For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಶೇವಿಂಗ್ ಕ್ರೀಮ್ -ಮನೆಯಲ್ಲೇ ತಯಾರಿಸಿಕೊಳ್ಳಿ!

By Super
|

ನಿತ್ಯದ ಕ್ಷೌರ ಇಂದು ಒಂದು ಅಗತ್ಯವಾದ ವಿಧಿಯಾಗಿದ್ದು ಲಭ್ಯವಿರುವ ರೇಜರುಗಳ ಮೂಲಕ ಇದು ಕೆಲವೇ ನಿಮಿಷಗಳಲ್ಲಿ ಯಾವುದೇ ನೋವಾಗದೇ ಮುಗಿಸಬಹುದಾಗ ಕ್ರಿಯೆಯಾಗಿ ಮಾರ್ಪಟ್ಟಿದೆ. ಹಿಂದಿನಂತೆ ನಾಪಿತನ ಬಳಿ ಹೋಗಿ ಗಂಟೆಗಟ್ಟಲೆ ಕಾದು ಆತನ ಕ್ಷೌರಗತ್ತಿಯ ಹರಿತದ ರುಚಿಯನ್ನು ಕೆಲವು ಗಾಯಗಳ ಮೂಲಕ ಸವಿಯಬೇಕಾಗಿತ್ತು.

ಆದರೆ ಇಂದು ಲಭ್ಯವಿರುವ ಶೇವಿಂಗ್ ಕ್ರೀಮ್ ಗಡ್ಡವನ್ನು ಸೌಮ್ಯಗೊಳಿಸಿ ಬೆಣ್ಣೆಯ ಮೇಲಿನ ಕೂದಲಿನಷ್ಟೇ ಸುಲಭವಾಗಿ ಕೂದಲನ್ನು ನಿವಾರಿಸುತ್ತದೆ. ಅಲ್ಲದೇ ಮಹಿಳೆಯರು ತಮ್ಮ ಮೊಣಕಾಲು, ಮೊಣಕೈ ಮೊದಲಾದ ಸ್ಥಳಗಳಿಂದ ಕೂದಲನ್ನು ನಿವಾರಿಸಲು ವ್ಯಾಕ್ಸಿಂಗ್‌ಗೆ ಸಮಯವಿಲ್ಲದಿದ್ದರೆ ಶೇವ್ ಮಾಡುವ ಮೂಲಕ ಕಡಿಮೆ ಸಮಯದಲ್ಲಿ ಕೂದಲನ್ನು ನಿವಾರಿಸಿಕೊಳ್ಳುತ್ತಾರೆ.

How To Make Your Own Shaving Cream At Home

ಆದರೆ ಶೇವಿಂಗ್ ಮಾಡಲು ಉತ್ತಮ ಗುಣಮಟ್ಟದ ಶೇವಿಂಗ್ ಕ್ರೀಂ ಅಗತ್ಯ. ಏಕೆಂದರೆ ಎಷ್ಟೇ ನವಿರಾದ ಶೇವ್ ಅದರೂ ಸೂಕ್ಷ್ಮವಾದ ಗೀರುಗಳು ಮತ್ತು ಗಾಯಗಳು ಆಗಿಯೇ ಆಗುತ್ತವೆ. ಇದು ಉರಿ, ಅಲರ್ಜಿ ಮತ್ತು ಚರ್ಮ ಕೆಂಪಗಾಗಿಸುವುದು ಮೊದಲಾದ ತೊಂದರೆಯನ್ನು ಹುಟ್ಟುಹಾಕುತ್ತದೆ. ಕೆಲವರು ಶೇವಿಂಗ್ ಕ್ರೀಮ್ ಬಳಸದೇ ನೇರವಾಗಿ ಶೇವ್ ಮಾಡಿಕೊಂಡು ಪುರುಷತ್ವ ಮೆರೆಯುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿಯಾಗಿದ್ದು ಸೋಂಕು ಹರಡಲು ನೀಡುವ ಆಹ್ವಾನವಾಗಿದೆ. ವ್ಯಾಕ್ಸಿಂಗ್, ಶೇವಿಂಗ್ ನಿಮ್ಮದು ಯಾವ ವಿಧಾನ?

