For Quick Alerts
ALLOW NOTIFICATIONS  
For Daily Alerts

ತೆಳ್ಳಗೆ ಕಾಣಿಸಲು ಯಾವ ಬಣ್ಣದ ಡ್ರೆಸ್ ಆಯ್ಕೆ ಮಾಡಬೇಕು?

|

ಕೆಲವೊಂದು ಡ್ರೆಸ್ ಹಾಕಿದಾಗ ಚೆನ್ನಾಗಿ ಕಾಣಿಸುತ್ತೇವೆ, ಮತ್ತೆ ಕೆಲವು ಡ್ರೆಸ್ ಹಾಕಿದಾಗ ಡಲ್ (ಮಂಕಾಗಿ) ಆಗಿ ಕಾಣಿಸುತ್ತೇವೆ. ಕಾರಣ ಇಷ್ಟೇ ನಮ್ಮ ಮೈ ಬಣ್ಣಕ್ಕೆ ಒಪ್ಪುವ ಬಣ್ಣದ ಡ್ರೆಸ್ ಹಾಕಿದರೆ ಚೆಂದ ಕಾಣಿಸುತ್ತೇವೆ. ಎಣ್ಣೆ ಕಪ್ಪು ಬಣ್ಣ ಇರುವವರಿಗೆ ಮಸುಕಿದ ಬಣ್ಣದ ಉಡುಪು ಅಷ್ಟಾಗಿ ಚೆಂದ ಕಾಣುವುದಿಲ್ಲ. ತುಂಬಾ ಬೆಳಗ್ಗೆ ಇರುವವರಿಗೆ ಬಿಳಿ ಅಥವಾ ತೆಳು ಬಣ್ಣದ ಡ್ರೆಸ್ ಗಿಂತ ಗಾಢ ಬಣ್ಣದ ಡ್ರೆಸ್ ತುಂಬಾ ಚೆನ್ನಾಗಿ ಕಾಣುತ್ತದೆ.

Dress Clour Which Make You Thin

ಡ್ರೆಸ್ ಬಣ್ಣ ನಮ್ಮ ಮೈ ಬಣ್ಣಕ್ಕೆ ಹೊಂದುತ್ತದೆಯೇ ಎಂದು ನೋಡಿದರೆ ಸಾಲದು, ನಮ್ಮ ಶರೀರದ ಆಕಾರಕ್ಕೆ ಹೊಂದುತ್ತದೆಯೇ ಎಂದು ನೋಡಿ ಕೊಂಡುಕೊಳ್ಳುವುದು ಒಳ್ಳೆಯದು! ಏಕೆಂದರೆ ಕೆಲವೊಂದು ಬಣ್ಣದ ಡ್ರೆಸ್ ನಮ್ಮನ್ನು ದಪ್ಪವಾಗಿ, ತೆಳುವಾಗಿ ಕಾಣುವಂತೆ ಮಾಡುತ್ತದೆ.

ತೆಳ್ಳಗೆ ಕಾಣಬೇಕೆಂದು ಬಯಸುವವರು ಈ ಕೆಳಗಿನ ಬಣ್ಣಗಳ ಡ್ರೆಸ್ ಕೊಳ್ಳುವುದು ಒಳ್ಳೆಯದು.

ಕಪ್ಪು: ಕಪ್ಪು ಬಣ್ಣದ ಡ್ರೆಸ್ ಧರಿಸಿದರೆ ತೆಳ್ಳಗೆ ಕಾಣಿಸಬಹುದು. ಕಪ್ಪು ಬಣ್ಣದ ಸ್ಯಾರಿ, ಸೆಲ್ವಾರ್ ಕಮೀಜ್, ಪಾರ್ಟಿ ಡ್ರೆಸ್ ಗಳು ಹೀಗೆ ಯಾವುದೇ ಡ್ರೆಸ್ ಆಗಿರಲಿ ಕಪ್ಪು ಬಣ್ಣದಾಗಿದ್ದರೆ, ಆ ಡ್ರೆಸ್ ಧರಿಸಿದಾಗ ಉಳಿದ ಡ್ರೆಸ್ ಗಳಿಗಿಂತ ತೆಳ್ಳಗೆ ಕಾಣಿಸುವುದು.

ಕಪ್ಪು ಡ್ರೆಸ್ ಕೊಳ್ಳುವಾಗ ಸ್ವಲ್ಪ ಗುಂಡಾಗಿ ಇರುವವರು ಸಂಪೂರ್ಣವಾಗಿ ಕಪ್ಪು ಬಣ್ಣ ಇರುವ ಡ್ರೆಸ್, ಅಷ್ಟೇನು ದಪ್ಪ ಇಲ್ಲದವರು ಕಪ್ಪು ಗೆರೆಯಿರುವ ಡ್ರೆಸ್ ಧರಿಸಬಹುದು. ಗೆರೆ ಇರುವ ಡ್ರೆಸ್ ಆಯ್ಕೆ ಮಾಡುವಾಗ ಅಡ್ಡ ಗೆರೆ ಡ್ರೆಸ್ ಗಿಂತ ಉದ್ದ ಗೆರೆಯ ಡ್ರೆಸ್ ಆಯ್ಕೆ ಮಾಡಬೇಕು.

