For Quick Alerts
ALLOW NOTIFICATIONS  
For Daily Alerts

ತುಂಬಾ ಸಮಯ ಮೇಕಪ್ ಉಳಿಸುವ ತಂತ್ರ

|
Tips For A Long Lasting Makeup
ಮೇಕಪ್ ಮುಖದ ಅಂದವನ್ನು ಹೆಚ್ಚಿಸುತ್ತದೆ. ಕೆಲವೊಂದು ಮೇಕಪ್ ಮಾಡಿದಾಗ ನೈಜವಾಗಿ ಕಂಡರೂ ಸ್ವಲ್ಪ ಸಮಯದ ಬಳಿಕ ಮೇಕಪ್ ತನ್ನ ಹೊಳಪನ್ನು ಕಳೆದುಕೊಂಡು ಮುಖ ಮಂಕಾಗಿ ಕಾಣುತ್ತದೆ. ಬೆಲೆ ಕಡಿಮೆಯ ಮೇಕಪ್ ಗಳು ಕೂಡ ತ್ವಚೆಯನ್ನು ಹಾಳು ಮಾಡುತ್ತದೆ.

ಆದ್ದರಿಂದ ಮೇಕಪ್ ಗುಣಮಟ್ಟದಾಗಿರಬೇಕು, ಮೇಕಪ್ ಮುಖದ ಮೇಲೆ ತುಂಬಾ ಹೊತ್ತು ಇರುವಂತೆ ಮಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

1. ಮೊಸರನ್ನು ಮುಖಕ್ಕೆ ಹಚ್ಚಿ ಉತ್ತಮ ಗುಣಮಟ್ಟದ ಸೋಪ್ ಅಥವಾ ಫೇಸ್ ವಾಶ್ ನಿಂದ ಮುಖ ತೊಳೆದು, ನಂತರ ಫೌಂಡೇಶನ್ ಕ್ರೀಮ್ ಹಚ್ಚಬೇಕು , ಇದರಿಂದ ತ್ವಚೆ ಸುಂದರವಾಗಿ ಕಾಣುತ್ತದೆ.(ಮೊಸರನ್ನು 5 ನಿಮಿಷಕ್ಕಿಂತ ಹೆಚ್ಚಾಗಿ ಮುಖದಲ್ಲಿ ಇಡಬಾರದು).

2.ಮುಖಕ್ಕೆ ಒಪ್ಪುವ ಲಿಕ್ವಡ್ ಫೌಡೇಶನ್ ಬಳಸಬೇಕು. ಫೌಂಡೇಶನ್ ಕ್ರೀಮ್ ಹಚ್ಚುವ ಮೊದಲು ಕನ್ಸೀಲರ್ ಹಚ್ಚಬೇಕು. ಫೌಂಡೇಶನ್ ಮುಖಕ್ಕೆ ಹಚ್ಚಿದ ಸ್ವಲ್ಪ ಹೊತ್ತಿನ ಬಳಿಕ ಕಾಂಪ್ಯಾಕ್ಟ್ ಹಚ್ಚಬೇಕು. ಹೀಗೆ ಮಾಡಿದರೆ ಮೇಕಪ್ 8-9 ಗಂಟೆಗಳ ಕಾಲ ಮುಖದಲ್ಲಿ ಆಗ ತಾನೆ ಹಚ್ಚಿದಂತೆ ಇರುತ್ತದೆ.

3.ಎಣ್ಣೆ ಚರ್ಮ ಕ್ರೀಮ್ ರೀತಿಯ ಬ್ಲಷ್ ಅಥವಾ ಲ್ಯಾಶಷ್ ಬಳಸಬಾರದು, ಒಣ ತ್ವಚೆ ಇರುವವರಿಗೆ ಇದು ಒಳ್ಳೆಯದು.

4. ಮಲಗುವ ಮೊದಲು ಮುಖವನ್ನು ಕ್ಲೆನ್ಸಿಂಗ್ ಅಥವಾ ಟೋನರ್ ಮಾಡುವುದರಿಂದ ಮುಖದಲ್ಲಿರುವ ಮೇಕಪ್ ನಿಂದ ಉಳಿದಂತಹ ಕೆಮಿಕಲ್ ತೆಗೆಯಬಹುದು. ಫ್ರೂಟ್ ಫೇಶಿಯಲ್ ಮತ್ತು ಸ್ಕ್ರಬ್ ಮಾಡುವುದರಿಂದ ತ್ವಚೆಯು ಕಾಂತಿಯನ್ನು ಹೊಂದುವುದು.

English summary

Tips For A Long Lasting Makeup | Tips For Beauty | ಮೇಕಪ್ ತುಂಬಾ ಹೊತ್ತು ಇರುವ ಹಾಗೆ ಮಾಡಲು ಕೆಲ ಸಲಹೆ | ಸೌಂದರ್ಯಕ್ಕೆ ಕೆಲ ಸಲಹೆ

To look beautiful, you need makeup but to carry it day long, the cosmetics need to be of best quality and convincing. Some makeup tricks that can make your face look gorgeous and pretty with the long lasting makeup.
Story first published: Monday, December 12, 2011, 17:42 [IST]
X
Desktop Bottom Promotion