For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಮದುವಣಗಿತ್ತಿಗಾಗಿ ಅದ್ಭುತ ಶೃಂಗಾರ ಸಲಹೆಗಳು

By Super
|

ಮಳೆಗಾಲದಲ್ಲಿ ಮೇಕಪ್ ಸ್ನೇಹಿಯಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವುದೇ. ಮಳೆಗಾಲದಲ್ಲಿ ನೀವು ಮುಂದೆ ಮದುವೆಯಾಗಲಿರುವ ವಧುವಾಗಿದ್ದರೆ, ನೀವು ಯಾವ ರೀತಿ ಕಾಣಿಸಿಕೊಳ್ಳಬೇಕು ಎಂದು ಮೊದಲೇ ನಿರ್ಧರಿಸಬೇಕು. ಮದುವೆ ದಿನಕ್ಕೆ ಮಳೆಗಾಲದಲ್ಲಿ ಯಾವ ರೀತಿಯ ಮೇಕಪ್ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ನಾವಿಲ್ಲಿ ಗಮನಹರಿಸುವ.

ಮೇಕಪ್‌ಗೆ ತಯಾರಿ
ನಿಮ್ಮ ತ್ವಚೆಯು ಮದುವೆಯ ದಿನಕ್ಕೆ ಸಂಪೂರ್ಣವಾಗಿ ಸಿದ್ಧವಾಗಿರಬೇಕು. ನಿಮ್ಮ ತ್ವಚೆಯಲ್ಲಿ ಹೆಚ್ಚಿನ ನೀರಿನಾಂಶ ಇರುವಂತೆ ಮತ್ತು ಅದನ್ನು ಮಾಯಿಶ್ಚರೈಸರ್ ಆಗಿಡಿ. ಇದರ ಬಳಿಕ ನೀವು ಮುಖಕ್ಕೆ ಮೇಕಪ್ ಮಾಡಿಕೊಳ್ಳಿ. ನಿಮ್ಮ ತ್ವಚೆಯು ಒಣಗಿದ್ದರೆ ಆಗ ನೀವು ಕೆಲವು ಸೂಕ್ಷ್ಮ ಪ್ರದೇಶಗಳಾದ ಕಣ್ಣು, ಮೂಗು, ಗಲ್ಲ, ಕತ್ತು ಇತ್ಯಾದಿಗಳಿಗೆ ಸ್ವಲ್ಪ ಹೆಚ್ಚಿನ ಪೌಷ್ಠಿಕಾಂಶಗಳನ್ನು ನೀಡಬೇಕಾಗುತ್ತದೆ.

ತುಟಿ ಮೇಕಪ್‌ನ ಅಗತ್ಯ ವಸ್ತುಗಳು
ಮಳೆಗಾಲದಲ್ಲಿ ತುಟಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಮದುವೆ ಕಾರ್ಯಕ್ರಮದ ವೇಳೆ ನೀವು ಹೆಚ್ಚು ಆಕರ್ಷಕವಾಗಿ ಕಾಣಬೇಕೆಂದರೆ ಆಗ ನೀವು ಲಿಪ್ ಬಾಮ್ ಬದಲು ಲಿಪ್ ಗ್ಲೊಸ್ ಬಳಸಿ. ಇದು ತುಂಬಾ ನವಿರು ಹಾಗೂ ಅನುಕೂಲಕರ. ಸಂಜೆ ವೇಳೆಗೆ ನೀವು ಮ್ಯಾಟೆ ಬ್ರೈಟ್ ಲಿಪ್ ಶೇಡ್ ಬಳಸಬಹುದು. ಶೇಡ್‌ಗಳಾದ ಕ್ಯಾಂಡಿ ಪಿಂಕ್, ಫುಚಸಿಯಾ, ಕೋರಲ್, ರೆಡ್ ಪರಿಪೂರ್ಣವಾಗಿರುತ್ತದೆ.

Make up guide for the monsoon bride

ಕಣ್ಣಿನ ಮೇಕಪ್
ಮ್ಯಾಟೆ ಐಶ್ಯಾಡೋಸ್ ಮಳೆಗಾಲದಲ್ಲಿ ಉತ್ತಮವಾಗಿ ಕಾಣಿಸುತ್ತದೆ. ಇದು ದಿನದ ಸಮಯದಲ್ಲಿ ತುಂಬಾ ಅಕರ್ಷಕವಾಗಿ ಕಾಣಿಸುತ್ತದೆ. ಸಂಜೆ ವೇಳೆಗೆ ಮ್ಯಾಟೆ ಐಶ್ಯಾಡೋಸ್‌ಗಳಾದ ಬ್ರೌನ್, ಗ್ರೇ, ಬ್ಲ್ಯಾಕ್ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮ್ಯಾಟೆ ಐಲೈನರ್ ಮತ್ತು ಕಾಡಿಗೆ ಯಾವಾಗಲೂ ಉತ್ತಮ ಆಯ್ಕೆ. ನೀವು ವಾಟರ್‌ಪ್ರೂಫ್ ಮಸ್ಕರಾಗಳನ್ನು ಬಳಸಬಹುದು. ಇದು ಕೆಲವೊಂದು ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ. ವೃತ್ತಿಪರ ಮೇಕಪ್ ಮಾಡುವವರು ತಮ್ಮ ಕೆಲಸ ಮಾಡಿದ ಬಳಿಕ ಮದುಮಗಳಿಗೆ ಕಣ್ಣಿನ ಮೇಕಪ್ ಬೇಕಿರುವುದಿಲ್ಲ. ನೀವು ಇಚ್ಚಿಸುವುದಾದರೆ ಸಣ್ಣ ಮೇಕಪ್ ಪೆಟ್ಟಿಗೆಯನ್ನು ಕಣ್ಣಿನ ಕಾಡಿಗೆ ಬಳಸಬಹುದು.

