For Quick Alerts
ALLOW NOTIFICATIONS  
For Daily Alerts

ಹದಿಹರೆಯಕ್ಕೆ ಕಾಲಿಡುವ ಹುಡುಗಿಯರಿಗೆ ಮೇಕಪ್ ಟಿಪ್ಸ್

By Hemanth
|

ಹದಿಹರೆಯದ ಹುಡುಗಿಯರಿಗೆ ತಾವು ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಬೆಟ್ಟದಷ್ಟಿರುತ್ತದೆ. ಇದಕ್ಕಾಗಿ ಅವರು ಇನ್ನಿಲ್ಲದ ಪ್ರಯತ್ನ ಮಾಡಿ ಇತರರಗಿಂತ ಸುಂದರವಾಗಿ ಕಾಣಲು ಕಸರತ್ತು ಮಾಡುತ್ತಾರೆ. ಸುಂದರವಾಗಿ ಕಾಣಲು ಸ್ಟೈಲಿಶ್ ಆಗಿರುವ ಬಟ್ಟೆಗಳನ್ನು ಧರಿಸಿದರೆ ಮಾತ್ರ ಸಾಲದು. ಅದಕ್ಕಾಗಿ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಮೇಕಪ್ ತುಂಬಾ ಅಗತ್ಯವಿರುತ್ತದೆ.

ಮೇಕಪ್ ಮಾಡಿಕೊಂಡರೆ ನಿಮ್ಮ ಮುಖ ಸುಂದರವಾಗಿ ಕಾಣಿಸುವುದು ಮಾತ್ರವಲ್ಲದೆ ನೈಸರ್ಗಿಕ ಸೌಂದರ್ಯವು ನಿಮ್ಮಲ್ಲಿ ಎದ್ದು ಕಾಣುತ್ತದೆ. ಆದರೆ ಹದಿಹರೆಯದಲ್ಲಿ ಮೇಕಪ್ ಮಾಡುವಾಗ ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಿಕೊಳ್ಳಬೇಕು. ಯಾಕೆಂದರೆ ಈ ಸಮಯದಲ್ಲಿ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದ ಮೇಕಪ್‌ಗಾಗಿ ಇರುವುದೆನ್ನೆಲ್ಲಾ ಬಳಸಿದರೆ ಮುಂದೆ ನಿಮ್ಮ ಚರ್ಮವು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ಮೇಕಪ್ ಮಾಡಿಕೊಳ್ಳುವಾಗ ತಿಳಿದವರ ನೆರವು ಪಡೆದುಕೊಂಡರೆ ಉತ್ತಮ. ತಪ್ಪು ಮೇಕಪ್‌ಗಳನ್ನು ಸರಿಪಡಿಸಿಕೊಳ್ಳುವ ಸುಲಭ ವಿಧಾನ

ಮೇಕಪ್ ಮಾಡಿಕೊಳ್ಳುವಂತಹ ಹದಿಹರೆಯದವರು ತುಂಬಾ ಎಚ್ಚರಿಕೆಯಿಂದ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಮೇಕಪ್‍‌ಗೆ ಕೆಲವೊಂದು ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಮತ್ತು ಯಾವ ರೀತಿಯ ಕಾಸ್ಮೆಟಿಕ್ ಗಳನ್ನು ಹಚ್ಚಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳಬೇಕು. ಮೇಕಪ್‌ ಉತ್ಪನ್ನಗಳಲ್ಲಿ ಅಡಗಿರುವ ಸೈಲೆಂಟ್ ಕಿಲ್ಲರ್...

ಹಡಗಿನಲ್ಲಿ ಒಂದು ಸಣ್ಣ ರಂಧ್ರ ಕೂಡ ಇಡೀ ಹಡಗನ್ನೇ ಮುಳುಗಿಸಬಹುದು. ಅದೇ ರೀತಿ ನೀವು ಮೇಕಪ್ ಮಾಡಿಕೊಳ್ಳುವಾಗ ಕೂಡ ಸಣ್ಣ ತಪ್ಪಾದರೂ ಅದರಿಂದ ಜೀವಮಾನವಿಡಿ ಕೊರಗಬೇಕಾಗಬಹುದು. ಇದಕ್ಕಾಗಿ ನಿಮ್ಮ ಚರ್ಮ ತುಂಬಾ ಸೂಕ್ಷ್ಮವಾಗಿರುವ ಕಾರಣ ಮೇಕಪ್ ಬಗ್ಗೆ ತುಂಬಾ ಎಚ್ವರಿಕೆ ವಹಿಸಿ. ಮೇಕಪ್ ಮಾಡಿಕೊಳ್ಳುವ ಮೊದಲು ಮುಂದೆ ಓದಿಕೊಳ್ಳಿ....

ಮಲಗುವ ಮೊದಲು ಮೇಕಪ್ ತೆಗೆದು ಮುಖ ತೊಳೆಯಿರಿ

ಮಲಗುವ ಮೊದಲು ಮೇಕಪ್ ತೆಗೆದು ಮುಖ ತೊಳೆಯಿರಿ

ಮೇಕಪ್ ಮಾಡಿಕೊಳ್ಳುವ ವೇಳೆ ಅನುಸರಿಸಬೇಕಾದ ಮೊದಲ ನಿಯಮವೆಂದರೆ ಬೆಳಿಗ್ಗೆ ಹಾಗೂ ಸಂಜೆ ಮುಖ ತೊಳೆಯಬೇಕು. ಮೇಕಪ್ ತೆಗೆಯದೆ ಯಾವತ್ತೂ ಮಲಗಲು ಹೋಗಬಾರದು.

