For Quick Alerts
ALLOW NOTIFICATIONS  
For Daily Alerts

ತೆಳ್ಳಗೆ ಕಾಣುವಂತೆ ಡ್ರೆಸ್ ಮಾಡಿಕೊಳ್ಳುವುದು ಹೇಗೆ?

|
Dressing Ideas To Look Slimmer
ಕೆಲವೊಂದು ಡ್ರೆಸ್ ಗಳನ್ನು ಧರಿಸಿದಾಗ ದಪ್ಪವಾಗಿ ಕಾಣುವಂತೆ ಮಾಡುತ್ತದೆ, ಅಂತಹ ಡ್ರೆಸ್ ಗಳು ತೆಳ್ಳಗಿದ್ದವರಿಗೆ ಚೆನ್ನಾಗಿ ಒಪ್ಪುತ್ತೆ . ಆದರೆ ದಪ್ಪವಿದ್ದವರು ಧರಿಸಿದರೆ ಅವರನ್ನು ಮತ್ತಷ್ಟು ದಪ್ಪವಾಗಿ ಕಾಣಿಸುತ್ತದೆ.

ಆದ್ದರಿಂದ ದಪ್ಪ ಇರುವವರು ಡ್ರೆಸ್ ಕೊಳ್ಳುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ತೆಳ್ಳಗೆ ಕಾಣಿಸಬಹುದು.

1. ದಪ್ಪಗಿರುವವರು ಗಾಢ ಬಣ್ಣದ ಬಟ್ಟೆಯನ್ನು ಧರಿಸಿದರೆ ಸುಂದರವಾಗಿ ಕಾಣಿಸುತ್ತಾರೆ. ತೆಳ್ಳಗಿನ ಮತ್ತು ಗಾಢ ಬಣ್ಣದ ಅದರಲ್ಲೂ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದರೆ ಚೆನ್ನಾಗಿ ಕಾಣಿಸುತ್ತದೆ. ಅದರಲ್ಲೂ ಶಿಫೋನ್, ಕ್ರಿಪ್, ಸಾಟಿನ್ ಮತ್ತು ಸಿಲ್ಕ್ ಬಟ್ಟೆಗಳ ಆಯ್ಕೆ ಉತ್ತಮ.

2. ದೊಡ್ಡ ಹೂವಿನ ಪ್ರಿಂಟ್, ತುಂಬಾ ದೊಡ್ಡದಾಗಿರುವ ವಿನ್ಯಾಸದ ಉಡುಪು ಧರಿಸಿದರೆ ಮತ್ತಷ್ಟು ದಪ್ಪವಾಗಿ ಕಾಣುವಂತೆ ಮಾಡುತ್ತದೆ. ಅಡ್ಡ ಗೆರೆ ಇರುವ ಉಡುಪುಗಳು ದಪ್ಪ ಕಾಣುವಂತೆ ಮಾಡುತ್ತದೆ, ಚಿಕ್ಕ ಬಟ್ಟೆ ಅಂದರೆ ಟಿ ಶರ್ಟ್, ಚಿಕ್ಕ ಟಾಪ್ಸ್ ಧರಿಸಿದರೆ ಹೊಟ್ಟೆ ದಪ್ಪವಾಗಿ ಕಾಣುತ್ತದೆ.

3. ಡ್ರೆಸ್ ಗಳನ್ನು ಆಯ್ಕೆ ಮಾಡುವಾಗ ಚಿಕ್ಕ ಪ್ರಿಂಟ್ ಇರುವ ಮತ್ತು ಉದ್ದ ಗೆರೆ ವಿನ್ಯಾಸ ಹೊಂದಿರುವ ಡ್ರೆಸ್ ಗಳು ಉತ್ತಮ. ಉದ್ದವಾದ ಮಿಡಿ ಅಥವಾ ಟಾಪ್ ಗಾಢ ಬಣ್ಣದ ಜೀನ್ಸ್ ಚೆನ್ನಾಗಿ ಒಪ್ಪುತ್ತೆ.

4. ತುಂಬಾ ಡೀಪ್ ಅಥವಾ ದೊಡ್ಡ ಕಾಲರ್ , ಚಿಕ್ಕ ತೋಳಿನ ಡ್ರೆಸ್ ಗಳು ಮತ್ತಷ್ಟು ದಪ್ಪವಾಗಿ ಕಾಣುವಂತೆ ಮಾಡುತ್ತದೆ.

5. ಬೆಲ್ಟ್ ಇರುವ ಡ್ರೆಸ್ ಗಳನ್ನು ಧರಿಸುವುದು, ಚಿಕ್ಕ ಬೆಲ್ಟ್ ನ ವಾಚ್ ಮತ್ತು ಹೀಲ್ಡ್ ಚಪ್ಪಲಿ ಸಣ್ಣ ಕಾಣುವಂತೆ ಮಾಡುತ್ತದೆ.

6. ಟಿ ಶರ್ಟ್ ಹಾಕಿ ಅದರ ಮೇಲೆ ಶಾಲು ಅಥವಾ ಜಾಕೆಟ್ ಹಾಕಿ ಫ್ಯಾಷನ್ ಆಗಿ ಕಾಣಿಸಬಹುದು.

English summary

Dressing Ideas To Look Slimmer | Tips For Beauty | ತೆಳ್ಳಗೆ ಹಾಣಿಸಿಕೊಳ್ಳಲು ಡ್ರೆಸ್ ಮಾಡಿಕೊಳ್ಳುವ ಉಪಾಯ | ಸೌಂದರ್ಯಕ್ಕಾಗಿ ಕೆಲ ಲಕ್ಷಣ

Looking slim also depends on the dressing ways. Some clothes define your figure neatly while some fabrics make you appear fatter than you actually are. Take a look.
Story first published: Thursday, December 8, 2011, 12:53 [IST]
X
Desktop Bottom Promotion