ತುಟಿಯ ರಂಗು ಹೆಚ್ಚಿಸುವ ಬಣ್ಣ ಬಣ್ಣದ ಲಿಪ್‍ಸ್ಟಿಕ್‌ಗಳು

By vani nayak
Subscribe to Boldsky

ನವರಾತ್ರಿ ಹಬ್ಬವು ಸಮೀಪಿಸುತ್ತಿದೆ. ಇಂತಹ ಹಬ್ಬದ ಸಂದರ್ಭದಲ್ಲಿ ಎಲ್ಲರೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಇಚ್ಛೆಯನ್ನು ಹೊಂದಿರುತ್ತಾರೆ. ಹಾಗಾಗಿ, ನವರಾತ್ರಿಯಲ್ಲಿ ಪ್ರತಿದಿನವೂ ನಿಮ್ಮ ಉಡುಪು ಹಾಗು ಸೀರೆಗಳಿಗೆ ಸರಿ ಹೊಂದುವ ಲಿಪ್ ಸ್ಟಿಕ್ ಶೇಡ್ ಗಳ ಬಗ್ಗೆ ಮಾಹಿತಿ ಇರುವ ಈ ಲೇಖನವನ್ನು ನಾವು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತಿದ್ದೇವೆ.

ಭಾರತದಾದ್ಯಂತ ಸಂಭ್ರಮದಿಂದ ಆಚರಿಸುವ ದೊಡ್ಡ ಹಬ್ಬವಾದ್ದರಿಂದ ನವರಾತ್ರಿಯ ಎಲ್ಲಾ ದಿನಗಳಲ್ಲಿ ಎಲ್ಲರೂ ತಮ್ಮನ್ನು ತಾವು ಹೆಚ್ಚು ಅಲಂಕರಿಸಿಕೊಂಡು ಸುಂದರವಾಗಿ ಕಾಣಬಯಸುತ್ತಾರೆ. ಇದು ವರ್ಷದಲ್ಲಿ ಎರಡು ಬಾರಿ ಬರುತ್ತದೆ. ಒಂದು ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಫೆಬ್ರುವರಿಯಿಂದ ಮಾರ್ಚ್ ಅವಧಿಯಲ್ಲಿ.      ಹಲ್ಲಿಗೆ ಹಿಡಿಯೋ ಲಿಪ್‌ಸ್ಟಿಕ್‌ ಕಿರಿಕಿರಿಗೆ ಫುಲ್‌ಸ್ಟಾಪ್

ಈ ಎರಡೂ ಸಂದರ್ಭಗಳಲ್ಲಿಯೂ ಕೂಡ ಜನರಿಗೆ ಅಲಂಕಾರ ಮಾಡಿಕೊಳ್ಳಲು ಒಂದು ಅವಕಾಶ ಸಿಗುತ್ತದೆ. ಆದ್ದರಿಂದ ಸಹಜವಾಗಿಯೇ ನಿಮ್ಮ ಉಡುಪುಗಳಿಗೆ ಸರಿಹೊಂದುವ ಮೇಕಪ್ ಸಹ ಅತ್ಯಾವಶ್ಯಕವಾಗಿರುತ್ತದೆ. ನಮ್ಮ ಮುಖದಲ್ಲಿ ತುಟಿಗಳ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ ಇದನ್ನು ಸಿಂಗರಿಸಿದಂತೆಲ್ಲಾ ಯಾವುದೇ ತರಹದ ಲುಕ್ ಅನ್ನು ಪಡೆಯಬಹುದಾಗಿದೆ.

Lipstick
 

ಉತ್ತಮ ಉಡುಗೆಗಳಿಗೆ, ಸರಿಯಾದ ಮೇಕಪ್ ಮಾಡಿಕೊಳ್ಳದಿದ್ದರೆ, ಹೇಗೆ ನಮ್ಮ ಮುಖಾರವಿಂದವೇ ನೀರಸವಾಗಿ ಕಾಣಿಸುತ್ತದೆಯೋ ಹಾಗೆಯೇ ಸರಿಯಾದ ಲಿಪ್ ಶೇಡ್ ಅನ್ನು ಬಳಸಿದರೆ ಮುಖದ ಸೌಂದರ್ಯವೇ ಹೆಚ್ಚುತ್ತದೆ. ಪ್ರತಿ ಹೆಂಗಸರು ಲಿಪ್ ಸ್ಟಿಕ್ ಎಂಬ ಸೌಂದರ್ಯವರ್ಧಕಕ್ಕೆ ಮಾರುಹೋಗಿರುತ್ತಾರೆ ಹಾಗು ಅದರ ಬಳಕೆ ಒಂದು ಗೀಳಾಗಿಬಿಟ್ಟಿರುತ್ತದೆ. ನವರಾತ್ರಿಯಲ್ಲಿ ವಿವಿಧ ಬಣ್ಣಗಳ ಸೀರೆಗಳಿಗೆ ಯಾವ ಲಿಪ್ ಸ್ಟಿಕ್ ಶೇಡ್ ಗಳು ಸರಿಹೊಂದುತ್ತದೆಂದು ಈ ಕೆಳೆಗೆ ಓದಿ.

