For Quick Alerts
ALLOW NOTIFICATIONS  
For Daily Alerts

ತಪ್ಪು ಮೇಕಪ್‌ಗಳನ್ನು ಸರಿಪಡಿಸಿಕೊಳ್ಳುವ ಸುಲಭ ವಿಧಾನ

By Su.Ra
|

ತಪ್ಪು ಮಾಡೋದು ಸಹಜ ಕಣೋ. ತಿದ್ದಿ ನಡೆಯೋನೆ ಮನುಜ ಕಣೋ ಅನ್ನೋ ಗಾದೆ ಮಾತಿದೆ. ಇಷ್ಟೆಲ್ಲ ಅರ್ಥಗರ್ಭಿತವಾಗಿರುವ ಗಾದೆ ಮಾತನ್ನು ಹೇಳೋ ಅಷ್ಟು ಸೀರಿಯಸ್ ವಿಷಯ ಇದಲ್ಲದೇ ಇರಬಹುದು. ಆದ್ರೆ ಮಹಿಳೆಯರ ಮಟ್ಟಿಗೆ ಖಂಡಿತ ಸೀರಿಯಸ್ ವಿಚಾರವೇ. ಯಾಕಂದ್ರೆ ಯಾವುದಲ್ಲಿ ಫರ್ಫೆಕ್ಟ್ ಆಗಿಲ್ಲದಿದ್ರೂ ಪರವಾಗಿಲ್ಲ, ತಮ್ಮ ಮೇಕಪ್ ವಿಚಾರದಲ್ಲಿ ಮಾತ್ರ ಮಹಿಳೆಯರು ಬ್ಯೂಟಿಫುಲ್ ಆಗಿರಬೇಕು, ಫರ್ಫೆಕ್ಟ್ ಆಗಿರಬೇಕು ಅಂತ ಬಯಸ್ತಾರೆ. ಒಂದು ಸ್ವಲ್ಪ ಯಡವಟ್ಟಾದ್ರೂ ಛೇ ಅಂತ ಬೇಸರ ಪಟ್ಟುಕೊಳ್ತಾರೆ.

ಮೇಕಪ್ ಸರಿಯಾಗಿ ಇರಬೇಕು..ಮೇಕಪ್ ಚೆನ್ನಾಗಿ ಕಾಣ್ಬೇಕು.. ಮೇಕಪ್ ಸರಿಯಾಗಿ ಇಲ್ಲ ಅಂದ್ರೆ ಮೇಕಪ್ ಮಾಡ್ಕೊಂಡ್ರೂ ಅದು ವೇಸ್ಟ್ ಆಗುತ್ತೆ. ಆದ್ರೆ ಪ್ರತಿದಿನ ಮೇಕಪ್ ಮಾಡಿಕೊಳ್ಳುವಾಗ ಸಣ್ಣಪುಟ್ಟ ತಪ್ಪುಗಳಾಗೋದು ಮಾಮೂಲು. ಅಂತ ಮಿಸ್ಟೇಕ್‌ಗಳನ್ನು ಹೇಗೆ ಸರಿ ಪಡಿಸಿಕೊಳ್ಳಬಹುದು ಅನ್ನೋದನ್ನು ನಾವ್ ಹೇಳ್ತೀವಿ ಕೇಳಿ.. ಮೇಕಪ್‌ ಉತ್ಪನ್ನಗಳಲ್ಲಿ ಅಡಗಿರುವ ಸೈಲೆಂಟ್ ಕಿಲ್ಲರ್...

Most Common Makeup Mistakes—and How to Fix Them

ಫೌಂಡೇಷನ್ ಕ್ರೀಮ್ ಸ್ಕಿನ್ ಟೋನ್‌ಗೆ ಮ್ಯಾಚ್ ಆಗ್ತಿಲ್ವಾ?
ಫೌಂಡೇಷನ್ ಹಚ್ಕೊಂಡು ಬಿಟ್ರಿ...ಬಟ್ ಅದು ಸ್ಕಿನ್ ಟೋನ್‌ಗೆ ಮ್ಯಾಚ್ ಆಗ್ತಿಲ್ಲ ಆಗ ಏನು ಮಾಡೋದು. ಅದನ್ನು ಕರೆಕ್ಟ್ ಮಾಡೋಕೆ ಸಾಧ್ಯ ಇದೆ.. ಹೇಗೆ ಅಂತೀರಾ? ಜಸ್ಟ್ ನೀವು ಹಚ್ಚಿಕೊಳ್ಳುವ ಪೌಡರ್‌ನ್ನು ಹಚ್ಚಿ ಮ್ಯಾಚ್ ಮಾಡಿ.. ಎರಡನ್ನೂ ಕಾಂಬಿನೇಷನ್ ಮಾಡುವ ಟೆಕ್ನಿಕ್ ಗೊತ್ತಿರಬೇಕು ಅಷ್ಟೇ..

ಚೀಕ್‌ರೋಸ್ ಹೆಚ್ಚಾಗಿ ಬಿಡ್ತಾ?
ಸಪೋಸ್ ನೀವು ಹಚ್ಚಿಕೊಂಡಿರುವ ಚೀಕ್‌ರೋಸ್ ಜಾಸ್ತಿ ಆಗಿ ಬಿಡ್ತು ಅಂದ್ರೆ ಟೆನ್ಷನ್ ಮಾಡ್ಕೋಬೇಡಿ.. ಅದನ್ನೂ ರಿಪೇರಿ ಮಾಡ್ಕೊಳ್ಳೋಕಾಗುತ್ತೆ. ಜಸ್ಟ್ ನಿಮ್ಮ ಪೌಡರ್‌ ನ್ನು ಚೀಕ್‌ರೋಸ್‌ ಮೇಲೆ ಅಪ್ಲೈ ಮಾಡಿ ಚೀಕ್‌ರೋಸ್ ಸ್ಪ್ರೆಡ್ ಮಾಡಿ,. ಆಗ ಹೆಚ್ಚಾದ ಚೀಕ್‌ರೋಸ್‌ ಲೈಟ್ ಆಗುತ್ತೆ..