ಸ್ವಚ್ಛ, ಮಾಯಿಶ್ಚರೈಸ್ ಮಾಡಿ

ಸ್ವಚ್ಛ, ಮಾಯಿಶ್ಚರೈಸ್ ಮಾಡಿ

ಮೇಕಪ್ ಮಾಡಿಕೊಳ್ಳುವ ಮೊದಲು ನೀವು ಮುಖವನ್ನು ಸರಿಯಾಗಿ ತೊಳೆದುಕೊಂಡು ಚರ್ಮವನ್ನು ಮೇಕಪ್ ಗಾಗಿ ಸಿದ್ಧಗೊಳಿಸಿ. ಇದರ ಬಳಿಕ ಒಳ್ಳೆಯ ಮೊಶ್ಚಿರೈಸರ್ ನಿಂದ ಮುಖವನ್ನು ಮಾಯಿಶ್ಚರೈಸ್ ಮಾಡಿಕೊಳ್ಳಿ. ಇದರಿಂದ ಚರ್ಮವು ನಿಮ್ಮ ಬಲ ಪಡೆಯುತ್ತದೆ.

ಫೌಂಡೇಶನ್ ಕಡೆಗಣಿಸಿ ಮತ್ತು ಕಾನ್ಸಿಲರ್ ಬಳಸಿ

ಫೌಂಡೇಶನ್ ಕಡೆಗಣಿಸಿ ಮತ್ತು ಕಾನ್ಸಿಲರ್ ಬಳಸಿ

ನೀವು ಮಾಡಬೇಕಾದ ಮೊದಲ ವಿಷಯವೆಂದರೆ ಫೌಂಡೇಶನ್ ಕಡೆಗಣಿಸಬೇಕು. 30 ದಾಟಿದ ಮಹಿಳೆಯರಿಗೆ ಮಾತ್ರ ಫೌಂಡೇಶನ್ ಬೇಕಿರುತ್ತದೆ. ಕಾನ್ಸಿಲರ್ ತುಂಬಾ ಒಳ್ಳೆಯದು. ಫೌಂಡೇಶನ್ ಹಾಕಿದರೆ ನಿಮ್ಮ ಮುಖವು ತುಂಬಾ ಭಾರವಾಗಿ ಕಾಣಿಸುವುದು. ಮುಖದ ಮೇಲೆ ತೆಳುವಾದ ಮೇಕಪ್ ಬೇಕೆಂದರೆ ಮೊಶ್ಚಿರೈಸರ್ ಅಥವಾ ಬಿಬಿ ಕ್ರೀಮ್ ಬಳಸಿ.

ನಸುಗಂದು ಬಣ್ಣ

ನಸುಗಂದು ಬಣ್ಣ

ನೈಜ ಸೌಂದರ್ಯ ಕಾಣಿಸಿಕೊಳ್ಳಬೇಕೆಂದರೆ ನೀವು ನಸುಗಂದು ಬಣ್ಣವನ್ನು ಬಳಸಿ. ಹದಿಹರೆಯದವರು ಎಷ್ಟು ಕಡಿಮೆ ಮೇಕಪ್ ಮಾಡಿಕೊಳ್ಳುತ್ತಾರೋ ಅಷ್ಟು ಸುಂದರವಾಗಿ ಕಾಣಿಸುತ್ತಾರೆ.

ಒಳ್ಳೆಯ ಗುಣಮಟ್ಟದ ಮಸ್ಕರಾಗಳನ್ನು ಬಳಸಿ

ಒಳ್ಳೆಯ ಗುಣಮಟ್ಟದ ಮಸ್ಕರಾಗಳನ್ನು ಬಳಸಿ

ಮಸ್ಕರಾವು ನಿಮ್ಮ ಕಣ್ಣಿನ ಅಂದವನ್ನು ದುಪ್ಪಟ್ಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಒಳ್ಳೆಯ ಗುಣಮಟ್ಟದ ಮಸ್ಕರಾ ಮತ್ತು ರೆಪ್ಪೆಗೂದಲು ಸುತ್ತುವುದನ್ನು ಬಳಸಿ. ನಿಮ್ಮ ಕಣ್ಣುಗಳಿಗೆ ಹೊಂದಿಕೊಳ್ಳುವ ಮತ್ತು ಟ್ರೆಂಡ್ ಆಗಿರುವಂತಹ ಮಸ್ಕರಾಗಳನ್ನು ಬಳಸಿಕೊಳ್ಳಿ. ಇದರಿಂದ ಕಣ್ಣುಗಳೊಂದಿಗೆ ನಿಮ್ಮ ಮುಖದ ಸೌಂದರ್ಯ ವೃದ್ಧಿಸುವುದು.

English summary

Amazing Makeup Tips For Youngsters

However, in the younger years, when the skin is sensitive and you lack the experience of applying makeup flawlessly, you need to take help. One small mistake can cause a massive damage; and, thus, make sure to keep in mind these tips to follow before putting on makeup. As you may be having a sensitive skin, you must be very cautious of what you do to it. By following these tips, you will be able to put on makeup with no worries.
X
Desktop Bottom Promotion