ಬೂದು ಬಣ್ಣ:

ನೀವು ಬೂದು ಬಣ್ಣದ ಅಂದರೆ ಗ್ರೇ ಬಣ್ಣದ ಸೀರೆ ಉಟ್ಟಿದ್ದರೆ, ಯಾವುದೇ ಲಿಪ್ ಸ್ಟಿಕ್ ಶೇಡ್ ಅನ್ನು ಬಳಸಬಹುದು. ಇದು ಮಂಕಾದ ಬಣ್ಣವಾದ್ದರಿಂದ ಹೊಳೆಯುವ ಅಂದರೆ ಬ್ರೈಟಾದ ಲಿಪ್ ಶೇಡ್ ಅನ್ನು ಬಳಸಬಹುದು. ಹೊಳೆಯುವನೀಲಿ ಬಣ್ಣದ ಬೇಸ್ ಇರುವ ಗುಲಾಬಿ ಶೇಡ್ ಹಚ್ಚಿಕೊಂಡರೆ, ನಿಮ್ಮ ಸೌಂದರ್ಯಕ್ಕೆ ಜೀವ ತಂದುಕೊಡುತ್ತದೆ. ಇದನ್ನು ನವರಾತ್ರಿಯ ಸಂದರ್ಭದಲ್ಲಿ ಇಂತಹ ಲುಕ್ ಪಡೆಯಲು ಒಮ್ಮೆ ಪ್ರಯತ್ನಿಸಬಹುದು.

Lipstick
 

ನಾರಂಗಿ ಬಣ್ಣ

ಕಿತ್ತಳೆ ಅಥವಾ ಆರೇಂಜ್ ಬಣ್ಣದ ಸೀರೆಗಳಿಗೆ ಲಿಪ್ ಸ್ಟಿಕ್ ಶೇಡ್ ಗಳನ್ನು ಆಯ್ಕೆ ಮಾಡುವುದು ಸ್ವಲ್ಪ ಕಷ್ಟವೇ ಸರಿ. ಸಾಧಾರಣವಾಗಿ, ಎಲ್ಲರೂ ನ್ಯೂಡ್ಸ್ ಅಥವಾ ಬ್ರೌನ್ ಬಣ್ಣವನ್ನು ಬಳಸುತ್ತಾರೆ. ಆದರೆ, ಹಾಗೆ ಮಾಡದೇ ನಮ್ಮಲ್ಲಿ ವಿಶ್ವಾಸವಿಟ್ಟು ಫುಶಿಯಾ ಪಿಂಕ್ ಬಣ್ಣವನ್ನು ಬಳಸಿ. ಎರಡೂ ವಿಭಿನ್ನ ಬಣ್ಣವಾದ್ದರಿಂದ ಅತ್ಯುತ್ತಮವಾಗಿ ಕಾಣಿಸುತ್ತದೆ.

ಬಿಳಿಯ ಬಣ್ಣ

ಇದು ಬಹುಮುಖ ಬಣ್ಣವಾದ್ದರಿಂದ, ಬಿಳಿ ಬಣ್ಣದ ಸೀರೆಗಳಿಗೆ ಯಾವುದೇ ಬಣ್ಣದ ಲಿಪ್ ಸ್ಟಿಕ್ ಶೇಡ್ ಗಳು ಸರಿಹೊಂದುತ್ತದೆ. ಆದರೆ ನಾವು ನಿಮಗೆ ನೀಲಿಬಣ್ಣದ ಬೇಸ್ ಇರುವ ಕೆಂಪು ಶೇಡ್ ಅನ್ನು ಬಳಸಲು ಸಲಹೆ ನೀಡುತ್ತೇವೆ. ಅದು ಎದ್ದು ಕಾಣುತ್ತದೆ ಮತ್ತು ಮುಖಕ್ಕೆ ಒಂದು ಹೊಳಪನ್ನು ತಂದುಕೊಡುತ್ತದೆ.

