For Quick Alerts
ALLOW NOTIFICATIONS  
For Daily Alerts

ಫೇಸ್ ಪೌಡರ್ ಹಚ್ಚಿಕೊಳ್ಳಲು 5 ಸರಳ ವಿಧಾನಗಳು

|

ಪೌಡರ್ ಅನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ. ಕೆಲವರು ಪೌಡರ್ ಅನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ ಮತ್ತು ತಾವು ಸುಂದರವಾಗಿ ಕಾಣಬೇಕೆಂದು ಪೌಡರ್ ಅನ್ನು ಹೆಚ್ಚು ಬಳಸುತ್ತಾರೆ ಇದರಿಂದ ಪೌಡರ್ ಹಚಿದ ಮುಖ ಇನ್ನಷ್ಟು ಅಸಹ್ಯವಾಗಿ ತೋರುತ್ತದೆ.

ನೇಲ್ ಪಾಲಿಶ್‌ನ ಏಳು ಜನಪ್ರಿಯ ಕಲರ್ ಕಾಂಬಿನೇಶನ್

ಹಾಗಿದ್ದರೆ ಮುಖಕ್ಕೆ ಪೌಡರ್ ಅನ್ನು ಲೇಪಿಸುವುದು ಹೇಗೆಂಬುದು ನಿಮ್ಮ ಚಿಂತೆಯಾಗಿದ್ದರೆ ಅದಕ್ಕಾಗಿ ಕೆಲವೊಂದು ಸರಳ ವಿಧಾನಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ನೀವು ಹೆಚ್ಚು ಬೆವರಿದಾಗ ಪೌಡರ್ ಲೇಪಿಸಿಕೊಳ್ಳುವುದು ತ್ವಚೆಯ ಹಾನಿಗೆ ಕಾರಣವಾಗಬಹುದು ಅಂದರೆ ಮೊಡವೆ, ಕಲೆಗಳು ಮುಂತಾದ ಸಮಸ್ಯೆಗಳು ನಿಮಗೆ ಎದುರಾಗಬಹುದು. ಪೌಡರ್ ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ಮುಖ ಒಣಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಫೇಸ್ ಪೌಡರ್ ಹಚ್ಚಿಕೊಳ್ಳಲು 5 ಸರಳ ವಿಧಾನಗಳು

ಉತ್ತಮ ಗುಣಮಟ್ಟದ ಪೌಡರ್ ಅನ್ನು ನೀವು ಹಚ್ಚಿಕೊಳ್ಳುತ್ತಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅತೀ ಅಗತ್ಯ. ಪೌಡರ್ ಹಚ್ಚಿಕೊಳ್ಳುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ ಮತ್ತು ಕ್ರೀಮ್ ಹಚ್ಚಿಕೊಳ್ಳಿ. ಇಷ್ಟಲ್ಲದೆ ಇನ್ನೊಂದಿಷ್ಟು ಸಲಹೆಗಳನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದು ಅವುಗಳನ್ನು ಅನುಸರಿಸಿ.

ಸರಿಯಾದ ಬಣ್ಣವನ್ನು ಆಯ್ಕೆ ಮಾಡಿ:
ನಿಮ್ಮ ತ್ವಚೆಯ ಬಣ್ಣಕ್ಕೆ ಹೊಂದಿಕೆಯಾಗುವ ಪೌಡರ್ ಅನ್ನು ಆರಿಸಿ. ಹೆಚ್ಚಾಗಿ ಫೇಸ್ ಪೌಡರ್ ಬ್ರೌನ್ ಹಾಗೂ ಬಿಳಿ ಬಣ್ಣಗಳಲ್ಲಿ ದೊರೆಯುತ್ತದೆ. ಇದರಿಂದ ಮುಖದ ಅಂದ ಹೆಚ್ಚುತ್ತದೆ.

ನಿಮ್ಮ ಮುಖದ ತುದಿ:
ಮುಖದ ಗೆರೆಗಳ ಹೊರ ತುದಿಗಳನ್ನು ಮುಚ್ಚಲು ಫೇಸ್ ಪೌಡರ್ ಅನ್ನು ಸರಿಯಾಗಿ ಹಚ್ಚಿಕೊಳ್ಳಬೇಕು. ಕುತ್ತಿಗೆ ಪ್ರದೇಶದಲ್ಲಿ ಪೌಡರ್ ಅನ್ನು ವೃತ್ತಾಕಾರವಾಗಿ ತಿರುಗಿಸುತ್ತಾ ಹಚ್ಚಿಕೊಳ್ಳಿ.

ನೀವು ಕನ್ಸೀಲರ್ ಅನ್ನು ಹೊಂದಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

ನೀವು ಪೌಡರ್ ಹಚ್ಚಿಕೊಳ್ಳುತ್ತಿರುವಿರಿ ಎಂದಲ್ಲಿ ಕೌನ್ಸಿಲರ್ ಅನ್ನು ಹೊಂದಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀವು ಲೂಸ್ ಪೌಡರ್ ಅನ್ನು ಬಳಸಬೇಕು ಕಾಂಪ್ಯಾಕ್ಟ್ ಬಳಸದಿರಿ. ಇದು ಮುಖದಲ್ಲಿ ಗೆರೆಗಳನ್ನು ಉಂಟುಮಾಡಬಹುದು.

ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಸಲು ಹಲವಾರು ವಿಧಾನಗಳು

ನೈಸರ್ಗಿಕ ಲುಕ್
ಹೆಚ್ಚಿನ ಮೇಕಪ್ ನಿಮ್ಮನ್ನು ಬಣ್ಣದ ಬೊಂಬೆಯನ್ನಾಗಿಸಬಹುದು. ಆದ್ದರಿಂದ ಫೇಸ್ ಪೌಡರ್ ಅನ್ನು ಹಚ್ಚುವಾಗ ಕನಿಷ್ಟ ಪ್ರಮಾಣದಲ್ಲಿ ಅದನ್ನು ಬಳಸಿ.

ಬ್ಲೊಟಿಂಗ್ ಪೇಪರ್‌ನಿಂದ ಕೊನೆಗೊಳಿಸಿ
ಮುಖದಿಂದ ಹೆಚ್ಚಿನ ಪೌಡರ್ ಅನ್ನು ತೆಗೆಯಲು, ಬ್ಲೋಟಿಂಗ್ ಪೇಪರ್ ಬಳಸಿ. ಇದರಿಂದ ಹೆಚ್ಚಿನ ಪೌಡರ್ ನೋಟ ನಿಮ್ಮದಾಗುವುದಿಲ್ಲ.

Story first published: Friday, May 30, 2014, 10:17 [IST]
X
Desktop Bottom Promotion