

ಪ್ರೈಮರ್ ಮೇಕಪ್ ಅನ್ನು ಮರೆಯಬೇಡಿ

ಅಷ್ಟೇ ಅಲ್ಲ, ಕಂಸೀಲರ್ ಮತ್ತು ಪೌಡರುಗಳೂ ಅಗತ್ಯವಿಲ್ಲ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗುತ್ತದೆ ಹಾಗೂ ಸೌಂದರ್ಯವೂ ಬೆಳಗುತ್ತದೆ. ಆದರೆ ಕಣ್ಣಿನ ಹುಬ್ಬುಗಳು ಮತ್ತು ಕೆನ್ನೆಯ ಉಬ್ಬಿದ ಭಾಗಕ್ಕೆ ಕೊಂಚ ಹೆಚ್ಚಿನ ಮೆರುಗು, ಅದೂ ಕೆಲವೇ ಸೆಕೆಂಡುಗಳ ಕಾಲ ನೀಡುವ ಮೂಲಕ ನಿಮ್ಮ ಮೇಕಪ್ ಪರಿಪೂರ್ಣವಾಗುತ್ತದೆ. ಇದು ಸರಿಸುಮಾರು ಇಡಿಯ ದಿನ ಸುಂದರವಾಗಿರಲು ನೆರವಾಗುತ್ತದೆ.

ಹುಬ್ಬುಗಳನ್ನು ಮುಂಚೆಯೇ ಸಿದ್ಧಪಡಿಸಿಟ್ಟುಕೊಳ್ಳಿ

ಹುಬ್ಬುಗಳನ್ನು ಮುಂಚೆಯೇ ಸಿದ್ಧಪಡಿಸಿಟ್ಟುಕೊಳ್ಳಿ

ಹುಬ್ಬುಗಳನ್ನು ಮೊದಲೇ ಕತ್ತರಿಸಿ ಅಂದವಾಗಿಟ್ಟುಕೊಂಡರೆ ಬೆಳಗ್ಗಿನ ಹೊತ್ತಿಗೆ ಇದಕ್ಕೆ ಹೆಚ್ಚಿನ ಆರೈಕೆಯೇ ಬೇಕಾಗಿಲ್ಲ. ಆದ್ದರಿಂದ ಈ ಮೂಲಕ ಹುಬ್ಬುಗಳ ಆರೈಕೆ ಮತ್ತು ಅಲಂಕಾರಕ್ಕಾಗಿ ಬೆಳಿಗ್ಗೆ ವಿನಿಯೋಗಿಸಬೇಕಾಗಿದ್ದ ಸಮಯ ಉಳಿಯುತ್ತದೆ.

ಉತ್ತಮ ಗುಣಮಟ್ಟದ ಬ್ರಶ್ ಗಳನ್ನೇ ಉಪಯೋಗಿಸಿ

ಉತ್ತಮ ಗುಣಮಟ್ಟದ ಬ್ರಶ್ ಗಳನ್ನೇ ಉಪಯೋಗಿಸಿ

ಕೊಂಚ ದುಬಾರಿಯಾದರೂ ಚಿಂತೆಯಿಲ್ಲ ಆದರೆ ಉತ್ತಮ ಗುಣಮಟ್ಟದ ಬ್ರಶ್ ಗಳನ್ನೇ ಉಪಯೋಗಿಸಿ. ಏಕೆಂದರೆ ಕಳಪೆ ಬ್ರಶ್ ನಿಂದ ಬಣ್ಣ ಅಡ್ಡಾದಿಡ್ಡಿಯಾಗುವುದು ಮತ್ತು ಸರಿಪಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಬಣ್ಣಗಳನ್ನು ಸರಿಯಾಗಿ ಹಚ್ಚಲು ಸಾಧ್ಯವಿರುವ ಬ್ರಶ್ ಗಳನ್ನೇ ಕೊಳ್ಳಿ.

ಕೇಶಶೃಂಗಾರವನ್ನು ಕಡೆಯದಾಗಿ ಇಟ್ಟುಕೊಳ್ಳಿ

ಕೇಶಶೃಂಗಾರವನ್ನು ಕಡೆಯದಾಗಿ ಇಟ್ಟುಕೊಳ್ಳಿ

ಕೂದಲು ಬೆಳೆಯುತ್ತಿದ್ದಂತೆಯೇ ಕೆಲವು ಉದ್ದ, ಕೆಲವು ಗಿಡ್ಡವಾಗಿದ್ದು ಅಧ್ವಾನವಾಗಿರುತ್ತವೆ. ಆದ್ದರಿಂದ ಆಗಾಗ ಕೂದಲನ್ನು ಒಂದೇ ಸಮನಾಗಿರುವಂತೆ ತುದಿಗಳನ್ನು ಕತ್ತರಿಸಿಟ್ಟುಕೊಂಡರೆ ಮುಂಜಾನೆ ಹೆಚ್ಚಿನ ಆರೈಕೆಗೆ ಸಮಯ ವಿನಿಯೋಗಿಸಬೇಕಾಗಿಲ್ಲ. ಕೇಶ ಶೃಂಗಾರವನ್ನು ಕಡೆಯದಾಗಿ ಇಟ್ಟುಕೊಳ್ಳುವ ಮೂಲಕ ಹೆಚ್ಚಿನ ಸಮಯ ವ್ಯರ್ಥವಾಗಲು ಸಾಧ್ಯವಿಲ್ಲ.

ಕೇಶಶೃಂಗಾರವನ್ನು ಕಡೆಯದಾಗಿ ಇಟ್ಟುಕೊಳ್ಳಿ

ಕೇಶಶೃಂಗಾರವನ್ನು ಕಡೆಯದಾಗಿ ಇಟ್ಟುಕೊಳ್ಳಿ

ಸೌಂದರ್ಯ ತಜ್ಞರ ಪ್ರಕಾರ ತಲೆಗೂದಲನ್ನು ನಿಯಮಿತವಾಗಿ ಕತ್ತರಿಸಿಟ್ಟುಕೊಳ್ಳುತ್ತಾ ಬಂದರೆ ಕೂದಲುಗಳು ಆರೋಗ್ಯಕರ, ಕಾಂತಿಯುಕ್ತ ಮತ್ತು ಸುಲಭವಾಗಿ ತೊಳೆದುಕೊಳ್ಳಲು ಮತ್ತು ಕ್ಷಿಪ್ರಕಾಲದಲ್ಲಿ ತಯಾರಾಗಲು ನೆರವಾಗುತ್ತವೆ.

English summary

Beauty hacks for the super busy woman

Hard-pressed for time every morning, thanks to your hectic schedule? find out, here are some quick tips that can help you look great without eating up on your time...
X
Desktop Bottom Promotion