ಗಾಢವಾದ ಬಣ್ಣ: ಸಾಮಾನ್ಯವಾಗಿ ಎಲ್ಲಾ ಗಾಢ ಬಣ್ಣದ ಡ್ರೆಸ್ ಗಳು ತೆಳುವಾಗಿ ಕಾಣಿಸುವಂತೆ ಮಾಡುತ್ತದೆ. ಈ ಡ್ರೆಸ್ ಗಳು ತೆಳುವಾಗಿ ಕಾಣಿಸುವಂತೆ ಮಾಡುವುದು ಅಲ್ಲದೆ ಎತ್ತರವಾಗಿ ಕಾಣಿಸುವಂತೆ ಮಾಡುತ್ತದೆ. ಕಂದು ಬಣ್ಣದ ಡ್ರೆಸ್, ಚಾಕಲೇಟ್, ಗಾಢ ಹಸಿರು, ನೀಲಿ ಬಣ್ಣದ ಡ್ರೆಸ್ ಗಳು ಗುಂಡಾಗಿ ಇರುವವರನ್ನು ಸ್ವಲ್ಪ ತೆಳ್ಳಗೆ ಕಾಣಿಸುವಂತೆ ಮಾಡುತ್ತದೆ.

ಹೊಳೆಯುವ ಶೇಡ್ಸ್: ಹೊಳೆಯುವ ಬಣ್ಣಗಳಾದ ಪಿಂಕ್, ಕೆಂಪು, ಹಳದಿ ಮತ್ತು ತೆಳು ಹಸಿರು ಬಣ್ಣದ ಶೇಡ್ಸ್ ಇರುವ ಡ್ರೆಸ್ ಹಾಕಿದರೆ ತೆಳ್ಳಗೆ ಕಾಣಿಸುವುದು. ಟಾಪ್ ತೆಳು ಬಣ್ಣದಾಗಿದ್ದು ಸ್ಕರ್ಟ್ ಅಥವಾ ಜೀನ್ಸ್ ಗಾಢ ಬಣ್ಣದಾಗಿದ್ದರೆ ನೋಡಲು ತೆಳುವಾಗಿ ಮತ್ತು ಆಕರ್ಷಕವಾಗಿ ಕಾಣುವಿರಿ.

ಗಾಢ ಬಣ್ಣ ಮತ್ತು ತೆಳು ಬಣ್ಣ ಮಿಶ್ರವಿರುವ ಡ್ರೆಸ್: ಗಾಢವಾದ ಬಣ್ಣದ ಡ್ರೆಸ್ ಧರಿಸಿ , ತೆಳು ಬಣ್ಣದ ಜಾಕೆಟ್ ಧರಿಸಿದರೆ ಆಕರ್ಷಕವಾಗಿ ಕಾಣಬಹುದು. ಗಾಢ ಬಣ್ಣದಲ್ಲಿ ದೊಡ್ಡ ವಿನ್ಯಾಸವಿರುವ ಅಥವಾ ದೊಡ್ಡ ಹೂಗಳಿರುವ, ಅಡ್ಡ ಗೆರೆಯಿರುವ ಡ್ರೆಸ್ ಆಯ್ಕೆ ಮಾಡಬಾರದು. ತುಂಬಾ ತೆಳ್ಳಗ್ಗೆ ಇದ್ದು ಸ್ವಲ್ಪ ದಪ್ಪಗೆ ಕಾಣಬೇಕೆಂದು ಬಯಸುವವರು ಈ ರೀತಿಯ ಡ್ರೆಸ್ ಹಾಕುವುದು ಒಳ್ಳೆಯದು.

English summary

Dress Clour Which Make You Thin | Tips For Dressing | ತೆಳ್ಳಗೆ ಕಾಣಿಸುವಂತೆ ಮಾಡುತ್ತೆ ಈ ಡ್ರೆಸ್ ಬಣ್ಣ | ಡ್ರೆಸ್ಸಿಂಗ್ ಮಾಡುವಾಗ ಪಾಲಿಸಬಹುದಾದ ಸಲಹೆಗಳಿವು

Some colours make you look thinner. Go for a colour analysis and find out which hues suit you the most and make you look slimmer. Hit the streets with confidence.
Story first published: Monday, June 25, 2012, 11:34 [IST]
X
Desktop Bottom Promotion