For Quick Alerts
ALLOW NOTIFICATIONS  
For Daily Alerts

ಮಳೆಗಾಲಕ್ಕೆ ಬೆಸ್ಟ್ ಮೇಕಪ್ ಟಿಪ್ಸ್

By Super
|

ಮಳೆಗಾಲದಲ್ಲಿ ಗಾಢವಾದ ಮೇಕಪ್ ಅಷ್ಟು ಒಳ್ಳೆಯದಲ್ಲ. ಏಕೆಂದರೆ ಮಳೆಯಿಂದಾಗಿ ಈ ಮೇಕಪ್ ತೀವ್ರವಾಗಿ ಬಣ್ಣಗುಂದುವ ಅಥವಾ ತೊಳೆದು ಹೋಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮೇಕಪ್ ಮಾಡಬೇಕಾದರೆ ತೆಳುವಾಗಿ ಮಾಡುವುದು ಉತ್ತಮ.

ಈ ಕಾಲದಲ್ಲಿ ವಾಟರ್ ಪ್ರೂಫ್ ಮಸ್ಕರ, ಟ್ರಾನ್ಸ್ ಫರ್- ರೆಸಿಸ್ಟೆಂಟ್ ಲಿಪ್‍ಸ್ಟಿಕ್‍ಗಳನ್ನು ಮತ್ತು ವಾಟರ್ ಪ್ರೂಫ್ ಲೈನರ್ ಗಳನ್ನು ಬಳಸಿ. ಮೇಕಪ್ ಮಾಡುವ ಮೊದಲು ನಿಮಗೆ ಅಗತ್ಯವೆಂದಾದದಲ್ಲಿ ವಾಟರ್ ಪ್ರೂಫ್ ಫೌಂಡೇಶನ್ ಬಳಸಿ, ಈ ರೀತಿ ಮಾಡುವುದು ತ್ವಚೆಗೆ ಒಳ್ಳೆಯದು. ಮಳೆಯಲ್ಲಿ ನಿಮ್ಮ ಸೌಂದರ್ಯ ಕೊಚ್ಚಿ ಹೋಗದಿರಲು ನಿಮಗಾಗಿ ಕೆಲವು ಸಲಹೆಗಳನ್ನು ನೀಡಿದ್ದೇವೆ ಓದಿ.

ಮುಖದ ಆರೈಕೆ

ಮುಖದ ಆರೈಕೆ

ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ನಂತರ ಒಂದು ಮಂಜುಗಡ್ಡೆಯನ್ನು ತೆಗೆದುಕೊಂಡು, ಅದರಿಂದ ನಿಮ್ಮ ಮುಖವನ್ನು 5 ರಿಂದ 10 ನಿಮಿಷದವರೆಗೆ ಚೆನ್ನಾಗಿ ಉಜ್ಜಿ. ಇದರಿಂದ ಬೆವರುವಿಕೆ ಕಡಿಮೆಯಾಗುತ್ತದೆ ಹಾಗೂ ಮೇಕಪ್ ದೀರ್ಘಾವಧಿಯವರೆಗೆ ನಿಲ್ಲುತ್ತದೆ.

ಆಸ್ಟ್ರಿಂಜೆಂಟ್ ಬಳಸಿ

ಆಸ್ಟ್ರಿಂಜೆಂಟ್ ಬಳಸಿ

ಮಂಜುಗಡ್ಡೆಯಿಂದ ಉಜ್ಜಿದ ನಂತರ ತ್ವಚೆಗೆ ಲವಲವಿಕೆ ನೀಡಲು ಎಣ್ಣೆ ಚರ್ಮ ಹೊಂದಿರುವ ಹೆಂಗಸರು ಆಸ್ಟ್ರಿಂಜೆಂಟ್ ಬಳಸಿ. ಒಣ ಚರ್ಮ ಹೊಂದಿರುವವರು ಟೋನರ್ ಬಳಸಿ.

ಫೌಂಡೇಶನ್ ಬಳಸಬೇಡಿ

ಫೌಂಡೇಶನ್ ಬಳಸಬೇಡಿ

ಫೌಂಡೇಶನ್ ಬಳಸುವುದನ್ನು ನಿಯಂತ್ರಿಸಿ, ಬದಲಿಗೆ ಪೌಡರ್ ಬಳಸಿ ನಿಮ್ಮ ಮೇಕಪ್‍ನ ಬೇಸ್ ಅನ್ನು ತೆಳುವಾಗಿ ನೀವೆ ತಯಾರಿಸಿಕೊಳ್ಳಿ.