ಉತ್ತಮ ಶೇವಿಂಗ್ ಕ್ರೀಂ ಕೂದಲನ್ನು ಮೃದುಗೊಳಿಸುವ ಮೂಲಕ ನಿವಾರಣೆಗೆ ನೆರವಾಗುವ ಜೊತೆಗೇ ಚರ್ಮಕ್ಕೆ ಆರ್ದ್ರತೆ ಹಾಗೂ ಪೋಷಣೆಯನ್ನೂ ನೀಡುವಂತಿರಬೇಕು. ಆದರೆ ಮಾರುಕಟ್ಟೆಯಲ್ಲಿ ಈ ಗುಣಗಳಿರುವ ಶೇವಿಂಗ್ ಕ್ರೀಮ್ ದುಬಾರಿಯಾಗಿವೆ. ಅಲ್ಲದೇ ಇದರಲ್ಲಿರುವ ಕೆಲವು ರಾಸಾಯನಿಕಗಳು ಅಲರ್ಜಿಕಾರಕವೂ ಆಗಿರಬಹುದು. ಉತ್ತಮ ಗುಣಮಟ್ಟದ ಶೇವಿಂಗ್ ಕ್ರೀಮ್ ಅನ್ನು ಈಗ ಮನೆಯಲ್ಲಿಯೇ ತಯಾರಿಸಲು ಸಾಧ್ಯವಿದೆ. ಇದು ಚರ್ಮಕ್ಕೆ ಉತ್ತಮ ಆರೈಕೆ ನೀಡುವ ಜೊತೆಗೇ ಕಾಂತಿ ಮತ್ತು ಪೋಷಣೆಯನ್ನೂ ನೀಡುತ್ತದೆ. ಬನ್ನಿ, ಇದರ ವಿಧಾನವನ್ನು ಈಗ ಕಲಿಯೋಣ:

ಶೇವಿಂಗ್ ಕ್ರೀಮ್ 1: ಬಾದಾಮಿ ಮತ್ತು ಇತರ ಅವಶ್ಯಕ ಎಣ್ಣೆಗಳ ಕ್ರೀಮ್
*ಅಗತ್ಯವಿರುವ ಸಾಮಾಗ್ರಿಗಳು:
*ಕೊಬ್ಬರಿ ಎಣ್ಣೆ - ¼ ಕಪ್
*ಶಿಯಾ ಬೆಣ್ಣೆ (shea butter)-¼ ಕಪ್
*ಅಡುಗೆ ಸೋಡಾ: ಎರಡು ದೊಡ್ಡ ಚಮಚ
*ಬಾದಾಮಿ ಎಣ್ಣೆ -¼ ಕಪ್
*ಲ್ಯಾವೆಂಡರ್ ಅವಶ್ಯಕ ತೈಲ : ಹತ್ತು ಹನಿಗಳು
*ಪುದೀನಾ ಎಲೆಯ ಅವಶ್ಯಕ ತೈಲ : ಐದು ಹನಿಗಳು ಶೇವಿಂಗ್ ಬಳಿಕ ಕಾಡುವ ತ್ವಚೆಯ ಸಮಸ್ಯೆಗೆ ಏನು ಮಾಡಲಿ?