ಮಾಡಲೇಬೇಕಾಗಿರುವುದು
ಬಾಹ್ಯರೇಖೆ ಮತ್ತು ಹೈಲೈಟ್ಸ್ ನಿಜವಾಗಿಯೂ ನಿಮ್ಮ ಮುಖಕ್ಕೆ ಸಂಪೂರ್ಣವಾಗಿ ಸಮತೋಲಿತ ಆಯಾಮಗಳನ್ನು ನೀಡಲು ನೆರವಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ನೀವು ಮ್ಯಾಟೆ ಟೆಕ್ಸ್‌ಟರ್ ಇಟ್ಟುಕೊಳ್ಳಿ. ಇದು ಕೆಲವೊಂದು ಭಾಗಗಳಾದ ಮುಖ, ಕಣ್ಣಿನ ಹುಬ್ಬುಗಳು ಮತ್ತು ಕೆನ್ನೆಗೆ ಉಪಯೋಗಿ.

ನೀವು ಪ್ರಯತ್ನಿಸಲೇಬೇಕಾದ ಆರು ಐ ಲೈನರ್ ಐಡಿಯಾಗಳು

ಇದನ್ನು ಕಡೆಗಣಿಸಿ
ತುಂಬಾ ಕ್ಲೋಸ್ ಅಪ್ ಫೋಟೊಗೆ ಚೆನ್ನಾಗಿ ಕಾಣಿಸಬೇಕಾದರೆ ನಿಮ್ಮ ಮುಖವು ಹೊಳಪು ಹಾಗೂ ಕಾಂತಿಯಿಂದ ಕೂಡಿರಬೇಕು. ಮೇಕಪ್‌ನ ಮೂಲವನ್ನು ಹೆಚ್ಚಾಗಿ ಮಾಡಬೇಡಿ. ಪ್ಲಾಸ್ಟಿಕ್ ಕೇಕ್ ಪೇಸ್‌ಗಿಂತ ಕೆಟ್ಟದಾಗಿ ಬೇರೆ ಯಾವುದೂ ಕಾಣಿಸದು. ಎಲ್ಲವೂ ನೈಸರ್ಗಿಕವಾಗಿರಲಿ. ಫೌಂಡೇಶನ್ ಮೇಕಪ್ ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ತ್ವಚೆಯ ಬಣ್ಣಕ್ಕಿಂತ ಕಡಿಮೆ ಗಾಢವಾದ ಬಣ್ಣವನ್ನು ಬಳಸಬೇಡಿ. ಇದರಿಂದ ನಿಮ್ಮ ತ್ವಚೆ ಕಾಂತಿಯುತವಾಗಿ ಕಾಣಿಸುವುದಿಲ್ಲ. ನಿಮ್ಮ ಮುಖದ ಮೇಲೆ ಹಲವಾರು ಬಣ್ಣಗಳನ್ನು ಹಚ್ಚಿಕೊಳ್ಳಬೇಡಿ. ಒಂದೇ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಇದು ಕಣ್ಣಿಗೆ ಅಥವಾ ತುಟಿಗೆ ಆಗಿರಬಹುದು.

ನಿಮ್ಮೊಂದಿಗಿರಲಿ
ಮದುವೆಯ ದಿನ ಮದುಮಗಳಿಗೆ ಮೇಕಪ್ ಮಾಡುವವರು ಇದು ದೀರ್ಘ ಸಮಯ ಬರುವಂತೆ ನೋಡಿಕೊಳ್ಳುತ್ತಾರೆ. ಇದು ಮೂಲ ಮೇಕಪ್ ಅಥವಾ ತುಟಿಯ ಮೇಕಪ್ ಆಗಿರಬಹುದು. ಅದಾಗ್ಯೂ ನೀವು ಸುರಕ್ಷಿತವಾಗಿರಲು ಮುಖದಲ್ಲಿರುವ ಹೆಚ್ಚುವರಿಯಾಗಿರುವ ಎಣ್ಣೆಯನ್ನು ಒರೆಸಿಕೊಳ್ಳಲು ಅಥವಾ ಅಂತಿಮ ಟಚ್‌ಅಪ್ ನೀಡಲು ನಿಮ್ಮೊಂದಿಗೆ ಕೆಲವೊಂದು ಮೇಕಪ್ ಸಾಧನಗಳಿರಲಿ.

English summary

Make up guide for the monsoon bride

The monsoons are not known to be very make-up friendly. If you are prepping up as a bride-to- be for a wedding during the monsoons you have to ensure everything is in place with the way you look. Here is all that you should keep in mind to be monsoon-proof for your wedding day.
X
Desktop Bottom Promotion