For Quick Alerts
ALLOW NOTIFICATIONS  
For Daily Alerts

ನಾಚಿಕೊಂಡಾಗ ಮಾತ್ರ ಕೆನ್ನೆ ಕೆಂಪಾಗಬೇಕಾ?

|
ನಾಚಿಕೊಂಡಾಗ ಮಾತ್ರ ಕೆನ್ನೆ ಕೆಂಪಗಾಗಬೇಕೆಂದೇನಿಲ್ಲ. ಕೆನ್ನೆ ಗುಲಾಬಿಯಂತೆ ಕೆಂಪಗಿರಬೇಕೆಂದು ನೀವು ಬಯಸುವುದಾದರೆ ಬರಿ ಮೇಕಪ್ ಮಾತ್ರ ಪ್ರಯೋಜನವಿಲ್ಲ. ನೈಸರ್ಗಿಕವಾಗಿ ನಿಮ್ಮ ತ್ವಚೆ ಮಿರುಗಬೇಕೆಂದರೆ ಮೇಕಪ್ ನೊಂದಿಗೆ ಕೆಲವು ಟ್ರಿಕ್ಸ್ ಕೂಡ ಉಪಯೋಗಿಸಬಹುದು.

ಗುಲಾಬಿ ಕೆನ್ನೆ ಪಡೆಯಲು ಈ ವಿಧಾನ ಅನುಸರಿಸಿ.

ಗುಲಾಬಿ ಕೆನ್ನೆಗೆ ಮಾಸ್ಕ್:
ರೋಸ್ ಕಲರ್ ಕೆನ್ನೆ ನಿಮ್ಮದಾಗಬೇಕೆಂದರೆ ಮೊದಲು ನಿಮ್ಮ ತ್ವಚೆ ಶುದ್ದವಾಗಿರಬೇಕು. ಸೌತೆಕಾಯಿಗೆ ಹಾಲು, ಜೇನು ಮತ್ತು ನಿಂಬೆ ರಸ ಬೆರೆಸಿ ಪೇಸ್ಟ್ ಮಾಡಿಕೊಂಡು ದಿನವೂ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಒಳ್ಳೆ ಫಲಿತಾಂಶ ಹೊಂದಬಹುದು.

ಕೆನ್ನೆ ಕೆಂಪಗಾಗಲು ನೈಸರ್ಗಿಕ ಮೇಕಪ್:

1. ತರಕಾರಿ ರಸ: ಕೆನ್ನೆ ಕೆಂಪಗಾಗುಂತೆ ಮಾಡಲು ಇರುವ ಸುಲಭ ವಿಧಾನವೆಂದರೆ, ತರಕಾರಿ ರಸ ಲೇಪಿಸಿಕೊಳ್ಳುವುದು. ಬೀಟ್ ರೂಟ್ ಜ್ಯೂಸ್ ಗೆ ಸಕ್ಕರೆ ಬೆರೆಸಿ ಹಚ್ಚಿಕೊಂಡು 15 ನಿಮಿಷದ ನಂತರ ತೊಳೆದುಕೊಂಡರೆ ತ್ವಚೆ ಒಳಗಿನಿಂದಲೇ ಕೆಂಪಗಾಗುತ್ತದೆ.

2. ದಾಳಿಂಬೆ:
ದಾಳಿಂಬೆ, ದ್ರಾಕ್ಷಿಯನ್ನೂ ಸಹ ಬೀಟ್ ರೂಟ್ ನಂತೆ ಸಕ್ಕರೆ ಜೊತೆ ಬೆರೆಸಿ ಲೇಪಿಸಿಕೊಂಡರೆ ಒಳಗಿನಿಂದಲ್ಲದೆ ಹೊರಗಿನಿಂದಲೂ ತ್ವಚೆ ಕೆಂಪಾಗಾಗುತ್ತದೆ.

3. ವೈನ್: ಕೆನ್ನೆಯನ್ನು ವೈನ್ ಬಳಸಿ ಕ್ಲೆನ್ಸ್ ಮಾಡಿದರೆ ಕೆನ್ನೆ ಕೆಂಪಗಾಗುವುದಲ್ಲದೆ, ತ್ವಚೆಯನ್ನೂ ತಾಜಾ ಇರುವಂತೆ ನೋಡಿಕೊಳ್ಳುತ್ತದೆ.

4. ದಾಸವಾಳ: ಗುಲಾಬಿ ಅಥವಾ ದಾಸವಾಳದ ಹೂವನ್ನು ಒಣಗಿಸಿ ಪೇಸ್ಟ್ ನಂತೆ ಮಾಡಿಕೊಂಡು ಕೆನ್ನೆಗೆ ಲೇಪಿಸಿ ಒಣಗಿದ ನಂತರ ಒರೆಸಿಕೊಂಡು ಅದರ ಮೇಲೆ ಬ್ಲಶ್ ಮಾಡಿದರೆ ರೋಸ್ ಕಲರ್ ಕೆನ್ನೆ ನಿಮ್ಮದಾಗುತ್ತದೆ.

5. ಎಣ್ಣೆಯಿಂದ ಮಸಾಜ್: ಬೆರಳುಗಳಿಂದ ಮುಖವನ್ನು ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಹೆಚ್ಚಾಗಿ ಕೆನ್ನೆ ಕೆಂಪಗಾಗುತ್ತದೆ. ವಿಟಮಿನ್ ಇ ಇರುವ ಅಥವಾ ಇನ್ನಾವುದೇ ಮಸಾಜ್ ಆಯಿಲ್ ಬಳಸಿ ಮಸಾಜ್ ಮಾಡಿದರೆ ಒಳಗಿನಿಂದ ಮತ್ತು ಹೊರಗಿನಿಂದ ಕೆನ್ನೆ ಮೃದುವಾಗಿ ಕೆಂಪಗಾಗುತ್ತದೆ.

English summary

How to Get Pink Cheeks | Natural Makeup Tips to Get Pink Cheeks | ಗುಲಾಬಿ ಕೆನ್ನೆ ಹೊಂದಲು ನೈಸರ್ಗಿಕ ಮೇಕಪ್

Getting pink cheeks naturally is not easy and makeup cannot compete with natural look. Today, we will discuss on how to get those pink cheeks naturally (with natural makeup). Check out for natural makeup tips.
Story first published: Thursday, September 29, 2011, 16:30 [IST]
X
Desktop Bottom Promotion