Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ಗಾಢ ನಿದ್ದೆ ಕೂಡ ಬಾಡಿಸದರಲಿ ನಿಮ್ಮ ಚೆಲುವು
ನಿದ್ದೆಯಿಂದ ಎದ್ದ ತಕ್ಷಣ ನೀವು ಎಂದಾದರೂ ತುಂಬ ಸುಂದರವಾಗಿ ಕಂಡಿದ್ದಿರಾ? ಖಂಡಿತವಾಗಿ ಇಲ್ಲ ತಾನೆ! ಅದಕ್ಕಾಗಿ ನಾವಿಲ್ಲಿ ನಿಮಗಾಗಿ ಕೆಲವು ಬ್ಯೂಟಿ ಟಿಪ್ಸ್ ನೀಡಿದ್ದೇವೆ. ಇವು ನಿಮಗೆ ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ. ಎದ್ದ ತಕ್ಷಣ ಕನ್ನಡಿ ನೋಡಿಕೊಂಡಾಗ ನಮಗೆ ಕಾಣಿಸುವುದು ಗೀಜು ತುಂಬಿದ ಕಣ್ಣು, ಒಣಗಿದ ಮೇಕಪ್ ಇಲ್ಲದ ಮುಖ, ಒಟ್ಟಿನಲ್ಲಿ ಆಹಾ ಎನ್ನಿಸುವ ಸೌಂದರ್ಯವಲ್ಲ ಅಲ್ಲವೆ?
ನೀವು ಎದ್ದಾಗಲೂ ಸುಂದರವಾಗಿ ಕಾಣಬೇಕೆ ಇಲ್ಲಿವೆ ಕೆಲವು ಟಿಪ್ಸ್. ಈ ಉಪಾಯಗಳು ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಇವುಗಳನ್ನು ಅನುಸರಿಸಿ ನಿಮ್ಮ ಸೌಂದರ್ಯವನ್ನು ಸದಾಕಾಲ ಹೊಳೆಯುವಂತಿರಿಸಿಕೊಳ್ಳಿ.
ಈ ಉಪಾಯಗಳನ್ನು ರಾತ್ರಿ ಹೊತ್ತು ಪಾಲಿಸಿದರೆ ನೀವು ಬೆಳಗ್ಗೆ ಎದ್ದಾಗ ಕೆಟ್ಟದಾಗಿ ಕಾಣುವುದರ ಬದಲು ಸುಂದರವಾಗಿ ಕಾಣುವಿರಿ. ನಿಮ್ಮನ್ನು ನೀವು ರಾತ್ರಿಯೇ ಸಿದ್ಧರಾಗಿಸಿಕೊಳ್ಳಿ. ಸುಂದರ ನೋಟವನ್ನು ನಿಮ್ಮದಾಗಿಸಿಕೊಳ್ಳಿ. ಹಾಗಿದ್ದರೆ ತಡವೇಕೆ ಈ ಟಿಪ್ಸ್ ಗಳ ಮೇಲೆ ಕಣ್ಣಾಡಿಸಿ ದಿನನಿತ್ಯ ಬಳಸಿ.

ನಿದ್ದೆಯ ರೀತಿ
ನಿದ್ದೆಗೆ ಒಂದು ನಿಯಮಿತ ಅವಧಿಯಿರಲಿ. ಅದು 'ನಿದ್ದೆ ಸೌಂದರ್ಯ'ವನ್ನು ಸವಿಯಲು ನೆರವಾಗುತ್ತದೆ. ಇದರೊಂದಿಗೆ ಕಣ್ಣ ತುಂಬ ತೂಕಡಿಕೆ ತುಂಬಿಕೊಂಡು ಕಿರಿಕಿರಿ ಅನುಭವಿಸುವುದು ತಪ್ಪುತ್ತದೆ. ನೆನಪಿಡಿ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಈ ನಿಯಮಿತ ನಿದ್ದೆಯ ಮೂಲಕ ಸಿಗುತ್ತದೆ.