ಐ ಲೈನರ್

ಐ ಲೈನರ್

ಐ ಲೈನರ್ ಜೊತೆಗೆ ತೆಳುವಾದ ಕಂದು ಶೀರ್ ಫಿಲ್ಮ್ , ಬೀಗೆ, ಪ್ಯಾಸ್ಟೆಲ್ ಅಥವಾ ಗುಲಾಬಿ ಕ್ರೀಮ್ ಐ ಶಾಡೊಗಳನ್ನು ಬಳಸಬಹುದು. ಜೊತೆಗೆ ವಾಟರ್ ಪ್ರೂಫ್ ಮಾಸ್ಕರವನ್ನು ಒಂದು ಅಥವಾ ಎರಡು ಕೋಟ್ ಹಚ್ಚಿ.

ತೆಳು ಲಿಪ್ ಸ್ಟಿಕ್

ತೆಳು ಲಿಪ್ ಸ್ಟಿಕ್

ತೆಳುವಾದ ಹೊಳಪಿಲ್ಲದ ಲಿಪ್‍ ಸ್ಟಿಕ್‍ಗಳು ಎಲ್ಲಾ ಹೆಂಗಸರಿಗು ಈ ಮಳೆಗಾಲದ ಅವಧಿಯಲ್ಲಿ ಹಿಡಿಸುತ್ತದೆ. ಒಂದು ವೇಳೆ ನಿಮಗೆ ಒಪ್ಪುವುದಾದರೆ ತೆಳುವಾದ ಕಂದು ಬಣ್ಣ ಅಥವಾ ಸ್ವಲ್ಪ ಹೊಳಪಿರುವ ಗುಲಾಬಿ ಲಿಪ್ ‍ಸ್ಟಿಕ್ ಬಳಸಿ.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ಈ ಅವಧಿಯಲ್ಲಿ ಮೊಡವೆ, ಎಣ್ಣೆ ಚರ್ಮ ಮತ್ತು ನಿರ್ಜಲೀಕರಣದ ಸಮಸ್ಯೆ ತಲೆದೋರುತ್ತದೆ. ಅದಕ್ಕಾಗಿ ನೀರಿನಂಶವಿರುವ ಮಾಯಿಶ್ಚರೈಸರ್ ಬಳಸುವುದನ್ನು ಉಪೇಕ್ಷೆ ಮಾಡಬೇಡಿ.

ಕೇಶ ವಿನ್ಯಾಸ

ಕೇಶ ವಿನ್ಯಾಸ

ನಿಮ್ಮ ಕೇಶ ವಿನ್ಯಾಸವು ಸರಳವಾಗಿರಲಿ ಮತ್ತು ಸುಲಭವಾಗಿ ಇರಲಿ. ನಾಜೂಕಾದ ಕೇಶ ವಿನ್ಯಾಸಗಳನ್ನು ಈ ಅವಧಿಯಲ್ಲಿ ನಿರ್ವಹಣೆ ಮಾಡುವುದು ಸುಲಭವಲ್ಲ. ಗಾಳಿ ಮಳೆಗೆ ಸಿಲುಕಿ ಕೇಶವು ನಲುಗಿ ಹೋಗುತ್ತದೆ. ಅದಕ್ಕಾಗಿ ನಿಮ್ಮ ಕೂದಲನ್ನು ಗಂಟು ಹಾಕಿ ಇಲ್ಲವೇ ಜಡೆ ಹಾಕಿ ಅದರಿಂದ ನಿಮ್ಮ ಕೂದಲಿಗೇ ಒಳ್ಳೆಯದು.

ಆಭರಣ

ಆಭರಣ

ಈ ಅವಧಿಯಲ್ಲಿ ಹೊಳೆಯುವ ಆಭರಣಗಳನ್ನು ಧರಿಸುವುದು ವಾಡಿಕೆ. ಆದರು ನಿಮಗೆ ಹಿಡಿಸದಿದ್ದರೆ ಕಲ್ಲು, ಹರಳುಗಳನ್ನು ಹೊಂದಿರುವ ಹಗುರವಾದ ಆಭರಣಗಳನ್ನು ಧರಿಸಿ.

ಬ್ಲಶ್

ಬ್ಲಶ್

ನಿಮಗೆ ಅವಶ್ಯಕವಿದ್ದಲ್ಲಿ ಬ್ಲಶ್ ಬಳಸಿ. ಆದರೆ ಅದು ತೆಳುವಾಗಿರಲಿ, ಬಳಸುವ ಮೊದಲು ಚೆನ್ನಾಗಿ ಕಲೆಸಿ. ಗುಲಾಬಿ, ಪೀಚ್ ಮತ್ತು ಕಂದು ಬಣ್ಣದ ಬ್ಲಶ್ ಕ್ರೀಮ್‍ಗಳನ್ನು ಬಳಸಬಹುದು.