Lipstick
 

ರೆಡ್

ಕೆಂಪು ಬಣ್ಣದ ಸೀರೆ ಧರಿಸಿದಾಗ ಸೀರೆಯೇ ಆಕರ್ಷಣೀಯವಾಗಿ ಕಾಣಬೇಕೆಂಬುದು ಸಹಜ ಆಲೋಚನೆ. ಆದ್ದರಿಂದ ತುಟಿಗಳನ್ನು ನ್ಯೂಟ್ರಲ್ ಆಗಿ ಇಡುವುದು ಒಳ್ಳೆಯದು. ನ್ಯೂಡ್ ಅಥವಾ ಬ್ರೌನ್ ಶೇಡ್ ಹೆಚ್ಚು ಸೂಕ್ತ. ಈ ನವರಾತ್ರಿಗೆ ಇಂತಹ ಸೊಗಸಾದ ಕಾಂಬಿನೇಷನ್ ಅನ್ನು ನೀವು ಒಮ್ಮೆ ಪ್ರಯತ್ನಸಿ.

ರಾಯಲ್ ಬ್ಲೂ

ಪಿಂಕ್ ಬಣ್ಣದ ಲಿಪ್ ಸ್ಟಿಕ್ ಗಳು ರಾಯಲ್ ಬ್ಲೂ ಬಣ್ಣದ ಸೀರೆಗೆ ಸರಿಹೊಂದುತ್ತದೆ. ಎರಡು ವಿಭಿನ್ನ ಬಣ್ಣವಾದ್ದರಿಂದ ಒಳ್ಳೆಯ ಕಾಂಟ್ರಾಸ್ಟ್ ಕೊಡುತ್ತದೆ. ಸ್ವಲ್ಪ ಕೆಂಪು ಮಿಶ್ರಿತ ಪಿಂಕ್ ಶೇಡ್ ಅನ್ನು ಬಳಸಿ.

Lipstick
 

ಹಳದಿ ಬಣ್ಣ

ಹಳದಿ ಬಣ್ಣದ ಸೀರೆಗಳಿಗೆ, ಬ್ರೈಟ್ ಶೇಡಿನ ಲಿಪ್ ಸ್ಟಿಕ್ ಗಳನ್ನೇ ಬಳಸಬೇಕಾಗುತ್ತದೆ. ಆರೇಂಜ್ ಬಣ್ಣದ ಬೇಸ್ ವುಳ್ಳ ಕೆಂಪು ಲಿಪ್ ಸ್ಟಿಕ್ ಹೆಚ್ಚು ಸೂಕ್ತ.

ಹಸಿರು ಬಣ್ಣ

ಹಸಿರು ಬಣ್ಣದ ಸೀರೆಗಳಿಗೆ, ಸೇಫ್ ಬಣ್ಣಗಳು ಒಳ್ಳೆಯದು. ಈ ಬಣ್ಣಕ್ಕೆ, ನೀವು ಡಸ್ಟಿ ಗುಲಾಬಿ ಬಣ್ಣದ ಲಿಪ್ ಸ್ಟಿಕ್ ಬಳಸಿದರೆ, ನಯವಾಗಿ ಹಾಗು ಅಂದವಾಗಿಯೂ ಕಾಣುತ್ತದೆ.

Lipstick
 

ನೇರಳೆ ಬಣ್ಣ

ನೇರಳೆ ಬಣ್ಣ ಅಂದರೆ, ಪರ್ಪಲ್ ಬಣ್ಣ ಎಂದು ನಾವು ಏನು ಕರೆಯುತ್ತೇವೆ, ಈ ಬಣ್ಣದ ಸೀರೆಗಳಿಗೆ ಪಿಂಕ್ ಶೇಡ್ ಗಳು ಸರಿಹೊಂದುತ್ತದೆ. ಬ್ರೈಟ್ ಪಿಂಕ್ ಶೇಡ್ ಗಳನ್ನು ಹಚ್ಚಿಕೊಂಡರೆ ನಿಮ್ಮ ಮುಖಕ್ಕೆ ಕ್ಷಣಾರ್ಧದಲ್ಲಿ ಹೊಳಪು ಬರುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Different Lipstick Shades For Each Day Of Navratri

    Everyone wants to look their best and dazzle completely on these days of Navratri, as it is one of the biggest festivals that is celebrated in India. It happens twice a year, once around the month of October and once during the February to March months.
    Story first published: Tuesday, September 27, 2016, 23:46 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more