ಬಾಯಿ ಶುಚಿ
ಪ್ರತಿ ರಾತ್ರಿ ಮಲಗುವ ಮುನ್ನ ಬಾಯಿ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಆದ್ದರಿಂದ ಮಲಗುವ ಮುನ್ನ ಮರೆಯದೆ ಬ್ರಶ್ ಮಾಡಿ. ಇದರಿಂದ ಬಾಯಲ್ಲಿ ಯಾವುದೇ ರೀತಿಯ ಸೋಂಕು ಅಥವ ಕೀಟಾಣುಗಳಿಂದ ಉಂಟಾಗಬಹುದಾದ ಸಮಸ್ಯೆ ತಪ್ಪುತ್ತದೆ.

ಪಾದಗಳ ಆರೈಕೆ
ಬೆಳಗ್ಗೆ ಎದ್ದಾಗ ಹಾಯೆನಿಸಬೇಕಾದರೆ ದಿನವಿಡಿ ದಣಿದ ನಿಮ್ಮ ಪಾದಗಳ ಆರೈಕೆ ಬಹಳ ಮುಖ್ಯ. ಪ್ರತಿ ಮುಂಜಾನೆ ನಿಮ್ಮ ಪಾದಗಳನ್ನು ಸ್ವಲ್ಪ ಹೊತ್ತು ಬಿಸಿ ನೀರಿನಲ್ಲಿ ಉಪ್ಪು ಹಾಕಿ ಇಟ್ಟುಕೊಳ್ಳುವುದು ಪಾದಗಳಿಗೆ ಆರಾಮದಾಯಕ ಅನುಭವ ಒದಗಿಸುತ್ತದೆ. ಇದರಿಂದ ಪಾದಗಳಲ್ಲಿ ಒಣಗಿದ ಚರ್ಮ ಸಹ ಬಿದ್ದುಹೋಗಿ ಪಾದಗಳು ಮೃದುವಾಗುತ್ತದೆ.

ಕೂದಲ ಆರೈಕೆ
ನೀವು ಎದ್ದ ತಕ್ಷಣ ಕನ್ನಡಿ ನೋಡಿಕೊಂಡರೆ ನಿಮಗೆ ಬಾಚಿದ ಕೂದಲು ಕಾಣಲು ಸಾಧ್ಯವಿಲ್ಲ ಅಲ್ಲವೇ? ಬದಲಿಗೆ ಕೆದರಿದ ಕೂದಲು ನಿಮ್ಮ ಕಣ್ಣ ಮುಂದೆ ಕುಣಿಯುತ್ತಿರುತ್ತದೆ. ಆದ್ದರಿಂದ ಮಲಗುವ ಮುನ್ನ ಕೂದಲನ್ನು ನೀಟಾಗಿ ಬಾಚಿ. ಇದು ನಿಮ್ಮ ಕೂದಲನ್ನು ನೀಟಾಗಿ ಉಳಿಯಲು ಸಹಾಯ ಮಾಡುತ್ತದೆ.

ನಿದ್ರಿಸುವ ಭಂಗಿಗಳು
ಪರಿಣಿತರ ಪ್ರಕಾರ ನೀವು ಹೊಟ್ಟೆಯ ಮೇಲೆ ಮಲಗಿದರೆ ನಿಮ್ಮ ಮುಖದ ಮೇಲೆ ವಯಸ್ಸಿಗೆ ಮೀರಿ ಸುಕ್ಕುಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಯಾವಾಗಲೂ ನಿಮ್ಮ ಬೆನ್ನ ಮೇಲೆ ಮಲಗಿ ಅಥವ ಪಕ್ಕಕ್ಕೆ ಹೊರಳಿ ಮಲಗಿ.