ಐ ಲೈನರ್ ಹಚ್ಚಿದ್ದು ಸರಿಯಾಗಿಲ್ವಾ?
ಐ ಲೈನರ್ ಹಚ್ಚಿಕೊಳ್ಳುವಾಗ ಸ್ಪ್ರೆಡ್ ಆಯ್ತಾ? ಹಾಗಾದ್ರೆ ಟೆನ್ಷನ್ ಮಾಡ್ಕೊಬೇಡಿ,.. ಸ್ಪ್ರೆಡ್ ಆದ ಕೂಡ್ಲೆ ಒರೆಸಲು ಹೋಗ್ಬೇಡಿ.. ಸ್ವಲ್ಪ ಡ್ರೈ ಆಗಲು ಬಿಡಿ. ನಂತ್ರ ಇಯರ್ ಬಡ್ಸ್‌ನಿಂದ ಸ್ಪ್ರೆಡ್ ಆಗ ಐ ಲೈನರ್ ಒರೆಸಿ, ಮತ್ತೆ ಹೇಗೆ ಬೇಕೋ ಹಾಗೆ ಅಪ್ಲೈ ಮಾಡ್ಕೊಳ್ಳಿ.. ಕಣ್ಣಿನ ಮೇಕಪ್: ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಐ ಬ್ರೋ ಶೇಪ್ ಮಾಡಿದ್ದು ಮಿಸ್ ಆಯ್ತಾ?
ಐ ಬ್ರೋ ಶೇಪ್ ಮಾಡಿದ್ದು ಸರಿಯಾಗಿಲ್ವಾ? ಹಾಗಾದ್ರೆ ನೀವು ಮಾಡ್ಬೇಕಿರೋದು ಇಷ್ಟೇ.. ಮೊದಲು ಹಾಳಾದ ಶೇಪನ್ನು ಸ್ವಲ್ಪ ಒದ್ದೆಯಾದ ಸ್ಪಾಂಜ್‌ನಿಂದ ಇಲ್ಲವೇ ಕಾಟನ್‌ನಿಂದ ಒರೆಸಿ ಲೈಟ್ ಮಾಡಿ. ಮತ್ತೆ ಒಣಗಲು ಬಿಡಿ. ಸ್ಪೆಡ್ ಆದ ಐ ಬ್ರೋ ಶೇಪ್‌ನ್ನು ಸರಿ ಮಾಡ್ಕೊಳ್ಳಿ.

ಮಸ್ಕರಾ ಹಚ್ಚುವಾಗ ಸ್ಪ್ರೆಡ್ ಆಯ್ತಾ?
ಮಸ್ಕರಾ ಹಚ್ಚುವಾಗ ಸ್ಪ್ರೆಡ್ ಆದ್ರೆ ಕೂಡಲೇ ಕಣ್ಣು ಮಿಟುಕಿಸ್ಬೇಡಿ. ಇಲ್ಲವೇ, ಅದನ್ನು ಒರೆಸಲು ಹೋಗ್ಬೇಡಿ. ಹಾಗೆ ಒಣಗಲು ಬಿಡಿ. ಡ್ರೈ ಆದ ನಂತ್ರ ಸ್ಪ್ರೆಡ್ ಅನ್ನಿಸಿದ ಮಸ್ಕರಾವನ್ನು ಇಯರ್‌ಬಡ್ಸ್ ಸಹಾಯದಿಂದ ಕ್ಲೀನ್ ಮಾಡ್ಕೊಳ್ಳಿ. ಮತ್ತೆ ಸರಿಯಾಗಿ ಮಸ್ಕರಾ ಅಪ್ಲೈ ಮಾಡ್ಕೊಳ್ಳಿ. ಇವೆಲ್ಲ ಸಿಂಪಲ್ ಮೇಕಪ್ ಟಿಪ್ಸ್. ಬಟ್ ಮೇಕಪ್ ಮಾಡ್ಕೊಳ್ಳುವಾಗ ಅತ್ಯವಶ್ಯಕವಾಗಿ ಬೇಕಾಗುವ ಟಿಪ್ಸ್.. ಮೇಕಪ್‌ ಮಾಡ್ಕೊಳ್ಳುವಾಗ ನೀವೇನಾದ್ರೂ ಇಂತಹ ಸಮಸ್ಯೆ ಎದುರಿಸಿದ್ರೆ ಖಂಡಿತಾ ಈ ಮೇಕಪ್ ಕರೆಕ್ಷನ್ ಐಡಿಯಾಗಳನ್ನು ಬಳಸಿ ಟ್ರೈ ಮಾಡಿ...

English summary

Most Common Makeup Mistakes—and How to Fix Them

No matter how good you are at applying makeup, mess-ups do happen.Whether you accidentally swipe your mascara too quickly or dab on one too many coats of bronzer, these tiny flubs can have a big effect on your final look—and cost you major time when you’re getting ready. But don’t fret: here are the few tips you can easily correct the make up
Story first published: Tuesday, February 23, 2016, 20:21 [IST]
X
Desktop Bottom Promotion