ಹುಬ್ಬುಆಕಾರ ಕಾಪಾಡಿಕೊಳ್ಳಿ

ಹುಬ್ಬುಆಕಾರ ಕಾಪಾಡಿಕೊಳ್ಳಿ

ಈ ಅವಧಿಯಲ್ಲಿ ನಿಮ್ಮ ಕಣ್ಣು ಹುಬ್ಬುಗಳ ಆಕಾರವನ್ನು ಥ್ರೆಡಿಂಗ್ ಮತ್ತು ಹೇರ್ ಜೆಲ್ ಬಳಸಿ ಕಾಪಾಡಿಕೊಳ್ಳಿ. ಆದರೆ ಯಾವುದೇ ಕಾರಣಕ್ಕು ಮಳೆ ಬೀಳುವಾಗ ಐ ಬ್ರೋ ಪೆನ್ಸಿಲ್ ಬಳಸಬೇಡಿ.

ಕೂದಲಿನ ಆರೈಕೆ

ಕೂದಲಿನ ಆರೈಕೆ

11. ಪ್ರತಿದಿನ ತಲೆಗೆ ಸ್ನಾನ ಮಾಡಿ. ನಿಮ್ಮ ಕೂದಲಿಗೆ ಪ್ರತಿನಿತ್ಯ ಮಸಾಜ್ ಮಾಡಿ. ಇದರಿಂದ ತಲೆ ಹೊಟ್ಟು ಮುಂತಾದ ಕೇಶ ಸಂಬಂಧಿ ಸಮಸ್ಯೆಗಳು ತಲೆದೋರುವುದಿಲ್ಲ.

ಮಳೆಗಾಲಕ್ಕೆ ಸೂಕ್ತ ಬಟ್ಟೆ

ಮಳೆಗಾಲಕ್ಕೆ ಸೂಕ್ತ ಬಟ್ಟೆ

ಡೆನಿಮ್ ಬಟ್ಟೆಗಳು ಮಳೆಗಾಲಕ್ಕೆ ಸರಿಹೊಂದುವುದಿಲ್ಲ. ಹಾಗಾಗಿ ತೆಳುವಾದ ಹತ್ತಿಯ ಬಟ್ಟೆಗಳನ್ನು, ಕ್ಯಾಪ್ರಿ ಪ್ಯಾಂಟ್‍ಗಳನ್ನು ಮತ್ತು ತ್ರೀ ಫೋರ್ತ್ ಗಳನ್ನು ಧರಿಸಿ.

ಛತ್ರಿಯಿಂದ ನಿಮ್ಮ ರಕ್ಷಣೆ

ಛತ್ರಿಯಿಂದ ನಿಮ್ಮ ರಕ್ಷಣೆ

ಮಳೆಗಾಲದಲ್ಲಿ ಛತ್ರಿಗಳು ಮತ್ತು ರೇನ್ ಕೋಟ್‍ಗಳು ಸಹ ಫ್ಯಾಶನ್ ಎಂಬುದನ್ನು ಮರೆಯಬೇಡಿ. ಚಾಲ್ತಿಯಲ್ಲಿರುವ ಉಲ್ಲಾಸ ನೀಡುವ ಬಣ್ಣದ ಛತ್ರಿಗಳನ್ನು ಮತ್ತು ರೇನ್ ಕೋಟ್‍ಗಳನ್ನು ಖರೀದಿಸಿ.

ತೆಳು ಬಣ್ಣದ ಬಟ್ಟೆ ಧರಿಸಬೇಡಿ

ತೆಳು ಬಣ್ಣದ ಬಟ್ಟೆ ಧರಿಸಬೇಡಿ

ಬಿಳಿ ಮತ್ತು ತೆಳು ಬಣ್ಣದವುಗಳು ಬೇಗ ಕೊಳೆಯಾಗುತ್ತವೆ. ಹಾಗಾಗಿ ಅಂತಹ ಬಣ್ಣದವುಗಳನ್ನು ಕೊಳ್ಳಬೇಡಿ.

ಮಳೆಗಾಲಕ್ಕೆ ಸೂಕ್ತ ಚಪ್ಪಲಿ

ಮಳೆಗಾಲಕ್ಕೆ ಸೂಕ್ತ ಚಪ್ಪಲಿ

ಈ ಅವಧಿಯಲ್ಲಿ ನಿಮ್ಮ ಚರ್ಮದ ಶೂಗಳನ್ನು ಮತ್ತು ಹೈ ಹೀಲ್‍ಗಳನ್ನು ಬಳಸಬೇಡಿ. ಬದಲಿಗೆ ಸ್ನೀಕರ್ಸ್ ಮತ್ತು ಸ್ಯಾಂಡಲ್ಸ್ ಧರಿಸಿ.

English summary

Monsoon Makeup Tips

In monsoons, dense makeup has a risk of being smudged and washed out severely and so light and sheer makeup is more advisable. Use waterproof mascara, transfer-resistant lipsticks and waterproof liners and may even use waterproof foundation, if it is a must for you.
X
Desktop Bottom Promotion