ಹೆಚ್ಚು ದಿಂಬುಗಳನ್ನು ಬಳಸಿ
ದಿಂಬುಗಳ ಮಹತ್ವ ನಿಮಗೆ ತಿಳಿದಿರಲಿ. ನೀವು ಎರಡು ದಿಂಬುಗಳನ್ನಿಟ್ಟುಕೊಂಡು ಮಲಗಿದರೆ ನಿಮ್ಮ ಮುಖದ ಭಾಗಕ್ಕೆ ಹೆಚ್ಚಿನ ರಕ್ತ ಪರಿಚಲನೆ ಉಂಟಾಗುತ್ತದೆ. ಆದ್ದರಿಂದ ನೀವು ಬೆಳಗ್ಗೆ ಎದ್ದಾಗ ಹೆಚ್ಚು ಫ್ರೆಶ್ ಆಗಿ ಕಾಣಬಹುದು.

ಮೇಕಪ್ ತೆಗೆದು ಬಿಡಿ
ರಾತ್ರಿ ಮಲಗುವ ಮುನ್ನ ಮರೆಯದೆ ಮೇಕಪ್ ತೆಗೆದು ಬಿಡಿ. ಮಹಿಳೆಯರೇ ಇದನ್ನು ಮಾಡಲು ಎಂದೂ ಮರೆಯದಿರಿ. ಮೇಕಪ್ ತೆಗೆದು ಸ್ವಚ್ಛ ನೀರಿನಿಂದ ಮುಖ ತೊಳೆದುಕೊಳ್ಳುವುದರಿಂದ ನಿಮ್ಮ ಮುಖ ಹೆಚ್ಚು ಕಾಂತಿಯುಕ್ತವಾಗಿ ಕಾಣುತ್ತದೆ.

ಮಾಯ್ಸಿಶ್ಚುರೈಸರ್ ಬಳಸಿ
ನಿಮ್ಮ ತ್ವಚೆಗೆ ಮಾಯ್ಸಿಶ್ಚುರೈಸರ್ ಅತ್ಯಗತ್ಯ. ಮಲಗುವ ಮುನ್ನ ಹರ್ಬಲ್ ಅಥವ ನೈಸರ್ಗಿಕ ಫೇಸ್ ಪ್ಯಾಕ್ ಬಳಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಹಣ್ಣಿನ ಫೇಸ್ ಪ್ಯಾಕ್ ಗಳನ್ನು ಈ ನಿಟ್ಟಿನಲ್ಲಿ ಪ್ರಯತ್ನಿಸಿ ನೋಡಬಹುದು.

ಸತ್ತ ಚರ್ಮವನ್ನು ಉಜ್ಜಿ ತೆಗೆದುಬಿಡಿ
ಸತ್ತ ಚರ್ಮದ ಪದರಗಳು ನಿಮಗೆ ವಯಸ್ಸು ಹೆಚ್ಚಾದಂತೆ ಕಾಣಲು ಕಾರಣವಾಗುತ್ತದೆ. ಆದ್ದರಿಂದ ಮಲಗುವ ಮುನ್ನ ಮತ್ತು ಎದ್ದ ನಂತರ ನೈಸರ್ಗಿಕ ವಿಧಾನಗಳನ್ನು ಬಳಸಿ ಮುಖವನ್ನು ಸ್ವಚ್ಛಗೊಳಿಸಿ.

ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ
ನೀವು ಸುಂದರವಾಗಿ ಕಾಣಬೇಕೆಂದರೆ ತ್ವಚೆಯ ಕಾಂತಿ ಹೆಚ್ಚುವುದು ಬಹಳ ಮುಖ್ಯ. ಆದ್ದರಿಂದ ಮಲಗುವ ಮುನ್ನ ಫ್ರೆಶ್ ಕ್ರೀಂ ಅಥವ ಮಿಲ್ಕ್ ಕ್ರೀಂ ಮಲಗುವ ಮುನ್ನ ಮುಖಕ್ಕೆ ಹಚ್ಚಿ. ಇದು ನೀವು ಪಾಲಿಸಬೇಕಾದ ಮುಖ್ಯವಾದ ಬ್ಯೂಟಿ ಟಿಪ್.



Click it and Unblock the Notifications