ವಿಧಾನ:
1) ಒಂದು ಚಿಕ್ಕ ಪಾತ್ರೆಯಲ್ಲಿ ಚಿಕ್ಕ ಉರಿಯಲ್ಲಿ ಶಿಯಾ ಬೆಣ್ಣೆಯನ್ನು ಕರಗಿಸಿ ಪಾತ್ರೆಯನ್ನು ಉರಿಯಿಂದ ಹೊರಗಿಡಿ. ಇದಕ್ಕೆ ಎಲ್ಲಾ ಅವಶ್ಯಕ ಎಣ್ಣೆಗಳನ್ನು ಸೇರಿಸಿ ಮಿಶ್ರಣ ಮಾಡಿ ಒಂದು ಚಿಕ್ಕ ಬಾಟಲಿಯಲ್ಲಿ ಹಾಕಿ ಫ್ರಿಜ್ಜಿನಲ್ಲಿಡಿ. ಫ್ರಿಜ್ಜಿನಲ್ಲಿ ಈ ಕ್ರೀಂ ಗಟ್ಟಿಯಾದ ಬಳಿಕ ಹೊರತೆಗೆದಿಡಿ.
2) ಇದು ಕರಗಿ ಸಾಮಾನ್ಯ ತಾಪಮಾನಕ್ಕೆ ಬರುವಾಗ ಅಡುಗೆ ಸೋಡಾ ಸೇರಿಸಿ ಮಿಕ್ಸಿಯ ಚಿಕ್ಕ ಗ್ರೈಂಡರ್ ನಲ್ಲಿ ಗೊಟಾಯಿಸಿ ನಯವಾದ ಪೇಸ್ಟ್ ಆಗುವಂತೆ ಮಾಡಿಕೊಳ್ಳಿ.
3) ಶೇವಿಂಗ್ ಕ್ರೀಂ ಬಳಸಲು ಸಿದ್ಧವಾಗಿದೆ. ಇದನ್ನು ಸಾಮಾನ್ಯ ತಾಪಮಾನದಲ್ಲಿ ಶೇಖರಿಸಿಡಿ.

ಶೇವಿಂಗ್ ಕ್ರೀಂ 2: ಲೋಳೆಸರ ಜೆಲ್
*ಅಗತ್ಯವಿರುವ ಸಾಮಾಗ್ರಿಗಳು:
*ಲೋಳೆಸರ ಅಥವಾ ಆಲೋವೆರಾ ಜೆಲ್ - ¼ ಕಪ್
*ವೆಜಿಟೆಬಲ್ ಗ್ಲಿಸರಿನ್ - ಎರಡು ದೊಡ್ಡಚಮಚ
*ಟೀ ಟ್ರೀ ಅವಶ್ಯಕ ತೈಲ (tea tree essential oil) - ಎಂಟು ಹನಿಗಳು
*ಉಪ್ಪು : ಒಂದು ಚಿಕ್ಕ ಚಮಚ
*liquid castile soap - 1/2 ಕಪ್
*ಕೊಬ್ಬರಿ ಎಣ್ಣೆ: 1/2 ಕಪ್
*ನಿಮ್ಮ ಆಯ್ಕೆಯ ಯಾವುದೇ ಅವಶ್ಯಕ ತೈಲ - ಹತ್ತು ಹನಿಗಳು
*ವಿಟಮಿನ್ ಇ ಕ್ಯಾಪ್ಯೂಲುಗಳು - ಐದು (ಒಳಗಿನ ಪುಡಿ)

ವಿಧಾನ
1) ಕೊಂಚ ಬಿಸಿನೀರಿನಲ್ಲಿ ಉಪ್ಪು ಹಾಕಿ ಕರಗಿಸಿ ಇದಕ್ಕೆ ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ನಯವಾದ ಮಿಶ್ರಣ ಮಾಡಿ.
2) ಇದನ್ನು ಒಂದು ಬಾಟಲಿಗೆ ವರ್ಗಾಯಿಸಿ ಮುಚ್ಚಳ ಗಟ್ಟಿಯಾಗಿ ಮುಚ್ಚಿ ಚೆನ್ನಾಗಿ ಅಲುಗಾಡಿಸಿ.
3) ಇದನ್ನು ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಿ.

English summary

How To Make Your Own Shaving Cream At Home

Shaving is a quick process to your body hair that is painless. When we have no time left in removing our unrequired body hair, we tend to shave them. Be it men or women, all prefer shaving as compared to other methods of hair removal. Here are two homemade shaving cream recipes that are easy to make. Try them out!
X
Desktop Bottom Promotion